Latest Videos

ಸುದೀಪ್ ಹಳೆ ವಿಡಿಯೋ ವೈರಲ್; ಇದು ಕಿಡಿಗೇಡಿಗಳ ಕೆಲಸ

By Shruiti G KrishnaFirst Published Apr 20, 2022, 4:51 PM IST
Highlights

ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಕೆಜಿಎಫ್ ಬಗ್ಗೆ ಏನು ಕೇಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸುದೀಪ್ ಕೆಜಿಎಫ್ ನಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸ್ಯಾಂಡಲ್ ವುಡ್(Sandalwood) ಮತ್ತು ಭಾರತೀಯ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್(Yash) ಮತ್ತು ಪ್ರಶಾಂತ್ ನೀಲ್(Prashanth Neel) ಕಾಂಬಿನೇಷನ್ ಕೆಜಿಎಫ್-2 ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್-2 ಟ್ರೆಂಡಿಂಗ್ ನಲ್ಲಿದೆ. ಈ ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಅನೇಕರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸುದೀಪ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿದೆ. ಯಶ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಸಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆಯುತ್ತಿದೆ.

ವಿಡಿಯೋದಲ್ಲಿ ಸುದೀಪ್ ಹೇಳಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಕೆಜಿಎಫ್ ಬಗ್ಗೆ ಏನು ಕೇಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸುದೀಪ್ ಕೆಜಿಎಫ್ ನಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಸುದೀಪ್ ಕೆಜಿಎಫ್-2 ಬಿಡುಗಡೆ ಬಳಿಕ ಮಾತನಾಡಿದ ವಿಡಿಯೋ ಎಂದು ಬಿಂಬಿಸಲಾಗಿದೆ.

ಹಳೆ ವಿಡಿಯೋ ವೈರಲ್

ಆದರೆ ಸುದೀಪ್ ನಿಜಕ್ಕೂ ಕೆಜಿಎಫ್-2 ಬಿಡುಗಡೆ ಬಳಿಕ ಮಾತನಾಡಿದ್ರಾ ಎಂದು ನಿಜಾಂಶ ತಿಳಿದುಕೊಳ್ಳದೆ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿ ಸುದೀಪ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ನಿಜಕ್ಕೂ ಸುದೀಪ್ ಇತ್ತೀಚಿಗೆ ಮಾತನಾಡಿದ ವಿಡಿಯೋನಾ?, ಈ ವಿಡಿಯೋ 2021ರದ್ದು. 2021 ರಲ್ಲಿ ಗೋವಾದಲ್ಲಿ ನಡೆದ 51ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂದರ್ಭ. ಆದರೀಗ ಕಿಡಿಗೇಡಿಗಳು ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ.

ಆಮೀರ್ ಖಾನ್ 'ದಂಗಲ್' ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿದ 'ಕೆಜಿಎಫ್-2'

ಕೆಜಿಎಫ್-1 ಬಿಡುಗಡೆ ಬಳಿಕ ವಿಶ್ ಮಾಡಿದ್ದ ಸುದೀಪ್

ಅಂದಹಾಗೆ ಸುದೀಪ್ ಕೆಜಿಎಫ್-1 ಬಿಡುಗಡೆ ವೇಳೆ ಟ್ವೀಟ್ ಮಾಡುವ ಮೂಲಕ ಚಿತ್ರತಂಡಕ್ಕೆ ವಿಶ್ ಮಾಡಿದ್ದರು. ಅದ್ಭುತವಾದ ಸಿನಿಮಾ ನೀಡಿದ ಪ್ರಶಾಂತ್ ನೀಲ್ ಅವರಿಗೆ ಹ್ಯಾಟ್ಸ್ ಅಪ್. ಮತ್ತೊಂದು ಲೆವೆಲ್ ಗೆ ಕೊಂಡೊಯ್ದಿದ್ದಾರೆ. ಯಶ್ ಇಂಪ್ರೆಸಿವ್ ಆಗಿ ಕಾಣಿಸುತ್ತಿದ್ದೀರಾ. ಹೊಂಬಾಳೆ ಫಿಲ್ಮ್ಸ್ ಅಭಿನಂದನೆ ಎಂದು ವಿಶ್ ಮಾಡಿದ್ದರು.

ಆದರೆ ಸಿನಿಮಾತಂಡದ ಕಡೆಯಿಂದ ಸುದೀಪ್ ಅವರಿಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್ ಯಾರು ಸಹ ಸುದೀಪ್ ಅವರಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಬಹುತೇಕ ಎಲ್ಲರಿಗೂ ಪ್ರತಿಕ್ರಿಯೆ ನೀಡಿತ್ತು ಸಿನಿಮಾತಂಡ. ಆದರೆ ಈ ಬಗ್ಗೆ ಸುದೀಪ್ ಯಾವುತ್ತು ತಲೆಕೆಡಿಸಿಕೊಂಡಿರಲಿಲ್ಲ. ಆದರೀಗ ಸುದೀಪ್ ವಿಡಿಯೋ ವೈರಲ್ ಮಾಡುವ ಮೂಲಕ ಚಿತ್ರರಂಗದ ಒಗ್ಗಟ್ಟನ್ನು ಮುರಿಯುವ ಕೆಲಸ ಮಾಡಲಾಗುತ್ತಿದೆ. ಕೆಜಿಎಫ್-2 ಅಂತಹ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಮಯದಲ್ಲಿ ಇಂತ ವಿವಾದಗಳನ್ನು ಮಾಡುವ ಮೂಲಕ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ಮಧ್ಯೆ ತಂದಿಡುವ ಕೆಲಸ ಮಾಡಲಾಗುತ್ತಿದೆ.

ಕಲೆಕ್ಷನ್‌ನಲ್ಲಿ ವಿಶ್ವದಲ್ಲೇ 2 ಸ್ಥಾನಕ್ಕೇರಿದ ಕೆಜಿಎಫ್-2, ಇತಿಹಾಸ ಸೃಷ್ಟಿಸಿದ ರಾಕಿಂಗ್ ಭಾಯ್.!

ಸುದೀಪ್ ಹೆಸರೇಳಿ ಕರೆದಿದ್ದ ಯಶ್ ವಿರುದ್ಧ ಆಕ್ರೋಶ

 ಈ ಹಿಂದೆಯೂ ಸಹ ಸುದೀಪ್ ಹಾಕಿದ್ದ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದ ಯಶ್ ಬಳಿಕ ಸುದೀಪ್ ಅವರನ್ನು ಸರ್ ಎಂದು ಕರೆದಿಲ್ಲ ಎಂದು ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಚಿತ್ರರಂಗದ ದೊಡ್ಡ ನಟ ಸುದೀಪ್ ಅವರನ್ನೇ ಹೆಸರು ಹೇಳಿ ಕರೆಯುತ್ತಿದ್ದಾರೆ ಎಂದು ಕಿಚ್ಚನ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು. ಆಗಲು ಸುದೀಪ್ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದೀಗ ಮತ್ತ ವಿವಾದ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆಯೂ ಸಹ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

click me!