ಮಹೇಶ್ ಬಾಬು ಕೈಯಲ್ಲಿರುವುದು ಸಾಮಾನ್ಯ ಬೀಡಿ ಅಲ್ಲ; ಸತ್ಯ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

By Vaishnavi Chandrashekar  |  First Published Jan 17, 2024, 1:52 PM IST

ಚಿತ್ರದಲ್ಲಿ ಮಹೇಶ್ ಬಾಬು ಸೇದುವುದು ನಿಜವಾದ ಬೀಡಿ?  ಕ್ಲಾರಿಫಿಕೇಷನ್‌ ಕೇಳ್ತಿದ್ದಾರೆ ನೆಟ್ಟಿಗರು...


ಟಾಲಿವುಡ್ ಪ್ರಿನ್ಸ್‌ ಮಹೇಶ್ ಬಾಬು ಮತ್ತು ಸ್ಯಾಂಡಲ್‌ವುಡ್‌ ಡಾಲ್‌ ಶ್ರೀಲೀಲಾ ಜೋಡಿಯಾಗಿ ನಟಿಸಿರುವ ಗುಂಟೂರು ಖಾರಂ ಸಿನಿಮಾ ರಿಲೀಸ್ ಆಗಿದೆ. ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್‌ ಕಲೆಕ್ಷನ್ ಮುಟ್ಟಲು ಹರ ಸಾಹಸ ಮಾಡುತ್ತಿದ್ದರೂ ನೆಚ್ಚಿನ ನಟ ಅಕ್ಟಿಂಗ್ ಮೆಚ್ಚಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ತ್ರಿವಿಕ್ರಮ ಶ್ರೀನಿವಾಸ್‌ ಪ್ರತಿಯೊಂದು ಪಾತ್ರಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ ಆದರೆ ಕಥೆಗೆ ಬಲ ತುಂಬಿಲ್ಲ ಅನ್ನೋದು ನೆಟ್ಟಿಗರಿಗೆ ಬೇಸರ. ಆದರೆ ಇಲ್ಲಿ ಮಹೇಶ್ ಬಾಬು ಬೀಡಿ ಸೇದಿರುವುದು ನೆಟ್ಟಿಗರ ಗಮನ ಸೆಳೆದಿದೆ.

'ನಾನು ಸ್ಮೂಕಿಂಗ್ ಮಾಡುವುದಿಲ್ಲ ಹಾಗೂ ಸ್ಮೂಕಿಂಗ್ ಮಾಡುವಂತೆ ಎಂದೂ ಪ್ರಚೋದಿಸುವುದಿಲ್ಲ. ಸಿನಿಮಾದಲ್ಲಿ ನಾನು ಬಳಸಿರುವುದು ಆಯುರ್ವೇಧ ಬೀಡಿ ಅದನ್ನು ಲವಂಗ ಬಳಸಿ ಮಾಡಿರುವುದು. ಆರಂಭದಲ್ಲಿ ನನಗೆ ನಿಜವಾದ ಬೀಡಿ ಕೊಟ್ಟಿದ್ದರು ಅದನ್ನು ಸೇದಿ ನನಗೆ ಮೈಗ್ರೇನ್ ಬಂದಿತ್ತು. ಈ ವಿಚಾರವನ್ನು ತ್ರಿವಿಕ್ರಮ್ ಜೊತೆ ಚರ್ಚೆ ಮಾಡಿದೆ ಆಗ ತುಂಬಾ ಯೋಚನೆ ಮಾಡಿದೆವು. ತುಂಬಾ ಹುಡುಕಿದ ನಂತರ ನನಗೆ ಈ ಆಯುರ್ವೇಧ ಬೀಡ ತಂದುಕೊಟ್ಟರು, ನನಗೂ ಇಷ್ಟ ಆಯ್ತು. ಲವಂಗ ಬಳಸಿ ಮಾಡಿರುವ ಈ ಬೀಡಿಯಲ್ಲಿ ಮಿಂಟ್ ಫ್ಲೇವರ್ ಇದೆ. ಒಂದು ಚೂರು ಟೊಬ್ಯಾಕೋ ಅಂಶ ಇಲ್ಲ' ಎಂದು ಮಹೇಶ್ ಬಾಬು ಹೇಳಿದ್ದಾರೆ.

Tap to resize

Latest Videos

ಚಾಕೊಲೇಟ್ ತಿನ್ಬಾರ್ದು, ಡಿಫರೆಂಟ್ ಸಲಾಡ್‌ಗಳೇ ಊಟ: ಬ್ಯೂಟಿ ಆಂಡ್ ಡಯಟ್ ಸೀಕ್ರೆಟ್‌ ಬಿಚ್ಚಿಟ್ಟ ನಟಿ ಲಕ್ಷ್ಮಿ

ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್‌ ನಿರ್ಮಾಣ ಮಾಡಿರುವ ಗುಂಟೂರು ಖಾರಂ ಸಿನಿಮಾ ಪಕ್ಕಾ ಲವ್ ಸ್ಟೋರಿ ಹೇಳುತ್ತದೆ. ಮಕರ ಸಂಕ್ರಾಂತಿ ಹಬ್ಬದ ದಿನ ಗುಂಟೂರು ಖಾರಂ ಸಿನಿಮಾದ ಯಶಸ್ಸಿನ ಪಾರ್ಟಿಯನ್ನು ಮಹೇಶ್ ಬಾಬು ಆಯೋಜಿಸಿದ್ದರು. ನಮ್ರತಾ ಶಿರೋಡ್ಕರ್, ಶ್ರೀಲೀಲಾ, ಮೀನಾ ಚೌಧರಿ, ದಿಲಿ ರಾಜು ಮತ್ತು ವಂಶಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. 

ನಿನಗಾ ಇಬ್ರು ಮಕ್ಕಳು?; ನಟ ದರ್ಶನ್ ರಿಯಾಕ್ಷನ್ ರಿವೀಲ್ ಮಾಡಿದ ಅಮೂಲ್ಯ

ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆಯಿತ್ತು. ಕಾರ್ಯಕ್ರಮದಲ್ಲಿ ಶ್ರೀಲೀಲಾ ಹಸಿರು ಬಣ್ಣ ಡಿಸೈನರ್ ಸೀರೆ ಧರಿಸಿದ್ದರು. ಬರೋಬ್ಬರಿ 2 ಲಕ್ಷ ಬೆಲೆಯ ಈ ಸೀರೆಯನ್ನು ಶ್ರೀಲೀಲಾ ಧರಿಸಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಗುಂಟೂರು ಖಾರಂ ಚಿತ್ರಕ್ಕೆ ಟಫ್ ಫೈಟ್ ಕೊಡುತ್ತಿರುವುದು ಹನುಮಾನ್ ಸಿನಿಮಾ. ಕೇವಲ 6 ದಿನಗಳಲ್ಲಿ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. 

click me!