ಕೋಲ್ಕತಾ ವೈದ್ಯರ ರೇಪ್-ಮರ್ಡರ್ ಕೇಸ್ ಬಗ್ಗೆ ಮಾತನಾಡಿರುವ ನಟಿ ಶೆರ್ಲಿನ್ ಚೋಪ್ರಾ ಪುರುಷರಿಗೆ ಸಲಹೆ ಕೊಟ್ಟಿದ್ದಾರೆ. ಇದರಿಂದ ನೆಟ್ಟಿಗರು ಗರಂ ಆಗಿರೋದು ಯಾಕೆ?
ಗಂಡಸರಿಗೆ ಸರಿಯಾಗಿ ಶಿಕ್ಷಣ ನೀಡಬೇಕು. ಸರಿಯಾದದ್ದನ್ನು ನೋಡುವಂತೆ, ಸರಿಯಾದದ್ದನ್ನೇ ಯೋಚನೆ ಮಾಡುವಂತೆ ಕಲಿಸಬೇಕು. ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡದಂತೆ ಅವರಿಗೆ ಹೇಳಿಕೊಡಬೇಕು. ಇದರಿಂದ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ತುಂಡುಡುಗೆ ಬೆಡಗಿ ಶೆರ್ಲಿನ್ ಚೋಪ್ರಾ ಹೇಳಿದ ಮಾತು! ಬೆತ್ತಲೆ ಫೋಟೋಶೂಟ್‌ಗಳಿಂದಲೇ ಹಂಗಾಮಾ ಸೃಷ್ಟಿಸ್ತಿರೋ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ರೇಪ್ ತಡೆಗೆ ಹೀಗೆಲ್ಲಾ ಸಲಹೆ ಕೊಟ್ಟಿದ್ದನ್ನು ಕೇಳಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕೋಲ್ಕತಾದಲ್ಲಿ ವೈದ್ಯೆಯ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಎಲ್ಲೆಡೆ ಮಹಿಳೆಯರ ಸುರಕ್ಷತೆಯ ಮಾತು ಕೇಳಿಬರುತ್ತಿದೆ. ಇಂಥ ಬರ್ಬರ ಕೃತ್ಯವನ್ನು ತಡೆಯಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಬಾರಿಯೂ ಇಂಥ ರಾಕ್ಷಸೀಯ ಕೃತ್ಯ ನಡೆದಾಗ ಮಾತುಗಳು ಕೇಳಿಬರುವುದು ಮಾಮೂಲು. ಕೊನೆಗೆ ಇದು ಅಲ್ಲಿಗೇ ತಣ್ಣಗಾಗಿಬಿಡುತ್ತದೆ. ಮತ್ತೊಂದು ರೇಪ್ ನಡೆದಾಗ, ಅದು ಈ ಪರಿಯಲ್ಲಿ ಮೀಡಿಯಾ ಅಟೆನ್ಷನ್ ಗಳಿಸಿದಾಗ ಮತ್ತೆ ಮಹಿಳಾ ಸುರಕ್ಷತೆಯ ಬಗ್ಗೆ ಮಾತುಗಳು, ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ಮಹಿಳಾ ರಕ್ಷಣೆಯ ಬಗ್ಗೆ ಇದೀಗ ಶೆರ್ಲಿನ್ ಚೋಪ್ರಾಗೆ ಪ್ರಶ್ನೆ ಕೇಳಿದಾಗ ನಟಿ ಹೀಗೆಲ್ಲಾ ಹೇಳಿದ್ದಾರೆ.
ಬಟ್ಟೆ ಕಳಚಿ ಬಿಟ್ಟಿ ಆಫರ್ ಕೊಟ್ಟ ಶೆರ್ಲಿನ್ ಹೊಸ ವೇಷಕ್ಕೆ ಶಾಕ್! ಮತಾಂತರವಾದ್ರಾ ಕೇಳ್ತಿದ್ದಾರೆ ಫ್ಯಾನ್ಸ್!
ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ನಿಮ್ಮಂಥ ಬೆತ್ತಲಾಗುವ ನಟಿಯರೇ ಕಾರಣ, ನಿನ್ನಂಥವರಿಗೆ ರೇಪ್ ಮಾಡಲು ಆಗುವುದಿಲ್ಲ. ಅಂಥವರು ನಿನ್ನಂಥವರಿಂದ ಪ್ರಚೋದನೆ ಪಡೆದು ಇನ್ನಾರದೋ ಮೇಲೆ ರೇಪ್ ಮಾಡುತ್ತಾರೆ. ಇಂಥ ಅಸಭ್ಯ, ಅಶ್ಲೀಲ, ಪ್ಲಾಸ್ಟಿಕ್ ರಾಣಿಯಾಗಿರೋ ನಿನ್ನಂಥವಳು ಮೊದಲು ಸರಿಯಾಗಬೇಕು. ಅದನ್ನು ಬಿಟ್ಟು ಗಂಡಸರಿಗೆ ಬುದ್ಧಿಮಾತು ಹೇಳಲು ಬರುತ್ತೀಯಲ್ಲ ಎಂದು ನೆಟ್ಟಿಗರು ಒಂದೇ ಸಮನೆ ನಟಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ರೇಪ್ ಪ್ರಕರಣ ಹೆಚ್ಚಾಗಲು ಇಂಥ ನಟಿಯರ ವೇಷ-ಭೂಷಣ, ಚಿತ್ರಗಳಲ್ಲಿ ಹಣಕ್ಕಾಗಿ ಬೆತ್ತಲಾಗಿ ಗಂಡುಮಕ್ಕಳನ್ನು ಪ್ರಚೋದನೆಗೊಳಿಸುವುದೇ ಕಾರಣ ಎಂದು ಹಲವರು ಕಮೆಂಟ್ಸ್‌ಗಳಲ್ಲಿ ತಿಳಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ನಟಿ, ತ್ವರಿತ ಕೋರ್ಟ್‌ಗಳ ಸ್ಥಾಪನೆಯಾಗಬೇಕು, ರೇಪ್ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು. ವಿಚಾರಣೆ ವಿಳಂಬ ಮಾಡಬಾರದು ಎಂಬೆಲ್ಲಾ ಸಲಹೆ ನೀಡಿದ್ದಾರೆ. ಈ ಮಾತನ್ನು ಕೆಲವು ನೆಟ್ಟಿಗರು ಒಪ್ಪಿಕೊಂಡಿದ್ದರೂ ಪುರುಷರ ಬಗ್ಗೆ ಮಾತನಾಡಿರುವುದಕ್ಕೆ ಹರಿಹಾಯುತ್ತಿದ್ದಾರೆ.
ಅಷ್ಟಕ್ಕೂ ಶೆರ್ಲಿನ್ ಚೋಪ್ರಾ, ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್. ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್ ನಟಿಯಂತೆ ಈಕೆ ಕೂಡ ತೆಳ್ಳಗೆ ಇರಲು ಸಾಕಷ್ಟು ಡಯಟ್ ಪಾಲನೆ, ಯೋಗ, ಜಿಮ್, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಎದೆ ಭಾಗ ಮಾತ್ರ ನೋಡಲು ಅಸಾಧ್ಯ ಎನ್ನುವಷ್ಟರಮಟ್ಟಿಗೆ ಕಾಣಿಸುತ್ತಿದೆ. ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.
ಹಲವರ ಜೊತೆ ಮಲಗಿದಾಗ ಆಗದ ನಾಚಿಕೆ ಶೆರ್ಲಿನ್ಗೆ ಈ ವಿಷ್ಯಕ್ಕೆ ಆಗ್ತಿದೆಯಂತೆ! ನಟಿ ಏನೆಂದ್ರು ಕೇಳಿ...