ಶ್ರೀದೇವಿ ಎಣ್ಣೆ ಕುಡಿದು ಜೀವನ ಹಾಳಾಗಲು ಅಕೆ ತಾಯಿನೇ ಕಾರಣ; ಕರಾಳ ಸತ್ಯ ಬಿಚ್ಚಿಟ್ಟ ಸ್ನೇಹಿತೆ ಪದ್ಮಿನಿ

Published : Apr 26, 2023, 03:11 PM IST
ಶ್ರೀದೇವಿ ಎಣ್ಣೆ ಕುಡಿದು ಜೀವನ ಹಾಳಾಗಲು ಅಕೆ ತಾಯಿನೇ ಕಾರಣ; ಕರಾಳ ಸತ್ಯ ಬಿಚ್ಚಿಟ್ಟ ಸ್ನೇಹಿತೆ ಪದ್ಮಿನಿ

ಸಾರಾಂಶ

ಶ್ರೀದೇವಿ ಜೀವನ ಹಾಳಾಗಲು ಆಕೆ ತಾಯಿನೇ ಕಾರಣ ಎಂದ ಬಾಲ್ಯ ಸ್ನೇಹಿತೆ ನಟಿ ಪದ್ಮಿನಿ. ಚಿಕ್ಕ ವಯಸ್ಸಿನಿಂದಲೇ ಎಣ್ಣೆ ಅಭ್ಯಾಸ...?

ಬಾಲಿವುಡ್ ಎವರ್‌ಗ್ರೀನ್ ನಟಿ ಶ್ರೀದೇವಿ ಅಗಲಿ 5 ವರ್ಷ ಕಳೆದಿದೆ. ಇಂದಿಗೂ ದುಬೈನಲ್ಲಿ ಏನಾಯ್ತು? ಶ್ರೀದೇವಿ ರೂಮ್‌ನಲ್ಲಿ ಯಾರಿದ್ದರು? ಕುಡಿದು ಸತ್ತಿರುವುದಾ ಅಥವಾ ನಿಜಕ್ಕೂ ಬಾತ್‌ ಟಬ್‌ನಲ್ಲಿ ಮುಳುಗಿರುವುದಾ? ಆತ್ಮಹತ್ಯೆನಾ ಕೊಲೆನಾ?...ಹೀಗೆ ನೂರಾರೂ ಪ್ರಶ್ನೆಗಳಿಗೆ ಉತ್ತರ ಸಿಗದೆ ಹಾಗೆ ಉಳಿದು ಬಿಟ್ಟಿದೆ. ತಾಯಿ ಲೆಗೆಸಿಯನ್ನು ಮುಂದುವರೆಸಲು ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಬಿ-ಟೌನ್‌ಗೆ ಕಾಲಿಟ್ಟಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಅಮ್ಮ ಸಖತ್ ಫೇಮಸ್‌ ಎಂದು ಜಾನ್ವಿ ಕೂಡ ಈಗೀಗ ತಮಿಳು ಸಿನಿಮಾ ಸಹಿ ಮಾಡಿಕೊಂಡು ಚೆನ್ನೈನ ಮನೆಯಲ್ಲಿ ವಾಸವಿದ್ದಾರೆ. ಶ್ರೀ ದೇವಿಗೆ ನಿರ್ಮಾಣ ಕನಸು ಇತ್ತು ಎಂದು ಬೋನಿ ಕಪೂರ್‌ ಕೂಡ ಬಂಡವಾಳ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ. 

ಆಗಿತ್ತು ಅಯ್ತು ಜೀವನ ನಡೆಯಬೇಕು ಎನ್ನುವಷ್ಟರಲ್ಲಿ ಶ್ರೀದೇವಿ ಬಾಲ್ಯ ಸ್ನೇಹಿತೆ ನಟಿ ಪದ್ಮಿನಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ಈ  ಹೇಳಿಕೆಯಲ್ಲಿ ನಿಗೂಢ ಸಾವಿನ ಕಾರಣವೂ ಇದೆ ಎನ್ನಬಹುದು.....

ಇತ್ತೀಚಿಗೆ ನೀಡಿದ ಯುಟ್ಯೂಬ್ ಸಂದರ್ಶನದಲ್ಲಿ ಶ್ರೀ ದೇವಿ ತಾಯಿ ಬಗ್ಗೆ ಪದ್ಮಿನಿ ಮಾತನಾಡಿದ್ದಾರೆ. 'ಶ್ರೀದೇವಿ ತಾಯಿಗೆ ಕುಡಿತದ ಚಟವಿತ್ತು. ಚಿಕ್ಕ ವಯಸ್ಸಿಗೆ ಶ್ರೀದೇವಿ ಸಿನಿಮಾ ಜರ್ನಿ ಆರಂಭಿಸಿದ ಕಾರಣ ಬೇಗ ಮತ್ತು ಗಾಢವಾದ ನಿದ್ರೆ ಮಾಡಲೆಂದು ಎಳವೆಯಲ್ಲಿಯೇ ಶ್ರೀದೇವಿಗೆ ಮದ್ಯ ಕುಡಿಸುತ್ತಿದ್ದಳು. ಆಕೆ ಹಣ ಗಳಿಸಲು ಶ್ರೀದೇವಿಯನ್ನು ಚೆನ್ನಾಗಿ ಬಳಸಿಕೊಂಡಳು, ಬಾಲನಟಿಯಾಗಿ, ನಾಯಕ ನಟಿಯಾಗಿ ಬಂದರ ಹಿಂದೆ ಒಂದು ಸಿನಿಮಾಗಳನ್ನು ಶ್ರೀದೇವಿ ಮಾಡುತ್ತಿದ್ದಳು. ಈ ವಿಚಾರವಾಗಿ ಶ್ರೀದೇವಿ ಪರವಾಗಿ ಆಕೆಯ ತಾಯಿನೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಳು. ಅತಿಯಾದ ಕೆಲಸದಿಂದ ದಣಿದ ಮಗಳಿಗೆ ಮಧ್ಯವನ್ನು ಅಭ್ಯಾಸ ಮಾಡಿಸಿದಳು ಆಕೆಯ ತಾಯಿ.ಕೊನೆಗೂ ಅದೇ ಶ್ರೀದೇವಿಯ ಜೀವನ ಹಾಳಾಗಲು ಕಾರಣವಾಯ್ತು' ಎಂದು ಪದ್ಮಿನಿ ಹೇಳಿಕೆ ನೀಡಿದ್ದಾರೆ.

Janhavi Kapoor ಜಾನ್ವಿ ಹೀಗೆ ಮಾಡ್ತಾಳೆಂದು ಶ್ರೀದೇವಿ ಮನೆಯಲ್ಲಿ ಬಾತ್‌ರೂಮ್‌ಗೆ ಲಾಕ್‌ ಹಾಕುತ್ತಿರಲಿಲ್ಲವಂತೆ!

ಪದ್ಮಿನಿ ಹೇಳಿಕೆಯಲ್ಲಿ ಸಣ್ಣ ಸುಳಿವು ಸಿಗುತ್ತದೆ. ಶ್ರೀ ದೇವಿ ಕುಡಿದು ಬಾತ್‌ರೂಮ್‌ನಲ್ಲಿ ಸತ್ತಿರಬಹುದು ಎನ್ನುವುದಕ್ಕೆ ಸಾಕ್ಷಿ ಎನ್ನಬಹುದು. 

ಬೋನಿ ಕಪೂರ್‌ನ ಮದುವೆ ಮಾಡಿಕೊಂಡು ಗರ್ಭಿಣಿ ಆಗುತ್ತಿದ್ದರಂತೆ 1996ರಲ್ಲಿ ಶ್ರೀದೇವಿ ಬಣ್ಣದ ಜರ್ನಿ ಗುಡ್ ಬೈ ಹೇಳಿದ್ದರು. ಮಕ್ಕಳು ಕಾಲೇಜ್‌ ಮೆಟ್ಟಿಲು ಏರುತ್ತಿದ್ದಂತೆ ಶ್ರೀದೇವಿ ಬಿಗ್ ಕಮ್ ಬ್ಯಾಕ್ ಮಾಡಿದ್ದರು. ಬೋನಿ ಕಪೂರ್‌ ಅಷ್ಟಾಗಿ ಹಣ ಮತ್ತು ಹೆಸರು ಮಾಡಲಿಲ್ಲ ಹೀಗಾಗಿ ಇಂಡಸ್ಟ್ರಿಯನ್ನು ರೂಲ್ ಮಾಡಲು ಶ್ರೀದೇವಿ ಮುಂದಾದರು. 

ನಾನು ಸುಂದರಿ ಅಲ್ಲ ಅನ್ನೋದು ಸತ್ಯ ಅದರೆ ಈ ಮಾತನ್ನು ರಕ್ತದಲ್ಲಿ ಬರೆದು ಕೊಡ್ತೀನಿ: ಜಾಹ್ನವಿ ಕಪೂರ್

ಬಾಲ ನಟಿಯಾಗಿ ಶ್ರೀದೇವಿ ಜರ್ನಿ ಆರಂಭಿಸಿ ಹದಿಮೂರನೇ ವಯಸ್ಸಿನಲ್ಲಿ ನಾಯಕಿಯಾಗಿದ್ದರು. ಬಾಲಿವುಡ್, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಫೇಮ್ ಆಂಡ್ ನೇಮ್ ಕೊಟ್ಟಿದ್ದು ಬಿ-ಟೌನ್‌ ಎನ್ನಬಹುದು. ಶ್ರೀ ಮದುವೆಯಾಗಿ ಹಲವು ವರ್ಷಗಳ ನಂತರ ತಿಳಿಯಿತ್ತು ಮದುವೆಗೂ ಮುನ್ನವೇ ಶ್ರೀದೇವಿ ಗರ್ಭಿಣಿ ಆಗಿದ್ದರು ಎಂದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?