ಕೃಷ್ಣಮೃಗ ಕೊಂದೇ ಇಲ್ಲ ಅಂತಿರೋ ಸಲ್ಮಾನ್‌, ಹಳೆಯ ವಿಡಿಯೋದಲ್ಲಿ ಹೇಳಿದ್ದೇನು? ನೆಟ್ಟಿಗರಿಂದ ಕ್ಲಾಸ್‌

By Suchethana D  |  First Published Dec 4, 2024, 2:47 PM IST

ಕೃಷ್ಣಮೃಗವನ್ನು ಸಾಯಿಸಿರುವ ಆರೋಪದ ಮೇಲೆ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ ಎದುರಿಸುತ್ತಿರುವ ಸಲ್ಮಾನ್ ಖಾನ್‌ ಈ ಬಗ್ಗೆ ಹಿಂದಿನ ವಿಡಿಯೋದಲ್ಲಿ ಹೇಳಿದ್ದೇನು? 
 


ಬಿಷ್ಣೋಯಿ ಸಮುದಾಯದವರು ದೇವರು ಎಂದೇ ನಂಬುತ್ತಿರುವ ಕೃಷ್ಣಮೃಗವನ್ನು ಕೊಂದಿರುವ ಆರೋಪ ಹೊತ್ತ ಹಾಗೂ  ಆ ಬಗ್ಗೆ ಇದುವರೆಗೆ ಕ್ಷಮೆ ಕೋರದ ನಟ ಸಲ್ಮಾನ್​ ಖಾನ್​ಗೆ​ ಈಗ ಹೆಜ್ಜೆ ಹೆಜ್ಜೆಗೂ ಮೃತ್ಯುಭಯ  ಆವರಿಸುತ್ತಿದೆ. ಇದಾಗಲೇ ಹಲವಾರು ಬಾರಿ ಲಾರೆನ್ಸ್​ ಬಿಷ್ಣೋಯಿ ಸಮುದಾಯದವರು ನಟನಿಗೆ ಇಟ್ಟಿದ್ದ ಬೇಡಿಕೆ ಒಂದೇ. ಅದು ಅಂದು ಕೃಷ್ಣಮೃಗ ಕೊಂದ ತಪ್ಪಿಗೆ ಕ್ಷಮೆ ಕೋರಬೇಕು ಎನ್ನುವುದು. ದಶಕ ಕಳೆದರೂ ಇದುವರೆಗೂ ಸಲ್ಮಾನ್​ ಖಾನ್​ ಕ್ಷಮೆ ಕೋರಲಿಲ್ಲ. ಈ ಕ್ಷಮೆ ಎನ್ನುವ ಮಾತು ಹಂತ ಹಂತವಾಗಿ ಬೆಳೆಯುತ್ತಾ ಇಂದು ಸಲ್ಮಾನ್ ಖಾನ್​ ಆಪ್ತರು ಎನಿಸಿಕೊಂಡವರ ಜೀವಕ್ಕೆ ಮುಳ್ಳಾಗುತ್ತಿದೆ. ಇದಾಗಲೇ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಮಾಡಿರುವ ಬಿಷ್ಣೋಯಿ ಗ್ಯಾಂಗ್​ನವರು, ಇದಕ್ಕೆ ಕಾರಣ ಕೂಡ ಸಲ್ಮಾನ್​ ಖಾನ್​ ಎಂದಿದ್ದಾರೆ. ಸಲ್ಮಾನ್​ ನಿಕಟವರ್ತಿಗಳಿಗೆ ಇದೇ ಶಿಕ್ಷೆಯಾಗುತ್ತದೆ ಎಂದೂ ಹೇಳಿದ್ದಾರೆ. ಇಷ್ಟು ಆಗುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಕ್ಷಮೆ ಕೋರುವಂತೆ ಸಲ್ಮಾನ್​ ಖಾನ್​ಗೆ ಒತ್ತಡ ಹೆಚ್ಚಾಗುತ್ತಿದೆ. ಆದರೆ ಜಪ್ಪಯ್ಯ ಎಂದರೂ ಅದು ಸಾಧ್ಯವಿಲ್ಲ ಎನ್ನುವಂತೆ ನಟ ನಡೆದುಕೊಳ್ಳುತ್ತಿರುವ ಕಾರಣ, ಹಲವರ ಅಸಮಾಧಾನಕ್ಕೆ ಇದು ಕಾರಣವಾಗಿದೆ. 

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ.  ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ  ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡುತ್ತಲೇ ಇದೆ.  ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ. 

Tap to resize

Latest Videos

ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್‌ ಪಾಸ್ವಾನ್‌ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ

ಇದರ ಬೆನ್ನಲ್ಲೇ ಸಲ್ಮಾನ್‌ ಖಾನ್‌ ಅವರ ಹಳೆಯ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಬೀಯಿಂಗ್‌ ಸಲ್ಮಾನ್‌ ಖಾನ್‌ ಎನ್ನುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಶೇರ್‍‌ ಮಾಡಲಾಗಿದೆ. ಇದರಲ್ಲಿ ಕೂಡ ಸಲ್ಮಾನ್‌ ಖಾನ್‌ ತಾವು ಕೃಷ್ಣಮೃಗವನ್ನು ಕೊಂದಿಲ್ಲ. ಬೇರೆ ಯಾರೋ ಕೊಂದದ್ದು ನನ್ನಮೇಲೆ ಆರೋಪ ಹಾಕಲಾಗುತ್ತಿದೆ ಎಂದೇ ಹೇಳಿದ್ದಾರೆ. ವರ್ಷಗಳಿಂದ ಸುಖಾಸುಮ್ಮನೇ ಈ ಆರೋಪವನ್ನು ಹೊತ್ತು ನಾನು ಸಾಗುತ್ತಿದ್ದೇನೆ ಎಂದಿದ್ದಾರೆ. ಆದರೆ ನೆಟ್ಟಿಗರು ಈ ವಿಡಿಯೋಗೆ ಸಕತ್‌ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಯಾರಾದರೂ ಕೊಲೆ ಮಾಡಿರುವವರು ತಾವು ಕೊಲೆ ಮಾಡಿದ್ದು ಎಂದು ಹೇಳ್ತಾರೆಯೇ, ಇದನ್ನು ಈಗ ಮತ್ತೊಮ್ಮೆ ಶೇರ್‍‌ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಅದೇ ವೇಳೆ ಸಲ್ಮಾನ್‌ ಖಾನ್‌ ಇದಾಗಲೇ ಹಲವಾರು ನಟಿಯರ ಜೊತೆ ಸಂಬಂಧ ಹೊಂದಿದ್ದು, ಕೆಲವರಿಂದ ಅತ್ಯಾಚಾರದಂಥ ಆರೋಪಗಳನ್ನೂ ಎದುರಿಸುತ್ತಿದ್ದಾರೆ. ಇವುಗಳನ್ನು ನಟ ಒಪ್ಪಿಕೊಂಡಿದ್ದು ನೋಡಿರುವಿರಾ ಎಂದು ಪ್ರಶ್ನಿಸುತ್ತಿದ್ದಾರೆ. ಇದೊಂದು ಕ್ಷುಲ್ಲಕ ವಿಡಿಯೋ ಅಷ್ಟೇ. ಇದನ್ನು ಯಾರೂ ನಂಬಬೇಡಿ ಎಂದೇ ಹಲವಾರು ಕಮೆಂಟಿಗರು ತಿಳಿಸುತ್ತಿದ್ದಾರೆ.

ಇದಾಗಲೇ, ಸಲ್ಮಾನ್​ ಖಾನ್​ ತಮ್ಮ ಸೆಕ್ಯುರಿಟಿಯನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ.  ಮತ್ತಷ್ಟು ಸೆಕ್ಯುರಿಟಿಗಾಗಿ ಎರಡು ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಬುಲೆಟ್​ಪ್ರೂಫ್​ ಕಾರನ್ನು ಈಚೆಗೆ ಖರೀದಿಸಿದ್ದಾರೆ. ಇವರ ಭದ್ರತೆಗೋಸ್ಕರ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ.  ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಇದಾಗಲೇ ನಟನ  ಭದ್ರತೆ ಹೆಚ್ಚಿಸಲಾಗಿದೆ. ಸರ್ಕಾರದಿಂದಲೇ  ವೈ ಪ್ಲಸ್ ಭದ್ರತೆ ನೀಡಲಾಗಿದೆ.    ಸದ್ಯ ಸಲ್ಮಾನ್​ಗೆ ಮಹಾರಾಷ್ಟ್ರ ಸರ್ಕಾರ ನೀಡಿರೋ ವೈ ಪ್ಲಸ್ ಸೆಕ್ಯೂರಿಟಿ 25 ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿದೆ. ಇದರಲ್ಲಿ  4 ಜನ ಎನ್.ಎಸ್​.ಜಿ ಕಮಾಂಡೋಸ್ ಇದ್ದು,  ಅತ್ಯಾಧುನಿಕ ರೈಫಲ್ ಹೊಂದಿರೋ ಇವರು ಅದೆಂಥಾ ಅಟ್ಯಾಕ್ ನಡೆದರೂ ಎದುರಿಸಿ, ರಕ್ಷಿಸಬಲ್ಲ ನಿಪುಣರು ಇದ್ದಾರೆ.  

10 ಬಾರಿ ಮದ್ವೆಯಾಗಿ ಸದ್ದು ಮಾಡಿದ್ದ 'ಮದುವೆ ಮನೆ' ನಟಿ ಶ್ರದ್ಧಾ ಈಗ ಅವಳಿ ಮಕ್ಕಳ ತಾಯಿ
 

click me!