
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ ಕೆಕೆಆರ್ ಗೆಲುವು ಸಾಧಿಸಿದೆ. ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡಕ್ಕೆ ಚಿಯರ್ ಮಾಡಲು ಶಾರುಖ್ ಮಕ್ಕಳು ವಾಂಖೆಡೆ ಸ್ಟೇಡಿಯಂಗೆ ಲಗ್ಗೆ ಇಟ್ಟಿದ್ದರು. ಕೆಕೆಆರ್ ತಂಡ ಗೆಲವು ದಾಖಲಿಸಿದ ಬಳಿಕ ಸಂಭ್ರಮಿಸಿದ ಶಾರುಖ್ ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶಾರುಖ್ ಮಕ್ಕಳಾದ ಸುಹನಾ ಖಾನ್, ಆರ್ಯನ್ ಖಾನ್ ಮತ್ತು ಅಬ್ರಾಮ್ ಮೂವರು ಮಕ್ಕಳು ಸಹ ವಾಂಖೆಡೆಯಲ್ಲಿದ್ದರು. ಐಪಿಎಲ್ ಪಂದ್ಯದ ಹರಾಜಿನಲ್ಲಿ ಶಾರುಖ್ ಮಕ್ಕಳಾದ ಸುಹಾನಾ ಮತ್ತು ಆರ್ಯನ್ ಖಾನ್ ಭಾಗವಹಿಸಿದ್ದರು. ಇದೀಗ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಶಾರುಖ್ ಮಕ್ಕಳ ಜೊತೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಕೂಡ ಸಾಥ್ ನೀಡಿದ್ದರು. ಕೆಕೆಆರ್ ಗೆಲುವು ದಾಖಲಿಸುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
IPL 2022 ಬರೋಬ್ಬರಿ 8 ಸಿಕ್ಸರ್, ರಸೆಲ್ ಅಬ್ಬರದಿಂದ ಕೆಕೆಆರ್‌ಗೆ ಭರ್ಜರಿ ಗೆಲುವು!
ಪಂದ್ಯ ವೀಕ್ಷಣೆಯ ಸಂಭ್ರಮ ಕ್ಷಣವನ್ನು ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರತಿಯೊಂದು ಫೋಟೋಗಳನ್ನು ಸುಹಾನಾ ಹಂಚಿಕೊಂಡಿದ್ದಾರೆ. ಪಂದ್ಯ ಗೆಲುವಿಗಾಗಿ ಅಬ್ರಾಮ್ ಕ್ರಾಸ್ ಫಿಂಗರ್ ಮಾಡಿಕೊಂಡು ಕುಳಿತಿರುವ ಫೋಟೋವನ್ನು ಸುಹಾನಾ ಹಂಚಿಕೊಂಡಿದ್ದಾರೆ. ಫೋಟೋಗೆ ಇದು ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಸಹೋದರನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾರೆ. ಶಾರುಖ್ ಮಕ್ಕಳ ಸಂಭ್ರಮದ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿವೆ. ಈ ಫೋಟೋಗಳು ಟ್ರೋಲ್ ಗಳಿಗೂ ಆಹಾರವಾಗಿವೆ.
ಇನ್ನು ಶಾರುಖ್ ಪುತ್ರ ಆರ್ಯನ್ ಖಾನ್, ಇತ್ತೀಚಿಗಷ್ಟೆ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಮುಂಬೈನ ಐಷಾರಾಮಿ ಹಡಗಿನ ಮೇಲೆ ನಡೆಸಿದ ದಾಳಿಯಲ್ಲಿ ಆರ್ಯನ್ ಖಾನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದರು. ಆರ್ಯನ್ ಜೊತೆ ಸುಮಾರು 20 ಜನರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಅನೇಕ ತಿಂಗಳು ಆರ್ಯನ್ ಖಾನ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದರು. ಇದೀಗ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಾರೆ.
IPL 2022 ಉಮೇಶ್ ಯಾದವ್ ದಾಳಿಗೆ ತತ್ತರಿಸಿದ ಪಂಜಾಬ್, 137 ರನ್‌ಗೆ ಆಲೌಟ್
ಶಾರುಖ್ ಪುತ್ರ ಸುಹಾನಾ ಖಾನ್ ಈಗಾಗಲೇ ವಿದೇಶದಲ್ಲಿ ಶಿಕ್ಷಣ ಮುಗಿಸಿದ್ದಾರೆ. ಸದ್ಯ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಸುಹಾನಾ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಆದರೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಫೋಟೋಗಳು ಇತ್ತೀಗಷ್ಟೆ ವೈರಲ್ ಆಗಿತ್ತು. ಇದೀಗ ಐಪಿಎಲ್ ಎಂಜಾಯ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.