Bollywood : ಶೋಲೆ ಚಿತ್ರದಲ್ಲಿ ಯಾರಿಗೆ ಸಿಕ್ಕಿತ್ತು ಹೆಚ್ಚು ಸಂಭಾವನೆ? ಗೆಸ್ ಮಾಡಿ!

By Roopa Hegde  |  First Published Jun 22, 2024, 1:37 PM IST

ಶೋಲೆ ಹೆಸರು ಹೇಳ್ತಿದ್ದಂತೆ ಧರ್ಮೇಂದ್ರ, ಅಮಿತಾಬ್ ಜೊತೆ ಹೇಮಾ ಮಾಲಿನಿ ನೆನಪಾಗ್ತಾರೆ. ಒಂದಿಷ್ಟು ಸೂಪರ್ ಹಿಟ್ ಡೈಲಾಗ್ ಗಳು ಈಗ್ಲೂ ಹರಿದಾಡ್ತಿರುತ್ತವೆ. ಚಿತ್ರ ಹಳೆಯದಾದ್ರೂ ತನ್ನ ಛಾಪನ್ನು ಉಳಿಸಿಕೊಂಡಿರುವ ಈ ಸಿನಿಮಾ ನಟರಿಗೆ ಆಗ ಸಿಕ್ಕ ಸಂಬಳ ಎಷ್ಟು ಗೊತ್ತಾ? 
 


ಬಸಂತಿ, ಇನ್ ಕುತ್ತೋ ಕೆ ಸಮ್ನೆ ಮತ್ ನಾಚ್.. ಕಿತ್ನೆ ಆದ್ಮಿ ತೆ…ಈ ಡೈಲಾಗ್ ಗಳನ್ನು ನಾವು ಈಗ್ಲೂ ಕೇಳ್ತಿರ್ತೇವೆ. ಈ ಡೈಲಾಗ್ ಕೇಳ್ತಿದ್ದಂತೆ ನಮಗೆ ನೆನಪಾಗೋದು ಶೋಲೆ ಚಿತ್ರ. ಬಾಲಿವುಡ್ ನ ಸೂಪರ್ ಹಿಟ್ ಚಿತ್ರಗಳ ಪಟ್ಟಿಯಲ್ಲಿ ಮೊದಲು ಕಾಣಿಸೋದು ಶೋಲೆ. ಚಿತ್ರ ಆಗಸ್ಟ್ 15, 1975ರಲ್ಲಿ ತೆರೆಗೆ ಬಂದಿತ್ತು. ಚಿತ್ರ ಬಿಡುಗಡೆಯಾಗಿ 48 ವರ್ಷ ಕಳೆದಿದ್ರೂ ಈಗ್ಲೂ ಚಿತ್ರದ ಡೈಲಾಗ್, ಹಾಡುಗಳು ಜನರನ್ನು ಸೆಳೆಯುತ್ತವೆ. ಶೋಲೆ ಚಿತ್ರ ನೋಡಲು ಆಸಕ್ತಿ ತೋರುವ ಜನರ ಸಂಖ್ಯೆ ಸಾಕಷ್ಟಿದೆ. ಸಿನಿಮಾದ ಜೈ- ವೀರು ಜೋಡಿ ಹೆಚ್ಚು ಪ್ರಸಿದ್ಧಿ ಪಡೆದಿದ್ರೆ, ಬಸಂತಿ ಎಲ್ಲರ ನಿದ್ರೆ ಕದ್ದಿದ್ದರು. 

ಬಾಲಿವುಡ್ (Bollywood) ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಚಿತ್ರಗಳಲ್ಲಿ ನಟಿಸುವ ಕಲಾವಿದರ ಸಂಭಾವನೆ ಈಗ ಕೋಟಿಯಲ್ಲಿದೆ. ಆದ್ರೆ ಶೋಲೆ (Sholay) ಚಿತ್ರದ ಸಮಯದಲ್ಲಿ ಚಿತ್ರದ ಬಂಡವಾಳವೆ ಕಡಿಮೆ ಇರ್ತಿತ್ತು. ಇನ್ನು ಕಲಾವಿದರು ಕೂಟ ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರಲಿಲ್ಲ. ನಾವಿಂದು ಶೋಲೆ ಚಿತ್ರದ ಕಲಾವಿದರಿಗೆ ಎಷ್ಟು ಸಂಬಳ ಸಿಕ್ಕಿತ್ತು, ಯಾರು ಹೆಚ್ಚು ಸಂಭಾವನೆ ಪಡೆದಿದ್ರು ಅಂತಾ ಹೇಳ್ತೇವೆ. 

Tap to resize

Latest Videos

'ಯಾರು ಕಂಗನಾ' ಎಂದ ನಟ ಅಣ್ಣು ಕಪೂರ್‌ಗೆ ನಟಿಯ 'ಪವರ್‌ಫುಲ್' ಪ್ರತಿಕ್ರಿಯೆ

ಶೋಲೆ ಚಿತ್ರದಲ್ಲಿ ಅತಿ ಹೆಚ್ಚು ಸಂಬಳ (Salary) ಪಡೆದಿದ್ದು ಈ ನಟ : ಶೋಲೆ ಸಿನಿಮಾದಲ್ಲಿ ಧರ್ಮೇಂದ್ರ, ಮ್ಯಾಕ್ ಮೋಹನ್, ಹೇಮಾ ಮಾಲಿನಿ, ಜಯಾ ಭಾದುರಿ, ಅಮಿತಾಬ್ ಬಚ್ಚನ್, ಸಂಜೀವ್ ಕುಮಾರ್ ಅಮ್ಜದ್ ಖಾನ್, ಅಸ್ರಾನಿ ಸೇರಿದಂತೆ ಅನೇಕ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಒಂದು ಲಕ್ಷ ಸಂಬಳ ನೀಡೋದೇ ದೊಡ್ಡ ವಿಷ್ಯವಾಗಿತ್ತು. ಸಹ ಕಲಾವಿದರು 20ರಿಂದ 25 ಸಾವಿರ ರೂಪಾಯಿ ಶುಲ್ಕ ಪಡೆಯುತ್ತಿದ್ದರು. ಶೋಲೆ ಚಿತ್ರದಲ್ಲಿ ಅತಿ ಹೆಚ್ಚು ಸಂಬಳ ಸಿಕ್ಕಿದ್ದು ಧರ್ಮೇಂದ್ರ ಅವರಿಗೆ. ಅವರು ಈ ಚಿತ್ರಕ್ಕಾಗಿ 1 ಲಕ್ಷ 50 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು.

ಈಗ್ಲೂ ನಟನೆ ಮೂಲಕ ಇಡೀ ಚಿತ್ರರಂಗವನ್ನೇ ಆಳ್ತಿರುವ ಸೂಪರ್ ಹಿಟ್ ಹೀರೋ ಅಮಿತಾಬ್ ಬಚ್ಚನ್ ಈಗ ಒಂದು ಚಿತ್ರಕ್ಕೆ 6 ಕೋಟಿ ಸಂಭಾವನೆ ಪಡೆಯುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಒಂದು ಲಕ್ಷ ರೂಪಾಯಿ ಸಂಬಳ. ನಿಮಗೆ ಅಚ್ಚರಿ ಆಗ್ಬಹುದು ಆಗ ಅಮಿತಾಬ್ ಬಚ್ಚನ್ ಗಿಂತ ಸಂಜೀವ್ ಕುಮಾರ್  ಹೆಚ್ಚು ಸಂಬಳ ಪಡೆಯುತ್ತಿದ್ದರು. ಅವರು ಶೋಲೆ ಚಿತ್ರಕ್ಕೆ 1 ಲಕ್ಷ 25 ಸಾವಿರ ರೂಪಾಯಿ ತೆಗೆದುಕೊಂಡಿದ್ದರು.  

ಇನ್ನು ಡ್ರೀಮ್ ಗರ್ಲ್ ಎಂದೇ ಪ್ರಸಿದ್ಧಿ ಪಡೆದಿರುವ, ಬಸಂತಿ ಪಾತ್ರದಲ್ಲಿ ಮಿಂಚಿದ್ದ ಹೇಮಾ ಮಾಲಿನಿ 75 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು.  ಜಯ ಭಾದುರಿ 35 ಸಾವಿರ ತೆಗೆದುಕೊಂಡ್ರೆ, ಅಮ್ಜದ್ ಖಾನ್  50 ಲಕ್ಷ ರೂಪಾಯಿ ಹಾಗೂ ಆಸ್ರಾಣಿ 15 ಸಾವಿರ ರೂಪಾಯಿ ತೆಗೆದುಕೊಂಡಿದ್ದರು. 

ಡಾಲಿಯ 'ಕೋಟಿ' ನೋಡಿ ಖುಷ್ ಹುವಾ ಎಂದ ಮಾಜಿ ಸಂಸದ! ಧನಂಜಯ್ ನಟನೆಗೆ ಕನ್ನಡದ ವಿಜಯ್ ಸೇತುಪತಿ ಎಂದ ಸಿಂಹ

ಶೋಲೆ ಚಿತ್ರದ ಬಜೆಟ್ ಎಷ್ಟು ಗೊತ್ತಾ? : ಶೋಲೆ ಚಿತ್ರವನ್ನು ರಮೇಶ್ ಸಿಪ್ಪಿ ನಿರ್ದೇಶಿಸಿದ್ದರು. ಈ ಚಿತ್ರವನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈ ಚಿತ್ರ 25 ವಾರಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಓಡಿ, ಹಣ ದೋಚುವಲ್ಲಿ ಯಶಸ್ವಿಯಾಗಿತ್ತು. 3 ಕೋಟಿ ಚಿತ್ರ 35 ಕೋಟಿ ರೂಪಾಯಿ ಗಳಿಸಿತ್ತು.  ಈಗ ಈ ಚಿತ್ರ ನಿರ್ಮಾಣವಾಗಿದ್ರೆ ಸ್ಟಾರ್ ಗಳಿಗೆ ನೀಡುವ ಸಂಭಾವನೆಯೇ ಇದಕ್ಕಿಂತ ಹೆಚ್ಚಾಗ್ತಿತ್ತು. ದೊಡ್ಡ ದೊಡ್ಡ ನಟರ ದಂಡೇ ಇದ್ದ ಈ ಚಿತ್ರ 100 ಕೋಟಿಗಿಂತ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಲು ಸಾಧ್ಯವೇ ಇರಲಿಲ್ಲ. 

click me!