ಮಗನಿಗೆ ಸ್ಟಾರ್ ನಟನ ಹೆಸರು ಇಡಲು ಆಸೆ ಪಟ್ಟ ಖ್ಯಾತ ನಿರೂಪಕಿ ಶ್ರವಂತಿ. ಅತ್ತೆ ಮನೆಯಿಂದ ವಿರೋಧ ಬಂದಿದ್ದು ಯಾಕೆ?
ಸಾಮಾನ್ಯವಾಗಿ ಸಿನಿಮಾ ನಟ-ನಟಿಯರಿಗೆ ತಮ್ಮ ಅಭಿಮಾನಿಗಳಿಂದ ಸಿಗುವ ಪ್ರೀತಿ ಅಪಾರ.ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ, ಎದೆ ಮೇಲೆ ಹೆಸರು ಹಾಕಿಸಿಕೊಳ್ಳುತ್ತಾರೆ, ಗಾಡಿಗಳ ಮೇಲೆ ಫೋಟೋ ಹಾಕಿಸಿಕೊಳ್ಳುತ್ತಾರೆ ಅಷ್ಟೇ ಯಾಕೆ ತಮ್ಮ ರೂಮ್ ತುಂಬಾ ಅವರ ಫೋಟೋ ಅಂತಿಸಿಕೊಳ್ಳುತ್ತಾರೆ. ಈ ರೀತಿ ಸಿಗುವ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಆಗದು. ಜನ ಸಾಮಾನ್ಯರಿಗೆ ಮಾತ್ರವಲ್ಲ ಕೆಲವೊಬ್ಬರು ಪಬ್ಲಿಕ್ ಫಿಗರ್‌ಗಳಿಗೂ ಸ್ಟಾರ್ ನಟರು ಇಷ್ಟವಿರುತ್ತಾರೆ. ಅವರಲ್ಲಿ ತೆಲುಗು ನಿರೂಪಕಿ ಶ್ರಾವಂತಿ ಕೂಡ ಒಬ್ಬರು.
ಹೌದು! ಆಂಕರ್ ಶ್ರಾವಂತಿ ಮೊದಲಿನಿಂದಲೂ ಪವರ್ ಸ್ಟಾರ್ ಪವನ್ ಕಲ್ಯಾಣ ಅವರ ತುಂಬಾ ಇಷ್ಟ. ಶ್ರಾವಂತಿ ಮಾತ್ರವಲ್ಲದೆ ಆಕೆ ಪತಿ ಕೂಡ ಪವನ್ ದೊಡ್ಡ ಅಭಿಮಾನಿ. ಹೀಗೆ ಮದುವೆಯಾಗಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾಗ ಎಲ್ಲರಿಗೂ ಪ್ರೆಗ್ನೆಂಟ್ ಅನ್ನೋ ಸಿಹಿ ಸುದ್ದಿ ಕೊಡುತ್ತಾರೆ. ಆಗ ತಮಗೆ ಹುಟ್ಟುವ ಮಗುವಿಗೆ ಪವನ್ ಕಲ್ಯಾಣ್ ಎಂದು ನಾಮಕರಣ ಮಾಡಲು ನಿರ್ಧರಿಸುತ್ತಾರೆ. ಈ ವಿಚಾರವನ್ನು ತಮ್ಮ ಕುಟುಂಬಸ್ಥರ ಜೊತೆ ಚರ್ಚೆ ಕೂಡ ಮಾಡುತ್ತಾರೆ. ಆದರೆ ಅತ್ತೆ ನಿರ್ಧಾರ ಬೇರೆ ಆಗಿತ್ತು....
ದರ್ಶನ್ ಸರ್‌ನ ಅಣ್ಣನ ರೂಪದಲ್ಲಿ ಕಂಡೆ ಆದ್ರೆ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಬಿಗ್ ಬಾಸ್ ಇಶಾನಿ ಪೋಸ್ಟ್ ವೈರಲ್
ಪವನ್ ಕಲ್ಯಾಣ್ ಎಂದು ಹೆಸರು ಇಡಬೇಕು ಎಂದು ಮನೆಯಲ್ಲಿ ಚರ್ಚೆ ಮಾಡುತ್ತಿದ್ದಂತೆ ಬೇಡವೇ ಬೇಡ ಎಂದು ಅತ್ತೆ ವಿರೋಧ ವ್ಯಕ್ತ ಪಡಿಸುತ್ತಾರೆ. ಶ್ರವಂತಿ ಬೆಂಬಲಕ್ಕೆ ಪತಿ ನಿಂತರೂ ಬೇಡ ಅನ್ನೋದು ಅತ್ತೆ ಮಾತಾಗಿತ್ತು. ಜನ್ಮ ನಕ್ಷತ್ರದ ಪ್ರಕಾರ ಅ ಅಕ್ಷರದಿಂದ ಮಗುವಿಗೆ ಹೆಸರು ಇಡಬೇಕು ಎಂದು ಹೇಳಿದಾಗ ಮಗನಿಗೆ ಅಕಿರಾ ಎಂದು ನಾಮಕರಣ ಮಾಡಲಾಗಿತ್ತು ಎಂದು ಶ್ರವಂತಿ ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.
ಮಗನಿಕೆ ಅಕಿರಾ ಎಂದು ಆಯ್ಕೆ ಮಾಡಲು ಒಂದು ಕಾರಣವಿದೆ. ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಅವರ ಮಗನ ಹೆಸರು ಅಕಿರಾ ನಂದನ್. ಹೀಗಾಗಿ ತಮ್ಮ ಮಗನಿಗೂ ಅದೇ ಹೆಸರು ಆಯ್ಕೆ ಮಾಡಿದ್ದಾರೆ. ಇಲ್ಲಿ ಅತ್ತೆಗೂ ಖುಷಿ ನಮಗೂ ಖುಷಿ ಎಂದಿದ್ದಾರೆ.