ಕೆ ಎಲ್ ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಈ ವರ್ಷದ ಕೊನೆಯಲ್ಲಿ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾ ಆಟಗಾರ, ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿರುತ್ತಾರೆ. ಅಲ್ಲದೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಅತಿಯಾ ಕ್ರೀಡಾಂಗಣಕ್ಕೆ ಎಂಟ್ರಿ ಕೊಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಪ್ರಣಯ ಪಕ್ಷಿಗಳು ಇದೀಗ ಮದುವೆಗೆ ಸಿದ್ಧವಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕೆ ಎಲ್ ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್, ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಬಳಿಕ ಬಾಲಿವುಡ್ ಮತ್ತೊಂದು ತಾರಾ ಜೋಡಿಯ ಮದುವೆಗೆ ಸಜ್ಜಾಗಿದೆ. ಈ ವರ್ಷ ಬಾಲಿವುಡ್ ನಲ್ಲಿ ಮದುವೆ ಸುಗ್ಗಿ ಜೋರಾಗಿದೆ. ಬ್ಯಾಕ್ ಟು ಬ್ಯಾಕ್ ಮದುವೆ ಸಮಾರಂಭಗಳು ನಡೆಯುತ್ತಿವೆ. ಇದೀಗ ಅತಿಯಾ ಮತ್ತು ರಾಹುಲ್ ಮದುವೆ ವಿಚಾರ ಸಹ ಗುಲ್ಲಾಗಿದೆ. ಅಂದಹಾಗೆ ಈ ಸ್ಟಾರ್ ಆಟಗಾರ ಮತ್ತು ನಟಿ ಅತಿಯಾ ಶೆಟ್ಟಿ ಇಬ್ಬರು ಈ ವರ್ಷ ವಿಂಟರ್ ವಿವಾಹಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮದುವೆಗೆ ಸಿದ್ದತೆ ನಡೆಯುತ್ತಿದೆ ಎಂದು ಆಪ್ತಮೂಲಗಳು ತಿಳಿಸಿವೆ ಎಂದು ಆಂಗ್ಲ ವೆಬ್ ಸೈಟ್ ಪಿಂಕ್ ವಿಲ್ಲ ವರದಿ ಮಾಡಿದೆ. ಈ ವರ್ಷದ ಕೊನೆಯಲ್ಲಿ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಕರ್ನಾಟಕ ಮೂಲದವರಾಗಿರುವ ಇಬ್ಬರ ಪ್ರೀತಿಗು ಈಗಾಗಲೇ ಕುಟುಂಬದವರಿಂದ ಗ್ರೀನ್ ಸಿನ್ನಲ್ ಸಿಕ್ಕಿದೆ. ಕರ್ನಾಟಕದ ಮೂಲ್ಕಿ ಮೂಲದವರು ಸುನಿಲ್ ಶೆಟ್ಟಿ. ರಾಹುಲ್ ಕೂಡ ಮಂಗಳೂರು ಮೂಲದವರು. ಇಬ್ಬರು ತುಳು ಕುಟುಂಬದವರು. ಹಾಗಾಗಿ ದಕ್ಷಿಣ ಭಾರತೀಯ ಶೈಲಿಯಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ.
Athiya Shetty ಮಾತ್ರವಲ್ಲ, ಈ ನಟಿಯರ ಜೊತೆ KL Rahulಗೆ ಲಿಂಕ್?
ಅತಿಯಾ ಶೆಟ್ಟಿ ತಂದೆ ಖ್ಯಾತ ನಟ ಸುನಿಲ್ ಶೆಟ್ಟಿ, ಭಾವಿ ಅಳಿಯ ಕೆಎಲ್ ರಾಹುಲ್ ಅವರನ್ನು ತುಂಬಾ ಇಷ್ಟಪಡುತ್ತಾರೆ. ಇತ್ತೀಚಿಗೆ ಐಪಿಎಲ್ ಪಂದ್ಯ ವೀಕ್ಷಿಸಲು ಸಹ ಸುನಿಲ್ ಶೆಟ್ಟಿ ಮಗಳ ಜೊತೆ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟಿದ್ದರು. ಭಾವಿ ಅಳಿಯ ರಾಹುಲ್ ಅವರಿಗೆ ಸಪೋರ್ಟ್ ಮಾಡುವ ಮೂಲಕ ಸುನಿಲ್ ಶೆಟ್ಟಿ ಸಂಭ್ರಮಿಸಿದ್ದರು. ಅಂದಹಾಗೆ ಈ ಜೋಡಿ ಎಲ್ಲಿಯೂ ಪ್ರೀತಿ ವಿಚಾರ ಬಹಿರಂಗ ಪಡಿಸಿಲ್ಲ. ಆದರೆ ಇಬ್ಬರು ಆಪ್ತವಾಗಿರುವ ಫೋಟೋಗಳು ಪ್ರೀತಿ ವಿಚಾರ ಬಿಚ್ಚಿಟ್ಟಿವೆ. ಅಂದಹಾಗೆ ಇತ್ತೀಚಿಗಷ್ಟೆ ಈ ಜೋಡಿ ಕನ್ನಡಕ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
IPL 2022 ರಾಹುಲ್ ಶತಕಕ್ಕೆ ಒಲಿದ ಗೆಲುವು, ಮುಂಬೈಗೆ ಸತತ 6ನೇ ಸೋಲು!
ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಕೆ ಎಲ್ ರಾಹುಲ್ ಅವರಿಗೆ ಗೆಳತಿ ಅತಿಯಾ ಶೆಟ್ಟಿ ವಿಶ್ ಮಾಡಿದ್ದರು. ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿ ಭಾವಿ ಪತಿ ರಾಹುಲ್ ಜನ್ಮದಿನ ಸಂಭ್ರಮಿಸಿದ್ದರು. ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಪ್ರಣಯ ಪಕ್ಷಿಗಳು ಈ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಈಗಲೇ ವೈರಲ್ ಆಗಿದೆ ಈ ಬಗ್ಗೆ ಸ್ಟಾರ್ ಜೋಡಿಯೇ ಬಹಿರಂಗ ಪಡಿಸಬೇಕಿದೆ.