ಪಂಚ್‌ ಡೈಲಾಗ್ ಹೊಡೆದು 1000 ಕೋಟಿಯ ಸಿನ್ಮಾ ಮಾಡಿದ್ದ ನಟ; ಈಗ ಮರೆವಿನ ಕಾಯಿಲೆಯಿಂದ ಮಾತೇ ಬರಲ್ಲ!

Published : Jan 17, 2024, 02:17 PM ISTUpdated : Jan 17, 2024, 02:31 PM IST
ಪಂಚ್‌ ಡೈಲಾಗ್ ಹೊಡೆದು 1000 ಕೋಟಿಯ ಸಿನ್ಮಾ ಮಾಡಿದ್ದ ನಟ; ಈಗ ಮರೆವಿನ ಕಾಯಿಲೆಯಿಂದ ಮಾತೇ ಬರಲ್ಲ!

ಸಾರಾಂಶ

ಸಿನಿಮಾರಂಗದಲ್ಲಿ ಯಾವುದೂ ಶಾಶ್ವತ ಅಲ್ಲ. ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಮಾಡಿ, ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದ ಈ ನಟ ಈಗ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಸರಿದಿದ್ದಾರೆ. ಮರೆವಿನ ಕಾಯಿಲೆಯಿಂದಾಗಿ ಕುಟುಂಬ ಸದಸ್ಯರನ್ನೇ ಮರೆತಿದ್ದಾರೆ.

ಸಿನಿಮಾರಂಗದಲ್ಲಿ ಯಾವುದೂ ಶಾಶ್ವತ ಅಲ್ಲ. ನೇಮ್‌, ಫೇಮ್ ಎಲ್ಲವೂ ಒಂದು ದಿನ ದಿಢೀರ್ ಆಗಿ ಕಣ್ಮರೆಯಾಗಿ ಬಿಡುತ್ತದೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದವರು ಸಹ ಒಂದು ದಿನ ಫ್ಲಾಪ್‌ ನಟರಾಗಿ ಬಿಡುತ್ತಾರೆ. ಕೆಲವೊಮ್ಮೆ ಅನಾರೋಗ್ಯ ಕಾಡಿ ತಾರೆಯರೇ ಒಲ್ಲದ ಮನಸ್ಸಿನಿಂದ ನಟನೆಯಿಂದ ದೂರ ಹೋಗಬೇಕಾಗಿ ಬರುತ್ತದೆ. ಇವರೂ ಅಂಥಾ ನಟರಲ್ಲಿ ಒಬ್ಬರು. ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಸೂಪರ್‌ಸ್ಟಾರ್‌, ಅನಾರೋಗ್ಯದಿಂದಾಗಿ ನಟನೆಯಿಂದ ದೂರವಾಗಬೇಕಾಯಿತು. ಆ ನಟ ಮತ್ಯಾರೂ ಅಲ್ಲ, ಬ್ರೂಸ್ ವಿಲ್ಲೀಸ್.

ಕೆಲವು ವರ್ಷಗಳ ಹಿಂದೆ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟರಾಗಿದ್ದವರು. ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೋಡಿ, ಕೋಟ್ಯಾಂತರ ಅಭಿಮಾನಿಗಳ (Fans) ಮನಸ್ಸು ಗೆದ್ದವರು. ಸಿನಿ ಕೆರಿಯರ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದರೂ ಸಹ ಇದ್ದಕ್ಕಿದ್ದಂತೆ ಚಲನಚಿತ್ರಗಳನ್ನು ತ್ಯಜಿಸಿದರು. ಈಗ ಆರೋಗ್ಯದ ಸಮಸ್ಯೆ (Health problem)ಯಿಂದ ಬಳಲ್ತಿದ್ದು ಮಾಜಿ ನಟನೆಂದು ಕರೆಸಿಕೊಳ್ಳುತ್ತಿದ್ದಾರೆ.

ತನಗಿಂತ 26 ವರ್ಷದ ಹಿರಿಯ ನಿರ್ಮಾಪಕನನ್ನು ಮದುವೆಯಾಗಿ 17ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಸೂಪರ್‌ ಸ್ಟಾರ್‌ ನಟಿ!

ಮರೆವಿನ ರೋಗದಿಂದ ನಟನೆಯನ್ನು ತೊರೆದ ಸೂಪರ್‌ಸ್ಟಾರ್ 
ಬ್ರೂಸ್ ವಿಲ್ಲೀಸ್ ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಆಕ್ಷನ್ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದರು. 1985ರಲ್ಲಿ ಮೂನ್‌ಲೈಟಿಂಗ್ ಎಂಬ ಹಾಸ್ಯ ನಾಟಕ ಪ್ರದರ್ಶನದಲ್ಲಿ ಪ್ರಮುಖ ಪಾತ್ರವನ್ನು ಮಾಡಿದರು. 1988 ರಲ್ಲಿ ಬಿಡುಗಡೆಯಾದ ಆಕ್ಷನ್ ಕ್ಲಾಸಿಕ್ ಡೈ ಹಾರ್ಡ್‌ನೊಂದಿಗೆ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದರು. ಮುಂದಿನ ಎರಡು ದಶಕಗಳಲ್ಲಿ, ಪಲ್ಪ್ ಫಿಕ್ಷನ್, ಆರ್ಮಗೆಡನ್, ದಿ ಸಿಕ್ಸ್ತ್ ಸೇರಿದಂತೆ ಹಲವಾರು ಹಿಟ್‌ಗಳನ್ನು ನೀಡಿದರು. ಸೆನ್ಸ್, ಸಿನ್ ಸಿಟಿ, ರೆಡ್ ಮತ್ತು ಇನ್ನೂ ಅನೇಕ ಸಿನಿಮಾಗಳು ಬ್ಲಾಕ್‌ಬಸ್ಟರ್ ಆದವು. ಎರಡು ಮೆಗಾ ಫ್ರಾಂಚೈಸಿಗಳ ಭಾಗವಾಗಿದ್ದರು - ಡೈ ಹಾರ್ಡ್ ಮತ್ತು ದಿ ಎಕ್ಸ್‌ಪೆಂಡಬಲ್ಸ್, ಇವೆರಡೂ ಡಾಲರ್‌ಗಳಿಂದ ರೂಪಾಯಿಗೆ ಪರಿವರ್ತಿಸಿದಾಗ 1000 ಕೋಟಿ ರೂ ಮೌಲ್ಯವನ್ನು ಪಡೆಯುತ್ತದೆ. ಆದರೆ, 2022ರಲ್ಲಿ, ವಿಲ್ಲೀಸ್ ನಟನೆಯಿಂದ ನಿವೃತ್ತಿ ಘೋಷಿಸಿದರು.

ಬ್ರೂಸ್ ವಿಲ್ಲೀಸ್ ಅನಾರೋಗ್ಯ
ನಟನಿಗೆ ಅಫೇಸಿಯಾ ರೋಗ ಇರುವುದು ಟೆಸ್ಟ್‌ನಿಂದ ತಿಳಿದುಬಂತು. ಇದು ಭಾಷೆಯ ಅಭಿವ್ಯಕ್ತಿ ಮತ್ತು ಗ್ರಹಿಕೆಯ ಮೇಲೆ ಪರಿಣಾಮ ಬೀರುವ ಮೆದುಳಿನ ಅಸ್ವಸ್ಥತೆಯಾಗಿದೆ. 2023ರಲ್ಲಿ, ಬ್ರೂಸ್ ಕುಟುಂಬವು ಆರೋಗ್ಯ ಸ್ಥಿತಿಯು ಉತ್ತಮವಾಗಿದೆ ಎಂದು ಘೋಷಿಸಿತು. ಸದ್ಯ. ಬ್ರೂಸ್‌, ಫ್ರಂಟೊಟೆಂಪೊರಲ್ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ. ಇದು ನೆನಪುಗಳು ಮತ್ತು ಗ್ರಹಿಕೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದೆ. ಇದರಿಂದ ಘಟನೆಗಳನ್ನು, ವ್ಯಕ್ತಿಯನ್ನು ನೆನಪಿಡಲು ಸಾಧ್ಯವಾಗುವುದಿಲ್ಲ.

ಬಡತನಕ್ಕೆ ದೂಡಿದ ಅಪ್ಪನ ಸಾವು, ಹಿಂದೂ ಧರ್ಮ ತೊರೆದು ಮುಸ್ಲಿಂ ಆದ ಸ್ಟಾರ್‌ , ಈಗ 1748 ಕೋಟಿ ರೂ ಆಸ್ತಿ ಒಡೆಯ!

68 ವರ್ಷದ ಬ್ರೂಸ್ ವಿಲ್ಲೀಸ್ ಈಗ ಕ್ಯಾಲಿಫೋರ್ನಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಪತ್ನಿ ಎಮ್ಮಾ ಹೆಮಿಂಗ್ ವಿಲ್ಲಿಸ್ ಮತ್ತು ಮಗಳು ಸ್ಕೌಟ್, ಸಾಮಾಜಿಕ ಮಾಧ್ಯಮದಲ್ಲಿ ಮಾಜಿ ನಟನ ಚಿತ್ರಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?