ನಟ ಸನ್ನಿ ಡಿಯೋಲ್ ಅವರ ಮಗನ ಮದುವೆ ಇದೇ ತಿಂಗಳು ನಡೆಯಲಿದ್ದು, ಮದುವೆಯ ಸಿದ್ಧತೆ ಭರದಿಂದ ಸಾಗಿದೆ. ಅದರ ವಿಡಿಯೋ ವೈರಲ್ ಆಗಿದೆ.
80-90ರ ದಶಕದಲ್ಲಿ ಬಾಲಿವುಡ್ (Bollywood) ಆಳಿದ ನಟರಲ್ಲಿ ಒಬ್ಬರು ಸನ್ನಿ ಡಿಯೋಲ್. ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಸನ್ನಿ ಅವರಿಗೆ ಕರಣ್ ಡಿಯೋಲ್ ಎಂಬ 27 ವರ್ಷದ ಮಗನಿದ್ದಾನೆ. ತಮ್ಮ ಕುಟುಂಬದ ಹೋಮ್ ಪ್ರೊಡಕ್ಷನ್ ಅಡಿಯಲ್ಲಿ ಬಾಲಿವುಡ್‌ನ ವಿವಿಧ ಯೋಜನೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕರಣ್ ಕೆಲಸ ಮಾಡುತ್ತಿದ್ದಾರೆ. 'ಪಲ್ ಪಾಲ್ ದಿಲ್ ಕೆ ಪಾಸ್' ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. 1990ರಲ್ಲಿ ಜನಿಸಿರೋ ಕರಣ್ ಅವರನ್ನು ಕುಟುಂಬ ಸದಸ್ಯರು ಮತ್ತು ಆಪ್ತರು ಕೂಡ ಅವರನ್ನು ರಾಕಿ ಎಂದು ಕರೆಯುತ್ತಾರೆ . ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಜುಹುವಿನ ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಅವರು, ಸೆಲೆಬ್ರಿಟಿ ಕಿಡ್ ಆಗಿದ್ದರೂ, ಇತರ ಸ್ಟಾರ್ ಮಕ್ಕಳಿಗಿಂತ ಭಿನ್ನವಾಗಿ ಖಾಸಗಿ ಜೀವನವನ್ನು ನಡೆಸುತ್ತಿದ್ದಾರೆ. ಇದೀಗ ಮದುವೆಯಿಂದಾಗಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಮದುವೆಯ ತಯಾರಿ ಭರ್ಜರಿಯಾಗಿ ನಡೆದಿತ್ತು. ಸನ್ನಿ ಡಿಯೋಲ್ ಮನೆಯನ್ನು ವೈಭವದಿಂದ ಅಲಂಕರಿಸಲಾಗಿದೆ. ಇದೀಗ ಸನ್ನಿ ಡಿಯೋಲ್ ಅವರ ಮನೆಯ ಕೆಲವು ವಿಡಿಯೋಗಳು ಮುನ್ನೆಲೆಗೆ ಬಂದಿದ್ದು, ಮದುವೆಗೆ ಮುನ್ನ ಅವರ ಮನೆಯನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಿರುವುದನ್ನು ನೋಡಬಹುದು.
ವರದಿಗಳ ಪ್ರಕಾರ ಕರಣ್ ಡಿಯೋಲ್ ಮತ್ತು ದಿಶಾ ಆಚಾರ್ಯ ಜೂನ್ 18 ರಂದು ವಿವಾಹವಾಗಲಿದ್ದಾರೆ. ಅವರ ಮದುವೆಯ ವಿಧಿವಿಧಾನಗಳು ಅಜ್ಜ ಧರ್ಮೇಂದ್ರ ಅವರ ಮನೆಯಿಂದಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕರಣ್ ಮತ್ತು ದಿಶಾ ಮದುವೆಯ ಪ್ರಮುಖ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮದುವೆಯ ನಂತರ, ದಂಪತಿ ಜೂನ್ 18 ರಂದು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಸ್ಟಾರ್-ಸ್ಟಡ್ ರಿಸೆಪ್ಶನ್ ಪಾರ್ಟಿಯನ್ನು ಆಯೋಜಿಸಲಿದ್ದಾರೆ.
ಅಭಿಷೇಕ್-ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಭರ್ಜರಿ ಸಿದ್ದತೆ: ಬಾಡೂಟದ ಮೆನು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ
ಈ ಬಗ್ಗೆ ಮಾತನಾಡಿರುವ ಕರಣ್ ಮತ್ತು ದಿಶಾ ಅವರ ಆಪ್ತ ಮೂಲಗಳು, 'ಈ ಮದುವೆಯ ಅದ್ಧೂರಿಯನ್ನು ನೀವು ಊಹಿಸಲು ಸಾಧ್ಯವಿಲ್ಲ. ಅಷ್ಟು ಅದ್ಧೂರಿಯಾಗಿ ಮದುವೆ ನಡೆಯಲಿದೆ. ಈ ಕಾರ್ಯಕ್ರಮವು 'ತಾಜ್ ಲ್ಯಾಂಡ್ಸ್ ಎಂಡ್' ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದಿವೆ. ಅಂದಹಾಗೆ, ಕರಣ್ ಮತ್ತು ದಿಶಾ ಬಾಲ್ಯದ ಸ್ನೇಹಿತರು. ದಿಶಾ ಚಲನಚಿತ್ರ ನಿರ್ಮಾಪಕ ಬಿಮಲ್ ರಾಯ್ ಅವರ ಮೊಮ್ಮಗಳು ಮತ್ತು ಅವರು ಪ್ರಸ್ತುತ ದುಬೈನಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಮ್ಯಾನೇಜರ್ (Manager) ಆಗಿ ಕೆಲಸ ಮಾಡುತ್ತಿದ್ದಾರೆ. ಕರಣ್ ಡಿಯೋಲ್ ಇತ್ತೀಚೆಗೆ ದಿಶಾ (Disha Acharya) ಅವರೊಂದಿಗೆ ಕಾಣಿಸಿಕೊಂಡಿದ್ದು, ಭಾರಿ ಸುದ್ದಿಯಾಗಿತ್ತು. ಇಬ್ಬರೂ ಡೇಟಿಂಗ್ ಸಮಯದಲ್ಲಿ ಊಟಕ್ಕೆಂದು ಮುಂಬೈನ ರೆಸ್ಟೋರೆಂಟ್‌ಗೆ ಬಂದಿದ್ದಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಆಗಲೇ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ಬಹಿರಂಗಗೊಂಡಿತ್ತು.
ಇನ್ನು ಕರಣ್ ಅವರ ಬಾಲ್ಯದ (Childhood) ಕುರಿತು ಹೇಳುವುದಾದರೆ, ಕರಣ್ ಡಿಯೋಲ್ ತನ್ನ ತಂದೆ ಮತ್ತು ತಾತನಂತೆ ಯಾವಾಗಲೂ ನಟನಾಗಬೇಕೆಂದು ಯೋಚಿಸುತ್ತಿದ್ದರು. ಆದರೆ ಅವರ ಪಾಲಕರು ಶಿಕ್ಷಣವನ್ನು ಪೂರ್ಣಗೊಳಿಸಲು ಗಂಭೀರವಾಗಿದ್ದರು. ಅರಣ್ ಡಿಯೋಲ್ ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಜುಹುವಿನ ಎಕೋಲ್ ಮೊಂಡಿಯಾಲ್ ವರ್ಲ್ಡ್ ಸ್ಕೂಲ್‌ನಲ್ಲಿ ಮಾಡಿದರು. ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಮತ್ತು ಅವರು ತಮ್ಮ ಹೋಮ್ ಪ್ರೊಡಕ್ಷನ್ ಹೌಸ್, ವಿಜಯತಾ ಫಿಲ್ಮ್ಸ್ ಅಡಿಯಲ್ಲಿ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 2013 ರಲ್ಲಿ, ಕರಣ್ ಅವರ ತಂದೆ ಸನ್ನಿ ಡಿಯೋಲ್ , ಅಜ್ಜ ಧರ್ಮೇಂದ್ರ ಮತ್ತು ಚಿಕ್ಕಪ್ಪ ಬಾಬಿ ಡಿಯೋಲ್ ಒಳಗೊಂಡ ' ಯಮ್ಲಾ ಪಾಗ್ಲಾ ದೀವಾನಾ 2 ' ನ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು 2017 ರಲ್ಲಿ , ಅವರು ತಮ್ಮ ಚೊಚ್ಚಲ ಚಿತ್ರ 'ಪಿ ಅಲ್ ಪಾಲ್ ದಿಲ್ ಕೆ ಪಾಸ್ ' ಚಿತ್ರೀಕರಣವನ್ನು ಪ್ರಾರಂಭಿಸಿದರು ಇದನ್ನು ಸನ್ನಿ ಡಿಯೋಲ್ ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ.
ಶಾರುಖ್ ಖಾನ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದ ಸನ್ನಿ ಡಿಯೋಲ್ 'ಗದರ್'!