ದುಡ್ಡು ತಗೊಂಡು ಶಾರುಖ್​ರನ್ನು ಪಾಕ್​ ನಟಿ ಹೊಗಳ್ತಿದ್ದಾಳೆ ಎಂದ ಸೆನೆಟರ್​!

By Suvarna NewsFirst Published Mar 25, 2023, 3:17 PM IST
Highlights

ಪಾಕಿಸ್ತಾನದ ನಟಿ ಮಹಿರಾ ಖಾನ್​, ನಟ ಶಾರುಖ್​ ಖಾನ್​ ಅವರನ್ನು ಹೊಗಳಿರುವುದಕ್ಕೆ ಪಾಕಿಸ್ತಾನದ ಸೆನೆಟರ್​ ಅಸಭ್ಯ ಕಮೆಂಟ್​  ಮಾಡಿದ್ದು, ಜನರ ಆಕ್ರೋಶಕ್ಕೆ  ಕಾರಣವಾಗಿದೆ. 
 

2017ರಲ್ಲಿ ಬಿಡುಗಡೆಯಾಗಿದ್ದ ರಯೀಸ್​ (Raees) ಸಿನಿಮಾ ನೆನಪಿದೆಯೆ? ಭಾರಿ ಸುದ್ದಿಯಾಗಿತ್ತು ಈ ಚಿತ್ರ. ಈ ಚಿತ್ರದಲ್ಲಿ ಶಾರುಖ್​ ಖಾನ್​ ನಾಯಕನಾದರೆ, ಪಾಕಿಸ್ತಾನದ ಬೆಡಗಿ ಮಹಿರಾ ಖಾನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿದ್ವಾನಿ ಅವರ ನಿರ್ಮಾಣ ಸಂಸ್ಥೆಯ ಚಿತ್ರವಾದ 'ರಯೀಸ್‌'ನ್ನು ರಾಹುಲ್ ಧೋಲಾಕಿಯಾ ನಿರ್ದೇಶಿಸಿದ್ದಾರೆ. ಕಳ್ಳಭಟ್ಟಿ ತಯಾರಿಸುತ್ತಿರುವ ಗುಜರಾತಿಯೊಬ್ಬನ ಕಥೆಯನ್ನು ಹೊಂದಿದೆ. ಪಾಕಿಸ್ತಾನದಲ್ಲಿ ವಿಜೆ ಕೂಡಾ ಆಗಿರುವ ಮಹಿರಾ, ಇದಕ್ಕೂ ಮುನ್ನ  ಬೋಲ್ ಚಿತ್ರದಲ್ಲಿ ನಟಿಸಿದ್ದರು. ಅನಂತರ 'ಹಮ್‌ಸಫರ್' ಎಂಬ ಹಿಂದಿ ಧಾರವಾಹಿಯಲ್ಲಿ ನಟಿಸುವ ಮೂಲಕ ಜನ ಮನ್ನಣೆ ಗಳಿಸಿದ್ದ ಇವರು ಶಾರುಖ್​ಗೆ ನಾಯಕಿಯಾಗಿ ರಹೀಸ್​ನಲ್ಲಿ ನಟಿಸಿದ್ದರು.  ಈ ಚಿತ್ರ ಭಾರಿ ಸುದ್ದಿಯಾಗಲು ಕಾರಣ, ಪಾಕಿಸ್ತಾನದಲ್ಲಿ ಚಿತ್ರಕ್ಕೆ ನಿಷೇಧ ಹೇರಲಾಗಿತ್ತು ಎನ್ನುವ ಕಾರಣಕ್ಕೆ. 'ರಯೀಸ್' ಚಿತ್ರದಲ್ಲಿ ' ಇಸ್ಲಾಂ ಧರ್ಮವನ್ನು ಅಲ್ಲಗಳೆಯುವ ಅಂಶಗಳಿದ್ದು, ಮುಸ್ಲಿಂ ಜನರು ಅಪರಾಧಿಗಳು ಮತ್ತು ಭಯೋತ್ಪಾದಕರೆಂದು ಬಿಂಬಿಸಲಾಗಿದೆ' ಎನ್ನುವ ಕಾರಣದಿಂದ ಬ್ಯಾನ್ ಮಾಡಲಾಗಿತ್ತು. 'ರಯೀಸ್' ಚಿತ್ರ ಬಿಡುಗಡೆಗೂ ಮುನ್ನ ಪಾಕಿಸ್ತಾನಿ ನಟಿ ಭಾರತದಲ್ಲಿ ಧರಿಸಿದ್ದ ಔಟ್ ಫಿಟ್ ಕಾರಣದಿಂದ ಸಿನಿಮಾ ಪ್ರಮೋಷನ್​ಗೂ  ಮಹಿರಾ ಖಾನ್ (Mahira Khan)ಅವರನ್ನು ಬ್ಯಾನ್ ಮಾಡಲಾಗಿತ್ತು. ಆದರೆ ದುರಂತ ಎಂದರೆ, 'ರಯೀಸ್' ಚಿತ್ರದ ನಕಲಿ ಸಿಡಿಗಳು ಮೊದಲೇ ಪಾಕಿಸ್ತಾನದಲ್ಲಿ ಲಭ್ಯವಾಗಿದ್ದು,  ದಿನನಿತ್ಯ ಸ್ಥಳೀಯ ಕೇಬಲ್ ಆಪರೇಟರ್ ಗಳು ಚಿತ್ರ ಪ್ರದರ್ಶನ ಮಾಡುತ್ತಿದ್ದರು.

ಈ ಚಿತ್ರ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ,  ಶಾರುಖ್ ಖಾನ್ ಅವರೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ನಟಿ ಮಹಿರಾ ಖಾನ್​ ಅವರಿಂದಾಗಿ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಕೆಲಸ ಮಾಡಿದ್ದರೂ  ಉಭಯ ದೇಶಗಳ ನಡುವಿನ ರಾಜಕೀಯ ಪರಿಸ್ಥಿತಿಯಿಂದಾಗಿ ಅವರು ಬೇರೆ ಯಾವುದೇ ಬಾಲಿವುಡ್ ಚಿತ್ರದ ಭಾಗವಾಗಲು ಸಾಧ್ಯವಾಗಲೇ ಇಲ್ಲ. ಶಾರುಖ್​ ಖಾನ್​ (Shah Rukh Khan) ಅವರ ಅಪಾರ ಅಭಿಮಾನಿಯೂ ಆಗಿರುವ ಮಹಿರಾ ಮಾತ್ರ ಸದಾ ಶಾರುಖ್​ ಅವರ ಗುಣಗಾನ ಮಾಡುತ್ತಲೇ ಬಂದರು. ಸಂದರ್ಶನಗಳಲ್ಲಿಯೂ ಅವರ ಗುಣಗಾನ ಮಾಡಿದ್ದೇ ಈಗ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.  

ماہرہ خان کو مینٹل ہیلتھ پروبلم ہیں اور انور مقصود عمر کےاس حصہ میں شراب کےنشہ میں دھت رہتا ہے۔ان دونوں بےشرم کیریکٹر پر عوام کی لعنت ہو۔ماہرہ خان کےکردار پر تو کتابیں لکھی جا سکتی ہیں،یہ پیسہ کےلیےانڈین اداکاروں کی خوشامد بھی کرتی ہےاور انور مقصود تعصب سے بھرا ہوا لعنتی کردار ہے

— Senator Dr. Afnan Ullah Khan (@afnanullahkh)

ಶಾರುಖ್ ಖಾನ್ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವ ನಟಿ ಮಹಿರಾ, ಸಂದರ್ಶನವೊಂದರಲ್ಲಿ  ರಯೀಸ್ ಚಿತ್ರೀಕರಣದ ಸಮಯದಲ್ಲಿ ಶಾರುಖ್​ ತಮ್ಮನ್ನು  ಎಷ್ಟು ಚೆನ್ನಾಗಿ ನಡೆಸಿಕೊಂಡರು ಎನ್ನುವ ಬಗ್ಗೆ ತಿಳಿಸಿದ್ದರು.  ದಿ ಆರ್ಟ್ಸ್ ಕೌನ್ಸಿಲ್ ಆಫ್ ಪಾಕಿಸ್ತಾನದಲ್ಲಿ ಮಾತನಾಡಿದ್ದ ಮಹಿರಾ ಖಾನ್, ಮತ್ತೊಮ್ಮೆ ಶಾರುಖ್ ಖಾನ್ ಮತ್ತು ಅವರ ಇತ್ತೀಚಿನ ಬಿಡುಗಡೆಯಾದ ಪಠಾನ್ ಬಗ್ಗೆ ಹೊಗಳಿದ್ದರು. ಆದರೆ ಇದು ಇದು ಪಾಕಿಸ್ತಾನಿ ಸೆನೆಟರ್ (Pakistani Senator) ಡಾ. ಅಫ್ನಾನ್ ಉಲ್ಲಾ ಖಾನ್‌ (Dr. Afnan Ullah Khan) ಕೆಂಗಣ್ಣಿಗೆ ಗುರಿಯಾಗಿದೆ. ಟ್ವಿಟರ್‌ನಲ್ಲಿ ಡಾ. ಅಫ್ನಾನ್ ಉಲ್ಲಾ ಖಾನ್ ಮಹಿರಾ ಖಾನ್ ವಿರುದ್ಧ ಅಸಹ್ಯಕರ ಕಮೆಂಟ್ ಮಾಡಿದ್ದಾರೆ. 

Latest Videos

Aryan Khan ಡ್ರಗ್ಸ್​ ಕೇಸಲ್ಲಿ ಸಿಲುಕಿದ್ದಾಗ ಅಪ್ಪ ಶಾರುಖ್​ನಿಭಾಯಿಸಿದ್ದು ಹೇಗೆ?

ಭಾರತದ ನಟ ಶಾರುಖ್​ ಅವರನ್ನು ಹೊಗಳುತ್ತಿರುವ ನಟಿ ಮಾಹಿರಾಗೆ ಮಾನಸಿಕ ಸಮಸ್ಯೆ ಇದೆ ಎಂದಿರುವ ಅವರು,  ಹಣಕ್ಕಾಗಿ ಭಾರತೀಯ ನಟರನ್ನು ಹೊಗಳುತ್ತಿದ್ದಾಳೆ ಎಂದು  ಆರೋಪಿಸಿದ್ದಾರೆ. ಈಕೆಯ ಸಂದರ್ಶನ ಮಾಡಿದ್ದ ಅನ್ವರ್ ಮಕ್ಸೂದ್ ವಿರುದ್ಧವೂ ಕಮೆಂಟ್ ಮಾರುವ ಅವರು,  ಈ ದಿನಗಳಲ್ಲಿ ಆತ ಕುಡಿಯುತ್ತಿದ್ದಾನೆ, ಇಬ್ಬರೂ ನಾಚಿಕೆಯಿಲ್ಲದವರು ಎಂದು ಹೇಳಿದ್ದಾರೆ.  ಈ ಟ್ವೀಟ್ ವೈರಲ್ ಆಗಿದ್ದು, ಸುದ್ದಿಗೆ ಗ್ರಾಸವಾಗಿದೆ.  ಅನ್ವರ್ ಮಕ್ಸೂದ್ ಅವರು ಸಂದರ್ಶನದ ವೇಳೆ ನಿಮ್ಮ ಮತ್ತು ಶಾರುಖ್​ ಅವರ ಮೂಗು ಒಂದೇ ರೀತಿಯಾಗಿದೆ. ಇದನ್ನು ಹೊರತುಪಡಿಸಿದರೆ, ಇಬ್ಬರ ನಡುವೆ ಏನು ಸಾಮ್ಯತೆ ಇದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ, ಶಾರುಖ್​ ಅವರ ಗುಣಗಾನ ಮಾಡಿದ್ದಾರೆ. ಸಿನಿಮಾ ಸೆಟ್​ನಲ್ಲಿ ಪ್ರತಿಯೊಬ್ಬ ಚಿಕ್ಕಪುಟ್ಟ ಜನರನ್ನೂ ಹೇಗೆ ಅವರು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. 
 

In an interesting conversation with Anwar Maqsood, Mahira Khan shares how she and Shah Rukh Khan both love the work they do.


VC: pic.twitter.com/hHsnOIvbBT

— Naylasays (@NaylaAmir)
click me!