
ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮದುವೆಯಲ್ಲಿ ಲೆಹಂಗಾ ಬದಲು ಸೀರೆ ಉಟ್ಟು ಮಿಂಚಿದ್ದರು. ಮದುವೆ ಅಗಿ ಅದೆಷ್ಟೋ ಕಾಲವಾಗಿ, ಮಗುವೂ ಆಗಿದೆ. ಈಗ ಯಾಕೆ ಮದುವೆ ಸೀರೆ ಬಗ್ಗೆ ಮಾತು ಎಂದು ಪ್ರಶ್ನೆ ಬರುವುದು ಸಹಜ! ಆದರೆ, ವಿಷಯ ಅದೇ, ಏನೆಂದರೆ, ಸಾಮಾನ್ಯವಾಗಿ ಮದುವೆಯಲ್ಲಿ ಬಾಲಿವುಡ್ ನಟಿಯರು ಲೆಹಂಗಾ ಧರಿಸುತ್ತಾರೆ. ಆದರೆ, ನಟಿ ಅಲಿಯಾ ಭಟ್ ತಮ್ಮ ಮದುವೆಯಲ್ಲಿ ಸೀರೆ ಧರಿಸಿ ಮಿರಮಿರ ಮಿಂಚಿದ್ದಾರೆ.
'ಮೇರಾ ಪಿಯಾ ಆಯಾ' ಹಾಡು ಮರು ಸೃಷ್ಟಿಸಿ, ಮಾಧುರಿಗೆ ಸನ್ನಿ ಲಿಯೋನ್ ಗೌರವ: ಫ್ಯಾನ್ಸ್ ಗರಂ
ಅಂದು ತಮ್ಮ ಮದುವೆಯಲ್ಲಿ 'ಕ್ರೀಮ್ ಕಲರ್ ಝರಿ ಅಲಂಕಾರದ ಸೀರೆ ಉಟ್ಟಿದ್ದ ನಟಿ ಆಲಿಯಾ ಭಟ್, ಅದರ ಮೇಲೊಂದು ದುಪಟ್ಟಾ ಹೊದ್ದು ತುಂಬಾ ಆಕರ್ಷಕವಾಗಿ ಕಾಣಿಸುತ್ತಿದ್ದರು. ಅವರ ಪಕ್ಕದಲ್ಲಿದ್ದ, ಲವರ್ ಹಾಗೂ ಪತಿ ರಣಬೀರ್ ಕಪೂರ್ ಕೂಡ ಅದೇ ಬಣ್ಣದ ಕಾಸ್ಟ್ಯೂಮ್ಸ್ ಧರಿಸಿದ್ದರು. ರಣವೀರ್ ಕಪೂರ್-ಆಲಿಯಾ ಭಟ್ ಜೋಡಿಯನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ ಎಂಬಂತಾಗಿತ್ತು. ಆದರೆ, ಆಲಿಯಾ ತಮ್ಮ ಮದುವೆಯಲ್ಲಿ ಲೆಹಂಗಾ ಬದಲು ಸೀರೆ ಉಟ್ಟಿದ್ದ ಕಾರಣವನ್ನು ಇದೀಗ ಬಹಿರಂಗಗೊಳಿಸಿದ್ದಾರೆ.
"ನನಗೆ ಸೀರೆ ಜಗತ್ತಿನ ಅತ್ಯುತ್ತಮ ಡ್ರೆಸ್ ಎನಿಸುತ್ತದೆ. ಆರು ಅಡಿಯ ಸೀರೆ ಉಡುವುದು ನನಗೆ ತುಂಬಾ ಇಷ್ಟವಾಗುತ್ತದೆ. ಸೀರೆ ನನಗೆ ಅದೆಷ್ಟು ಕಂಫರ್ಟೆಬಲ್ ಎನಿಸುತ್ತದೆ ಎಂದರೆ, ನನಗೆ ನನ್ನ ಗುಡ್ ಟೈಮ್‌ನಲ್ಲಿ ಯಾವತ್ತೂ ನೆನಪಾಗುವ ಡ್ರೆಸ್ ಎಂದರೆ ಅದು ಸೀರೆ. ಈ ಕಾರಣಕ್ಕೆ ನಾನು ನನ್ನ ಮದುವೆಯಲ್ಲಿ ಸೀರೆಯನ್ನೇ ಉಟ್ಟು ಹಾಯಾಗಿದ್ದೆ" ಎಂದಿದ್ದಾರೆ ಆಲಿಯಾ ಭಟ್. ಜತೆಗೆ, 'ನಿಮಗೆ ಯಾವ ಡ್ರೆಸ್ ತುಂಬಾ ಇಷ್ಟವಾಗುತ್ತೋ ಅದನ್ನೇ ಧರಿಸಿ. ಅದು ಸೀರೆಯೋ ಚೂಡಿದಾರ್ ಅಥವಾ ಲೆಹಂಗಾ ಎಂಬುದು ಮುಖ್ಯವಲ್ಲ, ನಿಮಗಿದು ಇಷ್ಟವಾಗಬೇಕು, ಕಂಫರ್ಟ್ ಎನಿಸಬೇಕು" ಎಂದಿದ್ದಾರೆ ಆಲಿಯಾ. ಅಲಿಯಾ ಮದುವೆ ಸೀರೆ ಸೀಕ್ರೆಟ್ ನಿಮಗೂ ಅರ್ತವಾಯಿತಲ್ಲವೇ?
ನೋವು ಏನೆಂದು ನನಗೂ ಗೊತ್ತಿದೆ, ನನ್ನ ಅಪ್ಪ ನಿಧನಹೊಂದಿದ್ದು ಅಪಘಾತದಲ್ಲಿ: ನಟ ನಾಗಭೂಷಣ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.