ಇರಾ ಖಾನ್ ಮದುವೆಯಲ್ಲಿ ನಟ ಧರ್ಮೇಂದ್ರ ಅವರನ್ನು ನೋಡಿದ ಕಮಲ್ ಹಾಸನ್ ಪುತ್ರಿಯರಾದ ಶ್ರುತಿ ಮತ್ತು ಅಕ್ಷರಾ ಹಾಸನ್ ವರ್ತನೆಗೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರು ಪಡೆದಿರುವ ಆಮೀರ್ ಖಾನ್ ಪುತ್ರಿ ಇರಾ ಖಾನ್ ಅವರ ಮದುವೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಸುಮಾರು 10 ದಿನಗಳ ಕಾಲ ಇರಾ ಮತ್ತು ನೂಪುರ್ ಶಿಖರೆ ಅವರ ವಿವಾಹ ಮಹೋತ್ಸವ ನಡೆಯಿತು. ಮೂರು ವರ್ಷಗಳ ಡೇಟಿಂಗ್, ಸಂಬಂಧದ ಬಳಿಕ ಜನವರಿ 3 ರಂದು ಈ ಜೋಡಿ ಮದುವೆಯನ್ನು ರಿಜಿಸ್ಟರ್ ಮಾಡಿಕೊಂಡರು. ಇದಾದ ನಂತರ ದಂಪತಿ ಉದಯಪುರದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ನಡೆಸಿದರು. ಜನವರಿ 10 ರಂದು ಇಬ್ಬರೂ ಕ್ರೈಸ್ತ ಸಂಪ್ರದಾಯದಂತೆ ವಿವಾಹವಾದರು. ಆಮೀರ್ ಖಾನ್ ಮತ್ತು ರೀನಾ ದತ್ತ ಅಂದರೆ ಮುಸ್ಲಿಂ ಮತ್ತು ಹಿಂದೂ ದಂಪತಿಗೆ ಹುಟ್ಟಿದ ಇರಾ ಖಾನ್ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಿ ಸದ್ದು ಮಾಡಿದರು. ಇದಾದ ಬಳಿಕ ಜನವರಿ 13 ರಂದು, ಆಮೀರ್ ಖಾನ್ ತಮ್ಮ ಪ್ರೀತಿಯ ಪುತ್ರಿಗಾಗಿ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಿದ್ದರು. ಇದರಲ್ಲಿ ಬಾಲಿವುಡ್, ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ವ್ಯಾಪಾರ ಪ್ರಪಂಚದ ಅನೇಕ ದಿಗ್ಗಜರು ಭಾಗವಹಿಸಿದ್ದರು.
ಇದರಲ್ಲಿ ಹೈಲೈಟ್ ಆಗಿದ್ದು ಕಮಲ್ ಹಾಸನ್ ಅವರ ಪುತ್ರಿಯರಾದ ನಟಿ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್. ಇವರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಜೊತೆಗೆ ಬಾಲಿವುಡ್‌ನ ಧರ್ಮೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ. ಅಸಲಿಗೆ ಈ ಸಹೋದರಿಯರು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು. ಇವರು ಹೀಗೆ ಮಾಡುತ್ತಿರುವಾಗಲೇ ಅಲ್ಲಿ ಹಿರಿಯ ನಟ ಧರ್ಮೇಂದ್ರ ಬಂದಿದ್ದಾರೆ. ಅವರನ್ನು ನೋಡುತ್ತಿದ್ದಂತೆಯೇ ಸಹೋದರಿಯು ವೇದಿಕೆಯಿಂದ ದಿಢೀರನೆ ಓಡಿ ಹೋಗಿದ್ದು, ಅಪಹಾಸ್ಯದ ರೀತಿಯಲ್ಲಿ ನಕ್ಕಿದ್ದಾರೆ. ಇವರ ಈ ವಿಚಿತ್ರ ನಗು ಕಂಡರೆ ಅದು ಧರ್ಮೇಂದ್ರ ಅವರಿಗೆ ಮಾಡಿರುವ ಅಪಹಾಸ್ಯ ಎಂದೇ ಬಹುತೇಕ ಮಂದಿ ಹೇಳುತ್ತಿದ್ದಾರೆ.
ಆಮೀರ್ ಖಾನ್ ಪುತ್ರಿ ಇರಾ ರಿಸೆಪ್ಷನ್ನಲ್ಲಿ ಜೈ ಶ್ರೀರಾಮ್ ಎಂದು ಜಪಿಸಿದ ಕಂಗನಾ: ವಿಡಿಯೋ ವೈರಲ್
ಆದರೆ ಇನ್ನು ಕೆಲವರು, ಧರ್ಮೇಂದ್ರ ಅವರಿಗೆ ಸಹೋದರಿಯರು ತೋರಿದ ಗೌರವ ಎನ್ನುತ್ತಿದ್ದಾರೆ. ಧರ್ಮೇಂದ್ರ ಅವರು ಬರುತ್ತಿದ್ದಂತೆಯೇ ಅವರಿಗೆ ಜಾಗ ಬಿಟ್ಟುಕೊಡಲು ಸಹೋದರಿಯರು ಹೀಗೆ ಹುಚ್ಚರಂತೆ ಅಲ್ಲಿಂದ ಓಡಿಹೋದರು ಎನ್ನುವುದು ಅವರ ಸಮಜಾಯಿಷಿ. ಇದನ್ನು ಹೊಗಳಿ ಹಲವರು ವಿಡಿಯೋ ಶೇರ್ ಮಾಡಿದ್ದಾರೆ. ಧರ್ಮೇಂದ್ರ ಅವರ ಜೊತೆಗೇ ಸಹೋದರಿಯರು ಫೋಟೋ ಕ್ಲಿಕ್ಕಿಸಿಕೊಳ್ಳಬಹುದಿತ್ತು, ಇಲ್ಲದೇ ಹೋದರೆ ಧರ್ಮೇಂದ್ರ ಅವರಿಗೆ ವೇದಿಕೆಯನ್ನು ಬಿಟ್ಟುಕೊಡುವುದೇ ಆಗಿದ್ದರೆ, ಅಲ್ಲಿಂದ ಪಕ್ಕಕ್ಕೆ ಸರಿದು ಜಾಗ ತೆರವು ಮಾಡಬಹುದಿತ್ತು. ಅದನ್ನು ಬಿಟ್ಟು ಏನೋ ಭಯಾನಕವಾದದ್ದನ್ನು ಕಂಡವರಂತೆ ಹುಚ್ಚರಂತೆ ಓಡಿದ್ದೂ ಅಲ್ಲದೇ ಅತ್ತ ಹೋಗಿ ಅಪಹಾಸ್ಯ ಮಾಡಿದ್ದು ಏಕೆ ಎಂದು ಕೆಲವರು ನಟಿಯರ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಇನ್ನು ಈ ನಟರ ಚಿತ್ರದ ವಿಷಯಕ್ಕೆ ಬರುವುದಾದರೆ, 88 ವರ್ಷದ ಧರ್ಮೇಂದ್ರ ಅವರು ಈಚೆಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಶಬಾನಾ ಅಜ್ಮಿ ಜೊತೆ ಲಿಪ್ಲಾಕ್ ಮಾಡಿ ಹಲ್ಚಲ್ ಸೃಷ್ಟಿಸಿದ್ದರು. ಶ್ರುತಿ ಹಾಸನ್ ಪ್ರಭಾಸ್ ಅವರ 'ಸಾಲಾರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಕಂಗನಾ ರಣಾವತ್ ಲೋಕಸಭೆಗೆ ಸ್ಪರ್ಧೆ ಕನ್ಫರ್ಮ್: ಯಾವ ಕ್ಷೇತ್ರ, ಯಾವ ಪಕ್ಷ? ಇಲ್ಲಿದೆ ಡಿಟೇಲ್ಸ್..