37 ಸಾವಿರ ಅಡಿ ಎತ್ತರದಲ್ಲಿ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್; ಆಕಾಶದಲ್ಲಿ ರಾರಾಜಿಸಿದ 'ಜೂಮ್ ಕಾಲ್'

Published : Apr 26, 2023, 02:49 PM IST
37 ಸಾವಿರ ಅಡಿ ಎತ್ತರದಲ್ಲಿ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್; ಆಕಾಶದಲ್ಲಿ ರಾರಾಜಿಸಿದ 'ಜೂಮ್ ಕಾಲ್'

ಸಾರಾಂಶ

37 ಸಾವಿರ ಅಡಿ ಎತ್ತರದಲ್ಲಿ ಕನ್ನಡ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ ಸಿನಿಮಾತಂಡ.

ಸಾಮಾನ್ಯವಾಗಿ  ಫಸ್ಟ್ ಲುಕ್  ಪೋಸ್ಟರ್‌ಗಳನ್ನು ವಿಶೇಷ ಅತಿಥಿಗಳಿಂದ ಅಂದರೆ ರಾಜಕಾರಣಿಗಳು ಅಥವಾ ಹೀರೋಗಳಿಂದ ಬಿಡುಗಡೆ ಮಾಡಿಸುತ್ತಾರೆ. ಆದರಿಲ್ಲಿ ಕನ್ನಡ ಸಿನಿಮಾವೊಂದರ ಪೋಸ್ಟರ್ ಅನ್ನು ಆಕಾಶದಲ್ಲಿ ರಿಲೀಸ್ ಮಾಡಿ ಸಿನಿಮಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅದ್ಯಾವ ಸಿನಿಮಾ ಅಂತೀರಾ 'ಜೂಮ್ ಕಾಲ್' ಎನ್ನುವ ಚಿತ್ರ. ಹೌದು, ಜೂಮ್ ಕಾಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವಿಭಿನ್ನವಾಗಿ ರಿಲೀಸ್ ಮಾಡುವ ಮೂಲಕ ಹೊಸ ರೀತಿಯ ಪ್ರಚಾರಕಾರ್ಯಕ್ಕೆ ಕೈ ಹಾಕಿದೆ. ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಲುಕ್ ಪೋಸ್ಟರ್  ಮೊದಲ ಬಾರಿಗೆ ವಿಮಾನದಲ್ಲಿ ಬಿಡುಗಡೆ ಮಾಡಿರುವ ಖ್ಯಾತಿ ಜೂಮ್ ಕಾಲ್ ಚಿತ್ರಕ್ಕೆ ಸೇರುತ್ತದೆ. 

ಮಹೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಜೂಮ್ ಕಾಲ್' ಚಿತ್ರದಲ್ಲಿ ರೇಣುಕಾ, ಲಕ್ಷ್ಮೀ  ಅರಸ್, ರೂಪ ಮನಕೂರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಭೂಮಿಯಿಂದ 37000 ಅಡಿ ಎತ್ತರದಲ್ಲಿ ಮೋಡದ ಮೇಲೆ ನೀಲಿ ಆಕಾಶದಲ್ಲಿ ಚಲಿಸುತ್ತಿರುವ ವಿಮಾನದಲ್ಲಿ ಫಸ್ಟ್ ಲುಕ್ ಪೋಸ್ಟರ್  ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಮಹೇಶ್ ಅದ್ಭುತವಾದ ಕ್ಷಣವಾಗಿತ್ತು ಎಂದು ಹೇಳಿದ್ದಾರೆ.  ಜೂಮ್ ಕಾಲ್ ಚಿತ್ರ ಕನ್ನಡದ ಮೊದಲ ಕಂಪ್ಯೂಟರ್ ಸ್ಕ್ರೀನ್ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಕಂಪ್ಯೂಟರ್ ಸ್ಕ್ರೀನ್ ಹಾರರ್ ಜಾನರ್ ಸಿನಿಮಾಗಳು ಹಾಲಿವುಡ್ ನಲ್ಲಿ ಬಂದಿದೆ. ಆದರೆ ಕನ್ನಡದಲ್ಲಿ ಜೂಮ್ ಕಾಲ್ ಮೊದಲ ಸಿನಿಮಾವಾಗಿದೆ ಎನ್ನುತ್ತಾರೆ ನಿರ್ದೇಶಕ ಮಹೇಶ್. 

ಅಭಿ ರಿಲೀಸ್ ಆಗಿ 20 ವರ್ಷ; ಅಪ್ಪು ಜೊತೆಗಿರುವ ಹಳೆ ಫೋಟೋ ಹಂಚಿಕೊಂಡ ರಮ್ಯಾ!

ಜೂಮ್ ಕಾಲ್ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ. ಕೆಲವರು ಜೂಮ್​ಕಾಲ್​ನಲ್ಲಿ ಮಾತನಾಡುತ್ತಿರುವುದು ಪೋಸ್ಟರ್​ನಲ್ಲಿದೆ. ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ವಿಡಿಯೋ ಕಾಲ್​ಗೆ ಜೂಮ್ ಬಳಕೆ ಹೆಚ್ಚಿದೆ. ಹೀಗಾಗಿ, ಅದೇ ರೀತಿಯ ವಿಷಯ ಇಟ್ಟುಕೊಂಡು ‘ಜೂಮ್ ಕಾಲ್’ ಸಿದ್ಧಗೊಂಡಿದೆ ಎನ್ನಲಾಗಿದೆ. 

ಪ್ರತಿ ವರ್ಷ ಚಿನ್ನ ಯಾಕೆ ಖರೀದಿಸಬೇಕು?; ಎಲ್ಲಿಂದೆಲ್ಲಾ ಲಾಭ ಇದೆ ಎಂದು ರಿವೀಲ್ ಮಾಡಿದ ನಟಿ ಪ್ರಣೀತಾ ಸುಭಾಷ್

ಜೂಮ್ ಕಾಲ್​ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ. ಮಹೇಶ್ ಎಚ್.ಎಂ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೊತೆಗೆ ಶ್ರೀವಾರಿ ಪಿಕ್ಚರ್ಸ್ ಬ್ಯಾನರ್​​ನಲ್ಲಿ ನಿರ್ಮಾಣವನ್ನೂ ಸಹ  ಮಾಡಿದ್ದಾರೆ. ಎಸ್. ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರಕ್ಕೆ ವಿಜಯರಾಜ್ ಸಂಗೀತ ನೀಡಿದ್ದಾರೆ. ರೇಣುಕಾ, ಲಕ್ಷ್ಮೀ  ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು ಜೂಮ್ ಕಾಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ