ಐಶ್ವರ್ಯಾ ರೈ ಅವರ ಕಾರಣಕ್ಕೆ ಶ್ರೀಮಾ ರೈ ಮುನ್ನೆಲೆಗೆ ಬಂದಿದ್ದಾರೆ ಫೇಮಸ್ ಆಗಿದ್ದಾರೆ ಎಂಬ ನೆಟ್ಟಿಗರ ಆರೋಪಕ್ಕೆ ಕೆಂಡವಾಗಿರುವ ಶ್ರೀಮಾ ರೈ ಅವರು ಜನರ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲೇ ತಿರುಗೇಟು ನೀಡಿದ್ದಾರೆ.
ಐಶ್ವರ್ಯಾ ರೈ ಹಾಗೂ ಅವರ ನಾದಿನಿ ಶ್ವೇತಾ ಬಚ್ಚನ್ ನಡುವಣ ಸಂಬಂಧ ಹಳಸಿರುವುದು ಹಳೆ ಸುದ್ದಿ ಆದರೆ ಈಗ ಅಣ್ಣ ಆದಿತ್ಯ ರೈ ಹೆಂಡ್ತಿ ಶ್ರೀಮಾ ರೈಯವರ ಜೊತೆಗೂ ನಟಿಯ ಸಂಬಂಧ ಹಳಸಿದೆಯೇ ಎಂಬ ಊಹಾಪೋಹಾ ಹಬ್ಬಿದೆ. ಅಲ್ಲದೇ ಐಶ್ವರ್ಯಾ ರೈ ಅವರ ಕಾರಣಕ್ಕೆ ಶ್ರೀಮಾ ರೈ ಮುನ್ನೆಲೆಗೆ ಬಂದಿದ್ದಾರೆ ಫೇಮಸ್ ಆಗಿದ್ದಾರೆ ಎಂಬ ನೆಟ್ಟಿಗರ ಆರೋಪಕ್ಕೆ ಕೆಂಡವಾಗಿರುವ ಶ್ರೀಮಾ ರೈ ಅವರು ಜನರ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲೇ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಶ್ರೀಮಾ ರೈ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು, ಅವರ ಹುಟ್ಟುಹಬ್ಬಕ್ಕೆ ಐಶ್ವರ್ಯಾ ನಾದಿನಿ ಶ್ವೇತಾ ಬಚ್ಚನ್ ಅವರು ಹೂ ಬೊಕ್ಕೆ ಕಳುಹಿಸಿಕೊಟ್ಟಿದ್ದು, ಇದನ್ನು ಶ್ರೀಮಾ ರೈ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಧನ್ಯವಾದ ತಿಳಿಸಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಶ್ರೀಮಾ ರೈ ಆ ಪೋಸ್ಟ್ ಡಿಲೀಟ್ ಮಾಡಿದ್ದರು. ಇದು ನೆಟ್ಟಿಗರಲ್ಲಿ ಹಲವು ಸಂಶಯಗಳಿಗೆ ಕಾರಣವಾಗಿದ್ದು, ನಟಿ ಐಶ್ವರ್ಯಾ ರೈ ವಿರುದ್ಧ ಶ್ವೇತಾ ಬಚ್ಚನ್ ಹಾಗೂ ಶ್ರೀಮಾ ರೈ ಮಸಲತ್ತು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದರು. ಐಶ್ವರ್ಯಾ ರೈ ಅವರಿಂದಲೇ ಶ್ರೀಮಾ ರೈ ಫೇಮಸ್ ಆದರು. ಆದರೆ ಅವರು ಐಶ್ವರ್ಯಾ ರೈ ಜೊತೆಗಿರುವ ಯಾವುದೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಿಲ್ಲ ಎಂದು ಜನ ಆರೋಪಿಸಿದ್ದರು. ಇದು ಶ್ರೀಮಾ ರೈ ಅವರನ್ನು ಸಿಟ್ಟಿಗೇಳುವಂತೆ ಮಾಡಿದ್ದು, ಎಲ್ಲರ ಆರೋಪಕ್ಕೆ ಅವರು ಪ್ರತಿಕ್ರಿಯೆ ನಿಡಿದ್ದಾರೆ.
ಕೆಲವು ನಿಜ ವಿಚಾರಗಳು ಎಂದು ಬರೆದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ನನ್ನ ಹುಟ್ಟಿದ ಹಬ್ಬ ನವಂಬರ್ 21ರಂದು ಇತ್ತು. ಮಾಮೂಲಿನಂತೆ ನನಗೆ ಹೂವಿನ ಬೊಕ್ಕೆಗಳು ಬಂದವು, ನನ್ನ ಬರ್ತ್‌ಡೇಗೆ ಶುಭ ಹಾರೈಸಿದ ಎಲ್ಲರಿಗೂ ನಾನು ಧನ್ಯವಾದ ತಿಳಿಸಿದೆ. ನಾನು ಬ್ಲಾಗರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗುವುದಕ್ಕೂ ಮೊದಲು ಹಲವು ವರ್ಷಗಳ ಕಾಲ ಸಂಪತ್ತು ನಿರ್ವಹಣೆಯ ವಿಭಾಗದಲ್ಲಿ ಬ್ಯಾಂಕರ್ ಆಗಿ ಕೆಲಸ ಮಾಡಿದ್ದೇನೆ. ಇದರ ಜೊತೆಗೆ ನಾನು 2009ರ ಗ್ಲಾಡ್ರಾಗ್ಸ್ ಮಿಸೆಸ್ ಇಂಡಿಯಾ ಗ್ಲೋಬ್ 2009 ಆಗಿದ್ದೇನೆ, 2017ರ ನಂತರ ನಾನು ಬ್ಲಾಗರ್ ಆಗಿ ಪರಿವರ್ತನೆಗೊಂಡಿದ್ದೇನೆ. ನಾನು ಯಾರದೇ ಹೆಸರಿನಲ್ಲಿ ಯಾವುದೇ ಉದ್ಯಮವನ್ನು ಆರಂಭಿಸಲು ಪ್ರಯತ್ನಿಸಿಲ್ಲ. ನಾನು ಈ ವಿಚಾರಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಏಕೆಂದರೆ ಇವೇ ಸತ್ಯ ವಿಚಾರಗಳು.
ನಾನು ಹಲವು ವರ್ಷಗಳಿಂದ ಕಂಟೆಂಟ್ ಕ್ರಿಯೇಟರ್ ಆಗಿದ್ದು ನಾನು ನನ್ನದೇ ಆದ ಸ್ವತಂತ್ರವಾದ ಕೆರಿಯರನ್ನು ಸ್ತಾಪಿಸಿದ್ದೇನೆ. ಈ ಸತ್ಯಗಳನ್ನು ಕಿತ್ತು ಹಾಕಲು ಬಯಸುವ ಯಾರಿಗೆ ಆದರೂ ನಾನು ಅವರ ಕೆಟ್ಟ ಮನಸ್ಥಿತಿ ಎಂದು ತಿಳಿದುಕೊಳ್ಳುವೆ. ನಾನು ತಿಳಿಸಿವರುವ ಈ ವಿಚಾರಗಳಿಗೆ ನನ್ನ ಪತಿ ಅತ್ತೆ ಹಾಗೂ ಪೋಷಕರು ಭರವಸೆ ನೀಡಬಹುದು. ನನ್ನ ಹೆಸರು ಉಲ್ಲೇಖಗೊಂಡಿರುವ ವಿಚಾರಗಳಿಗೆ ಸ್ಪಷ್ಟನೆ ನೀಡಬೇಕಾಗಿರುವುದು ಓರ್ವ ತಾಯಿಯಾಗಿ ನನಗೆ ತುಂಬಾ ಮಹತ್ವದ್ದು, ಎಂದು ಶ್ರೀಮಾ ರೈ ಅವರು ಹೇಳಿದ್ದಾರೆ.
ಐಶ್ವರ್ಯಾ ರೈ ಜೊತೆ ಶ್ರೀಮಾ ರೈ ಅವರು ಹೊಂದಿರುವ ಅನುಬಂಧದ ಬಗೆಗಿನ ಊಹಾಪೋಹದ ಬಗ್ಗೆ ಶ್ರೀಮಾ ರೈ ಅವರು ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ನೆಟ್ಟಿಗರೊಬ್ಬರು ಶ್ರೀಮಾ ರೈಯವರು ಐಶ್ವರ್ಯಾ ರೈ ಹಾಗೂ ಆರಾಧ್ಯ ಅವರಿರುವ ಒಂದೇ ಒಂದು ಫೋಟೋವನ್ನು ಸೋಶೀಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಮಾ ರೈ, ನೀವು ಯಾಕೆ ಐಶ್ವರ್ಯಾ ರೈ ಅವರ ಪೇಜ್‌ಗೆ ಹೋಗಿ ಅಲ್ಲಿ ಆಕೆಯ ಹೊರತಾಗಿ ನಮ್ಮ ಯಾವುದೇ ಫೋಟೊಗಳು ಇಲ್ಲ ಎಂಬುದನ್ನು ಗುರುತಿಸುವುದಿಲ್ಲ ಎಂದು ಪ್ರಶ್ನಿಸಿದ್ದರು.
ಜೊತೆಗೆ ಅತ್ತೆ ಬೃಂದಾ ರೈ ಅವರ ಫೋಟೋಗಳನ್ನು ಕೂಡ ನೀವು ಷೇರ್ ಮಾಡುತ್ತಿಲ್ಲ ಎಂಬ ಕೆಲವರ ಆರೋಪಕ್ಕೂ ಶ್ರೀಮಾ ರೈ ಪ್ರತಿಕ್ರಿಯಿಸಿದ್ದು, ಏಕೆ ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋಗಳನ್ನು ಪೋಸ್ಟ್ ಮಾಡುತ್ತಿರಲಿಲ್ಲ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನಗೆ ಪ್ರೀತಿ ಹಾಗೂ ಬೆಂಬಲ ನೀಡಿದ್ದಕ್ಕೆ ಹಾಗೂ ನಾನು ಹೊರಗೆ ಹೋದಾಗ ನನ್ನ ಮಕ್ಕಳ ಆರೈಕೆ ಮಾಡಿದ್ದಕ್ಕೆ ನನ್ನ ಅತ್ತೆಗೆ ದೊಡ್ಡ ಸೆಲ್ಯೂಟ್, ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಕಾರಣಕ್ಕೆ ನಾನು ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರಲಿಲ್ಲ, ಏಕೆಂದರೆ ಅವರು ಅಷ್ಟೊಂದು ಸುಂದರವಾಗಿ ಕಾಣಿಸುತ್ತಿರಲಿಲ್ಲ, ಹಾಗೂ ಆ ಸಂದರ್ಭದಲ್ಲಿ ಅವರು ಖಾಸಗಿತನ ಬಯಸಿದ್ದ ಕಾರಣಕ್ಕೆ ತಾನು ಯಾವುದೇ ಫೋಟೋಗಳನ್ನು ಪೋಸ್ಟ್ ಮಾಡುತ್ತಿರಲಿಲ್ಲ ಎಂದು ಶ್ರೀಮಾ ರೈ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ರೂಮರ್ ಬೆನ್ನಲ್ಲೇ ಅತ್ತಿಗೆ ಶ್ರೀಮಾ ರೈಗೆ ಬೊಕ್ಕೆ ಕಳಿಸಿದ ಶ್ವೇತಾ ಬಚ್ಚನ್!
ಇದನ್ನೂ ಓದಿ: ಐಶ್ವರ್ಯ ಅತ್ತಿಗೆ ಶ್ರೀಮಾ ಸೌಂದರ್ಯದಲ್ಲಿ ಅತ್ತಿಗೆಗಿಂತ ಕಡಿಮೆಯಿಲ್ಲ!