ಅಲ್ಲು ಅರ್ಜುನ್-ಸುಕುಮಾರ್ ಮಧ್ಯೆಯ ವಾರ್​ಗೆ ಬಿತ್ತಾ ಬ್ರೇಕ್?: ಅರ್ಧಕ್ಕೆ ನಿಂತೇ ಹೋಗುತ್ತಾ ಪುಷ್ಪ 2 ಸಿನಿಮಾ?

By Govindaraj S  |  First Published Aug 23, 2024, 4:50 PM IST

ಇಬ್ಬರ ಜಗಳಕ್ಕೆ ಪುಷ್ಪ2 ಸಿನಿಮಾ ನಿಂತೇ ಹೋಯ್ತು ಅಂತೆಲ್ಲಾ ಸೌತ್ ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು ಅಲ್ಲು ಅರ್ಜುನ್ ಹಾಗು ನಿರ್ದೇಶಕ ಸುಕುಮಾರ್​ ಜಗಳದ ವಿಚಾರ. ಪುಷ್ಪ 2 ಚಿತ್ರದ ಕೊನೆ ಹಂತದ ಶೂಟಿಂಗ್ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. 


ಅಲ್ಲು ಅರ್ಜುನ್ ಸುಕುಮಾರ್ ನಡುವೆ ವಾರ್​.. ಅರ್ಧಕ್ಕೆ ನಿಂತೇ ಹೋಗುತ್ತಾ ಪುಷ್ಪ 2 ಸಿನಿಮಾ.?. ಹೀಗೊಂದು ಟಾಕ್​ ಸೌತ್ ಸಿನಿ ಜಗತ್ತನ್ನ ಆವರಿಸಿಕೊಂಡಿತ್ತು. ಇದು ನಿಜ ಆಯ್ತಾ..? ಅಥವ ಆ ವಾರ್​ ವಿವಾದಕ್ಕೆ ಅಲ್ಲು ಅರ್ಜುನ್ ಸುಕುಮಾರ್ ತೆರೆ ಎಳೆದ್ರಾ..? ಈ ಬಗ್ಗೆ ಸರ್​ಪ್ರೈಸ್​ ಸುದ್ದಿಯೊಂದು ಟಾಲಿವುಡ್‌ನಿಂದಲೇ ಎದ್ದು ಬಂದಿದೆ. ಅದೇನು ಅಂತ ನೋಡೋಣ ಬನ್ನಿ. ಅಲ್ಲು ಅರ್ಜುನ್ ನಿರ್ದೇಶಕ ಸುಕುಮಾರ್​ ಕಿತ್ತಾಡಿಕೊಂಡಿದ್ದಾರೆ. ಗಂಡ ಹಂಡತಿ ಜಗಳದಿಂದ ಕೂಸು ಬಡವಾಯ್ತು ಅನ್ನೋ ಹಾಗೆ ಅಲ್ಲು ಅರ್ಜುನ್ ಸುಕುಮಾರ್​ ಜಗಳದಿಂದ ಪುಷ್ಪ 2 ಸಿನಿಮಾ ಬಡವಾಯ್ತು. 

ಇಬ್ಬರ ಜಗಳಕ್ಕೆ ಪುಷ್ಪ2 ಸಿನಿಮಾ ನಿಂತೇ ಹೋಯ್ತು ಅಂತೆಲ್ಲಾ ಸೌತ್ ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು ಅಲ್ಲು ಅರ್ಜುನ್ ಹಾಗು ನಿರ್ದೇಶಕ ಸುಕುಮಾರ್​ ಜಗಳದ ವಿಚಾರ. ಪುಷ್ಪ 2 ಚಿತ್ರದ ಕೊನೆ ಹಂತದ ಶೂಟಿಂಗ್ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ನಿರ್ದೇಶಕ ಸುಕುಮಾರ್ ಮೇಲಿನ ಸಿಟ್ಟಿಗೆ ನಟ ಅಲ್ಲು ಅರ್ಜುನ್ ಗಡ್ಡ ತೆಗೆದು ಟ್ರಿಪ್ ಹೋಗಿದ್ದಾರೆ ಅಂತ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಈಗ ಇಬ್ಬರ ವಾರ್​ಗೆ ಬ್ರೇಕ್ ಬಿದ್ದಿದೆ. ಒಂದೇ ವೇಧಿಕೆ ಮೇಲೆ ಬಿನ್ನಿ, ಸುಕುಮಾರ್​ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

Tap to resize

Latest Videos

ಅಷ್ಟೆ ಅಲ್ಲ ಅಲ್ಲು ಅರ್ಜುನ್ ಪುಷ್ಪ 2 ಬಗ್ಗೆ ಭರ್ಜರಿ ಸುದ್ದಿಯನ್ನ ಬಾಯ್ಬಿಟ್ಟಿದ್ದಾರೆ. ‘ಪುಷ್ಪ 2 ಸಿನಿಮಾ ಬರ್ತಿರೋ ವಿಧಾನ ಬೇರೆಯದೇ ರೀತಿ ಇದೆ. ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತೆ. ನಾನು ಈಗ ಏನನ್ನೂ ಹೇಳುವುದಿಲ್ಲ. ಡಿಸೆಂಬರ್ 6ಕ್ಕೆ ತಗ್ಗೋ ಮಾತೇ ಇಲ್ಲ. ಇದು ಫಿಕ್ಸ್’. ಅಲ್ಲು ಅರ್ಜುನ್ ರ ಈ ಮಾತು ಕೇಳಿ ಅಲ್ಲೇ ಇದ್ದ ನಿರ್ದೇಶಕ ಸುಕುಮಾರ್ ಮುಗುಳು ನಕ್ಕಿದ್ದಾರೆ. ಪುಷ್ಪ2 ಬಗ್ಗೆ ಈಗ ಏನನ್ನು ಹೇಳಲ್ಲ. ಡಿಸೆಂಬರ್​ 6ಕ್ಕೆ ತಗ್ಗೋ ಮಾತೇ ಇಲ್ಲ ಅಂತ ಅಲ್ಲು ಅರ್ಜುನ್ ಹೇಳುತ್ತಿದ್ದಂತೆ ಅಲ್ಲಿದ್ದವರಿಂದ ಶಿಳ್ಳೆ ಚಪ್ಪಾಳೆ ಬಿದ್ವು. 

ಕಾಂತಾರ ಚಾಪ್ಟರ್​ 1 ಸೀಕ್ರೆಟ್ ಬಿಚ್ಚಿಟ್ಟ ರಿಷಬ್ ಶೆಟ್ಟಿ: ಸಮರ ವೀರನಾಗಿ ಹೊಸ ಅವತಾರ ಎತ್ತಿದ ಡಿವೈನ್ ಸ್ಟಾರ್!

ಆ ಕಡೆ ಸುಕುಮಾರ್ ಕೂಡ ಮೈಕ್ ಎತ್ತಿಕೊಂಡು ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ದಯವಿಟ್ಟು ಡಿಸ್ಟರ್ಬ್ ಮಾಡಬೇಡಿ ಅಂದ್ರು. ಇವರಿಬ್ಬರ ಬಾಂಡಿಂಗ್ ನೋಡಿ ಈಗ ಇಬ್ಬರು ಜಗಳ ಮಾಡಿಕೊಳ್ಳೋಕೆ ಸಾಧ್ಯವೇ ಇಲ್ಲ. ಪುಷ್ಪ2 ರಿಲೀಸ್​ ಬಗ್ಗೆ ಯಾವ್ದೇ ಭಯ ಬೇಡ ಅಂತ ಮತ್ತೆ ಮಾತು ಎತ್ತಿದ್ದಾರೆ. ಏನಿ ವೇ ಸಿನಿಮಾ ತಂಡ ಅಂದ್ಮೇಲೆ ಅಲ್ಲಿ ಜಗಳ ಇದ್ದಿದ್ದೆ. ಅದನ್ನ ಮರೆತು ಮುಂದೆ ಹೋದ್ರೆ ಅದ್ಭುತ ಸಿನಿಮಾ ಮಾಡೋಕೆ ಸಾಧ್ಯ ಅನ್ನೋದಂತು ಸತ್ಯ.

click me!