ಮಾಜಿ ಪತ್ನಿಗೆ ಸರ್ಜರಿಯಾಗುತ್ತಿದ್ದಂತೆ ಬೆಳ್ಳಂಬೆಳಗ್ಗೆ ಆಸ್ಪತ್ರೆಗೆ ದಾಖಲಾದ ಎ ಆರ್‌ ರೆಹಮಾನ್!‌

ಖ್ಯಾತ ಗಾಯಕ, ಸಂಗೀತ ಸಂಯೋಜಕ ಎ ಆರ್‌ ರೆಹಮಾನ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 


ಆಸ್ಕರ್‌ ಪ್ರಶಸ್ತಿ ವಿಜೇತ ಎಆರ್‌ ರೆಹಮಾನ್‌ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆನೋವು ಕಾಣಿಸಿಕೊಂಡಿದ್ದಕ್ಕೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಏನಾಗಿತ್ತು?
58 ವರ್ಷದ ಸಂಗೀತ ಸಂಯೋಜಕ, ಗಾಯಕ ಎ ಆರ್‌ ರೆಹಮಾನ್‌ ಅವರು ಇಂದು ಬೆಳಗ್ಗೆ 7.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೆಹಮಾನ್‌ಗೆ ಕೆಲ ಪರೀಕ್ಷೆಗಳನ್ನು ಮಾಡಲಾಗಿದೆ. ಆಂಜಿಯೋಗ್ರಾಮ್‌ ಪರೀಕ್ಷೆ (ರಕ್ತನಾಳಗಳನ್ನು ಪರೀಕ್ಷಿಸಲು ಕ್ಷ-ಕಿರಣ ಚಿತ್ರಣ ಬಳಸುವುದು ) ಮಾಡಲಾಗುವುದು ಎನ್ನಲಾಗಿದೆ. ರಹಮಾನ್‌ ಅವರು ರಂಜಾನ್‌ ಉಪವಾಸದಲ್ಲಿದ್ದಾರೆ. ಲಂಡನ್‌ನಿಂದ ಅವರು ಬೆಳಗ್ಗೆ ಚೆನ್ನೈಗೆ ಬಂದಿದ್ದರು. ಡಿಹೈಡ್ರೇಶನ್‌ ಆಗಿ ಅವರು ನಿತ್ರಾಣರಾಗಿದ್ದಾರೆ ಎನ್ನಲಾಗಿದೆ. ಲಂಡನ್‌ನಲ್ಲಿಯೂ ಅವರು ಕೆಲಸದ ಒತ್ತಡದಲ್ಲಿದ್ದರು, ಇದರ ಜೊತೆಗೆ ಉಪವಾಸ ಕೂಡ ಇರೋದು ಅವರನ್ನು ಹೈರಾಣ ಮಾಡಿದೆ. 

Latest Videos

ಕಿಚ್ಚ ಸುದೀಪ್‌ ಫೇವರಿಟ್ ಟಾಪ್‌ 5 ಹಾಡುಗಳಿವು!‌ ಎಂಥ ಮಧುರ!

ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದ್ದಾರೆ! 
ಕಳೆದ ತಿಂಗಳು ಎಆರ್‌ ರೆಹಮಾನ್‌ ಅವರು ಚೆನ್ನೈನಲ್ಲಿ ಕಾನ್ಸರ್ಟ್‌ವೊಂದರಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್‌ ನಟನೆಯ ʼಛಾವಾʼ ಸಿನಿಮಾದ ಆಡಿಯೋ ಲಾಂಚ್‌ನಲ್ಲಿಯೂ ಭಾಗವಹಿಸಿದ್ದರು. 

ಮಾಜಿ ಪತ್ನಿಗೂ ಅನಾರೋಗ್ಯ! 
ಇತ್ತೀಚೆಗೆ ರೆಹಮಾನ್‌ ಅವರ ಮಾಜಿ ಪತ್ನಿ ಸಾಯಿರಾ ಬಾನು ಕೂಡ ಸರ್ಜರಿ ಪ್ರಯುಕ್ತ ಆಸ್ಪತ್ರೆಗೆ ಸೇರಿದ್ದರು. ಈ ವಿಷಯವನ್ನು ಸಾಯಿರಾ ವಕೀಲ ವಂದನಾ ಶಾ ಅವರು ಅಧಿಕೃತ ಹೇಳಿಕೆ ಮೂಲಕ ನೀಡಿದ್ದರು.  “ಸಾಯಿರಾ ರೆಹಮಾನ್‌ ಅವರು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಗೆ ಸರ್ಜರಿ ಮಾಡಬೇಕಾಗಿದೆ. ಈ ಕಷ್ಟದ ಸಂದರ್ಭದಲ್ಲಿ ಅವರು ಆದಷ್ಟು ಬೇಗ ಗುಣಮುಖರಾಗಬೇಕಿದೆ. ಎಲ್ಲರ ಹಾರೈಕೆ, ಆಶೀರ್ವಾದಕ್ಕೆ ಧನ್ಯವಾದಗಳು. ಅಷ್ಟೇ ಅಲ್ಲದೆ ಈ ಟೈಮ್‌ನಲ್ಲಿ ಪ್ರೈವೆಸಿ ಅಗತ್ಯ ಕೂಡ ಇದೆ ಎಂದು ಅವರು ಹೇಳಿದ್ದರು” ಎಂದು ಹೇಳಿಕೆ ನೀಡಲಾಗಿತ್ತು. 

ಬಾಲಿವುಡ್‌ನಲ್ಲಿ ಹಣ, ಪ್ರಖ್ಯಾತಿ ಸಿಕ್ಕರೂ ಮುಂಬೈಗೆ ಯಾಕೆ ಶಿಫ್ಟ್‌ ಆಗಲಿಲ್ಲ? ಎಆರ್‌ ರೆಹಮಾನ್‌ ಹೇಳಿದ್ದಿಷ್ಟು..

ಮೂವರು ಮಕ್ಕಳ ತಂದೆ ಎ ಆರ್‌ ರೆಹಮಾನ್!‌ 
1995 ರಲ್ಲಿ ಎ ಆರ್ ರೆಹಮಾನ್, ಸಯಿರಾ ಅವರ ಮದುವೆ ಆಗಿತ್ತು. 29 ವರ್ಷಗಳ ಕಾಲ ಸಂಸಾರ ಮಾಡಿದ್ದ ಈ ಜೋಡಿ ಕಳೆದ ವರ್ಷ ಡಿವೋರ್ಸ್‌ ಪಡೆದಿತ್ತು. ಇವರಿಗೆ ಖತೀಜಾ, ರಹೀಮಾ, ಆಮೀನ್ ಎಂಬ ಮಕ್ಕಳಿದ್ದಾರೆ. ಈ ಹಿಂದೆ ಸಿಮಿ ಗ್ರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ, ರೆಹಮಾನ್ ಅವರು, “ನನಗೂ ಹಾಗೂ ನನ್ನ ಪತ್ನಿಗೂ ಕೆಲವು ಸಾಂಸ್ಕೃತಿಕ ಭಿನ್ನಾಭಿಪ್ರಾಯ ಇವೆ. ನಾವು ಅದನ್ನು ಬುದ್ಧಿವಂತಿಕೆಯಿಂದ ಎದುರಿಸುತ್ತಿದ್ದೇವೆ. ಸಯಿರಾ ನಾನು ನೋಡಿದ ಹುಡುಗಿ ಅಲ್ಲ. ನನಗೆ ಆಗಲೇ 29 ವರ್ಷ ವಯಸ್ಸಾಗಿತ್ತು. ಮದುವೆಯಾಗಲು ಇನ್ನು ಹೆಚ್ಚು ಟೈಮ್‌ ಕಾಯೋದು ಬೇಡ ಅಂತ ತಾಯಿಗೆ ಹುಡುಗಿ ಹುಡುಕಿ ಅಂತ ಹೇಳಿದ್ದೆ” ಎಂದು ಹೇಳಿದ್ದರು. 
 

click me!