ಹೊಸ ಸಾಹಸಕ್ಕೆ ಕೈ ಹಾಕಿದ ಆಸ್ಕರ್ ವಿಜೇತ ಎಆರ್ ರೆಹಮಾನ್ ಪುತ್ರಿ ಖತಿಜಾ; ಏನದು?

Published : Jun 12, 2023, 02:42 PM IST
ಹೊಸ ಸಾಹಸಕ್ಕೆ ಕೈ ಹಾಕಿದ ಆಸ್ಕರ್ ವಿಜೇತ ಎಆರ್ ರೆಹಮಾನ್ ಪುತ್ರಿ ಖತಿಜಾ; ಏನದು?

ಸಾರಾಂಶ

ಆಸ್ಕರ್ ವಿಜೇತ ಎಆರ್ ರೆಹಮಾನ್ ಪುತ್ರಿ ಖತಿಜಾ ಹೊಸ ಜರ್ನಿ ಆರಂಭಿಸಿದ್ದಾರೆ. ಗಾಯಕಿಯಾಗಿದ್ದ ಖತಿಜಾ ಈಗ ಸಂಗೀತ ನಿರ್ದೇಶಕಿಯಾಗಿದ್ದಾರೆ. 

ಆಸ್ಕರ್ ವಿನ್ನರ್ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಪುತ್ರಿ ಖತಿಜಾ ರೆಹಮಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಖತಿಜಾ ರೆಹಮಾನ್ ಸಂಗೀತ ನಿರ್ದೇಶಕಿಯಾಗಿ ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಖತಿಜಾ ಎಂಟ್ರಿ ಕೊಟ್ಟಿರುವುದು ತಮಿಳು ಸಿನಿಮಾರಂಗಕ್ಕೆ. ತಮಿಳಿನ ಮಿನ್ಮಿನಿ ಸಿನಿಮಾ ಮೂಲಕ ಖತಿಜಾ ಚಿತ್ರರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಮಿನ್ಮಿನಿ ಹಲಿತಾ ಶಮೀಮ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ಈ ಬಗ್ಗೆ ಸ್ವತಃ ನಿರ್ದೇಶಕಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಖತಿಜಾ ಅವರನ್ನು ಅಸಾಧಾರಣ ಪ್ರತಿಭೆ ಎಂದು ಹಾಡಿ ಹೊಗಳಿದ್ದಾರೆ. 

ಗಾಯಕಿಯಾಗಿ ಗುರುತಿಸಿಕೊಂಡಿದ್ದ ಖತಿಜಾ ರೆಹಮಾನ್ ಇದೀಗ ಸಂಗೀತ ಸಂಯೋಜನಕ್ಕೆ ಇಳಿದಿರುವುದು  ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಅಪ್ಪನ ಹಾಗೆ ಮಗಳು ಕೂಡ ದೊಡ್ಡ ಸಂಗೀತ ಸಂಯೋಜಕಿ ಆಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಹಾರೈಸುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಹಲಿತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, 'ಈ ಅಸಾಧಾರಣ ಪ್ರತಿಭೆಯೊಂದಿಗೆ ಕೆಲಸ ಮಾಡಲು ತುಂಬಾ ಸಂತೋಷವಾಗಿದೆ, ಮಿನ್ಮಿನಿಗಾಗಿ ಖತೀಜಾ ರೆಹಮಾನ್. ಯೂಫೋನಿಯಸ್ ಗಾಯಕ ಅದ್ಭುತ ಸಂಗೀತ ಸಂಯೋಜಕ ಕೂಡ. ಕೆಲವು ಉತ್ತಮ ಸಂಗೀತ ಕೆಲಸ ನಡೆಯುತ್ತಿದೆ' ಎಂದು ಹೇಳಿದ್ದಾರೆ. 

ಅಭಿಮಾನಿಗಳ ಪ್ರತಿಕ್ರಿಯೆ 

ನಿರ್ದೇಶಕಿ ಹಲಿತಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಹಲವರರು ಖತೀಜಾ ಅವರ ಹೊಸ ಜರ್ನಿ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದರು. ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿ, 'ಎಷ್ಟು ರೋಮಾಂಚನಕಾರಿ. ನಾನು ಖತೀಜಾಳ ಗಾಯನವನ್ನು ಇಷ್ಟಪಡುತ್ತೇನೆ ಮತ್ತು ಈಗ ನಾವು ಆಕೆ ಹೊಸ ಸಂಗೀತ ಸಂಯೋಜನೆಯನ್ನು ಸಹ ಕೇಳುತ್ತೇವೆ. ಅದ್ಭುತ. ಆಲ್ ದಿ ಬೆಸ್ಟ್ ಖತೀಜಾ ಮತ್ತು ತಂಡಕ್ಕೆ' ಎಂದು ಹೇಳಿದ್ದಾರೆ. ಅನೇಕರು ಖತಿಜಾರ ಸಂಗೀತಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. 

ಎ.ಆರ್‌ ರೆಹಮಾನ್ ಪುತ್ರಿ ಖತೀಜಾ ಅದ್ಧೂರಿ ಮದುವೆ; ಅಳಿಯನ ಹಿನ್ನಲೆ ಏನು ಗೊತ್ತಾ?

ಖತಿಜಾ ಪ್ರತಿಕ್ರಿಯೆ 

ಸಂದರ್ಶನವೊಂದರಲ್ಲಿ ಮಾತನಾಡಿದ ಖತಿಜಾ, 'ಕಳೆದ ವರ್ಷ ನಾನು ಏನು ಮಾಡಬೇಕು ಎಂದು ಯೋಚಿಸುತ್ತಿದ್ದೆ. ಅಲ್ಲದೆ ಆ ಸಮಯದಲ್ಲಿ ನಾನು ಸರ್ಚ್ ಮಾಡುತ್ತಿದ್ದೆ. ನನ್ನ ಬಳಿ ಅನೇಕ ಯೋಜನೆಗಳಿವೆ. ಅದರಲ್ಲಿ ಮಹಿಳಾ ನಿರ್ದೇಶಕರಿಂದ ಬಂದಿರುವ ಆಫರ್ ಕೂಡ ಒಂದು. ಆಗ ನಾನು ನಿರ್ದೇಶಕಿ ಹಲಿತಾ  ಅವರಿಗೆ ಕರೆ ಮಾಡಿದೆ. ಅವರಿಗೆ ನನ್ನ ಒಂದು ಟ್ರ್ಯಾಕ್ ಕಳುಹಿಸಿದೆ. ಅದನ್ನು ಕೇಳಿದ ನಂತರ ತುಂಬಾ ಇಷ್ಟಪಟ್ಟರು. ನನ್ನ ವೈಬ್ ಎಂದು ಹೇಳಿದರು. ನಾನು ನಿಮ್ಮ ಧ್ವನಿಯನ್ನು ಇಷ್ಟಪಡುತ್ತೇನೆ. ನಿಮ್ಮ ಆಲೋಚನೆ ನನಗೆ ಇಷ್ಟವಾಗಿದೆ. ಆದ್ದರಿಂದ, ನಾನು ನಿಮ್ಮೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ನಾವು ಅದನ್ನು ಪ್ರಯತ್ನಿಸಲು ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ' ಎಂದು ಖತೀಜಾ ಹೇಳಿದ್ದರು

ಎ.ಆರ್ ರೆಹಮಾನ್ ಪುತ್ರಿಯ ಮದುವೆ ಆರತಕ್ಷತೆ ಸಂಭ್ರಮದಲ್ಲಿ ಸಿನಿ ಗಣ್ಯರು; ಯಾರೆಲ್ಲ ಭಾಗಿಯಾಗಿದ್ದರು?

2022ರಲ್ಲಿ ಮದುವೆ 

ಖತಿಜಾ ರೆಹಮಾನ್ 2022ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಖತೀಜಾ, ರಿಯಾಸ್ದೀನ್ ಶೇಖ್ ಮೊಹಮ್ಮೊದ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಖತಿಜಾ ಮದುವೆಗೆ ಅನೇಕರು ಗಮ್ಯರು ಹಾಜರಾಗಿದ್ದರು. ಚೆನ್ನೈನಲ್ಲಿ ನಡೆದ ಅದ್ದೂರಿ ಆರತಕ್ಷತೆ ಕಾರ್ಯಕ್ರದ ಫೋಟೋಗಳು ವೈರಲ್ ಆಗಿತ್ತು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?