ಹೃತಿಕ್ ರೋಷನ್-ಸಾಬಾ ಆಜಾದ್ ಅವರ ರಜೆಯ ಫೋಟೋಗಳ ನಂತರ ಸುಸೇನ್ ಖಾನ್ ತಮ್ಮ ಲವರ್ ಅರ್ಸ್ಲಾನ್ ಗೋನಿಯೊಂದಿಗೆ ರೀಲ್ಸ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ.
ನಟಿ ಕಂಗನಾ ರಣಾವತ್ಗೆ ಕೈಕೊಟ್ಟು, ಪತ್ನಿ ಸೂಸೆನ್ ಖಾನ್ಗೂ ಡಿವೋರ್ಸ್ ಕೊಟ್ಟ ಮೇಲೆ ಬಾಲಿವುಡ್ (Bollywood) ನಟ ಹೃತಿಕ್ ರೋಷನ್ ಮತ್ತು ಗಾಯಕಿ ಸಬಾ ಅಜಾದ್ ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು. ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್ ಪಿಟಿಕ್ ಅಂದಿರಲಿಲ್ಲ. ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್ ತೆಗೆದುಕೊಂಡಿರೋ ನಟ, ಅರ್ಜೆಂಟೀನಾದಲ್ಲಿ ಗರ್ಲ್ಫ್ರೆಂಡ್ ಜೊತೆ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅದರ ಫೋಟೋಗಳನ್ನು ಮೊನ್ನೆಯಷ್ಟೇ ಖುಲ್ಲಂ ಖುಲ್ಲಾ ಆಗಿ ಶೇರ್ ಮಾಡಿಕೊಂಡಿದ್ದರು. ಮದುವೆಯ ಬಗ್ಗೆ ಏನೂ ಹೇಳದ ಈ ಜೋಡಿ ಮಾತ್ರ ಟೂರ್ ಎಂಜಾಯ್ ಮಾಡುತ್ತಿದ್ದು, ಅವರ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಹೃತಿಕ್ ಅವರು ಚಳಿಗಾಲದ ಹುಡುಗಿ (Winter Girl) ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
ಇದನ್ನು ನೋಡಿ ಸೂಸೆನ್ ಖಾನ್ ಸುಮ್ಮನೇ ಇರ್ತಾರೆಯೇ? ಮಾಜಿ ಪತಿ ಹೃತಿಕ್ ರೋಷನ್ಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ (Saba Azad) ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡ ಎರಡು ದಿನಗಳಲ್ಲಿಯೂ ಸೂಸೇನ್ ಖಾನ್ ತಮ್ಮ ಸ್ನೇಹಿತ ಅರ್ಸ್ಲಾನ್ ಗೋನಿಯೊಂದಿಗೆ ಇರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ರೊಮ್ಯಾಂಟಿಕ್ ರೀಲ್ಸ್ ಇದಾಗಿದ್ದು, ಇದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸುಸೇನ್ ಮತ್ತು ಆರ್ಸ್ಲಾನ್ ಅವರ ರಜೆಯ ಕ್ಷಣಗಳನ್ನು ಇದರಲ್ಲಿ ನೋಡಬಹುದು. ನೈಟ್‌ಕ್ಲಬ್‌ನಲ್ಲಿ ಪಾರ್ಟಿಗೆ ಅಟೆಂಡ್ ಆಗಿರೋ ಜೋಡಿ, ತಡರಾತ್ರಿಯ ವೇಳೆ ರೊಮ್ಯಾಂಟಿಕ್ ಮೂಡ್ನಲ್ಲಿರುವುದನ್ನು ನೋಡಬಹುದು.
Hrithik Roshan: ಡಿವೋರ್ಸ್ ಬಳಿಕ 'ಚಳಿಗಾಲದ ಪ್ರೇಯಸಿ' ಜೊತೆ ಕಂಗನಾ ಎಕ್ಸ್! ಜ್ಯೋತಿಷಿ ಮಾತು ನಿಜವಾಗತ್ತಾ?
'ಸಹಾನುಭೂತಿಯಿಂದ ಬದುಕುವ ಸಿಂಹಿಣಿಯು ಅದನ್ನು ಯಾವಾಗಲೂ ಸ್ವೀಕರಿಸುತ್ತದೆ... 2023 ರ ಅತ್ಯುತ್ತಮ ಬೇಸಿಗೆಗಾಗಿ... ಎಂದು ಈ ರೀಲ್ಸ್ಗೆ ಶೀರ್ಷಿಕೆ ಕೊಟ್ಟಿದ್ದಾರೆ ಸೂಸೇನ್ ಖಾನ್. ಈ ಪೋಸ್ಟ್ ಹಂಚಿಕೊಂಡ ತಕ್ಷಣ, ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಭಾರೊಂದಿಗೆ ಹೃತಿಕ್ ರೋಷನ್ ರೊಮ್ಯಾನ್ಸ್ ಮಾಡುವಾಗ ನೀವು ಹೀಗೆ ಮಾಡ್ತಿರೋದು ತಪ್ಪಲ್ಲ ಎಂದೇ ಹಲವರು ಹೇಳಿದ್ದಾರೆ. ಮಾಜಿ ಪತಿಗೆ ಸರಿಯಾಗಿ ಠಕ್ಕರ್ ಕೊಟ್ಟಿರುವಿರಿ ಎಂದು ಇನ್ನು ಕೆಲವರು ಸೂಸೇನ್ ಖಾನ್ (Susen Khan) ಪರವಾಗಿ ಬರೆದಿದ್ದಾರೆ. ಒಂದು ಪ್ರೀತಿ ಸೋತರೆ ಇನ್ನೊಂದು ಪ್ರೀತಿ ಸಿಕ್ಕೇ ಸಿಗುತ್ತದೆ ಎಂದು ಹೇಳುವುದು ಇದಕ್ಕಾಗಿಯೇ ಎಂದು ಮತ್ತೆ ಕೆಲವರು ಹೇಳಿದ್ದಾರೆ.
ಇನ್ನು ಹೃತಿಕ್ ಅವರ ಕೆಲಸದ ಕುರಿತು ಹೇಳುವುದಾದರೆ, ಹೃತಿಕ್ (Hritik Roshan) ಕೊನೆಯದಾಗಿ ನಿಯೋ-ನಾಯರ್ ಆಕ್ಷನ್ ಥ್ರಿಲ್ಲರ್ ವಿಕ್ರಮ್ ವೇದದಲ್ಲಿ ಕಾಣಿಸಿಕೊಂಡರು, ಇದರಲ್ಲಿ ಅವರು ದರೋಡೆಕೋರ ವೇದಾ ಪಾತ್ರದಲ್ಲಿ ಮಿಂಚಿದ್ದಾರೆ. ಅದೇ ಹೆಸರಿನ 2017 ರ ತಮಿಳು ಚಲನಚಿತ್ರದ ಅಧಿಕೃತ ರಿಮೇಕ್ ಇದು. ಚಲನಚಿತ್ರವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಸಕಾರಾತ್ಮಕ ವಿಮರ್ಶೆಗಳೊಂದಿಗೆ ಬಿಡುಗಡೆಯಾದರೂ ಹೆಚ್ಚು ಜನಪ್ರಿಯತೆ ಗಳಿಸಲಿಲ್ಲ.
Leader Ramaiah: ತೆರೆ ಮೇಲೆ ಬರಲಿದೆ ಸಿದ್ದರಾಮಯ್ಯ ಬಯೋಪಿಕ್: ಸಿಎಂ ಪಾತ್ರಕ್ಕೆ ನಟನಾರು?