ಮಧ್ಯರಾತ್ರಿಯ ಸ್ನೇಹಿತ ಯಾರು? ಯಾವ ಆಸನ ಇಷ್ಟ.... ಅಂತೆಲ್ಲಾ ಕೇಳಿದ ಪ್ರಶ್ನೆಗೆ ಶಿಲ್ಪಾ ಕೊಟ್ಟ ಉತ್ತರ ವೈರಲ್​

By Suchethana D  |  First Published Aug 6, 2024, 12:03 PM IST

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿಗೆ  ಕೆಲವೊಂದು ಫನ್ನಿ ಪ್ರಶ್ನೆಗಳನ್ನು ಕೇಳಲಾಗಿದ್ದು, ನಟಿ ಏನೆಂದು ಉತ್ತರ ಕೊಟ್ಟಿದ್ದಾರೆ ನೋಡಿ...
 


ಬಾಲಿವುಡ್​ ಬೆಡಗಿ, ಮಂಗಳೂರಿನ ಶಿಲ್ಪಾ ಶೆಟ್ಟಿ ಸದ್ಯ ಕನ್ನಡದ ಕೆಡಿ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚಿಗಷ್ಟೇ ಶೂಟಿಂಗ್​ ಮುಗಿಸಿರೋ ನಟಿ, ತಮ್ಮ 49ನೇ ವಯಸ್ಸಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಲಕ್​ ಟ್ರೈ ಮಾಡುತ್ತಿದ್ದಾರೆ ಚಿತ್ರೀಕರಣದ ಸೆಟ್​ನಿಂದಲೇ ಹೊಸ ವಿಡಿಯೋ ಶೇರ್​ ಮಾಡಿಕೊಂಡಿದ್ದರು.  ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಗೆ ಪ್ರೇಮ್​ ನಿರ್ದೇಶನ ಮಾಡುತ್ತಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​ ಹಾಗೂ ಶಿಲ್ಪಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಪಾತ್ರದ ಹೆಸರು ಸತ್ಯವತಿ. ಇದು ತಮ್ಮ ಫೇವರಿಟ್​ ಪಾತ್ರಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ.

ಅಷ್ಟಕ್ಕೂ ಶಿಲ್ಪಾ  ಶೆಟ್ಟಿ ಎಂದರೆ, ಯೋಗ, ಫಿಟ್​ನೆಸ್​ ನೆನಪಿಗೆ ಬರುತ್ತದೆ. ವಯಸ್ಸು 49 ಆದರೂ ತಮ್ಮ ದೇಹವನ್ನು ಸಕತ್​ ಫಿಟ್​ ಆಗಿಟ್ಟುಕೊಂಡಿದ್ದಾರೆ ನಟಿ. ಇದೀಗ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದ್ದು, ಅವುಗಳಿಗೆ ನಟಿ ಫಟಾಫಟ್​ ಉತ್ತರ ಕೊಟ್ಟಿದ್ದಾರೆ. ಅದರ ಸಾರ ಇಲ್ಲಿದೆ: ದಿನವನ್ನು ಶುರು ಮಾಡುವುದು ಹೇಗೆ ಎನ್ನುವ ಪ್ರಶ್ನೆಗೆ ನಟಿ ತುಪ್ಪ, ಅರಿಶಿಣ ಮತ್ತು ಕರಿಮೆಣಸು ಎಂದಿದ್ದಾರೆ. ಒಂದು ಸೂಪರ್​ ಪವರ್​ ಬೇಕು ಎಂದ್ರೆ ನೀವು ಏನನ್ನು ಕೇಳಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ನಟಿ, ಮಾಯ ಆಗುವುದು ಎಂದಿದ್ದಾರೆ. ಯಾವುದಾದರೂ ಒಂದು ದೇಶದಲ್ಲಿ ಇರಬೇಕು ಎಂದುಕೊಂಡರೆ ಯಾವ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಶಿಲ್ಪಾ ಶೆಟ್ಟಿ ಭಾರತ, ಐ ಲವ್​ ಮೈ ಇಂಡಿಯಾ ಎಂದಿದ್ದಾರೆ. 

Tap to resize

Latest Videos

ಸೀರಿಯಲ್​ ಶೂಟಿಂಗ್​ನಲ್ಲಿ ಹೀಗಿರತ್ತೆ ರೊಮಾನ್ಸ್! ತಬ್ಬಿಕೊಂಡ ನಟ-ನಟಿಯನ್ನು ಎಬ್ಬಿಸಲು ಹರಸಾಹಸ

ಅದೇ ರೀತಿ, ನಿಮ್ಮ ಮಧ್ಯರಾತ್ರಿ ಮೂರು ಗಂಟೆಯ ಸ್ನೇಹಿತ ಯಾರು ಎಂದು ಕೇಳಿದಾಗ ಶಿಲ್ಪಾ ಶೆಟ್ಟಿ ಕೂಡಲೇ ನಗುತ್ತಾ ನನ್ನ ಗಂಡ ಎಂದಿದ್ದಾರೆ. ನಿಮ್ಮ ಫ್ಲಾಪ್​ ಆಗಿರೋ ಚಿತ್ರ ಯಾವುದು ಕೇಳಿದಾಗ ನಟಿ ರಿಷ್ತೆ ಎಂದಿದ್ದಾರೆ. ಈ ಚಿತ್ರ ನನಗೆ ತುಂಬಾ ಇಷ್ಟವಾಗಿತ್ತು, ಆದರೆ ಫ್ಲಾಪ್​ ಆಯಿತು ಎಂದಿದ್ದಾರೆ. ಫನ್​ ಶೂಟಿಂಗ್​ ಮೂವಿ ಯಾವುದು ಕೇಳಿದಾಗ ಸುಖಿ ಎಂದಿದ್ದಾರೆ. ನಿಮಗೆ  ಲೆಹಂಗಾ ಇಷ್ಟನೋ, ಸಾರಿನೋ ಎಂದಾಗ ಸಾರಿ ಎಂದಿದ್ದಾರೆ ಶಿಲ್ಪಾ ಶೆಟ್ಟಿ. ಯೋಗ ಮತ್ತು ಜಿಮ್​ನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಿದ್ದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾ ಯೋಗ ಎಂದಿದ್ದಾರೆ. ನಿಮ್ಮ ಫೆವರೆಟ್​ ಯೋಗ ಆಸನ ಯಾವುದು ಕೇಳಿದಾಗ ನಟಿ ಸುಖಾಸನ ಎಂದಿದ್ದಾರೆ. 

ಅಂದಹಾಗೆ, ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ, ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಪೋರ್ನ್​ ಕೇಸ್​ನಲ್ಲಿ ಸಿಲುಕಿದ್ದು, ಅದರ ಪ್ರಕರಣ ಇನ್ನೂ ನಡೆಯುತ್ತಿದೆ.  2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿತ್ತು. ಇವರ ಪತಿ,  ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

ಕಾಜೋಲ್​ ಹುಟ್ಟುಹಬ್ಬ: ನಟಿಯ ಜೊತೆ ಮಂಚ ಏರುವ ಆಸೆ ಇತ್ತಾ ಶಾರುಖ್​ಗೆ? ಹಳೆಯ ವಿಡಿಯೋ ವೈರಲ್​

click me!