'ಶಾಕುಂತಲಂ' ಸಿನಿಮಾ ರಿಜೆಕ್ಟ್ ಮಾಡಿದ್ದೆ, ಬಳಿಕ ಒಪ್ಪಿಕೊಂಡೆ ಎಂದು ನಟಿ ಸಮಂತಾ ಬಹಿರಂಗ ಪಡಿಸಿದ್ದಾರೆ.
ಖ್ಯಾತ ನಟಿ ಸಮಂತಾ ಸದ್ಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಸಿದ್ಧವಾಗಿರುವ ಶಾಕುಂತಲಂ, ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ. ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಶಾಕುಂತಲಂ ಸಿನಿಮಾ ಮೂಡಿ ಬಂದಿದ್ದು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸದ್ಯ ಶುಕುಂತಲಂ ತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಮೋಷನ್ ವೇಳೆ ಸಮಂತಾ ಪ್ರಾರಂಭದಲ್ಲಿ ಶಾಕುಂತಲಂ ಸಿನಿಮಾ ರಿಜೆಕ್ಟ್ ಮಾಡಿದ್ದ ವಿಚಾರವನ್ನು ಬಹಿರಂಗ ಪಡಿಸಿದರು. ಕಳೆದ ಮೂರು ವರ್ಷಗಳಿಂದ ತನ್ನನ್ನು ಕಾಡುತ್ತಿರುವ ಭಯವನ್ನು ಹೋಗಲಾಡಿಸಲು ಈ ಸಿನಿಮಾ ಒಪ್ಪಿಕೊಂಡಿರುವುದಾಗಿ ಸಮಂತಾ ಹೇಳಿದ್ದಾರೆ. ಶಾಕುಂತಲಂನಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರ ಸಮಂತಾ ಅವರಿಗೆ ಆಫರ್ ಮಾಡಿದ ರಿಜೆಕ್ಟ್ ಮಾಡಿದ್ದೆ ಎಂದು ಸಮಂತಾ ರಿವೀಲ್ ಮಾಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಸಮಂತಾ, 'ನಾನು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ ಸಮಯದಲ್ಲಿ ನನಗೆ ಈ ಆಫರ್ ಬಂದಿತು. ನಾನು ರಾಜಿ ಪಾತ್ರದಲ್ಲಿ ನಟಿಸಿದ್ದೇನೆ, ಶಕುಂತಲೆಗಿಂತ ಹಲವು ರೀತಿಯಲ್ಲಿ ಭಿನ್ನವಾದ ಪಾತ್ರ ಅದಾಗಿತ್ತು. ಶಕುಂತಲಾ ಪಾವಿತ್ರ್ಯತೆ, ಮುಗ್ಧತೆ, ಮತ್ತು ಘನತೆಯ ಸಂಕೇತವಾಗಿದೆ. ಆ ಸಮಯದಲ್ಲಿ ನಾನು ಶಕುಂತಲಾ ಆಗಿ ಬದಲಾಗಬಹುದೇ ಎಂದು ನನಗೆ ಖಚಿತ ಇರಲಿಲ್ಲ' ಎಂದು ಸಮಂತಾ ಹೇಳಿದ್ದಾರೆ.
ಸಮಂತಾರಿಂದ ದೂರಾಗಿ 3 ವರ್ಷದ ಬಳಿಕ ಹೊಸ ಮನೆ ಖರೀದಿಸಿದ ನಟ ನಾಗ ಚೈತನ್ಯ
'ಕಳೆದ 3 ವರ್ಷಗಳಲ್ಲಿ, ನಾನು ತುಂಬಾ ಭಯದಿಂದ ಬದುಕಿದ್ದೇನೆ. ಶಕುಂತಲೆ ತುಂಬಾ ಕಷ್ಟಗಳನ್ನು ಎದುರಿಸಿದಳು ಆದರೆ ಅವಳು ಎಲ್ಲವನ್ನೂ ಘನತೆ ಮತ್ತು ದಯೆಯಿಂದ ಎದುರಿಸಿದಳು. ನಾನು ಅದರ ಬಗ್ಗೆ ತಿಳಿದಾಗ, ನನ್ನ ಭಯವನ್ನು ಎದುರಿಸಲು ನಾನು ಈ ಸಿನಿಮಾ ತೆಗೆದುಕೊಂಡೆ. ಕಳೆದ ಮೂರು ವರ್ಷಗಳಲ್ಲಿ ನನ್ನ ಭಯವನ್ನು ನಾನು ಹೇಗೆ ಎದುರಿಸಿದೆ ಎಂಬುದು ನಟಿನಾಗಿ ನನ್ನ ವಿಕಾಸವನ್ನು ವಿವರಿಸುತ್ತದೆ' ಎಂದು ಹೇಳಿದರು.
ಎಂತಹ ಅದ್ಭುತ ಸಿನಿಮಾ; ಶಾಕುಂತಲಂ ನೋಡಿ ಭಾವುಕ ಸಾಲು ಹಂಚಿಕೊಂಡ ನಟಿ ಸಮಂತಾ
ಶಾಕುಂತಲಂ ಸಿನಿಮಾದಲ್ಲಿ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ಹೊರಹಾಕಿದ್ದರು.
ಸಿನಿಮಾ ನೋಡಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದ ಸಮಂತಾ
'ಕೊನೆಗೂ ನಾನು ಸಿನಿಮಾ ವೀಕ್ಷಿಸಿದೆ. ಗುಣಶೇಖರ್ ಅವರೇ ನೀವು ನನ್ನ ಹೃದಯ ಗೆದ್ದಿದ್ದೀರಿ. ಎಂತಹ ಅದ್ಭುತ ಸಿನಿಮಾ. ನಮ್ಮ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದನ್ನು ತುಂಬಾ ಪ್ರೀತಿಯಿಂದ ಜೀವಂತಗೊಳಿಸಲಾಗಿದೆ. ನಮ್ಮ ಕುಟುಂಬ ಪ್ರೇಕ್ಷಕರು ಶಕ್ತಿಯುತ ಭಾವನೆಗಳಿಂದ ದೂರವಾಗುವುದನ್ನು ನಾನು ಕಾಯಲು ಸಾಧ್ಯವಿಲ್ಲ. ದಿಲ್ ರಾಜು ಮತ್ತು ನೀಲಿಮಾ ಅವರೇ ಈ ಅದ್ಭುತ ಪ್ರಯಾಣಕ್ಕೆ ಧನ್ಯವಾದಗಳು. ಶಾಕುಂತಲಂ ನನಗೆ ಯಾವಾಗಲೂ ತುಂಬಾ ಹತ್ತಿರವಾದ ಸಿನಿಮಾವಾಗಿರಲಿದೆ' ಎಂದು ಬರೆದುಕೊಂಡಿದ್ದಾರೆ.