ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದ ಪ್ರಕರಣ; ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ ವಿಲ್ ಸ್ಮಿತ್

Published : Apr 02, 2022, 01:00 PM IST
ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದ ಪ್ರಕರಣ; ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ ವಿಲ್ ಸ್ಮಿತ್

ಸಾರಾಂಶ

ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದ ಪ್ರಕರಣ ಸಂಬಂಧ ನಟ ವಿಲ್ ಸ್ಮಿತ್ ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ್ದಾರೆ. 

ಪ್ರತಿಷ್ಠಿತ ಆಸ್ಕರ್ ಸಮಾರಂಭದಲ್ಲಿ ಡಾಕ್ಯುಮೆಂಟರಿ ಫೀಚರ್ ವಿಭಾಗದ ಪ್ರಶಸ್ತಿಯನ್ನು ಘೋಷಿಸಲು ಬಂದ ಕ್ರಿಸ್ ರಾಕ್(Chris Rock), ನಟ ವಿಲ್ ಸ್ಮಿತ್(Will Smith) ಪತ್ನಿ ಹಾಗೂ, ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ತಮಾಷೆ ಮಾಡಿ ನಟ ವಿಲ್ ಸ್ಮಿತ್ ಅವರಿಂದ ಕಪಾಳಕ್ಕೆ ಹೊಡೆಸಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು, ವಿಶ್ವದಾದ್ಯಂತ ಚರ್ಚೆ ನಡೆಯುತ್ತಿದೆ. ಈ ಪ್ರಕರಣ ಬಳಿಕ ನಟ ವಿಲ್ ಸ್ಮಿತ್ ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ್ದಾರೆ.

ಕ್ರಿಸ್ ರಾಕ್ ತನ್ನ ಪತ್ನಿಯ ಬಗ್ಗೆ ತಮಾಷೆ ಮಾಡಿದ ಕಾರಣಕ್ಕೆ ವೇದಿಕೆಯ ಮೇಲೆ ಹೋಗಿ ವಿಲ್ ಸ್ಮಿತ್ ಕಪಾಳಕ್ಕೆ ಬಾರಿಸುವ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದ್ದರು. ಕಪಾಳಕಕ್ಕೆ ಬಾರಿಸಿ ಬಂದ ಸ್ಮಿತ್ ನನ್ನ ಪತ್ನಿ ಬಗ್ಗೆ ಮಾತನಾಬೇಡ ಎಂದು ಕಿರುಚಾಡಿದರು. 'ನನ್ನ ಪತ್ನಿಯ ಹೆಸರನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು' ಎಂದು ಸ್ಮಿತ್ ಕೂಗಾಡಿದ್ದರು. ಈ ಘಟನೆ ಎಲ್ಲರಿಗೂ ಶಾಕ್ ನೀಡಿದ್ದು. ಕಪಾಳಕ್ಕೆ ಬಾರಿಸಿದ ಕೆಲವೇ ನಿಮಿಷಗಳಲ್ಲಿ ವಿಲ್ ಸ್ಮಿತ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದು ಬೀಗಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಲ್ ಸ್ಮಿತ್ ಕಣ್ಣೀರು ಹಾಕಿದ್ದರು. ವಿವಾದ ಬಳಿಕ ವಿಲ್ ಸ್ಮಿತ್ ಕ್ಷಮೆ ಕೇಳಿದರು ಸಹ ಈ ಬಗ್ಗೆ ಚರ್ಚೆ ಮುಂದುವರೆದಿದೆ.

ಇದೀಗ ವಿಲ್ ಸ್ಮಿತ್ ಮೋಷನ್ ಪಿಕ್ಚರ್ ಅಕಾಡೆಮಿಗೆ ರಾಜಿನಾಮೆ ಸಲ್ಲಿಸಿದ್ದು, ಸಂಸ್ಥೆಯು ವಿಧಿಸುವ ಯಾವುದೇ ಶಿಕ್ಷೆಯನ್ನು ಸ್ವೀಕರಿಸುವುದಾಗಿ ಹೇಳಿದರು. ನನ್ನ ನಡವಳಿಕೆಗೆ ಯಾವುದೇ 94ನೇ ಅಕಾಡೆಮಿ ಅವಾರ್ಡ್ ನಲ್ಲಿ ನನ್ನ ಕ್ರಮ ಆಘಾತಕಾರಿಯಾಗಿತ್ತು. ಅತಿಯಾದ ನೋವು ಮತ್ತು ಕ್ಷಮಿಸಲಾಗದ್ದು ಎಂದು ಹೇಳಿದ್ದಾರೆ.

Oscar ವೇದಿಕೆಯಲ್ಲಿ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದ ವಿಲ್ ಸ್ಮಿತ್ ಬಗ್ಗೆ ತಾಯಿ ಪ್ರತಿಕ್ರಿಯೆ

ನಾನು ಅಕಾಡೆಮಿಗೆ ನಂಬಿಕೆ ದ್ರೋಹ ಮಾಡಿದ್ದೇನೆ. ಇತರ ನಾಮನಿರ್ದೇಶಿತರು ಮತ್ತು ವಿನ್ನರ್ಸ್ ಅವರ ಅಸಮಾನ್ಯ ಶ್ರಮಕ್ಕೆ ಸಿಕ್ಕ ಸಂತಸವನ್ನು ಆಚರಿಸುವ ಅವಕಾಶ ನಾನು ಕಿತ್ತುಕೊಂಡೆ. ನಾನು ಕುಸಿದುಹೋಗಿದ್ದೀನಿ. ಸಿನಿಮಾಗಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕಯನ್ನು ಬೆಂಬಲಿಸಲು ಅಕಾಡೆಮಿಯು ಮಾಡುವ ಅಸಾಧ್ಯ ಕೆಲಸಕ್ಕೆ ಮರಳು ಅವಕಾಶ ನೀಡುತ್ತದೆ. ಬದಲಾವಣೆಗೆ ಸಮಯ ತೆಗೆದುಕೊಳ್ಳುತ್ತದೆ. ಹಿಂಸಾಚಾರಕ್ಕೆ ನಾನು ಇನ್ನೆಂದಿಗೂ ಅನುಮತಿಸಲ್ಲ. ನಾನು ಈ ಕೆಲಸವನ್ನು ಮಾಡಲು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್, ಏಪ್ರಿಲ್ 18ರಂದು ನಮ್ಮ ಮುಂದಿನ ಮಂಡಳಿಯ ಸಭೆಯ ಮುಂಚಿತವಾಗಿ ನಡವಳಿಕೆಯ ಮಾನದಂಡನೆಗಳ ಉಲ್ಲಂಘನೆಗಾಗಿ ಸ್ಮಿತ್ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮಿಲಿಟರಿ ಆಸ್ಕರ್ ಘೋಷಿಸಿದ ಉಕ್ರೇನ್; ಟ್ರ್ಯಾಕ್ಟರ್ ಗೆ ಸಿಕ್ತು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ

ವಿಲ್ ಸ್ಮಿತ್ ರಾಜಿನಾಮೆಯಿಂದ ಮತದಾನದ ಹಕ್ಕು ಕಳೆದುಕೊಳ್ಳುತ್ತಿದ್ದಾರೆ. ಹಾಲಿವುಡ್ ನ ಅತ್ಯಂತ ಪ್ರತಿಷ್ಠಿತ ಸಂಸ್ಥೆೆಯಾದ ಅಕಾಡೆಮಿ ಭಾಗವಾಗಲು ಸಾಧ್ಯವಿಲ್ಲ. ಇದು ತನ್ನ ಸದಸ್ಯರಿಗೆ ಉದ್ಯಮದ ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಅಕಾಡೆಮೆ ಮಂಡಳಿ ಸಭೆ ನಡಿಸಿದ ಬಳಿಕ ವಿಲ್ ಸ್ಮಿತ್ ಅವರನ್ನು ಅಮಾನತು ಮಾಡಲಾಗುತ್ತಾ, ಉಚ್ಚಾಟನೆ ಮಾಡಲಾಗುತ್ತಾ ಅಥವಾ ಬೇರೆ ಶಿಕ್ಷೆ ನೀಡಲಾಗುತ್ತಾ ಎನ್ನುವುದು ಬಹಿರಂಗವಾಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?