ಚೀನಾದ 6 ಸಾವಿರ ಸ್ಕ್ರೀನ್​ಗಳಲ್ಲಿ ಶ್ರೀದೇವಿ ' English Vinglish' ಸಿನಿಮಾ ಪ್ರದರ್ಶನ!

By Suvarna News  |  First Published Feb 9, 2023, 11:01 AM IST

ಒಂದು ಕಾಲದಲ್ಲಿ ಬಾಲಿವುಡ್​ ಸಿನಿಲೋಕವನ್ನು ಆಳಿಸಿದ್ದ ಸೌಂದರ್ಯದ ಘನಿ ಶ್ರೀದೇವಿ ಅವರ ಇಂಗ್ಲಿಷ್​ ವಿಂಗ್ಲಿಷ್​ ಚಿತ್ರವನ್ನು ಚೀನಾದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಏಕಿದು? 
 


80-90ರ ದಶಕದಲ್ಲಿ ಇಡೀ ಚಿತ್ರರಂಗವನ್ನು ಆಳಿದ ನಟಿ ಶ್ರಿದೇವಿ (Sridevi). ತಮ್ಮ ಮುಗ್ಧ ಮುಖ, ನಗು, ಮಾತಿನಿಂದ ಎಂಥವರನ್ನೂ ಮರುಳು ಮಾಡುತ್ತಿದ್ದ ಶ್ರೀದೇವಿ ನಟಿಸಿದ ಚಿತ್ರಗಳೆಲ್ಲವೂ ಬಹುತೇಕ ಸೂಪರ್​ಹಿಟ್​ಗಳೇ (Superhit). ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅನ್ಯ ಕಂಡ ತಾರೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.  1963ರಲ್ಲಿ ಹುಟ್ಟಿದ್ದ ಈ ತಾರೆ ಇಂದು ಬದುಕಿರುತ್ತಿದ್ದರೆ, 60 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. ಆದರೆ ವಯಸ್ಸಾದರೂ ಕೊನೆಯವರೆಗೂ ಆಕೆಯ ಮುಖದ ತೇಜಸ್ಸು ಎಂಥವರನ್ನೂ ಮರುಳು ಮಾಡುವಂತಿತ್ತು.

ಇಂತಿಪ್ಪ ಶ್ರೀದೇವಿ, ತಮ್ಮ 49ನೇ ವಯಸ್ಸಿನಲ್ಲಿ ಇಂಗ್ಲಿಷ್​ ವಿಂಗ್ಲಿಷ್​ (English Vinglish) ಚಿತ್ರದಲ್ಲಿ ನಟಿಸಿದ್ದರು. ಇಂಗ್ಲಿಷ್​ ಬರದೇ ಮನೆಯವರಿಂದ ಕಡೆಗಣನೆಗೆ ಒಳಗಾಗುವ ಪಾತ್ರದಲ್ಲಿ ನಟಿಸಿದ್ದರು ಶ್ರೀದೇವಿ. ಈ ಚಿತ್ರವನ್ನೂ ಜನರ ಅದರಲ್ಲಿಯೂ ಗೃಹಿಣಿಯರ ಅಚ್ಚುಮೆಚ್ಚಿನದ್ದಾಗಿತ್ತು. ಶ್ರೀದೇವಿ  ಈ ಚಿತ್ರದಲ್ಲಿ ಶಶಿ (Shashi) ಹೆಸರಿನ ಪಾತ್ರ ಮಾಡಿದ್ದರು. ಶಶಿ ಮದುವೆ ಆದ ನಂತರದಲ್ಲಿ ಮನೆ ನೋಡಿಕೊಂಡಿರುವ ಗೃಹಿಣಿ.  ಮಕ್ಕಳು, ಗಂಡ ಆಕೆಯ ಪ್ರಪಂಚ. ಇಂಗ್ಲಿಷ್ ಬರುವುದಿಲ್ಲ ಎಂದು ಆಕೆಯನ್ನು ಕುಟುಂಬದವರೇ ಹಂಗಿಸುತ್ತಾರೆ. ಈ ಕಾರಣಕ್ಕೆ ಆಕೆ ಇಂಗ್ಲಿಷ್ ಕಲಿಯುವ ಪ್ರಯತ್ನ ಮಾಡುತ್ತಾಳೆ. ನಂತರ ಇಂಗ್ಲಿಷ್ ಕಲಿತು ಮಾತನಾಡುತ್ತಾಳೆ. ಸಿನಿಮಾ ಕೊನೆಯಲ್ಲಿ ಆಕೆ ಅರ್ಥಪೂರ್ಣವಾಗಿ ಇಂಗ್ಲಿಷ್ ಮಾತನಾಡುತ್ತಾಳೆ. ಈ ಚಿತ್ರದ ಸಂದೇಶ ಬಹಳ ಮೆಚ್ಚುಗೆಗೆ ಒಳಗಾಗಿತ್ತು. 

Tap to resize

Latest Videos

Joyland: ಪಾಕ್​ನಲ್ಲಿ ಬ್ಯಾನ್​ ಆದ ಈ ಸಿನಿಮಾ ಭಾರತದಲ್ಲಿ ರಿಲೀಸ್​!

ಈ ಚಿತ್ರವೀಗ ಚೀನಾ(China)ದಲ್ಲಿ ತೆರೆ ಕಾಣಲಿದೆ. ಹೌದು! ಇದೇ ಫೆ.28 ಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆಯುತ್ತವೆ. ಈಕೆಯ ಪುಣ್ಯತಿಥಿಯ ಅಂಗವಾಗಿ ಇಂಗ್ಲಿಷ್​ ವಿಂಗ್ಲಿಷ್​ ಚಿತ್ರವನ್ನು ಚೀನಾದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಏಕೆಂದರೆ ಶ್ರೀದೇವಿ ಕೇವಲ ಭಾರತದಲ್ಲಿ ಖ್ಯಾತಿ ಪಡೆದಿರಲಿಲ್ಲ, ಈಕೆಯ ಅಭಿಮಾನಿಗಳು ಪ್ರಪಂಚಾದ್ಯಂತ ನೆಲೆಸಿದ್ದು, ಈಗ ಚೀನಿಯರು ಶ್ರೀದೇವಿಯ ಈ ಚಿತ್ರವನ್ನು ಮತ್ತೊಮ್ಮೆ ನೋಡಲು ಇಷ್ಟಪಟ್ಟಿದ್ದಾರೆ. ಕುತೂಹಲದ ಸಂಗತಿಯೆಂದರೆ, ಚೀನಾದಲ್ಲಿ 600 ಸಾವಿರ ಥಿಯೇಟರ್​ನಲ್ಲಿ (Theator) ಈ ಚಿತ್ರ ರಿಲೀಸ್ ಆಗುತ್ತಿದೆ. ಗೌರಿ ಶಿಂದೆ ನಿರ್ದೇಶನದ ಈ ಚಿತ್ರ ಚೀನಾದಲ್ಲಿ ಪ್ರದರ್ಶನಗೊಳ್ಳುತ್ತಿದೆ ಚೀನಾದಲ್ಲಿ ಭಾರತದ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತವೆ. ಆಮಿರ್ ಖಾನ್ (Aamir Khan) ಅಭಿನಯದ ಸಿನಿಮಾಗಳು ಚೀನಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ್ದವು. ಈಗ ‘ಇಂಗ್ಲಿಷ್ ವಿಂಗ್ಲಿಷ್​’ ಚೀನಾ ಭಾಷೆಗೆ ಡಬ್ (Dub) ಆಗಿ ತೆರೆಗೆ ಬರುತ್ತಿದೆ. 

ಈಕೆಯ ಸಾವಿನ ಕುರಿತು ಹೇಳುವುದಾದರೆ, 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ,  ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್​, ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್​ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್​ ಬಾತ್​ರೂಮ್​ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್​ಟಬ್​ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.  ಶ್ರೀದೇವಿ ಅವರಿಗೆ  ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಹೆಸರಿನ ಮಕ್ಕಳಿದ್ದಾರೆ. ಜಾನ್ವಿ ಕಪೂರ್ (Janvi Kapoor) ಇದಾಗಲೇ ನಟಿಯಾಗಿ ಮಿಂಚುತ್ತಿದ್ದಾರೆ. ಮಗ ಚಿತ್ರರಂಗದಿಂದ ದೂರ ಇದ್ದಾನೆ.  

Prabhas ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​, ಎಲ್ಲಾ ಶೂಟಿಂಗ್​ ಕ್ಯಾನ್ಸಲ್​!

click me!