Sangeeta Bijlani: ಸಲ್ಮಾನ್​ ಕೆನ್ನೆಯ ಹಿಂಡಿದ ಮಾಜಿ ಗೆಳತಿ- ಆಹಾ ಎಂಥ ದೃಶ್ಯ ಎಂದ ನೆಟ್ಟಿಗರು!

By Suvarna News  |  First Published Apr 26, 2023, 2:59 PM IST

ಸಂಗೀತಾ  ಬಿಜಲಾನಿ ಮತ್ತು ಸಲ್ಮಾನ್​ ಖಾನ್​ ಅವರ ಈದ್ ಪಾರ್ಟಿಯ ವಿಡಿಯೋ ವೈರಲ್​ ಆಗುತ್ತಿದೆ, ಅಷ್ಟಕ್ಕೂ ಆಗಿದ್ದೇನು? 
 


ಬಾಲಿವುಡ್‌ ನಟಿ ಸಂಗೀತ ಬಿಜಲಾನಿ (Sangeeta Bijlani ) ಕನ್ನಡಿಗರಿಗೆ ಚಿರಪರಿಚಿತರಾಗಿದ್ದು,  ವಿಷ್ಣುವರ್ಧನ್‌ ಅಭಿನಯದ 'ಪೊಲೀಸ್‌ ಮತ್ತು ದಾದಾ' ಸಿನಿಮಾದಲ್ಲಿ. ಈಕೆ  ನಟಿಸಿದ್ದು ಒಂದೇ ಒಂದು ಕನ್ನಡ ಸಿನಿಮಾ ಆದರೂ ಆಕೆ ಕನ್ನಡ ಸಿನಿಪ್ರಿಯರಿಗೆ ಬಹಳ ಇಷ್ಟವಾದ ನಟಿ.  ಜಾಹೀರಾತಿನಲ್ಲಿಯೂ ಸಕತ್​ ಹೆಸರು ಮಾಡಿದ್ದ ಸಂಗೀತಾ () ಅವರಿಗೆ ಈಗ ವಯಸ್ಸು 63. ಬಾಲಿವುಡ್​ನಲ್ಲಿ ಇವರ ಮತ್ತು ಸಲ್ಮಾನ್​ ಖಾನ್​ ಪ್ರಣಯದ ಕಥೆ ಹೊಸತೇನಲ್ಲ. ಇಬ್ಬರೂ ಡೇಟಿಂಗ್​  ಮಾಡುತ್ತಿದ್ದರು ಎಂದು ಬಹಳ ಸುದ್ದಿಯಾಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ 10 ವರ್ಷ ಡೇಟಿಂಗ್​ನಲ್ಲಿದ್ದು. ಈಗ ಸಲ್ಲುಭಾಯಿಗೆ 58 ವರ್ಷ. ಕಳೆದ ವರ್ಷ ಇವರ ಹುಟ್ಟುಹಬ್ಬಕ್ಕೆ ಬಂದಿದ್ದ  ಸಂಗೀತ ಬಿಜಲಾನಿಯನ್ನು ವಾಪಸ್‌ ಹೋಗುವಾಗ ಮಾಜಿ ಪ್ರಿಯತಮನಿಗೆ ಹಗ್‌ ಮಾಡಿ, ಹಣೆಗೆ ಮುತ್ತಿಟ್ಟಿದ್ದು ಬಹಳ ವೈರಲ್​ ಆಗಿತ್ತು.  ಫಸ್ಟ್​ ಲವ್​ ಮರೆಯಲಾಗದು ಎಂದೇ ಹೇಳಲಾಗುತ್ತಿತ್ತು. ವಯಸ್ಸು 63 ಆದರೂ  ತಮ್ಮ ಬ್ಯೂಟಿಯನ್ನು (Beaty) ಕಾಪಾಡಿಕೊಂಡು ಬಂದಿದ್ದಾರೆ ಸಂಗೀತಾ,  1980ರಲ್ಲಿ  ಮಿಸ್‌ ಇಂಡಿಯಾ ಯೂನಿವರ್ಸ್‌ (Miss India Universe) ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದರು.  1988ರಲ್ಲಿ 'ಕಾತಿಲ್‌' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದರು. ಮಾಡೆಲಿಂಗ್‌ ದಿನಗಳಲ್ಲೇ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿದ್ದರು. ಆದರೆ 1996ರಲ್ಲಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ನನ್ನು ಮದುವೆಯಾಗಿದ್ದರು.  2010ರಲ್ಲಿ ದಾಂಪತ್ಯ ಮುರಿದುಬಿತ್ತು. ಈಗ ಮತ್ತೆ ಈದ್​ ಕಾರ್ಯಕ್ರಮದಲ್ಲಿ ಮಾಜಿ ಪ್ರೇಮಿಗಳು ಒಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿಡಿಯೋ ಒಂದು ಹರಿದಾಡುತ್ತಿದೆ. 

ಈ ವಿಡಿಯೋದಲ್ಲಿ  ಸಂಗೀತಾ ಬಿಜಲಾನಿ ಮತ್ತು ಸಲ್ಮಾನ್​ ಖಾನ್​ ( Salman Khan ) ಇಬ್ಬರೂ ಕಾಣಿಸಿಕೊಂಡಿದ್ದಾರೆ. ಕಾಣಿಸಿಕೊಂಡಿದ್ದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಸಲ್ಮಾನ್ ಖಾನ್ ಅವರ ಸಹೋದರಿ ಮತ್ತು ಸೋದರ ಮಾವ ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ  ಅವರ ಈ ಈದ್ ಪಾರ್ಟಿಯಲ್ಲಿ  ಸಂಗೀತಾ ಬಿಜಲಾನಿ ಮಾತ್ರವಲ್ಲದೇ ಕತ್ರಿನಾ ಕೈಫ್ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು.  ಪಾರ್ಟಿಯಿಂದ ಹೊರಗೆ ಬರುತ್ತಿರುವ ಸಂದರ್ಭದಲ್ಲಿ  ಸಲ್ಮಾನ್ ಏನನ್ನೋ ಹೇಳುತ್ತಾ ನಗಲು ಪ್ರಾರಂಭಿಸುತ್ತಾರೆ, ಆಗ ಪಕ್ಕದಲ್ಲಿಯೇ ಇದ್ದ  ಸಂಗೀತಾ ಸಲ್ಮಾನ್​ ಖಾನ್​ ಅವರ  ಕೆನ್ನೆಗಳನ್ನು ಪ್ರೀತಿಯಿಂದ ಎಳೆದು ಪ್ರೀತಿಯಿಂದ ಗುದ್ದಿದ್ದಾರೆ. ಈ ವಿಡಿಯೋ ಸಕತ್​ ಸೌಂಡ್​ ಮಾಡುತ್ತಿದೆ. 

Tap to resize

Latest Videos

Honey Rose: ಮದುವೆ ಯಾಕೆ, ರಿಲೇಷನ್​ ಓಕೆ ಎಂದು ಆಫರ್​ ಕೊಟ್ಟಿದ್ದಾರೆ ಸ್ನಿಗ್ಧ ಸುಂದರಿ

ಈ ವಿಡಿಯೋವನ್ನು ಸೆಲೆಬ್ರಿಟಿ ಛಾಯಾಗ್ರಾಹಕ ವರೀಂದರ್ ಚಾವ್ಲಾ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮಾಜಿ ಪ್ರೇಮಿಗಳಿಬ್ಬರೂ ಪರಸ್ಪರ ತಮಾಷೆ ಮಾಡುವುದನ್ನು ಕಾಣಬಹುದು. ಬೇರ್ಪಟ್ಟ ನಂತರವೂ ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಅವರ ಸ್ನೇಹ ಮುಂದುವರೆದಿದೆ ಮತ್ತು ಇಂದಿಗೂ ಇಬ್ಬರೂ ಉತ್ತಮ ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ ಎನ್ನುವುದು ಇದರಿಂದ ಸಾಬೀತಾಗಿದೆ.  ಸೂಪರ್‌ಸ್ಟಾರ್‌ನ (Suprestar) ಪ್ರತಿ ಕುಟುಂಬ ಕೂಟದಲ್ಲಿ ಸಂಗೀತಾ ಕೂಡ ಕಾಣಿಸಿಕೊಳ್ಳುತ್ತಾರೆ. 

ಸಂಗೀತಾ  ಮತ್ತು ಸಲ್ಮಾನ್ ಖಾನ್ ಅವರ ಈ ವೀಡಿಯೊಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ಇಬ್ಬರ ಅಭಿಮಾನಿಗಳು ವೀಡಿಯೊದಲ್ಲಿ ಹೃದಯದ ಎಮೋಜಿ (heart Emoji) ಮತ್ತು ಫೈರ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಇಂದಿಗೂ ಇಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ.  

Aishwarya Rai: ಹಿಟ್‌ ಫಿಲ್ಮ್ಸ್‌ ಕೊಡುತ್ತಿದ್ರೂ ಐದು ಚಿತ್ರಗಳಿಂದ ಐಶ್ವರ್ಯ ರೈ ಅವ್ರನ್ನ ಹೊರದಬ್ಬಿದ್ದೇಕೆ?

 
 
 
 
 
 
 
 
 
 
 
 
 
 
 

A post shared by @varindertchawla

click me!