ಈ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ ನಟಿ ಶಿಲ್ಪಾ ಶೆಟ್ಟಿ

Published : May 13, 2022, 03:19 PM IST
ಈ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ ನಟಿ ಶಿಲ್ಪಾ ಶೆಟ್ಟಿ

ಸಾರಾಂಶ

ಸದಾ ಫಿಟ್ನೆಸ್ ಮತ್ತು ಯೋಗದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ನಟಿ ಶಿಲ್ಪಾ ಶೆಟ್ಟಿ ಇದೀಗ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಶಿಲ್ಪಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.  

ಬಾಲಿವುಡ್ ನಟಿ ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ(Shilpa Shetty) ಸಿನಿಮಾಗಿಂತ ಹೆಚ್ಚಾಗಿ ವರ್ಕೌಟ್(workout), ಡಯಟ್, ಯೋಗ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಫಿಟ್ನೆಸ್ ಕಡೆ ಸಿಕ್ಕಾಪಟ್ಟೆ ಗಮನ ಕೊಡುವ ನಟಿ ಸಾಮಾಜಿಕ ಜಾಲತಾಣದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಸದಾ ಫಿಟ್ನೆಸ್ ಮತ್ತು ಯೋಗದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ನಟಿ ಶಿಲ್ಪಾ ಶೆಟ್ಟಿ ಇದೀಗ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಶಿಲ್ಪಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ತಾಲತಾಣದಿಂದ ದೂರ ಉಳಿಯುವುದಾಗಿ ಶಿಲ್ಪಾ ಹೇಳಿದ್ದಾರೆ. ಈ ಬಗ್ಗೆ ಶಿಲ್ಪಾ ಗುರುವಾರ ಬಹಿರಂಗ ಪಡಿಸಿದ್ದಾರೆ. ಬ್ಲಾಕ್ ಇಮೇಜ್ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ. ಸದಾ ಕಲರ್ ಫುಲ್ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದ ಶಿಲ್ಪಾ ಶೆಟ್ಟಿ ಈ ನಿರ್ಧಾರ ಅಚ್ಚರಿ ಮೂಡಿಸಿದೆ. ಅಂದಹಾಗೆ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ಕಾರಣವನ್ನು ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಗಳಲ್ಲಿನ ಏಕತಾನತೆಯ ವಿಷಯದ ಬಗ್ಗೆ ಬೇಸರವಿದೆ ಎನ್ನುವ ಕಾರಣಕ್ಕೆ ದೂರ ಉಳಿದಿರುವುದಾಗಿ ಹೇಳಿದ್ದಾರೆ. 'ಏಕತಾನತೆಯಿಂದ ತುಂಬಾ ಬೇಸರವಾಗುತ್ತಿದೆ. ಎಲ್ಲವೂ ಒಂದೇ ರೀತಿ ಕಾಣುತ್ತಿದೆ. ನಾನು ಹೊಸ ಅವತಾರವನ್ನು ಕಂಡುಕೊಳ್ಳುವ ವರೆಗೂ ಸಾಮಾಜಿಕ ಮಾಧ್ಯಮಗಳಿಂದ ಹೊರಗುಳಿಯುತ್ತೇನೆ' ಎಂದು ಬಹಿರಂಗ ಪಡಿಸಿದ್ದಾರೆ.

ಬಸ್‌ನಲ್ಲೂ ಬಿಟ್ಟಿಲ್ಲ ವರ್ಕೌಟ್; ಶಿಲ್ಪಾ ಶೆಟ್ಟಿ ವಿಡಿಯೋ ವೈರಲ್

ಕೆಲವು ದಿನಗಳ ಹಿಂದೆ ಶಿಲ್ಪಾ ಶೆಟ್ಟಿ ತಾಯಂದಿರ ದಿನಾಚರಣೆಯ ಅಂಗವಾಗಿ ತನ್ನ ಮಗ ವಿಯಾನ್ ಮತ್ತು ಮಗಳು ಸಮಿಶಾ ಜೊತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಕ್ಯೂಟ್ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಆಗಾಗ ಕುಟುಂಬದ ಜೊತೆಗಿನ ಫೋಟೋ ಮತ್ತು ವಿಡಿಯೋಗಳನ್ನು ಶಿಲ್ಪಾ ಶೇರ್ ಮಾಡುತ್ತಿದ್ದರು. ಆದರೀಗ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವುದಾಗಿ ಹೇಳಿ ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದ್ದಾರೆ.

ಅಂದಹಾಗೆ ಶಿಲ್ಪಾ ಕೆಲವು ತಿಂಗಳ ಹಿಂದೆ ಅಂದರೆ ಪತಿ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಚಿತ್ರೀಕರಣ ಸಂಬಂಧ ಜೈಲು ಸೇರಿದ ಸಮಯದಲ್ಲಿ ಸಾಮಾಜಿಕ ಜಾಲತಾಣದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದ ಶಿಲ್ಪಾ ಕೆಲವು ದಿನಗಳು ಯಾವುದೇ ಪೋಸ್ಟ್ ಶೇರ್ ಮಾಡಿರಲಿಲ್ಲ. ಅಲ್ಲದೇ ಸಾರ್ವಜನಿಕವಾಗಿಯೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಬಳಿಕ ಕೆಲವೇ ದಿನಗಳಲ್ಲಿ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಆಕ್ಟೀವ್ ಆಗಿದ್ದು. ಅಲ್ಲದೇ ಪತಿ ಜೈಲಿನಿಂದ ಹೊರಬಂದ ಬಳಿಕ ಸದಾ ಪೋಸ್ಟ್ ಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದರು.


ಯಶ್ ವೈಲೆನ್ಸ್...ವೈಲೆನ್ಸ್ ಡೈಲಾಗ್ ಹೊಡೆದು ಖುಷಿ ಪಟ್ಟ ಶಿಲ್ಪಾ ಶೆಟ್ಟಿ.!

 

ಶಿಲ್ಪಾ ಶೆಟ್ಟಿ ಸಿನಿಮಾಗಳಿಂದ ಹೆಚ್ಚಾಗಿ ಫಿಟ್ನೆಸ್ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸದ್ಯ ಇಬ್ಬರೂ ಮಕ್ಕಳ ತಾಯಿಯಾಗಿರುವ ಶಿಲ್ಪಾ ಶೆಟ್ಟಿ ಅದೇ ಫಿಟ್ನೆಸ್ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ತೆಳ್ಳಗೆ ಬಳಕೊ ಬಳ್ಳಿಯ ಹಾಗೆ ಇರುವ ಶಿಲ್ಪಾ ಶೆಟ್ಟಿ ಅನೇಕ ನಟಿಯರಿಗೆ ಮಾದರಿಯಾಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಿಂದನೂ ದೂರ ಆಗಿರುವ ಶಿಲ್ಪಾ ಮತ್ತೆ ಯಾವಾಗ ವಾಪಾಸ್ ಆಗ್ತಾರೆ, ಯಾವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?