ಮದುವೆಗೂ ಮುನ್ನವೇ ಅತ್ತೆ ಮನೆಗೆ ಭೇಟಿ ಕೊಟ್ಟ ಶಮಿತಾ ಶೆಟ್ಟಿ ಏನಂದ್ರು ನೋಡಿ!

By Suvarna News  |  First Published Apr 2, 2022, 1:16 PM IST

ಪುಣೆಯಿಂದ ಮುಂಬೈಗೆ ಹಿಂತಿರುಗಿದ ಶಮಿತಾ ಶೆಟ್ಟಿ. ಪದೇ ಪದೇ ಪ್ರಯಾಣ ಮಾಡುತ್ತಿರುವುದಕ್ಕೆ ಕಾರಣ ತಿಳಿಸಿದ ನಟಿ....


ಹಿಂದಿ ಬಿಗ್ ಬಾಸ್‌ ಓಟಿಟಿ ಮತ್ತು ಬಿಗ್ ಬಾಸ್ ಸೀಸನ್ 15 ನೀವು ನೋಡಿದರೆ ನಿಮಗೆ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್‌ ಲವ್‌ ಬಗ್ಗೆ ಸಣ್ಣ ಐಡಿಯಾ ಇರುತ್ತೆ. ಅಪರಿಚಿತರು ಸ್ನೇಹಿತರಾಗಿ ಈಗ ಮದುವೆ ಹಂತವರೆಗೂ ಇವರ ಸಂಬಂಧ ಮುಂದುವರೆದಿದೆ. ಬ್ರೇಕಪ್ ಆಯ್ತು ಮ್ಯಾಚ್ ಆಗೋಲ್ಲ ಶಮಿತಾಗೆ ಕೊಬ್ಬು ಎಂದೆಲಾ ಗಾಸಿಪ್ ಹಬ್ಬಿತ್ತು. ಏನೋ ಇದೆಲ್ಲಾ ಪ್ರೀತಿ ಅಲ್ಲ ಅದು ಇದು ಎಂದು ಕಾಮೆಂಟ್ ಮಾಡುವ ನೆಟ್ಟಿಗರಿಗೆ ಶಮಿತಾ ನಾನು ಕಾಮನ್ ಹುಡುಗಿಯರ ರೀತಿ ಜೀವನ ನಡೆಸುತ್ತಿರುವೆ ಎಂದು ಸಾಭೀತು ಮಾಡಿದ್ದಾರೆ. 

ಸಿನಿಮಾ ಚಿತ್ರೀಕರಣ ಮತ್ತು ಬ್ಯುಸಿನೆಸ್‌ ಕೆಲಸದ ಮೇಲೆ ಶಮಿತಾ ಪದೇ ಪದೇ ಪುಣೆಗೆ ಪ್ರಯಾಣ ಮಾಡುತ್ತಿದ್ದರು ಆದರೀಗ ಮೊದಲ ಬಾರಿ ರಾಕೇಶ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅತ್ತೆ ಮಾವರನ್ನು ಭೇಟಿ ಮಾಡಿರುವ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ. 'ಇಷ್ಟು ವರ್ಷ ನಾನು ಪ್ರೋಫೆಷನಲ್ ಕಮಿಟ್ಮೆಂಟ್‌ಯಿಂದ ಪುಣೆ ಪ್ರಯಾಣ ಮಾಡಿದೆ ಆದರೆ ಇದೇ ಮೊದಲು ಒಂದೊಳ್ಳೆ ಕಾರಣಕ್ಕೆ ಪ್ರಯಾಣ ಮಾಡಿರುವುದು. ತುಂಬಾನೇ ಸಂತೋಷವಿದೆ' ಎಂದು ಹೇಳಿದ್ದಾರೆ. ಇನ್ನು ಮುಂದೆ ಪುಣೆ ಪ್ರಯಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಮದುವೆ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎನ್ನಬಹುದು.

Tap to resize

Latest Videos

ಶಿಲ್ಪಾ ಶೆಟ್ಟಿ ಬಗ್ಗೆ ಮಾತು:

'ಶಿಲ್ಪಾ ಮತ್ತು ನನ್ನ ನಡುವೆ ತುಂಬಾನೇ ಪ್ರೀತಿ ಮತ್ತು ಗೌರವವಿದೆ. ಆಕೆ ನನ್ನ ದೊಡ್ಡಕ್ಕ ಆಗಿ ನನ್ನ ಗುರು ಆಗಿ ಅನೇಕ ವಿಚಾರಗಳನ್ನು ಅವಳನ್ನು ರೋಲ್ ಮಾಡಲ್ ಆಗಿ ಸ್ವೀಕರಿಸಿದ್ದೀನಿ. ನಾನು ಆಕೆಗಿಂತ ತುಂಬಾನೇ ಚಿಕ್ಕವಳು. ಒಟ್ಟಿಗೆ ಮಜಾ ಮಾಡಿದ್ದೀವಿ ಕಷ್ಟ ಸುಖಗಳನ್ನು ಹಂಚಿಕೊಂಡಿದ್ದೀನಿ ದಿನ ಕಳೆಯುತ್ತಿದ್ದಂತೆ ನಾವಿಬ್ಬರು ಒಟ್ಟಿಗೆ ಮೆಚ್ಯೂರ್ ಆಗುತ್ತಿದ್ದೀವಿ.ನಾವಿಬ್ಬರೂ ಒಂದೇ ಇಂಡಸ್ಟ್ರಿಗೆ ಸೇರಿದವರು ಆದರೆ ನಾವಿಬ್ಬರು ಡಿಫರೆಂಟ್ ಪರ್ಸನಾಲಿಟಿ ಹೊಂದಿದ್ದೀವಿ' ಎಂದು ಶಮಿತಾ ಅಕ್ಕನ ಬಗ್ಗೆ ಹೇಳಿದ್ದಾರೆ.

ಮತ್ತೆ ಬ್ರೇಕಪ್ ಮಾಡಿಕೊಂಡ ಶಮಿತಾ ಶೆಟ್ಟಿ; ಗಾಸಿಪ್‌ಗೆ ಬ್ರೇಕ್ ಹಾಕಿದ ಲವ್‌ ಬರ್ಡ್ಸ್‌!

ಕೆಲಸ:

ಬಿಗ್ ಬಾಸ್‌ ಮನೆಯಿಂದ ಶಮಿತಾ ಹೊರ ಬರುತ್ತಿದ್ದಂತೆ ಹಲವಾರು ಚಿತ್ರಕಥೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. 'ನಾನು ಯಾವುದೇ restriction ಹಾಕಿಕೊಂಡಿಲ್ಲ ಎಲ್ಲಾ ಮೀಡಿಯಾನೂ ಟ್ರೈ ಮಾಡುವುದಕ್ಕೆ ಇಷ್ಟವಿದೆ. ಬಾಲಿವುಡ್, ಓಟಿಟಿ ಮತ್ತು ಟಿವಿ ಮೂರಕ್ಕೂ ಅದರದೇ ಪ್ರಾಮುಖ್ಯತೆ ಇದೆ. ನನಗೆ ಖುಷಿ ಕೊಡುವುದನ್ನು ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಕಾಮಿಡಿ, ಥ್ರಿಲರ್ ಅಥವಾ ಆಕ್ಷನ್ ಪ್ರಾಜೆಕ್ಟ್‌ಗಳನ್ನು ಮಾಡುವುದಕ್ಕೆ ನನಗೆ ಸಂಕೋಚವಿಲ್ಲ' ಎಂದಿದ್ದಾರೆ ಶಮಿ.

ಜನರೊಂದಿಗೆ ಬೆರೆಯಲು ಕಷ್ಟ, ಥೆರಪಿ ತೆಗೆದುಕೊಳ್ಳುತ್ತಿರುವೆ: Shamita Shetty

ರಾಕೇಶ್ ಪ್ರೀತಿ:

'ರಾಕೇಶ್ ತುಂಬಾನೇ ಒಳ್ಳೆಯ ಹುಡುಗ. ಜೀವನ ಹೇಗೆ ಎಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರ ಜೊತೆ ಎಲ್ಲರೂ ಸುಲಭವಾಗಿ ಹೊಂದಿಕೊಳ್ಳುತ್ತಾರೆ ಆ ವಿಚಾರ ನನಗೆ ತುಂಬಾನೇ ಇಷ್ಟ. ನಾವಿಬ್ಬರು ಚೆನ್ನಾಗಿದ್ದೀವಿ ಇಲ್ಲಿದೆ ನಾನು ಮಾತು ನಿಲ್ಲಿಸುತ್ತೀನಿ. ಹಿಂದೆ ಮುಂದೆ ಯೋಚನೆ ಮಾಡದೆ ನಾನು ಏನು ಬೇಕಿದ್ದರೂ ರಾಕೇಶ್ ಜೊತೆ ಮಾತನಾಡಬಹುದು. ಅವರು good listner ಹುಡುಗರಲ್ಲಿ ಈ ಗುಣ ತುಂಬಾನೇ ಕಡಿಮೆ. ಪ್ರತಿಯೊಂದು ವಿಚಾರದಲ್ಲೂ ನನಗೆ ಮೊದಲು ಪ್ರಮುಖ್ಯತೆ ನೀಡುತ್ತಾರೆ. ನಾವು ಬಿಗ್ ಬಾಸ್ ಪ್ರವೇಶಿಸುವಾಗ ಸಂಗಾತಿ ಹುಡುಗಬೇಕು ಎಂದು ಅಂದುಕೊಂಡಿರಲಿಲ್ಲ. ಇಬ್ಬರಿಗೂ ರಿಲೇಷನ್‌ಶಿಪ್‌ ಇಷ್ಟಾನೇ ಇಲ್ಲ. ಆದರೆ ಸಣ್ಣ ಪುಟ್ಟ ಗುಣಗಳಿಂದ ನಾವಿಬ್ಬರು ಹತ್ತಿರವಾಗಿ ಪ್ರೀತಿಸಲು ಆರಂಭಿಸಿದೆವು' ಎಂದು ಶಮಿತಾ ಮಾತನಾಡಿದ್ದಾರೆ.

click me!