ಸಿನಿಮಾ ಎಂದಾಗ ನನಗೆ ಕತೆ(script) ಬಹಳ ಮುಖ್ಯ. ಈ ವಿಷಯದಲ್ಲಿ ಹಿಂದಿಗಿಂತ ಸೌತ್ ಇಂಡಿಯನ್ ಫಿಲ್ಮಗಳು(south indian film) ನನಗೆ ಬಹಳ ಇಷ್ಟ, ಎಂದು ಬಾಲಿವುಡ್(Bollywood) ಸ್ಟಾರ್ ಸೋನು ಸೂದ್ ಹೇಳಿದ್ದಾರೆ. ಅವರು ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ(director) ಸಾರ್ಮಾಟ್ ಪೃಥ್ವಿರಾಜ್ ಸಿನಿಮಾ ಪ್ರಮೋಷನ್‌ನಲ್ಲಿ(promotion) ಹೀಗೆ ಹೇಳಿದ್ದಾರೆ.
ವಿಲನ್ ಪಾತ್ರಗಳು ಎಲ್ಲರಿಗೂ ಸೂಟ್ ಆಗುವುದಿಲ್ಲ. ಕೆಲವೇ ನಟರು ಆ ಪಾತ್ರಗಳಿಗೆಂದೇ ಸೆಟ್ ಆಗಿರುತ್ತಾರೆ. ಬಹುಭಾಷಾ ನಟ ಬಾಲಿವುಡ್ ಸ್ಟಾರ್(bollywood) ಸೋನು ಸೂದ್ ಸಹ ಒಬ್ಬರು. ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಮಿಂಚಿರುವ ಅವರಿಗೆ ಸೌತ್ ಇಂಡಿಯನ್(south indian) ಸಿನಿಮಾಗಳೆಂದರೆ ತುಂಬಾ ಇಷ್ಟವಂತೆ. ಸಾರ್ಮಾಟ್ ಪೃಥ್ವಿರಾಜ್ ಸಿನಿಮಾ ಪ್ರಮೋಷನ್‌ನಲ್ಲಿರುವ (Promotion) ಅವರು ಹೀಗೆ ಹೇಳಿಕೆ ನೀಡಿದ್ದಾರೆ.
ಜೂನ್ 3ರಂದು ತೆರೆಗೆ ಬರುತ್ತಿರುವ ಸಾರ್ಮಾಟ್ ಪೃಥ್ವಿರಾಜ್ (Pruthviraj) ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ಜೊತೆ ಸೋನು ಸೂದ್ ಒಬ್ಬ ಕವಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಚಿತ್ರದ ಪ್ರಮೋಷನ್‌ನಲ್ಲಿರುವ ಅವರು ಕತೆ ನೋಡಿ ಸಿನಿಮಾಗೆ ಸಹಿ ಹಾಕುತ್ತೇನೆಂದು ತಿಳಿಸಿದ್ದಾರೆ. "ನಾನು ಕತೆ ಹೇಗಿದೆ ಎಂದು ನೋಡಿಕೊಂಡು ಸಿನಿಮಾ ಮಾಡ್ತೀನಿ. ಅದು ತಮಿಳು(tamil), ತೆಲಗು(telgu) ಅಥವಾ ಹಿಂದಿ(hindi) ಸಿನಿಮಾಗಳಿರಲಿ, ನನಗೆ ಕತೆ ಬಹಳ ಮುಖ್ಯ. ಈ ವಿಷಯದಲ್ಲಿ ಹಿಂದಿ ಸಿನಿಮಾಗಿಂತ ದಕ್ಷಿಣ ಭಾರತದ ಸಿನಿಮಾಗಳು ನನ್ನನ್ನು ಉತ್ತಮ ರೀತಿಯಲ್ಲಿ ತೋರಿಸಿವೆ. ನನಗೆ ಹೊಂದುವ ಪಾತ್ರಗಳನ್ನೇ ನೀಡಿವೆ" ಎಂದಿದ್ದಾರೆ.
ಸಹಾಯ ಮಾಡಲು ಹಣ ಎಲ್ಲಿಂದ ಬರುತ್ತೆ ಎಂದು ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಿದ ನಟ ಸೋನು ಸೂದ್
ನಾನು ಫಿಲ್ಮಂ ಬ್ಯಾಕ್‌ಗ್ರೌಂಡ್‌ನಿಂದ (Background) ಬಂದವನಲ್ಲ. ಪಾಸಿಟಿವ್ ರೋಲ್ ಮಾಡಬೇಕಂಬ ಆಸೆ ಇದ್ದ ನನಗೆ ಪ್ರಾರಂಭದಲ್ಲಿ ನೆಗೆಟಿವ್ ರೋಲ್‌ಗಳೇ ಸಿಗುತ್ತಿತ್ತು. ಈ ಕುರಿತು ಬೇಸರವಾಗುತ್ತಿತ್ತು ಜೊತೆಗೆ ಪ್ರಶ್ನೆಗಳು ಮೂಡುತ್ತಿತ್ತು. ಆದರೆ ಸಿನಿಮಾಗೆ ನಾನೊಬ್ಬ ನಟ ಅಷ್ಟೆ ಪಾಸಿಟಿವ್(positive) ಅಥವಾ ನೆಗೆಟಿವ್ (Negetive) ಯಾವ ರೋಲ್ ಮಾಡಿದರೂ ಜನರಿಗೆ ಇಷ್ಟವಾಗುವುದು ಮುಖ್ಯ. ಹೀರೋಗಿಂತ ಒಂದು ಸ್ಟೆಪ್ ಹೆಚ್ಚಾಗಿಯೇ ನನಗೆ ಸಕ್ಸಸ್ (Success) ಸಿಕ್ಕಿದೆ ಎಂದು ಹೇಳಿದ್ದಾರೆ.
'ದಕ್ಷಿಣ ಸಿನಿಮಾರಂಗ (South INdian Movie Industry) ಹಲವು ಪ್ರಶಸ್ತಿಗಳೊಂದಿಗೆ ನೇಮ್ ಫೇಮ್ (Name Fame) ದೊರಕಿಸಿಕೊಟ್ಟಿವೆ. ಹಿಂದಿಯಲ್ಲಿ ಕೇವಲ ದೊಡ್ಡ ಪರದೆಗಾಗಿ ನನ್ನನ್ನು ತೋರಿಸುತ್ಥಾರೆಯೇ ಹೊರತು, ತೃಪ್ತಿ ನೀಡುವ ಪಾತ್ರಗಳು ಅಲ್ಲಿ ನನಗೆ ಸಿಕ್ಕಿಲ್ಲ. ಇಷ್ಟವಾಗದ ಪಾತ್ರಗಳನ್ನು ಮಾಡುವುದಕ್ಕಿಂತ ಪ್ರೀತಿ, ಗೌರವ ಜೊತೆಗೆ ಒಳ್ಳೆ ಪಾತ್ರಗಳಲ್ಲಿ ನನ್ನನ್ನು ತೋರಿಸುವ ಸಿನಿಮಾಗಳೇ ನನಗಿಷ್ಟ,' ಎಂದು ಸೌತ್ ಇಂಡಿಯನ್ ಸಿನಿಮಾಗಳ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
'ಒಂದು ಐತಿಹಾಸಿಕ ಸಿನಿಮಾ(historical cinema) ಮಾಡಬೇಕಾದರೆ ಅದರ ಹಿಂದೆ ಬಹಳ ಕೆಲಸ ಇರುತ್ತೆ. ಅದಕ್ಕೆ ಬೇಕಾದ ಮಾಹಿತಿಯನ್ನು ಕಲೆಹಾಕುವುದು ಕಷ್ಟ. ಯಾಕೆಂದರೆ ಒಬ್ಬೊಬ್ಬ ಆಥರ್ (Author) ಒಂದೊxದು ರೀತಿಯಲ್ಲಿ ಬರೆದಿರುತ್ತಾರೆ. ಹೀಗಿರುವಾಗ ಸಿನಿಮಾ ಮಾಡುವುದು, ಅದಕ್ಕೆ ತಕ್ಕಂತೆ ಸೆಟ್ (Set) ಹಾಕುವುದು ಸುಲಭದ ಮಾತಲ್ಲ. ನಮ್ಮ ಟೀಂ (Team) ಈ ಬಗ್ಗೆ ತುಂಬಾ ಹಾರ್ಡ್ ವರ್ಕ್(hardwork) ಮಾಡಿದ್ದಾರೆ. ಅಲ್ಲದೆ ಸಿನಿಮಾ ನೋಡಿದ ನಂತರ ರಾಜ ಪೃಥ್ವಿರಾಜ್ ಹಾಗೂ ಚಾಂದ್ ಬರ್ಡಾಯ್ ಇಬ್ಬರ ಸ್ನೇಹ ಮತ್ತು ಸಂಬAಧ ಎಂತಹದ್ದು ಎಂದು ಪ್ರೇಕ್ಷರಿಗೆ ಅರ್ಥವಾಗುತ್ತೆ" ಎಂದಿದ್ದಾರೆ.
ಹಣ ಎಸೆದು ಸಂಭ್ರಮಿಸಿದ ಫ್ಯಾನ್ಸ್; ಈ ಪ್ರೀತಿಗೆ ಅರ್ಹನಲ್ಲ ಎಂದ ಸೋನು ಸೂದ್
'ಐತಿಹಾಸಿಕ ಸಿನಿಮಾದಲ್ಲಿ ಅಭಿನಯಿಸಬೇಕಾದರೆ ಅದಕ್ಕೆ ಹೋಮ್‌ವರ್ಕ್(homework) ಮಾಡಿಕೊಂಡು ಸೆಟ್‌ಗೆ ಬರಬೇಕಾಗುತ್ತದೆ. ಪೃಥ್ವಿರಾಜ್ ಸಿನಿಮಾದಲ್ಲಿ ನಾನು ಕವಿ ಚಾಂದ್ ಬರ್ಡಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರ ನನಗೆ ಸಿಗುತ್ತೆ ಎಂದು ಊಹಿಸಿರಲಿಲ್ಲ. ಕವಿಯ ಪಾತ್ರ ನನ್ನನ್ನು ಬಹಳ ಪ್ರಭಾವಿಸಿತು. ಸಿನಿಮಾ ನೋಡಿದ ಮೇಲೆ ನಿಮಗೂ ಹಾಗೆಯೇ ಆಗಬಹುದು. ನನ್ನ ತಾಯಿ ಇದ್ದಿದ್ದರೆ ಸಿನಿಮಾ ನೋಡಿ ಆ ಪಾತ್ರಕ್ಕೆ ನಿಜವಾಗಲೂ ಜೀವ ತುಂಬಿದ್ದೀನಾ ಎಂದು ನೋಡಿ ಹೇಳುತ್ತಿದ್ದರು. ಏಕೆಂದರೆ ನನ್ನ ತಾಯಿ ಯಾವಾಗಲೂ ಚಾಂದ್ ಬರ್ಡಾಯ್ ಅವರ ಕತೆ ಹೇಳುತ್ತಿದ್ದರು,' ಎಂದು ಹೇಳುತ್ತಾ ತಮ್ಮ ತಾಯಿಯನ್ನು ನೆನೆಸಿಕೊಂಡರು.
ತಮಿಳು ಚಿತ್ರೋದ್ಯಮದ ಮೂಲಕ ತಮ್ಮ ಕರಿಯರ್ (Career) ಆರಂಭಿಸಿರುವ ಸೋನು, ಕೊನೆಯದಾಗಿ ಆಚಾರ್ಯ(Acharya) ಸಿನಿಮಾದಲ್ಲಿ ನಟಿಸಿದ್ದರು. ಮುಂದೆ ಅವರು ಇ ನಿವಾಜ್(E Niwas) ನಿರ್ದೇಶನದ ಕಿಸಾನ್(kisan) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.