
ದೇಶ ವಿದೇಶಗಳಲ್ಲಿ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುವಂತೆ ಮಾಡಿದ್ದು ಎಸ್ ಎಸ್ ರಾಜಮೌಳಿ. 2009ರಲ್ಲಿ ತೆರೆಕಂಡ ಮಗಧೀರ, 2010ರಲ್ಲಿ ಮರ್ಯಾದೆ ರಾಮಣ್ಣ, 2012ರಲ್ಲಿ ಈಗ, 2015ರಲ್ಲಿ ಬಾಹುಬಲಿ, 2017ರಲ್ಲಿ ಬಾಹುಬಲಿ 2 ಮತ್ತು 2022ರಲ್ಲಿ ಆರ್‌ಆರ್‌ಆರ್ ಸಿನಿಮಾ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಪ್ರತಿ ಚಿತ್ರದಲ್ಲೂ ದೇವರನ್ನು ತೋರಿಸುವ ನಿರ್ದೇಶಕ ರಾಜಮೌಳಿ ನಿಜ ಜೀವನದಲ್ಲಿ ನಾಸ್ತಿಕ ಎಂದು ಹೇಳಿಕೊಂಡಿದ್ದಾರೆ.
ಹೌದು! ನೆಟ್‌ಫ್ಲಿಕ್ಸ್‌ನಲ್ಲಿ ರಾಜಮೌಳಿ ಜೀವನಾಧರಿತ 'ಮಾಡರ್ನ್ ಮಾಸ್ಟರ್ಸ್' ಡಾಕ್ಯುಮೆಂಟರಿ ರಿಲೀಸ್ ಆಗಿದೆ. ಸೂಪರ್ ಹಿಟ್ ಸಿನಿಮಾ ನೀಡಿರುವ ಮಾಸ್ಟರ್ ಮೈಂಡ್ ಹೇಗೆ ಬೆಳೆಯಿತ್ತು ಎಂದು ತಿಳಿದುಕೊಳ್ಳುವ ಕ್ಯೂರಿಯಾಸಿಟಿಗೆ ಜನರು ಈ ಡಾಕ್ಯುಮೆಂಟರಿ ನೋಡುತ್ತಿದ್ದಾರೆ. ಈ ಡಾಕ್ಯುಮೆಂಟರಿಯಲ್ಲಿ ನೀಡುವ ಹೇಳಿಕೆ ವೈರಲ್ ಆಗುತ್ತಿದೆ. ದೇವರಲ್ಲಿ ಪ್ರಾರ್ಥನೆ ಮಾಡುವ ಸಮಯ ಎದುರಾದರೂ ಯಾಕೆ ಪ್ರಾರ್ಥನೆ ಮಾಡಿಲ್ಲ ಎಂದು ನೆಟ್ಟಿಗರು ಪ್ರಶ್ನೆ....
ಹೆಣ್ಣುಮಕ್ಕಳು ದುಡಿಯಬೇಕು ರೀ....ನನಗೂ ಮಗಳಿದ್ದಾಳೆ ಈಗ: ಧ್ರುವ ಸರ್ಜಾ
'ಮಗಧೀರ ಸಿನಿಮಾ ಸಮಯದಲ್ಲಿ ನಮಗೆ ದೊಡ್ಡ ಅಪಘಾತವಾಗಿತ್ತು. ಒಂದು ಏರಿಯಾದಲ್ಲಿ ವಾಹನದಲ್ಲಿ ಹೋಗುತ್ತಿದ್ದಾಗ ದಿಢೀರನೆ ಅಪಘಾತವಾಗಿ ನಮ್ಮವರಿಗೆ ಪೆಟ್ಟಾಯಿತ್ತು. ಮುಖ್ಯವಾಗಿ ನನ್ನ ಪತ್ನಿ ರಮಾ ಗಂಭೀರವಾಗಿ ಗಾಯಗೊಂಡಿದ್ದರು, ಆಕೆ ಕೆಲ ಬೆನ್ನಿನ ಭಾಗದಲ್ಲಿ ಸ್ಪರ್ಶವಿಲ್ಲದಂತೆ ಆಯಿತು. ಒಂದರ್ಥದಲ್ಲಿ ಪಾರ್ಶ್ವವಾಯು ಎನ್ನವಂತಾಯಿತ್ತು. ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇಲ್ಲ. ಏನು ಮಾಡಬೇಕೆಂದು ನನಗೆ ಅರ್ಥವಾಗಲಿಲ್ಲ. ನಾನು ತಕ್ಷಣ ನನಗೆ ತಿಳಿದಿರುವ ಎಲ್ಲಾ ವೈದ್ಯರಿಗೆ ಕರೆ ಮಾಡಿದೆ. ವೈದ್ಯರನ್ನು ಕರೆಯುವಾಗ ನಾನು ನನ್ನ ಹೆಂಡತಿಯನ್ನು ನೋಡುತ್ತಾ ಅಳುತ್ತಿದ್ದೆ. ಅದೇ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ದೇವರನ್ನು ಪ್ರಾರ್ಥಿಸಬೇಕು ಎನ್ನುವ ಆಲೋಚನೆ ಬಂದಂತಾಗುತ್ತಿತ್ತು. ಆದರೆ ನಾನು ಪ್ರಾರ್ಥಿಸಲಿಲ್ಲ. ನಾನು ಅಕ್ಷರಶಃ ಉದ್ರಿಕ್ತನಾಗಿ ಅಳುತ್ತಿದ್ದೆ. ಮತ್ತೊಂದು ಕಡೆ ವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಿದೆ. ಒಂದು ಸಮಯದಲ್ಲಿ ನಾನು ಕರ್ಮ ಯೋಗವನ್ನು ನನ್ನ ಜೀವನ ವಿಧಾನವಾಗಿ ಆರಿಸಿಕೊಂಡೆ. ನನ್ನ ಕೆಲಸವೇ ನನ್ನ ದೇವರು. ನನ್ನ ಕೆಲಸ ಸಿನಿಮಾ' ಎಂದು ಡಾಕ್ಯುಮೆಂಟರಿಯಲ್ಲಿ ರಾಜಮೌಳಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.