ಮತ್ತೆ ಬರ್ತಿದೆ 'ಫ್ಯಾಮಿಲಿ ಮ್ಯಾನ್': ಇಂಟ್ರಸ್ಟಿಂಗ್ ಅಪ್‌ಡೇಟ್ ನೀಡಿದ ಮನೋಜ್ ಬಾಜಪಾಯಿ, ಸಮಂತಾ ಇರ್ತಾರಾ?

Published : Feb 08, 2023, 06:20 PM IST
ಮತ್ತೆ ಬರ್ತಿದೆ 'ಫ್ಯಾಮಿಲಿ ಮ್ಯಾನ್': ಇಂಟ್ರಸ್ಟಿಂಗ್ ಅಪ್‌ಡೇಟ್ ನೀಡಿದ ಮನೋಜ್ ಬಾಜಪಾಯಿ, ಸಮಂತಾ ಇರ್ತಾರಾ?

ಸಾರಾಂಶ

ದಿ ಫ್ಯಾಮಿಲಿ ಮ್ಯಾನ್ 3 ಬಗ್ಗೆ ನಟ ಮನೋಜ್ ಬಾಜಪಾಯಿ ಇಂಟ್ರಸ್ಟಿಂಗ್ ಅಪ್‌ಡೇಟ್ ನೀಡಿದ್ದಾರೆ. ಸಮಂತಾ ಇರ್ತಾರಾ ಎಂದು ಅಭಿಮಾನಿಗಳು ಕಾಮೆಂಟ್ ಪ್ರಶ್ನೆ ಮಾಡುತ್ತಿದ್ದಾರೆ. 

ದಿ ಫ್ಯಾಮಿಲಿ ಮ್ಯಾನ್ ಹೆಚ್ಚು ಜನಪ್ರಿಯತೆ ಪಡೆದ ವೆಬ್ ಸೀರಿಸ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಎರಡು ಸೀಸನ್‌ಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ದಿ ಫ್ಯಾಮಿಲಿ ಮ್ಯಾನ್ ಮತ್ತೆ ಬರ್ತಿದೆ. ಈ ಬಗ್ಗೆ ಇಂಟ್ರಸ್ಟಿಂಗ್ ಅಪ್ ಡೇಟ್ ನೀಡಿದ್ದಾರೆ ಖ್ಯಾತ ನಟ ಮನೋಜ್ ಬಾಜಪಾಯಿ. ಎರಡು ಸೀಸನ್‌ಗಳಲ್ಲಿ ಮೋಡಿ ಮಾಡಿದ್ದ ಮನೋಜ್ ಬಾಜಪಾಯಿ ಇದೀಗ 3ನೇ ಸೀಸನ್‌ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಶ್ರೀಕಾಂತ್ ತಿವಾರಿಯಾಗಿ ಮನೋಜ್ ಬಾಜಪಾಯಿ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಇದೀಗ ಮತ್ತೆ ಶ್ರೀಕಾಂತ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 

2021ರಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಫ್ಯಾಮಿಲ್ ಮ್ಯಾನ್ ಸೀರಿಸ್ ಗೆ ರಾಜ್ ಮತ್ತು ಡಿಕೆ ಆಕ್ಷನ್ ಹೇಳಿದ್ದರು. 3ನೇ ಸೀಸನ್ ಗೂ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಎಂದರೆ ಪಾರ್ಟ್-2ನಲ್ಲಿ ಟಾಲಿವುಡ್ ಸ್ಟಾರ್ ಸಮಂತಾ ನಟಿಸಿದ್ದರು. ಸಮಂತಾ ಎಂಟ್ರಿ ವೆಬ್ ಸೀರಿಸ್‌ನ ನಿರೀಕ್ಷೆ ಮತ್ತು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು. ಪಾರ್ಟ್ 2 ನಲ್ಲಿ 3ನೇ ಸೀಸನ್ ಬರುವ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಈಗ ಫ್ಯಾಮಿಲಿ ಮ್ಯಾನ್ ಸೀಸನ್ 3 ರಿಲೀಸ್ ಬಗ್ಗೆ   ಮನೋಜ್ ಬಾಜ​ಪಾಯಿ ಮಾಹಿತಿ ನೀಡಿದ್ದಾರೆ. 

ಜೀವನ್ಮರಣ ಸನ್ನಿವೇಶ, ಸುಳ್ಳು ಸುದ್ದಿ ಎಲ್ಲಿ ಸಿಗುತ್ತೆ: ಪುಷ್ಪ ಚಿತ್ರದ ಬಗ್ಗೆ ಮನೋಜ್ ಬಾಜ್‌ಪಾಯಿ ಸ್ಪಷ್ಟನೆ

‘ಈ ಹೋಳಿ ಹಬ್ಬಕ್ಕೆ ನಿಮ್ಮ ಕುಟುಂಬದ ಎದುರು ನಮ್ಮ ಕುಟುಂಬದ ಜತೆ ಬರುತ್ತಿದ್ದೇನೆ’ ಎಂದು ಮನೋಜ್ ಬಾಜ್​ಪಾಯಿ ಹೇಳಿದ್ದಾರೆ. ಈ ವಿಡಿಯೋ ಕ್ಯಾಪ್ಶನ್​ಗೆ ‘ಕುಟುಂಬ ಸಮೇತ ಬರುತ್ತಿದ್ದೇನೆ. ನಮ್ಮನ್ನು ಸ್ವಾಗತಿಸುವುದಿಲ್ಲವೇ’ ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಫ್ಯಾಮಿಲಿ ಮ್ಯಾನ್ ಪಾರ್ಟ್-3 ನೋಡಲು ಕಾತರರಾಗಿದ್ದಾರೆ. ಅಂದಹಾಗೆ ಈ ಸೀರಿಸ್ ನಲ್ಲೂ ಸಮಂತಾ ಇರ್ತಾರಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಲ್ಲ. ಆದರೆ ಮನೋಜ್ ವಿಡಿಯೋಗೆ ಅಭಿಮಾನಿಗಲು ತರವೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಸೌತ್ ಸಿನಿಮಾ ಸಕ್ಸಸ್ ಬಾಲಿವುಡ್‌ಗೆ ನಡುಕ ಹುಟ್ಟಿಸಿದೆ, ಇದು ದೊಡ್ಡ ಪಾಠ- ಮನೋಜ್ ಬಾಜಪೇಯಿ

ಫ್ಯಾಮಿಲಿ ಮ್ಯಾನ್ ಸೃಷ್ಟಿಕರ್ತರಾದ ರಾಜ್ ಮತ್ತು ಡಿಕೆ ಸದ್ಯ ಫರ್ಜಿ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಫರ್ಜಿ ಫೆಬ್ರುವರಿ 10 ರಂದು ಸ್ಟ್ರೀಮಿಂಗ್ ಆಗುತ್ತಿದೆ, ಹಾಗಾಗಿ ಫರ್ಜಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಫರ್ಜಿಯಲ್ಲಿ ಶಾಹಿದ್ ಕಪೂರ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಈ ಸೀರಿಸ್ ಜೊತೆಗೆ ಸಿಟಾಡೆಲ್ ಸೀರಿಸ್ ಕೂಡ ಅವರ ಕೈಯಲ್ಲಿದೆ. ಈಗಾಗಲೇ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ. ಈ ಸೀರಿಸ್ ನಲ್ಲಿ ವರುಣ್ ಧವನ್ ಮತ್ತು ಸಮಂತಾ ರುತ್ ಪ್ರಭು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಸೀರಿಸ್ ಗಳ ನಡುವೆ ದಿ ಫ್ಯಾಮಿಲಿ ಮ್ಯಾನ್ ಭಾರಿ ಕುತೂಹಲ ಮೂಡಿಸಿದೆ. ಫ್ಯಾಮಿಲಿ ಮ್ಯಾನ್ 3 ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!