ಈ ಸಿನಿಮಾ ನೋಡಿದ್ರೆ ಚಿತ್ರದ ಕಥೆ ನಿಮ್ಮನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುತ್ತದೆ.ಪ್ರತಿ ಕ್ಷಣಕ್ಕೂ ಚಿತ್ರದ ಕಥೆ ನಿಮ್ಮ ಚಕಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ 6 ತಿಂಗಳ ಬಳಿಕ ಮತ್ತೊಮ್ಮೆ ರಿಲೀಸ್ ಆಗಿದೆ.
ಬೆಂಗಳೂರು: ನವೆಂಬರ್-2024ರವರೆಗೆ 130ಕ್ಕೂ ಅಧಿಕ ಕ್ರೈಮ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಸಿನಿಮಾಗಳು ಬಿಡುಗಡೆಯಾಗಿವೆ. ಡಿಸೆಂಬರ್‌ನಲ್ಲಿ ಕೆಲವು ಸಿನಿಮಾಗಳು ಬಿಡುಗಡೆಯಾಗಲು ಸಿದ್ಧವಾಗಿವೆ. ರಿಲೀಸ್ ಆಗಿರೋ ಸಿನಿಮಾಗಳಲ್ಲಿ ಕೆಲವು ಬ್ಲಾಕ್‌ಬಸ್ಟರ್, ಸೂಪರ್‌ಹಿಟ್, ಹಿಟ್ ಮತ್ತು ಒಂದಿಷ್ಟು ಮಕಾಡೆ ಮಲಗಿವೆ. ಇದೀಗ ಭಾರತದ ಸಿನಿಮಾವೊಂದು ವಿದೇಶದಲ್ಲಿ ಬಿಡುಗಡೆಯಾಗಿದ್ದು, ಅಲ್ಲಿಯ ಪ್ರಾದೇಶಿಕ ಸಿನಿಮಾಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿವೆ. ಸಿನಿಮಾದ ಪ್ರದರ್ಶನ ಕಂಡು ಥಿಯೇಟರ್ ಮಾಲೀಕರು ಹೆಚ್ಚುವರಿ ಶೋಗಳನ್ನು ಏರ್ಪಾಡು ಮಾಡುತ್ತಿದ್ದಾರೆ. ಹಾಗಾಗಿ ಇದು 2024 ವರ್ಷದ ಅತಿದೊಡ್ಡ ಕ್ರೈಮ್ ಥ್ರಿಲ್ಲರ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಈ ಸಿನಿಮಾ 14ನೇ ಜೂನ್ 2024ರಂದು ರಿಲೀಸ್ ಆಗಿತ್ತು. ಇದು ಯಾವುದೇ ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ಅಲ್ಲ. ಓರ್ವ ಸೂಪರ್ ಸ್ಟಾರ್ ಹೊರತುಪಡಿಸಿದರೆ ಉಳಿದಂತೆ ಸ್ಥಳೀಯ ಕಲಾವಿದರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆರಂಭದಲ್ಲಿ ಅಷ್ಟು ಪ್ರಚಾರ ಸಿಗದಿದ್ರೂ ಓಟಿಟಿಯಲ್ಲಿ ಭಾರತದ ಮೂಲೆ ಮೂಲೆಗೂ ಸಿನಿಮಾ ತಲುಪಿತು. ಬಿಡುಗಡೆಯಾದ 6 ತಿಂಗಳ ಬಳಿಕ ಚೀನಾದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಜಪಾನ್‌ನಲ್ಲಿಯೂ ಸಿನಿಮಾ ಬಿಡುಗಡೆಗೆ ಚಿತ್ರತಂಡ ಕಾಯ್ತಿದೆ. ಓಟಿಟಿಯಲ್ಲಿ ಸಿನಿಮಾ ನೋಡಿದ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಬರೆದುಕೊಂಡು ಮೆಚ್ಚುಗೆ ಸೂಚಿಸಿದರು.
ಯಾವುದು ಈ ಸಿನಿಮಾ?
ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಈ ವರ್ಷದ 2024 ವರ್ಷದ ಅತಿದೊಡ್ಡ ಕ್ರೈಮ್ ಥ್ರಿಲ್ಲರ್ ಸಿನಿಮಾ ಆಗಿದೆ. ನಿತಿಲನ್ ಸ್ವಾಮಿನಾಥನ್ ನಿರ್ದೇಶನದ ಈ ಸಿನಿಮಾಗೆ ಜಗದೀಶ್ ಪಳನಿಸ್ವಾಮಿ ಮತ್ತು ಸುಧನ್ ಬಂಡವಾಳ ಹಾಕಿದ್ದರು. ವಿಜಯ್ ಸೇತುಪತಿ ಮತ್ತು ಅನರಾಗ್ ಕಶ್ಯಪ್ ನೈಜ ನಟನೆ ವೀಕ್ಷಕರನ್ನು ಕಟ್ಟಿ ಹಾಕುತ್ತದೆ. ಮಮತಾ ಮೋಹನದಾಸ್ , ನಟರಾಜನ್ ಸುಬ್ರಮಣ್ಯಂ, ಅಭಿರಾಮಿ ಗೋಪಿಕುಮಾರ್, ದಿವ್ಯಾ ಭಾರತಿ, ಸಿಂಗಮಪುಲಿ , ಮುನಿಶಕಾಂತ್ , ಮಣಿಕಂದನ್ ಮತ್ತು ಭಾರತೀರಾಜ್ ಸೇರಿದಂತೆ ಹಲವು ಕಲಾವಿದರು ಮಹಾರಾಜ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಈ ವರ್ಷ ಮಕಾಡೆ ಮಲಗಿದ 6 ಬಿಗ್ ಬಜೆಟ್ ಸಿನಿಮಾಗಳು; ಹಾಕಿದ ಹಣ ಬಂದ್ರೆ ಸಾಕು ಅಂತಿದ್ರು ನಿರ್ಮಾಪಕರು
ಬಿಡುಗಡೆಯಾದ 6 ತಿಂಗಳ ನಂತರ ಮಹಾರಾಜ ಸಿನಿಮಾ ನವೆಂಬರ್ 29 ರಂದು ಚೀನಾದಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ದೊಡ್ಡಮಟ್ಟದ ಓಪನಿಂಗ್ ಪಡೆದುಕೊಂಡಿದೆ. ಚೀನಾದ 40 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮಹಾರಾಜ ಸಿನಿಮಾ ಪ್ರದರ್ಶನವಾಗುವ ಮೂಲಕ ಆಮೀರ್ ಖಾನ್ ನಟನೆಯ 'ದಂಗಲ್' ದಾಖಲೆಯನ್ನು ಬ್ರೇಕ್ ಮಾಡಿದೆ. ಚೀನಾದಲ್ಲಿ ಚಿತ್ರಕ್ಕೆ 8.7 ರೇಟಿಂಗ್ ಸಿಕ್ಕಿದ್ದು, ಮೊದಲ ದಿನವೇ ಚಿತ್ರ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಲೆಕ್ಷನ್ ಲೆಕ್ಕದಲ್ಲಿಯೂ ದಂಗಲ್ ದಾಖಲೆಯನ್ನೂ ಮುರಿಯಬಹುದು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಪಾನ್ ಸೇರಿದಂತೆ ಇತರೆ ದೇಶಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: 4 ಗಂಟೆ 15 ನಿಮಿಷದ ಸಿನಿಮಾ: 14 ಹೀರೋ, 10 ಹೀರೋಯಿನ್, ಆದರೂ ಫ್ಲಾಪ್?