ನಿನ್ನನ್ನ ನೀನು ಸಾಯಿಸಿಕೊಳ್ಳಬೇಡ ಅಂದಿದ್ದೆ; ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸ್ಮೃತಿ ಇರಾನಿ

By Shruthi KrishnaFirst Published Mar 25, 2023, 6:01 PM IST
Highlights

ನಿನ್ನನ್ನ ನೀನು ಸಾಯಿಸಿಕೊಳ್ಳಬೇಡ ಅಂತ ಹೇಳಿದ್ದೆ, ಒಮ್ಮೆ ನನರೆ ಫೋನ್ ಮಾಡಬಹುದಿತ್ತು ಎಂದು ನಟಿ, ಸಚಿವೆ ಸ್ಮೃತಿ ಇರಾನಿ ನಟ ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿ ಕಣ್ಣೀರಿದ್ದಾರೆ. 

ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ನೆನಪು ಮಾತ್ರ. ಸುಶಾಂತ್ ಸಿಂಗ್ ನಿಧನ ಹೊಂದಿ ಎರಡೂವರೆ ವರ್ಷದ ಮೇಲಾಯಿತು. ಆದರೂ ಸುಶಾಂತ್ ಸಾವಿನ ಹಿಂದಿನ ರಹಸ್ಯ ಬಹಿರಂಗವಾಗಿಲ್ಲ. ಸುಶಾಂತ್ ಸಿಂಗ್ 2020 ಜೂನ್‌ನಲ್ಲಿ ತನ್ನ ಅಪಾರ್ಟ್ಮೆಂಟ‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಸಾವು ಇಡೀ ಬಾಲಿವುಡ್‌ ಬೆಚ್ಚಿ ಬೀಳುವಂತೆ ಮಾಡಿತ್ತು. ಆ ಬಳಿಕ ನಡೆದ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಸುಶಾಂತ್ ಸಾವಿನ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಸಾಹಿನ ಹಿಂದಿನ ಕಾರಣ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ, ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಈ ನಡುವೆ ನಟಿ, ಸಚಿವೆ ಸ್ಮೃತಿ ಇರಾನಿ ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿ ಕಣ್ಣೀರಾಕಿದ್ದಾರೆ. 

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ಸುಶಾಂತ್ ಸಿಂಗ್‌ಗೆ ನಿನ್ನನ್ನು ನೀನು ಸಾಯಿಸಿಕೊಳ್ಳಬೇಡ ಎಂದು ಹೇಳಿದ್ದೆ ಹಾಗೆ ಆಯಿತು ಎಂದು ಭಾವಕರಾಗಿದ್ದಾರೆ. ಒಮ್ಮೆ ಕರೆ ಮಾಡಿ ಮಾತನಾಡಬಹುದಿತ್ತು ಎಂದು ಸ್ಮೃತಿ ಕಣ್ಣೀರಾಕಿದ್ದಾರೆ. 'ಸುಶಾಂತ್ ನಿಧನ ಹೊಂದಿದ ದಿನ ನಾನು ವಿಡಿಯೋ ಕಾನ್ಫರೆನ್ಸ್ ನಲ್ಲಿ ಇದ್ದೆ. ನನಗೆ ಅನಿಸಿದ್ದು ನನಗೆ ಯಾಕೆ ಕರೆ ಮಾಡಿಲ್ಲ ಅಂತ. ಅವನು ಒಮ್ಮೆ ನನಗೆ ಕರೆ ಮಾಡಬೇಕಿತ್ತು. ನಾನು ಅವನಿಗೆ ಹೇಳಿದ್ದೆ ದಯವಿಟ್ಟು ನಿನ್ನನ್ನು ನೀನು ಸಾಯಿಸಿಕೊಳ್ಳಬೇಡ  ಅಂತ' ಎಂದು ಸ್ಮೃತಿ ಇರಾನಿ ಹೇಳಿದರು. ಈ ಘಟನೆ ಗೊತ್ತಾದ ಬಳಿಕ ನಾನು ತಕ್ಷಣ ಸುಶಾಂತ್ ಸಹ ನಟ ಅಮಿತ್ ಸಾಧ್ ಜೊತೆ ಮಾತನಾಡಿದೆ ಎಂದು ಬಹಿರಂಗ ಪಡಿಸಿದರು. 

ಗರ್ಭಪಾತವಾಗಿದ್ದರೂ ಬಿಟ್ಟಿಲ್ಲ ಕೆಲಸಕ್ಕೆ ಕರೆದ್ರು, ಸಾಕ್ಷಿ ತೋರಿಸಬೇಕಾಯಿತು; ನಟಿ, ಸಚಿವೆ ಸ್ಮೃತಿ ಇರಾನಿ

'ತಕ್ಷಣ, ನಾನು ಅಮಿತ್ ಸಾಧ್‌ಗೆ ಕರೆ ಮಾಡಿದೆ. ಮೊದಲ ಭಯವಾಯಿತು. ಆದರೆ ಫೋನ್ ಮಾಡಿ ಏನಾಯಿತು ಎಂದು ಕೇಳಿದೆ. ನನಗೆ ಗೊತ್ತಿತ್ತು. ಅವನು ಏನಾದರೂ ಮೂರ್ಖ ನಿರ್ಧಾರ ತೆಗೆದುಕೊಳ್ಳುತ್ತಾನೆ ಅಂತ.  ನನಗೆ ಬದುಕಲು ಇಷ್ಟವಿಲ್ಲ ಎಂದು ಹೇಳಿದ್ದ. ಏನು ಹೇಳ್ತಿದ್ದಾನೆ ಈ ಸ್ಟುಪಿಡ್ ಅಂತ ಅನಿಸಿತ್ತು. ಏನೋ ಅನಾಹುತ ಆಗಿದೆ ಅಂತ ನನಗೆ ಗೊತ್ತಾಯಿತು. ನಾನು ಮಾತನಾಡಬೇಕು ಅಂತ ಹೇಳಿದ್ದೆ. ಕೆಲಸ ಇಲ್ವಾ ಅಂತ ಕೇಳಿದ್ದ. ಇದೆ ಆದರೇ ಮಾತಾಡೋಣ ಎಂದು ನಾನು ಹೇಳಿದ್ದೆ. ಸುಮಾರು 6 ಗಂಟೆಗಳ ಕಾಲ ಮಾತನಾಡಿದ್ವಿ' ಎಂದು ಸ್ಮೃತಿ ಬಹಿರಂಗ ಪಡಿಸಿದರು.  

ಸ್ನೇಹಿತೆಯ ಪತಿಗೇ ಹೃದಯ ಕೊಟ್ಟ ನಟಿ, ಸಚಿವೆ ಸ್ಮೃತಿ ಇರಾನಿ

ಸುಶಾಂತ್ ಸಿಂಗ್ ಸಾವು ನಿಗೂಢವಾಗಿಯೇ ಉಳಿದಿದೆ. ಸುಶಾಂತ್ ಸಾವಿನ ನ್ಯಾಯಕ್ಕಾಗಿ ಅಭಿಮಾನಿಗಳು, ಕುಟುಂಬದವರು ಒತ್ತಾಯಿಸುತ್ತಿದ್ದಾರೆ. ಸಾವಿನ ತನಿಖೆ ಆದಷ್ಟು ಬೇಗ ಮುಗಿಸಿ ಸತ್ಯ ಹೊರಬರಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಸುಶಾಂತ್ ಸಾವಿನ ತನಿಖೆಯಿಂದ ಗ್ರಡ್ಸ್ ಪ್ರಕರಣ ಬಲಯಲಿಗೆ ಬಂದಿದ್ದು ಅನೇಕರು ಜೈಲು ಸೇರಿದ್ದರು, ವಿಚಾರಣೆ ಎದುರಿಸಿದ್ದರು. ಬಣ್ಣದ ಲೋಕದ ಕರಾಳ ಮುಖ ಬಯಲಾಗಿತ್ತು. 

 

click me!