
ಬಾಲಿವುಡ್ ಖ್ಯಾತ ನಟಿ, ಮಾಡೆಲ್ ಪೂಜಾ ಬೇಡಿ(Pooja Bedi) ಆಗಾಗ ಸುದ್ದಿಯಲ್ಲಿರುತ್ತಾರೆ. ಪೂಜಾ ಹೆಚ್ಚು ಸದ್ದು ಮಾಡಿದ್ದು 1990ರ ದಶಕದಲ್ಲಿ. ಆ ಕಾಲದಲ್ಲಿ ಪೂಜಾ ಮೊದಲ ಬಾರಿಗೆ ಕಾಂಡೋಮ್ ಜಾಹೀರಾತಿನಲ್ಲಿ(Condom Advertisement) ಕಾಣಿಸಿಕೊಳ್ಳುವ ಮೂಲಕ ಸಂಚಲನಸೃಷ್ಟಿ ಮಾಡಿದ್ದರು. ಈ ಜಾಹೀರಾತು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿ ಮಾಡಿತ್ತು. ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಈ ಜಾಹೀರಾತು ಪ್ರಸಾರವನ್ನು ನಿಷೇಧಿಸಲಾಗಿತ್ತು.
ಈ ಬಗ್ಗೆ ನಟಿ ಪೂಜಾ ಬೇಡಿ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಮಾತನಾಡಿದ್ದ ನಟಿ ಪೂಜಾ ಬೇಡಿ ಕಾಂಡೋಮ್ ಜಾಹೀರಾತಿನಲ್ಲಿ ನಟಿಸಿದ್ದರ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಅಲ್ಲದೇ 'ಆ ಕಾಂಡೋಮ್ ಜಾಹೀರಾತು ಭಾರತದಲ್ಲಿ ಲೈಂಗಿಕ ಕ್ರಾಂತಿಯ ಆರಂಭ' ಎಂದು ಬಣ್ಣಿಸಿದ್ದಾರೆ. 'ಫೈರ್ ಸ್ಟಾರ್ಟರ್ ಆಗಿದ್ದು ತುಂಬಾ ಅದ್ಭುತವಾಗಿತ್ತು. ಈ ಅಭಿಯಾನವನ್ನು ಬ್ರಿಟಿಷ್ ಟ್ಯಾಬ್ಲಾಯ್ಡ್ ಗಳು ಭಾರತದಲ್ಲಿ ಲೈಂಗಿಕ ಕ್ರಾಂತಿಯ ಆರಂಭ ಎಂದು ಬಿಂಬಿಸಿದ್ದರು. ಇದು ಅನೇಕ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸವ್ನನು ನಿರ್ಮಿಸಿತ್ತು' ಎಂದು ಹೇಳಿದ್ದಾರೆ.
ಇಂದಿನ ಜನರು ತಮ್ಮ ಲೈಂಗಿಕತೆಯ ಬಗ್ಗೆ ತುಂಬಾ ತೆರೆದುಕೊಂಡಿದ್ದಾರೆ ಎಂದು ಪೂಜಾ ಬೇಡಿ ಹೇಳಿದ್ದಾರೆ. ಪೂಜಾ ಬೇಡಿ ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ನಟಿ. ಒಂದಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಪೂಜಾ ಬೇಡಿ ತಾಯಿ ಪ್ರತಿಮಾ ಬೇಡಿ ಕೂಡ ಸಿಕ್ಕಾಪಟ್ಟೆ ಬೋಲ್ಡ್ ನಟಿ. 1974ರಲ್ಲೇ ಪ್ರತಿಮಾ ಬೇಡಿ ಬೀಚ್ ಲ್ಲಿ ನಗ್ನವಾಗಿ ಓಡಾಡುವ ಮೂಲಕ ದೇಶದಾದ್ಯಂತ ವಿವಾದ ಸೃಷ್ಟಿಮಾಡಿದ್ದರು.
ಸಂಪ್ರದಾಯಸ್ಥ ಮನೆ ಸೊಸೆಯಾಗಿ ನಟನಯೇ ಬಿಡಬೇಕಾಯ್ತು ಎಂದ ಪೂಜಾ ಬೇಡಿ
ಪೂಜಾ ಬೇಡಿ ಬಗ್ಗೆ ಹೇಳುವುದಾದರೆ ಪೂಜಾ ನಟನೆಯ ಮೊದಲ ಸಿನಿಮಾ ವಿಷಕನ್ಯಾ 1990ರಲ್ಲಿ ತೆರೆಕಂಡಿತ್ತು. ಜೋ ಜೀತಾ ವೋಹೀ ಸಿಖಂದರ್, ಲುಟೇರಾ, ಆಂತಕ್ ಹೀ ಆತಂಕ್, ಫಿರ್ ತೇರಿ ಕಹಾನಿ ಯಾದ್ ಆಗಯಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಪೂಜಾ ಬೇಡಿ ನಟಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಪೂಜಾ ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅನೇಕ ಆಂಗ್ಲ ಪತ್ರಿಕೆಗಳಿಗೆ ಪೂಜಾ ಅಂಕಣ ಬರೆಯುತ್ತಿದ್ದಾರೆ. 994ರಲ್ಲಿ ಮುಸ್ಲಿಂ ಉದ್ಯಮಿ ಜೊತ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪೂಜಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. 2003ರಲ್ಲಿ ವಿಚ್ಛೇದನ ಪಡೆದು ದೂರ ಆದರು. ಪೂಜಾ ಕೊನೆಯದಾಗಿ ಕಾಮಿಡಿ ಕಪಲ್ ಸಿನಿಮಾದಲ್ಲಿ ನಟಿಸಿದ್ದರು. ಕೆಲವೇ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರೂ ಪೂಜಾ ಸಿಕ್ಕಾಪಟ್ಟೆ ಫೇಮಸ್ ನಟಿ.
ವೆಬ್ ಸಿರೀಸ್‌ನಲ್ಲಿ ಪ್ರೊತಿಮಾ ಬೇಡಿ ಜೀವನ..! ಏಕ್ತಾ ಕಪೂರ್ ನಿರ್ಮಾಣ
ಇತ್ತೀಚಿಗಷ್ಟೆ ವ್ಯಾಕ್ಸಿನ್ ವಿಚಾರವಾಗಿ ಪೂಜಾ ಸುದ್ದಿಯಲ್ಲಿದ್ದರು. ಬಲವಂತವಾಗಿ ಕೋವಿಡ್ ವ್ಯಾಕ್ಸಿನ್ ಹಾಕುವುರ ಬಗ್ಗೆ ಪೂಜಾ ಬೇಡಿ ಗರಂ ಆಗಿದ್ದರು. 2021ರಲ್ಲಿ ಈ ಕುರಿತು ಪೂಜಾ ಕೆಲವು ಟ್ವೀಟ್ ಗಳನ್ನು ಮಾಡಿದ್ದು ಅನೇಕ ಜನರು ವ್ಯಾಕ್ಸಿನ್ ತೆಗೆದುಕೊಳ್ಳದೆಯೂ ಕೋವಿಡ್ ನಿಂದ ಗುಣಮುಖರಾಗಿದ್ದಾರೆ ಎಂದಮೇಲೆ ಇಡೀ ದೇಶದ ಜನರಿಗೆ ವ್ಯಾಕ್ಸಿನ್ ನೀಡುವುದರಲ್ಲಿ ಅರ್ಥವಿಲ್ಲ ಎಂದಿದ್ದರು. ಪೂಜಾ ಬೇಡಿ ಹೇಳಿಕೆ ವಿವಾದ ಸೃಷ್ಟಿಮಾಡಿತ್ತು. ಅನೇಕರು ಪೂಜಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಇದ್ಯಾವುದಕ್ಕೂ ಪೂಜಾ ತಲೆಕೊಡಿಸಿಕೊಂಡವರಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.