ಬಾಲಿವುಡ್ ಬೆಡಗಿ ಮಲೈಕಾ ಅರೋರಾ, ಅರ್ಜುನ್ ಕಪೂರ್ ಜೊತೆ ಬ್ರೇಕ್ ಅಪ್ ಆದ್ಮೇಲೆ ಮತ್ತೆ ಬ್ಯುಸಿಯಾಗಿದ್ದಾರೆ. ಹಣ ಸಂಪಾದನೆಗೆ ಹೊಸ ದಾರಿ ಹುಡುಕಿಕೊಂಡಿರುವ ಮಲೈಕಾ ಆದಾಯದ ಮೂಲ ಯಾವುದು ಗೊತ್ತಾ?
ಬಾಲಿವುಡ್ ಸ್ಟಾರ್ ಅರ್ಜುನ್ ಕಪೂರ್ (Bollywood star Arjun Kapoor) ಜೊತೆ ಬ್ರೇಕ್ ಅಪ್ ಆದ್ಮೇಲೆ ಒಂಟಿತನ ಅನುಭವಿಸಿದ್ದ ಮಲೈಕಾ ಅರೋರಾ (Malaika Arora) ಈಗ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮಲೈಕಾ ಅರೋರಾ ಹೊಸ ಬ್ಯುಸಿನೆಸ್ (Business) ಗೆ ಕೈ ಹಾಕಿದ್ದಾರೆ. ತಮ್ಮ ಮಗ ಅರ್ಹಾನ್ ಖಾನ್ ಜೊತೆ ಮಲೈಕಾ ಹೊಸ ರೆಸ್ಟೋರೆಂಟ್ (restaurant) ಓಪನ್ ಮಾಡ್ತಿದ್ದಾರೆ. ಈಗಾಗಲೇ ರೆಸ್ಟೋರೆಂಟ್ ಕೆಲಸವೆಲ್ಲ ಪೂರ್ಣಗೊಂಡಿದ್ದು, ಅದ್ರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮಲೈಕಾ ಅರೋರಾ, ಹೊಸ ರೆಸ್ಟೋರೆಂಟ್ ಈಗಾಗಲೇ ಸೆಲೆಬ್ರಿಟಿಗಳಿಗೆ ಪ್ರಸಿದ್ಧ ಸ್ಥಳವಾಗಿದೆ. ಮಲೈಕಾ ಮತ್ತು ಮಗ ಅರ್ಹಾನ್ ತಮ್ಮ ಹೊಸ ರೆಸ್ಟೋರೆಂಟ್ ಗೆ ಸ್ಕಾರ್ಲೆಟ್ ಹೌಸ್ (Scarlet House) ಎಂದು ಹೆಸರಿಟ್ಟಿದ್ದಾರೆ. 90 ವರ್ಷ ಹಳೆಯದಾದ ಪೋರ್ಚುಗೀಸ್ ವಿಂಟೇಜ್ ಬಂಗಲೆಯನ್ನು ನವೀಕರಣ ಮಾಡಿ, ಸುಂದರವಾದ ಹ್ಯಾಂಗ್ಔಟ್ ಸ್ಥಳವಾಗಿ ಮಾರ್ಪಡಿಸಲಾಗಿದೆ. ಡಿಸೆಂಬರ್ 3 ರಿಂದ ಸಾರ್ವಜನಿಕರಿಗೆ ರೆಸ್ಟೋರೆಂಟ್ ತೆರೆಯಲಿದೆ. ಐಷಾರಾಮಿ ಕೆಫೆಯ ಒಳಾಂಗಣ ಆಕರ್ಷಕವಾಗಿದೆ. ರೆಸ್ಟೋರೆಂಟ್ ಓಪನ್ ಆಗುವ ಮುನ್ನವೇ ಈ ರೆಸ್ಟೋರೆಂಟ್ ಗೆ ಸೋಹೈಲ್ ಖಾನ್ ಅವರ ಮಗ ನಿರ್ವಾನ್, ಅಮೃತಾ ಅರೋರಾ ಮತ್ತು ಇತರ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಆರ್ಕಿಟೆಕ್ಚರಲ್ ಡೈಜೆಸ್ಟ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಫೆಯ ಒಳಾಂಗಣ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ತಾಂಡವ್ ಸತ್ಯ ಬಿಚ್ಚಿಟ್ಟ ಭಾಗ್ಯ! ನಿರ್ದೇಶಕರಿಗೆ ಕಥೆ ಹೆಣೆದುಕೊಡ್ತಿದ್ದಾರೆ ಫ್ಯಾನ್ಸ್
ವಾಲ್‌ಪೇಪರ್, ಐಷಾರಾಮಿ ಪೀಠೋಪಕರಣಗಳು, ಡಿನ್ನರ್ ವೇರ್ ಕೆಫೆಗೆ ವಿಂಟೇಜ್ ವೈಬ್ ನೀಡುತ್ತಿದೆ. ಮಲೈಕಾ ಅರೋರಾ ಮತ್ತು ಮಗ ಅರ್ಹಾನ್ ಕೂಡ ಸ್ಕಾರ್ಲೆಟ್ ಹೌಸ್ ಬಾಂಬೆಗಾಗಿ ವಿಶೇಷ ಫೋಟೋಶೂಟ್ ಕೂಡ ನಡೆದಿದೆ. ಅದ್ರಲ್ಲಿ ಮಲೈಕಾ ಹಾಗೂ ಅವರ ಮಗ ಕಪ್ಪು ಬಣ್ಣದ ಬ್ಲೇಜರ್ ಧರಿಸಿದ್ದು, ಅದರ ಮೇಲೆ ಸ್ಕಾರ್ಲೆಟ್ ಹೌಸ್ ಎಂದು ಕೆಂಪು ಬಣ್ಣದಲ್ಲಿ ಬರೆಯಲಾಗಿದೆ. 1998ರಲ್ಲಿ ಅರ್ಬಾಜ್ ಖಾನ್ ಜೊತೆ ಮದುವೆಯಾಗಿದ್ದ ಮಲೈಕಾ ಅರೋರಾ 19 ವರ್ಷಗಳ ನಂತ್ರ ವಿಚ್ಛೇದನ ಪಡೆದಿದ್ದರು. ಅದಾದ್ಮೇಲೆ ಮಲೈಕಾ ಹೆಸರು ಅರ್ಜುನ್ ಕಪೂರ್ ಜೊತೆ ಕೇಳಿ ಬಂದಿತ್ತು. ಐದು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಜೋಡಿ ಈಗ ಬೇರೆಯಾಗಿದ್ದಾರೆ.
ಮಲೈಕಾ ಹೂಡಿಕೆ – ಗಳಿಕೆ : ಚೈಯಾ-ಚೈಯಾದಿಂದ ಅನಾರ್ಕಲಿ ಡಿಸ್ಕೋ ಚಾಲಿಯಂತಹ ಐಟಂ ಸಾಂಗ್ ಮಾಡಿ ಅಭಿಮಾನಿಗಳ ಮನಸ್ಸು ಕದ್ದಿದ್ದ ಮಲೈಕಾ ಅರೋರಾ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದ್ರೀಗ ಮಲೈಕಾ ಬಾಲಿವುಡ್ನಿಂದ ದೂರವಿದ್ದಾರೆ. ಹಾಗಿದ್ದಲ್ಲಿ ಮಲೈಕಾ ಹೇಗೆ ಹಣ ಮಾಡ್ತಿದ್ದಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ಮಲೈಕಾ ಉತ್ತಮ ಡಾನ್ಸರ್ ಮಾತ್ರವಲ್ಲ ಬ್ಯುಸಿನೆಸ್ ವುಮೆನ್ ಕೂಡ ಹೌದು. ಡಾನ್ಸ್ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುವ ಅವರು ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ. ಅದ್ರ ಜೊತೆ ಯೋಗ್ಯ ಸ್ಥಳದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. 2012ರಲ್ಲಿಯೇ ಮಲೈಕಾ ದಿ ಲೇಬಲ್ ಲೈಫ್ ನಲ್ಲಿ ಹೂಡಿಕೆ ಮಾಡಿರುವ ಅವರು ದಿ ಲೇಬಲ್ ಲೈಫ್ ಬಟ್ಟೆ ಬ್ರಾಂಡ್ ನ ಸ್ಟೈಲ್ ಎಡಿಟರ್ ಕೂಡ ಹೌದು.
ಅಪ್ಪು ಫ್ಯಾನ್ಸ್‌ಗೆ ಶಿವಣ್ಣ ಖಡಕ್ ಸಂದೇಶ; ಇವರೆಗೂ ಯಾರೂ ಹೀಗೆ ಮಾಡಿರಲಿಲ್ಲ ಯಾಕೆ?
ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುವ ಮಲೈಕಾ ಇದ್ರಿಂದಲೂ ಹಣ ಸಂಪಾದನೆ ಮಾಡ್ತಿದ್ದಾರೆ. ಅವರು 2018ರಲ್ಲಿಯೇ ಯೋಗ ಕೇಂದ್ರ ದಿವಾ ಯೋಗ ಶುರು ಮಾಡಿದ್ದಾರೆ. ರೆಸ್ಟೋರೆಂಟ್‌ಗಳು, ಸೌಂದರ್ಯ ಉತ್ಪನ್ನಗಳ ಕಂಪನಿ ಮತ್ತು ಸ್ವಂತ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ ಮಲೈಕಾ. ಮಲೈಕಾ ಅರೋರಾ 2022 ರಲ್ಲಿ ಹ್ಯಾಂಡ್ ಬ್ಯಾಗ್ ಬ್ರಾಂಡ್ ಅಹಿಕೋಜಾ ನಲ್ಲಿ ಹೂಡಿಕೆ ಮಾಡಿದ್ದಾರೆ. ಉದ್ಯಮಿ ನಮ್ರತಾ ಕರಾದ್ ಅವರೊಂದಿಗೆ ಕೈಜೋಡಿಸಿದ್ದು, ಮೊದಲು ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ ಮತ್ತು ಸಿಂಗಾಪುರದಲ್ಲಿದ್ದ ಈ ಬ್ರ್ಯಾಂಡ್ ಈಗ ಭಾರತದಲ್ಲೂ ಶುರುವಾಗಿದೆ.