ಆಮೀರ್ ಖಾನ್ 'ದಂಗಲ್' ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿದ 'ಕೆಜಿಎಫ್-2'

By Shruiti G Krishna  |  First Published Apr 20, 2022, 3:31 PM IST

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ‘ಕೆಜಿಎಫ್ 2’(KGF 2) ಚಿತ್ರ ಬಿಡುಗಡೆಯಾದ ಐದೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದು ವಾರದಲ್ಲಿ 600 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಲು ಹೊರಟಿದೆ. 


ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ‘ಕೆಜಿಎಫ್ 2’(KGF 2) ಚಿತ್ರ ಬಿಡುಗಡೆಯಾದ ಐದೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದು ವಾರದಲ್ಲಿ 600 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಲು ಹೊರಟಿದೆ. ಬಾಲಿವುಡ್‌ನಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ ಕಲೆಕ್ಷನ್ ಮಾಡಿದ ಚಿತ್ರ ಅನ್ನೋ ಹೆಗ್ಗಳಿಕೆಗೂ ಭಾಜನವಾಗಿದೆ. ಈ ಮೂಲಕ ಅಮೀರ್ ಖಾನ್‌ ನಟನೆಯ ‘ದಂಗಲ್’(Dangal) ಚಿತ್ರದ ದಾಖಲೆ ನೆಲಸಮ ಮಾಡಿದೆ. ಒಂದು ವಾರದೊಳಗೇ ‘ಕೆಜಿಎಫ್ 2’ ಹಿಂದಿ ವರ್ಷನ್ 219.56 ರೂ. ಕೋಟಿ ಸಂಗ್ರಹ ಮಾಡಿದೆ. ಬಾಲಿವುಡ್‌ನಲ್ಲಿ ಅತ್ಯಧಿಕ ಗಳಿಕೆ ಮಾಡಿದ್ದ ‘ದಂಗಲ್’ ಚಿತ್ರ ಮೊದಲ ವಾರದಲ್ಲಿ 197.54 ಕೋಟಿ ರೂ. ಸಂಗ್ರಹಿಸಿತ್ತು.

ಇನ್ನೊಂದೆಡೆ ತಮಿಳುನಾಡಿನಲ್ಲಿ ವಿಜಯ್‌ ನಟನೆಯ ‘ಬೀಸ್ಟ್‌’ ಸಿನಿಮಾವನ್ನು ಬೀಟ್‌ ಮಾಡಿ ನಂ.1 ಸಿನಿಮಾವಾಗಿ ಹೊರ ಹೊಮ್ಮಿದೆ. ತಮಿಳುನಾಡಿನಲ್ಲೇ 50 ಕೋಟಿ ಕ್ಲಬ್‌ ಸೇರಿದೆ. ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ ಅನ್ನೋ ದಾಖಲೆಯನ್ನೂ ಇದು ಮಾಡಿದೆ. ಆರಂಭದಲ್ಲಿ ತಮಿಳ್ನಾಡಿನಲ್ಲಿ ‘ಕೆಜಿಎಫ್ 2’ ಗಿಂತ ಹೆಚ್ಚು ಥಿಯೇಟರ್‌ಗಳಲ್ಲಿ ‘ಬೀಸ್ಟ್‌’ ಚಿತ್ರ ರಿಲೀಸ್ ಆಗಿತ್ತು. ಸೋಮವಾರ ತಮಿಳುನಾಡಿನಲ್ಲಿ ಬೀಸ್ಟ್‌ ಗಳಿಕೆ ನೆಲಕ್ಕಚ್ಚಿತ್ತು. ಆದರೆ ‘ಕೆಜಿಎಫ್ 2’ಗೆ ಸೋಮವಾರವೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸದ್ಯ ತಮಿಳ್ನಾಡಿನಲ್ಲಿ ಕೆಜಿಎಫ್ 50.27 ಕೋಟಿ ರು. ಗಳಿಕೆ ಮಾಡಿದೆ.

Tap to resize

Latest Videos

ತಮಿಳುನಾಡಿನಲ್ಲಿ ‘ಬೀಸ್ಟ್‌’ 57.17 ಕೋಟಿ ಗಳಿಕೆ ಮಾಡಿದೆ. ಸಿನಿಮಾ ತಜ್ಞರ ಪ್ರಕಾರ ಶೀಘ್ರ ಕೆಜಿಎಫ್ 2 ಬೀಸ್ಟ್‌ನ ಗಳಿಕೆ ಮೀರಿಸಿ ಹೊಸ ದಾಖಲೆ ಬರೆಯಲಿದೆ. ಟಾಲಿವುಡ್ ನಲ್ಲಿ ಏಪ್ರಿಲ್ 22ಕ್ಕೆ ವಿಶ್ವಕ್ ಸೇನ್‌ ಅವರ ‘ಅಶೋಕ ವನಂ ಕೋ ಅರ್ಜುನ ಕಲ್ಯಾಣಂ’ ಹಾಗೂ ನಾಗ ಶೌರ್ಯ ಅವರ ‘ಕೃಷ್ಣ ವೃಂದ ವಿಹಾರಿ’ ಸಿನಿಮಾಗಳು ಬಿಡುಗಡೆ ಕಾಣಬೇಕಿತ್ತು. ಆದರೆ ‘ಕೆಜಿಎಫ್ 2’ ಅಬ್ಬರ ಮುಂದುವರಿದ ಕಾರಣ ಈ ಎರಡೂ ಚಿತ್ರಗಳ ಬಿಡುಗಡೆ ಮುಂದೆ ಹೋಗಿದೆ.

ಕಲೆಕ್ಷನ್‌ನಲ್ಲಿ ವಿಶ್ವದಲ್ಲೇ 2 ಸ್ಥಾನಕ್ಕೇರಿದ ಕೆಜಿಎಫ್-2, ಇತಿಹಾಸ ಸೃಷ್ಟಿಸಿದ ರಾಕಿಂಗ್ ಭಾಯ್.!

ಏಪ್ರಿಲ್.29 ರಂದು ರಾಮ್‌ ಚರಣ್ ಹಾಗೂ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಬಿಡುಗಡೆಯಾಗಲಿದೆ. ಅಲ್ಲಿಯವರೆಗೆ ಆಂಧ್ರದಲ್ಲಿ ‘ಕೆಜಿಎಫ್ 2’ ಪ್ರದರ್ಶನಕ್ಕೆ ಯಾವ ಆತಂಕಗಳೂ ಇಲ್ಲ. ತೆಲುಗಿನಲ್ಲೂ ಸಹ ಕೆಜಿಎಫ್-2 ಅಬ್ಬರಿಂದ ಅನೇಕ ಸಿನಿಮಾಗಳ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಸದ್ಯ ಎಲ್ಲಾ ಕಡೆ ಕೆಜಿಎಫ್-2 ಸಿನಿಮಾದೆ ಸದ್ದು. ಎಲ್ಲಾ ಭಾಷೆಯಲ್ಲೂ ಕೆಜಿಎಫ್-2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಕೆಜಿಎಫ್-2 ನೋಡಿ ಹಾಡಿಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಕೆಜಿಎಫ್2 ಸಿನಿಮಾದ್ದೇ ಸದ್ದು. ಸಿನಿಮಾ ಬಿಡುಗಡೆಯಾಗಿ 7ದಿನಗಳಾದರೂ ಟ್ವಿಟ್ಟರ್ ನಲ್ಲಿ ಯಶ್ ಮತ್ತು ಕೆಜಿಎಫ್2 ಹೆಸರು ಟ್ರೆಂಡಿಂಗ್ ನಲ್ಲಿದೆ.

IPL 2022: RCB ಪಂದ್ಯ ವೀಕ್ಷಿಸಿದ KGF 2 ಅಧೀರ ಮತ್ತು ರಮಿಕಾ ಸೇನ್; ಫೋಟೋ ವೈರಲ್

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 7ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

 

click me!