ಮೊದಲ ಚಿತ್ರಕ್ಕೆ ಜಸ್ಟ್‌ 500 ರೂ. ಪಡೆದ ನಟ ಸದ್ಯ ಸೂಪರ್‌ಸ್ಟಾರ್‌, ಸಂಭಾವನೆ ಭರ್ತಿ 200 ಕೋಟಿ!

By Vinutha Perla  |  First Published Oct 10, 2023, 11:57 AM IST

ಮೊದಲ ಸಿನಿಮಾಕ್ಕೆ ಕೇವಲ 500 ರೂ. ಪಡೆದ ನಟ, ಆ ನಂತರ ಹಂತ ಹಂತವಾಗಿ ನಟನೆಯಲ್ಲಿ ಬೆಳೆಯುತ್ತಾ ಹೋದರು. ಸದ್ಯ ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ನಟಿಸಿದ ಚಿತ್ರಗಳೆಲ್ಲವೂ ಸೂಪರ್‌ಹಿಟ್‌. ಪ್ರತಿ ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಯಾರು ಆ ನಟ ?


ಚಿತ್ರರಂಗದಲ್ಲಿ ಇವತ್ತಿಗೆ ಸೂಪರ್‌ಸ್ಟಾರ್‌ ಆಗಿರುವ ಅದೆಷ್ಟೋ ನಟ-ನಟಿಯರು ಸಿನಿಮಾರಂಗಕ್ಕೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದರು. ಕೆಲವೊಬ್ಬರು ಸಿನಿಮಾ ಹಿನ್ನೆಲೆಯ ಕುಟುಂಬದಿಂದಲೇ ಬಂದವರಾದರೆ, ಇನ್ನು ಕೆಲವರು ಸಂಪೂರ್ಣ ಬಡತನದ ಕುಟುಂಬದಿಂದ ಬಂದು ಕಷ್ಟಪಟ್ಟವರು. ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ನಾಯಕ ನಟನಾಗಿ ಸಕ್ಸಸ್‌ ಆದವರು. ದಕ್ಷಿಣಭಾರತದ ಈ ನಟ ಕೂಡಾ ಹೀಗೆ ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ಬೆಳೆಯುತ್ತಾ ಸೂಪರ್‌ಸ್ಟಾರ್‌ ಆದ ನಟ. ಸಿನಿಮಾರಂಗದಲ್ಲಿ ಕೆರಿಯರ್‌ ಆರಂಭಿಸಿದ ಆ ದಿನಗಳಲ್ಲಿ ಸೆಟ್‌ಗಳಲ್ಲಿ ಕೇವಲ 500 ರೂ. ಗಳಿಗೆ ಕೆಲಸ ಮಾಡಿದ್ದರು. ಸದ್ಯ ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ಪ್ರತಿ ಚಿತ್ರಕ್ಕೆ 200 ಕೋಟಿ ರೂ. ಪಡೆಯುತ್ತಾರೆ. 

ಮೊದಲ ಸಿನಿಮಾಕ್ಕೆ ಕೇವಲ 500 ರೂ. ಪಡೆದ ನಟ, ಆ ನಂತರ ಹಂತ ಹಂತವಾಗಿ ನಟನೆಯಲ್ಲಿ ಬೆಳೆಯುತ್ತಾ ಹೋದರು. ಸದ್ಯ ಅವರು ಭಾರತದ ಅತಿ ಹೆಚ್ಚು ಸಂಭಾವನೆ (Remuneration) ಪಡೆಯುವ ನಟ, ಪ್ರತಿ ಚಿತ್ರಕ್ಕೆ 200 ಕೋಟಿ ರೂ. ಪಡೆಯುತ್ತಾರೆ. ಆ ನಟ ಮತ್ಯಾರೂ ಅಲ್ಲ. ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ತಮಿಳು ನಟ ವಿಜಯ್‌. 

Latest Videos

undefined

ಅಮಿತಾಬ್‌,ಶಾರೂಕ್‌, ಸಲ್ಮಾನ್‌ಗಿಂತ ಹೆಚ್ಚು ಹಿಟ್‌ ಸಿನ್ಮಾ ನೀಡಿದ ನಟ, ಆದ್ರೂ ಫ್ಯಾನ್ಸ್‌ ಸೂಪರ್‌ಸ್ಟಾರ್‌ ಎಂದು ಕರೆಯಲೇ ಇಲ್ಲ!

ಮೊದಲ ಚಿತ್ರಕ್ಕೆ 500 ರೂ., ಸದ್ಯ ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ
ದಳಪತಿ ಎಂಬ ಹೆಸರಿನಿಂದ ಪರಿಚಿತರಾಗಿರುವ ವಿಜಯ್, ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಭಾರತದಾದ್ಯಂತ ಅತಿ ದೊಡ್ಡ ಬಾಕ್ಸ್ ಆಫೀಸ್ ಸಿನಿಮಾಗಳನ್ನು ನೀಡುವ ನಟ. ವಿಜಯ್‌, 80ರ ದಶಕದಲ್ಲಿ ಬಾಲ ಕಲಾವಿದನಾಗಿ (Child actor) ಸಿನಿಮಾ ಜೀವನವನ್ನು ಆರಂಭಿಸಿದರು.  ತಮಿಳು ಚಲನಚಿತ್ರ ನಿರ್ಮಾಪಕ ಎಸ್‌.ಎ ಚಂದ್ರಶೇಖರ್ ಅವರ ಪುತ್ರ, ವಿಜಯ್ ಅವರ ಮೊದಲ ಚಿತ್ರ 1984ರಲ್ಲಿ ಬಿಡುಗಡೆಯಾದ ವೆಟ್ರಿ, ಇದನ್ನು ಅವರ ತಂದೆ ನಿರ್ದೇಶಿಸಿದ್ದರು.  2017ರಲ್ಲಿ ಸಂದರ್ಶನವೊಂದರಲ್ಲಿ, ಚಂದ್ರಶೇಖರ್ ಅವರು 10 ವರ್ಷದ ವಿಜಯ್ ಅವರು ನಟ-ನಿರ್ಮಾಪಕ ಪಿ.ಎಸ್.ವೀರಪ್ಪ ಅವರು ಚಿತ್ರದಲ್ಲಿನ ಅಭಿನಯಕ್ಕಾಗಿ (Acting) 500 ರೂ. ನೀಡಿದ್ದರು ಎಂಬುದನ್ನು ತಿಳಿಸಿದ್ದರು. 

30 ವರ್ಷಕ್ಕಿಂತ ಮೊದಲು 25 ಸೂಪರ್‌ ಹಿಟ್‌ ಸಿನಿಮಾ
ವಿಜಯ್ 1992ರಲ್ಲಿ 'ನಾಳಯ್ಯ ತೀರ್ಪು' ಚಿತ್ರದಲ್ಲಿ ವಯಸ್ಕನಾಗಿ ಪ್ರಮುಖ ಪಾತ್ರ ಮಾಡುವ ಮೊದಲು 80ರ ದಶಕದಲ್ಲಿ ವಿವಿಧ ಚಲನಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡರು. 12 ವರ್ಷಗಳ ಅವಧಿಯಲ್ಲಿ, ಅವರು 30 ವರ್ಷಕ್ಕೆ ಕಾಲಿಡುವ ಮೊದಲು, ವಿಜಯ್ 25ಕ್ಕೂ ಹೆಚ್ಚು ಹಿಟ್‌ ಸಿನಿಮಾಗಳಲ್ಲಿ ನಟಿಸಿದರು, ಆ ಸಮಯದಲ್ಲಿ ಯಾವುದೇ ನಟ ಸರಿಗಟ್ಟದ ದಾಖಲೆ (Record) ಇದಾಗಿದೆ. 

ಹೀರೋಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಕಾಮಿಡಿಯನ್‌; ಸಿನ್ಮಾವೊಂದಕ್ಕೆ ಭರ್ತಿ 2 ಕೋಟಿ ರೂ.!

90ರ ದಶಕ ಮತ್ತು 2000ರ ದಶಕದ ಆರಂಭದಲ್ಲಿ, ವಿಜಯ್ ಅವರು ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟನಾಗಿ ಗುರುತಿಸಿಕೊಂಡರು. 2000ರ ದಶಕದ ನಂತರ ಸ್ಟಾರ್‌ಡಮ್ ಗಳಿಸಿದರು. 2010ರ ದಶಕದ ಮಧ್ಯಭಾಗದಲ್ಲಿ, ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ತಮಿಳು ಚಿತ್ರರಂಗದಲ್ಲಿ ಅತಿದೊಡ್ಡ ಸೂಪರ್‌ಸ್ಟಾರ್ ಎಂದು ಕರೆಯಲ್ಪಟ್ಟರು. ವಿಜಯ್‌, ತುಪಾಕಿ, ಮೆರ್ಸಲ್, ಸರ್ಕಾರ್, ಬಿಗಿಲ್, ಮತ್ತು ಮಾಸ್ಟರ್‌ನಲ್ಲಿ ಸತತ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದಾರೆ. 

'ಲಿಯೋ' ಚಿತ್ರಕ್ಕಾಗಿ ವಿಜಯ್ ಪಡೀತಿರೋ ಸಂಭಾವನೆ ಭರ್ತಿ  200 ಕೋಟಿ
ದಳಪತಿ ವಿಜಯ್ ನಟನೆಯ ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಅಕ್ಟೋಬರ್ 19ರಂದು ಲಿಯೋ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಸಿನಿಮಾ ಸಖತ್ ಸುದ್ದಿ ಮಾಡ್ತಿದೆ. ಲೋಕೇಶ್ ಕನಕರಾಜ್ ಅವರ ಲಿಯೋಗಾಗಿ ವಿಜಯ್ ಅವರು 200 ಕೋಟಿ ರೂಪಾಯಿಗಳನ್ನು ಚಾರ್ಜ್ ಮಾಡಿದ್ದಾರೆ ಎಂದು ಈ ವರ್ಷದ ಮೇ ತಿಂಗಳಲ್ಲಿ ವರದಿಯಾಗಿದೆ. ಲಿಯೋಗಾಗಿ ವಿಜಯ್ ವಿಧಿಸಿದ ರೂ 200-ಕೋಟಿ ವರದಿಯ ಶುಲ್ಕವು ಅವರನ್ನು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನನ್ನಾಗಿ ಮಾಡಿದೆ.

click me!