ಬ್ರೇಕಪ್‌ ಬಳಿಕವೂ ಮಧ್ಯರಾತ್ರಿ 3 ಗಂಟೆಗೆ... ಎನ್ನುತ್ತಲೇ ಮಿಡ್‌ನೈಟ್‌ ರಹಸ್ಯ ಬಿಚ್ಚಿಟ್ಟ ಅರ್ಜುನ್‌ ಕಪೂರ್!

By Suchethana D  |  First Published Nov 28, 2024, 4:50 PM IST

ನಟಿ ಮಲೈಕಾ ಅರೋರಾ ಜೊತೆ ಬ್ರೇಕಪ್‌ ಬಳಿಕವೂ ಮಧ್ಯರಾತ್ರಿ 3 ಗಂಟೆಗೆ... ಎನ್ನುತ್ತಲೇ ಮಿಡ್‌ನೈಟ್‌ ರಹಸ್ಯ ಬಿಚ್ಚಿಟ್ಟ ಅರ್ಜುನ್‌ ಕಪೂರ್! ಅವರು ಹೇಳಿದ್ದೇನು?
 


​  ಸದ್ಯ ಬಾಲಿವುಡ್​ನಲ್ಲಿ ಹಾಟ್​ ಟಾಪಿಕ್​ಗಳಲ್ಲಿ ಒಂದಾಗಿರುವುದು ನಟರಾದ ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ಬ್ರೇಕಪ್​ ಕುರಿತು. ದಶಕದಿಂದ ರಿಲೇಷನ್​ನಲ್ಲಿದ್ದ ಈ ನಟರು ಈಗ ಬ್ರೇಕಪ್​ ಆಗಿರುವುದು ಕನ್​ಫರ್ಮ್​ ಆಗಿದೆ. ಇದಾಗಲೇ ಅರ್ಜುನ್​ ಕಪೂರ್​ ತಾವು ಸಿಂಗಲ್​ ಎಂದು ಹೇಳಿದ್ದಾರೆ. ಹತ್ತು ವರ್ಷ ದೊಡ್ಡವಳಾಗಿರುವ ಮಲೈಕಾ ಜೊತೆ ದಶಕದವರೆಗೆ ಲಿವ್​ ಇನ್​ ರಿಲೇಷನ್​ನಲ್ಲಿದ್ದ ಅರ್ಜುನ್​ ಕೂಡ ಬ್ರೇಕಪ್​ ಬಗ್ಗೆ ಮಾತನಾಡಿದ್ದಾರೆ. ಇದಾಗಲೇ ಮಲೈಕಾ ಕೂಡ ಹಲವಾರು ರೀತಿಯಲ್ಲಿ ತಾವು ಒಂಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಇವತ್ತು ಕೂಡ ಇನ್ನೊಂದು ಪೋಸ್ಟ್‌ ಹಾಕಿ, ಯಾರು ನನ್ನನ್ನು ಇಷ್ಟಪಡುವುದಿಲ್ಲ ಎಂದು ಚಿಂತಿಸಲು ನನಗೆ ಸಮಯವಿಲ್ಲ. ನನ್ನನ್ನು ಪ್ರೀತಿಸುವ ಜನರನ್ನು ಪ್ರೀತಿಸುವುದರಲ್ಲಿ ನಾನು ತುಂಬಾ ನಿರತನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ವಯಸ್ಸು 50 ಆದ್ರೂ ಇನ್ನೂ ಮಾದಕ ನೋಟ, ಬಟ್ಟೆಗಳಿಂದ ಅಭಿಮಾನಿಗಳ ಹೃದಯ ಕದಿಯುತ್ತಿದ್ದಾರೆ ಈ ಬಾಲಿವುಡ್​ ನಟಿ. ಈ ಮೂಲಕ ಹಸಿಬಿಸಿ ಲೇಡಿ ಎಂದೇ ಫೇಮಸ್​ ಆಗಿದ್ದಾರೆ.  ಅರ್ಜುನ್​ ಕಪೂರ್​ ಡೇಟಿಂಗ್, ಬ್ರೇಕಪ್​ ವಿಷಯ ಸದಾ ಹಾಟ್​ ಟಾಪಿಕ್​ ಆಗಿಯೇ ಇರುತ್ತದೆ. 

ಇದಾದ ಬಳಿಕ ಇದೀಗ ಅರ್ಜುನ್‌ ಕಪೂರ್‍‌ ಬೇರೆಯವರ ಜೊತೆ, ಮಲೈಕಾ ಇನ್ನೊಬ್ಬರ ಜೊತೆ ಡೇಟಿಂಗ್‌ನಲ್ಲಿ ಇದ್ದಾರೆ ಎನ್ನುವ ಗಾಳಿಸುದ್ದಿ ಹರಿದಾಡುತ್ತಲೇ ಇದೆ. ಇದರ ನಡುವೆಯೇ, ಮಾಷಾಬ್ಲೆ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ  ಅರ್ಜುನ್ ಕಪೂರ್ ಅವರಿಗೆ, ತಡರಾತ್ರಿಯ ಸ್ನೇಹಿತರಿಗೆ ನೀವು ಯಾವುದಾದರೂ ಮಧ್ಯರಾತ್ರಿ ಮೂರು ಗಂಟೆಗೆ ಮೆಸೇಜ್ ಮಾಡಿದ್ರಾ ಎಂದು ನಿರೂಪಕಿ ಕೇಳಿದ್ದಾರೆ. ಆ ಬಳಿಕ, ಅವರು  ಪ್ರಶ್ನೆಯನ್ನು ಸ್ವಲ್ಪ ಬದಲಿಸಿ, ನೀವು ಎಂದಾದರೂ ತಡರಾತ್ರಿ ನಿಮ್ಮ ಎಕ್ಸ್‌ಗೆ  ಮೆಸೇಜ್ ಮಾಡುತ್ತಿರುವಿರಾ ಎಂದು ಪ್ರಶ್ನಿಸಿದಾಗ, ಅರ್ಜುನ್‌ ಕಪೂರ್‍‌ ಜೋರಾಗಿ ನಗುತ್ತಾ, ಈ ಗುಂಪಿನಲ್ಲಿ ಇರುವ ಯಾರೇ ಆಗ್ಲಿ ಎಕ್ಸ್‌ಗಳಿಗೆ ಮಧ್ಯರಾತ್ರಿ ಮೆಸೇಜ್‌ ಮಾಡಿಲ್ಲ ಎಂದು ಸುಳ್ಳು ಹೇಳುವ ಧೈರ್ಯ ತೋರುವಿರಾ ಎನ್ನುವ ಮೂಲಕ ಇಂದಿಗೂ ಮಧ್ಯರಾತ್ರಿ ಮೂರು ಗಂಟೆಗೆ ಮಲೈಕಾ ಅರೋರಾ ಅವರಿಗೆ ಮೆಸೇಜ್‌ ಮಾಡುತ್ತಿರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.

Tap to resize

Latest Videos

ಅಪ್ಪ ನಮ್ಮನ್ನು ಸುಟ್ಟುಹಾಕಲು ನೋಡಿದ್ದ, ಈಗೇನಾದ್ರೂ ವಾಪಸ್‌ ಬಂದ್ರೆ... ತಂದೆ ಬಗ್ಗೆ ರಿತು ಸಿಂಗ್‌ ಕಿಡಿಯ ನುಡಿ
 
ಮೊನ್ನೆಯಷ್ಟೇ ಮಲೈಕಾ ಕೂಡ ಕುತೂಹಲದ ಪೋಸ್ಟ್‌ ಶೇರ್‍‌ ಮಾಡಿದ್ದರು.  ಅದರಲ್ಲಿ ಸಿಂಗಲ್‌, ಇನ್‌ ರಿಲೇಷನ್‌ ಎನ್ನುವ ಆಯ್ಕೆ ಇದೆ. ಎರಡನ್ನೂ ಖಾಲಿ ಬಿಟ್ಟಿರುವ ನಟಿ ಮೂರನೆಯದ್ದಕ್ಕೆ ಕ್ಲಿಕ್‌ ಮಾಡಿದ್ದರು. ಅದರಲ್ಲಿ ಹ್ಹೆಹ್ಹೆಹ್ಹೆ ಎಂದು ಬರೆಯಲಾಗಿತ್ತು. ಹಾಗಿದ್ರೆ ನಟಿ ಏನು ಹೇಳಲು ಹೊರಟಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಕಪೂರ್‍‌ ತಾವು ಇನ್ನು ಸಿಂಗಲ್‌ ಎಂದು ಹೇಳಿಕೊಂಡ ಬಳಿಕ ನಟಿ ವ್ಯಂಗ್ಯವಾಡುವ ರೀತಿಯಲ್ಲಿ ಇದನ್ನು ಬರೆದುಕೊಂಡಿರುವುದು ಅಭಿಮಾನಿಗಳ ತಲೆಯನ್ನು ಮತ್ತಷ್ಟು ಬಿಸಿ ಮಾಡಿದೆ. ಅಂದರೆ ಇಬ್ಬರೂ ಇನ್ನೂ ಟಚ್‌ನಲ್ಲಿ ಇದ್ದಾರಾ, ಈಗ ನೋಡಿದ್ರೆ ಅರ್ಜುನ್‌ ಕಪೂರ್‍‌ ಹೀಗೆ ಹೇಳ್ತಾ ಇದ್ದಾರೆ ಎಂದೆಲ್ಲಾ ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. 

ಅಷ್ಟಕ್ಕೂ, ಇವರ ಬ್ರೇಕಪ್​ ವಿಷಯ ಹಿಂದೆಯೂ ಈ ವಿಷಯ ಸಾಕಷ್ಟು ಸದ್ದು ಮಾಡಿತ್ತು. ನಂತರ ಇಬ್ಬರೂ ಒಟ್ಟಾಗಿ ಓಡಾಡಿದ್ದರು.  ಬಳಿಕ ಒಂದಾದ ಮೇಲೊಂದು ಇನ್‌ಸ್ಟಾ ಪೋಸ್ಟ್‌ ಹಾಕುವ ನಟಿ, ತಾವು ಒಂಟಿ ಒಂಟಿ ಎಂದು  ಒತ್ತಿ ಒತ್ತಿ ಹೇಳುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ಕೆಲವು ದಿನಗಳ ಹಿಂದೆ ಟಿ-ಷರ್ಟ್​ ಮೇಲೆಯೂ ಅದೇ ಅರ್ಥ ಕೊಡುವ ಬರಹ ಬರೆದುಕೊಂಡಿದ್ದರು. ನಾನೀಗ ಬೋರಿಂಗ್​ ಬೇಬಿ. ದುಡ್ಡು ಮಾಡುವುದು, ಮನೆಗೆ ಬರುವುದು ಅಷ್ಟೇ ಕೆಲಸ ಎಂದಿದ್ದರು. ಇದಾಗಲೇ ಡ್ರಿಂಕ್ಸ್ ಕೂಡ ಮಾಡುವುದಿಲ್ಲ ಎಂದು ನಟಿ ಶಪಥ ಮಾಡಿದ್ದರು. ಆದರೆ ಈ ಟಿ-ಷರ್ಟ್​ ಮೇಲೆ ಬರೆದುಕೊಂಡಿರುವುದು ಸಕತ್​ ವೈರಲ್​ ಜೊತೆ ಟ್ರೋಲ್​ ಕೂಡ ಆಗುತ್ತಿದೆ. ಹತ್ತು ವರ್ಷ ಚಿಕ್ಕವನಾದ ಮೇಲೆ ಈಗ ಇನ್ನೆಷ್ಟು ವರ್ಷ ಚಿಕ್ಕವನನ್ನು ಹುಡುಕುತ್ತಿರುವೆ ಎಂದು ಪ್ರಶ್ನಿಸುತ್ತಿದ್ದಾರೆ. ಬೋರ್​ ಆದರೆ, ಅದನ್ನು ಹೀಗೆಲ್ಲಾ ತೋರಿಸಿಕೊಳ್ಳಬೇಕಾ? ಇದೇನು ಮೂರನೆಯದ್ದಕ್ಕೆ ಆಫರ್​ ಕೊಡ್ತಿದ್ಯಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.

ಚಿತಾಭಸ್ಮದಲ್ಲಿ ಗಾಂಜಾ ಬೆಳೆದು, ದಮ್ಮೆಳೆದ ಮಗಳು: ಅಪ್ಪನ ಅಂತಿಮ ಆಸೆಯಂತೆ! ಶಾಕಿಂಗ್‌ ವಿಡಿಯೋ ವೈರಲ್‌

click me!