ದೀಪಿಕಾ ಪಡುಕೋಣೆಯ ಒಂದೇ ಒಂದು ಸೆಕೆಂಡ್‌ನ ವಿಡಿಯೋ ನೋಡಲು ಮುಗಿ ಬಿದ್ದ ನೆಟ್ಟಿಗರು! ಅಂಥದ್ದೇನಿದೆ ನೋಡಿ...

By Suchethana D  |  First Published Aug 23, 2024, 4:22 PM IST

ದೀಪಿಕಾ ಪಡುಕೋಣೆಯ ಒಂದೇ ಒಂದು ಸೆಕೆಂಡ್‌ನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದ್ದು, ಇದರಲ್ಲಿ ಅಂಥದ್ದೇನಿದೆ ನೋಡಿ..
 


ಚಿತ್ರತಾರೆಯರಿಗೆ ಅಭಿಮಾನಿಗಳು ಇರುವುದೇನೂ ಹೊಸ ವಿಷಯವಲ್ಲ. ಅವರಲ್ಲಿ ಕೆಲವರದ್ದು ಅತಿರೇಕದ ಅಭಿಮಾನವೂ ಆಗಿರುತ್ತದೆ. ಚಿತ್ರ ನಟರ ಒಂದೇ ಒಂದು ಝಲಕ್‌ ನೋಡುವುದಕ್ಕಾಗಿ ಪ್ರಾಣವನ್ನೂ ಪಣಕ್ಕಿಟ್ಟು ಸಾಹಸ ಪಡುವವರ ಸಂಖ್ಯೆಯೂ ಕಮ್ಮಿಯೇನಿಲ್ಲ. ಇನ್ನು ಅವರು ವಿಡಿಯೋ ಶೇರ್‌ ಮಾಡಿದರಂತೂ ಮುಗಿದೇ ಹೋಯ್ತು. ಚಿತ್ರತಾರೆಯರ ವಿಡಿಯೋಗಳನ್ನೇ ಸೋಷಿಯಲ್‌ ಮೀಡಿಯಾಗಳಲ್ಲಿ ಅಪ್‌ಲೋಡ್‌ ಮಾಡಿ ಬದುಕು ನಡೆಸುತ್ತಿರುವ ಅದೆಷ್ಟೋ ಪಾಪರಾಜಿಗಳೂ ಇದ್ದಾರೆ! ನಟ-ನಟಿಯರು ಹೋದಲ್ಲಿ, ಬಂದಲ್ಲಿ ಅವರ ಹಿಂದೆ ಹಿಂದೆ ಓಡಿ ಹೋಗಿ ಹಲವು ಸಂದರ್ಭಗಳಲ್ಲಿ ಅವರಿಗೆ ಮುಜುಗರನ್ನೂ ಉಂಟು ಮಾಡಿ ವಿಡಿಯೋ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ವರ್ಗವೂ ಇದೆ. 

ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. ಕುತೂಹಲದ ವಿಷಯ ಎಂದರೆ ಇದು ಒಂದೇ ಒಂದು ಸೆಕೆಂಡ್‌ನ ವಿಡಿಯೋ. ಇದು ನಟಿ ದೀಪಿಕಾ ಪಡುಕೋಣೆ ಅವರ ವಿಡಿಯೋ. ಈ ಒಂದು ಸೆಕೆಂಡ್‌ನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸಿದೆ. ವಿಡಿಯೋ ಶೇರ್‌ ಮಾಡಿದ ಒಂದು ತಾಸಿನಲ್ಲಿಯೇ ಲಕ್ಷ ಲಕ್ಷ ವ್ಯೂಸ್‌, ಲೈಕ್ಸ್‌, ಶೇರ್ಸ್ ಕಂಡಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂಥದ್ದೇನು ಇದ್ಯಪ್ಪಾ ಎಂದು ಕೇಳಿದರೆ ನಟಿ ದೀಪಿಕಾ ಪಡುಕೋಣೆ ಒಂದು ಸೆಕೆಂಡ್‌ನಲ್ಲಿ ಕಣ್ಣನ್ನು ಒಮ್ಮೆ ಕಣ್ಣುಮಿಟುಕಿಸಿದ್ದಾರೆ ಅಷ್ಟೇ! ಇಷ್ಟೇನಾ ಎಂದು ಕೇಳಬಹುದು. ಆದರೆ ಚಿತ್ರತಾರೆಯರನ್ನು ಆರಾಧಿಸುವ ದೊಡ್ಡ ವರ್ಗವೇ ಇದೆ ಎನ್ನುವುದನ್ನು ಈ ವ್ಯೂಸ್‌, ಲೈಕ್ಸ್‌, ಶೇರ್ಸ್ ಆಗಿರುವುದನ್ನು ನೋಡಿದರೇನೇ ತಿಳಿಯುತ್ತದೆ.

Tap to resize

Latest Videos

ಕಲ್ಕಿಯಲ್ಲಿ ಗರ್ಭಿಣಿ ರೋಲ್‌ ಮಾಡಿದ್ದ ದೀಪಿಕಾ ಅದೇ ನಕಲಿ ಹೊಟ್ಟೆ ತೋರಿಸ್ತಿದ್ದಾರಾ? ವೈದ್ಯೆ ಹೇಳಿರೋದು ನಿಜವಾಯ್ತಾ?

ಸದ್ಯ ದೀಪಿಕಾ ಪಡುಕೋಣೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ವೈರಲ್‌ ಆಗ್ತಿರೋ ವಿಡಿಯೋ ಈಕೆ ಗರ್ಭಿಣಿ ಆಗುವುದಕ್ಕಿಂತ ಮುಂಚಿನದ್ದೋ ಅಥವಾ ನಂತರದ್ದೋ ಗೊತ್ತಿಲ್ಲ. ಕಾರ್ಯಕ್ರಮಕ್ಕೆ ರೆಡಿಯಾಗುತ್ತಿರುವ ವೇಳೆ, ಈ ವಿಡಿಯೋವನ್ನು ಮಾಡಲಾಗಿದೆ. ಸದ್ಯ ದೀಪಿಕಾ  ‘ಕಲ್ಕಿ 2898 ಎಡಿ’ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪ್ರಭಾಸ್ ಜೊತೆ ನಟಿಸಿದ್ದ ದೀಪಿಕಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.  ಮುಂಬರುವ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಲೇಡಿ ಪೊಲೀಸ್ ಆಫೀಸರ್ ಆಗಿ ದೀಪಿಕಾ ಮಿಂಚಿದ್ದಾರೆ. ಗರ್ಭಿಣಿಯಾಗಿದ್ದರೂ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಬಗ್ಗೆ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು. 

ಇದಾದ ಬಳಿಕ ದೀಪಿಕಾ ಗರ್ಭಿಣಿಯಾಗಿರುವ ಕುರಿತು ಪರ-ವಿರೋಧಗಳ ಚರ್ಚೆ ಆಗುತ್ತಲೇ ಇದೆ. ಆರಂಭದಲ್ಲಿ ಮಗುವಿನ ಬಗ್ಗೆ ದೀಪಿಕಾ ಘೋಷಿಸಿದಾಗಲೂ ತಾವು ಗರ್ಭಿಣಿ ಎಂದು ಹೇಳಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ಮಗುವಿನ ನಿರೀಕ್ಷೆ ಅಂದಷ್ಟೇ ಹೇಳಿದ್ದರು. ಅದನ್ನೆಲ್ಲಾ ಕೆದಕಿ, ನಟಿ ಗರ್ಭಿಣಿ ಅಲ್ಲ, ಕಲ್ಕಿಯ ಫೇಕ್‌ ಬೇಬಿಬಂಪ್‌ ಅನ್ನೇ ತೋರಿಸ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು! 

ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್​

click me!