ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿಯಾರಾ-ಸಿದ್ಧಾರ್ಥ್‌ ಜೋಡಿಗೆ ಕ್ಷಮೆ ಕೇಳಿದ ರಾಮ್ ಚರಣ್ ಪತ್ನಿ; ಕಾರಣವೇನು?

Published : Feb 08, 2023, 04:33 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿಯಾರಾ-ಸಿದ್ಧಾರ್ಥ್‌ ಜೋಡಿಗೆ ಕ್ಷಮೆ ಕೇಳಿದ ರಾಮ್ ಚರಣ್ ಪತ್ನಿ; ಕಾರಣವೇನು?

ಸಾರಾಂಶ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಬಳಿ ರಾಮ್ ಚರಣ್ ಪತ್ನಿ ಉಪಾಸನಾ ಕ್ಷಮೆ ಕೇಳಿದ್ದಾರೆ. 

ಬಾಲಿವುಡ್ ಖ್ಯಾತ ನಟ ಸಿದ್ದಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅಡ್ವಾಣಿ ಅದ್ದೂರಿಯಾಗಿ ಮದುವೆಯಾದರು. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸೂರ್ಯಗಢ ಹೋಟೆಲ್​ನಲ್ಲಿ ಸಿದ್ಧಾರ್ಥ್-ಕಿಯಾರಾ ಮದುವೆ ನಡೆದಿದೆ. ಇಬ್ಬರ ಮದುವೆಗೆ ಬಾಲಿವುಡ್​ನ ಅನೇಕ ಗಣ್ಯರು ಹಾಜರಾಗಿದ್ದರು. ಮದುವೆ ಬಳಿಕ ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರೂ ಫೆಬ್ರವರಿ 7ರ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡರು ಈ ಫೋಟೋಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಅನೇಕರು ಗಣ್ಯರು ಅಭಿನಂದಿಸಿದ್ದಾರೆ. ಆದರೆ ತೆಲುಗು ಸ್ಟಾರ್ ರಾಮ್​ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ನವದಂಪತಿ ಬಳಿ ಕ್ಷಮೆ ಕೇಳಿದ್ದಾರೆ.

ಅಷ್ಟಕ್ಕೂ ರಾಮ್ ಚರಣ್ ಪತ್ನಿ ಉಪಾಸನಾ ಕ್ಷನೆ ಕೇಳಿದ್ದೇಕೆ ಅಂತೀರಾ? ಮದುವೆಗೆ ಬರಲು ಸಾಧ್ಯವಾಗಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ‘ಅಭಿನಂದನೆಗಳು. ಸುಂದರವಾಗಿ ಕಾಣುತ್ತಿದ್ದೀರಿ. ಕ್ಷಮಿಸಿ ನಾವು ಮದುವೆಗೆ ಬರೋಕೆ ಸಾಧ್ಯವಾಗಿಲ್ಲ’ ಎಂದು ಉಪಾಸನಾ ಕಮೆಂಟ್ ಮಾಡಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಜೋಡಿಗೆ ಅನೇಕರು ವಿಶ್ ಮಾಡಿದ್ದಾರೆ. ಆಲಿಯಾ ಭಟ್, ಕತ್ರಿನಾ ಕೈಫ್​, ವಿಕ್ಕಿ ಕೌಶಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯ ಕೋರಿದ್ದಾರೆ.

ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರೂ ಪ್ರೀತಿ ಮದುವೆಯಾದವರು. ಅನೇಕ ವರ್ಷಗಳಿಂದ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಶೇರ್‌ಷಾ ಸಿನಿಮಾ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಯಿತು. ಆದರೆ ಇಬ್ಬರೂ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಮದುವೆ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಆದರೀಗ ಇಬ್ಬರೂ ಅದ್ದೂರಿಯಾಗಿ ಹಸೆಮಣೆ ಏರುವ ಮೂಲಕ ಪತಿ-ಪತ್ನಿಯರಾಗಿದ್ದಾರೆ. 

Siddharth-Kiara Wedding: ರೂಮರ್‌ಗಳಿಗೆ ಬಿತ್ತು ಕೊನೆ, ಸಿದ್ಧಾರ್ಥನ ಮನದನ್ನೆಯಾದ ಕಿಯಾರಾ!

ನಟಿ ಕಿಯಾರಾ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಕಿಯಾರಾ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ನಟನೆಯ 15ನೇ ಸಿನಿಮಾದಲ್ಲಿ ಕಿಯಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಈ ಸಿನಿಮಾದೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಇನ್ನು ಕಿಯಾರಾ ಕೊನೆಯದಾಗಿ ಗೋವಿಂದ ನಾಮ್ ಮೇರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಸಿನಿಮಾ ಜೊತೆಗೆ ಹಿಂದಿ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. 

ಸಿದ್ಧಾರ್ಥ್-ಕಿಯಾರಾ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

 ಇನ್ನು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದರು. ಸದ್ಯ ಯೋಧ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಪೋರ್ಸ್ ಎನ್ನುವ ವೆಬ್ ಸೀರಿನಲ್ಲಿ ನಟಿಸುತ್ತಿದ್ದಾರೆ.   
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನದಿಗೆ ಹಾರಿ ಆತ್ಮ*ಹತ್ಯೆ ಮಾಡ್ಕೊಂಡ ನಿರ್ಮಾಪಕ; ಡ್ರೈವರ್‌ ಬಳಿ ಕೊನೆಯದಾಗಿ ಹೇಳಿದ ಮಾತೇನು?
ತೆರೆ ಹಿಂದೆಯೂ ಭೇಷ್‌ ಎನ್ನೋ ಕೆಲಸ ಮಾಡಿದ Karuppu Movie ನಟ; Age Is Just Number-ಸಾಬೀತುಪಡಿಸಿದ ಇಂದ್ರನ್ಸ್!