ಸಮಂತಾ ಮತ್ತು ವಿಜಯ ದೇವರಕೊಂಡ(VIjay Devarakonda) ನಟನೆಯ ಹೊಸ ಸಿನಿಮಾ ಇಂದು (ಏಪ್ರಿಲ್ 22) ಸೆಟ್ಟೇರಿದೆ. ಸಿನಿಮಾದ ಮುಹೂರ್ತವನ್ನು ನಟ ವಿಜಯ್ ದೇವರಕೊಂಡ ಶೇರ್ ಮಾಡಿ ಡಾರ್ಲಿಂಗ್ ಸಮಂತಾ ಜೊತೆ ಹೊಸ ಸಿನಿಮಾದ ಮುಹೂರ್ತ ಎಂದು ಬರೆದುಕೊಂಡಿದ್ದಾರೆ.
ತೆಲುಗು ಸ್ಟಾರ್ ನಟಿ ಸಮಂತಾ ರುತ್ ಪ್ರಭು(Samantha) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಜೊತೆಗೆ ಸಮಂತಾ ಬಾಲಿವುಡ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಮಂತಾ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಅದು ತೆಲುಗು ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಎನ್ನುವುದೇ ವಿಶೇಷ. ಹೌದು ಸಮಂತಾ ಮತ್ತು ವಿಜಯ ದೇವರಕೊಂಡ(VIjay Devarakonda) ನಟನೆಯ ಹೊಸ ಸಿನಿಮಾ ಇಂದು (ಏಪ್ರಿಲ್ 22) ಸೆಟ್ಟೇರಿದೆ. ಸಿನಿಮಾದ ಮುಹೂರ್ತವನ್ನು ನಟ ವಿಜಯ್ ದೇವರಕೊಂಡ ಶೇರ್ ಮಾಡಿ ಡಾರ್ಲಿಂಗ್ ಸಮಂತಾ ಜೊತೆ ಹೊಸ ಸಿನಿಮಾದ ಮುಹೂರ್ತ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಇಂದು ನಡೆದ ಮುಹೂರ್ತ ಸಮಾರಂಭದಲ್ಲಿ ನಟಿ ಸಮಂತಾ ಗೈರಾಗಿದ್ದರು. ಹಾಗಾಗಿ ವಿಜಯ್ ದೇವರಕೊಂಡ ಸಮಂತಾ ಫೋಟೋವನ್ನು ಫೋಟೋಶಾಪ್ ಮಾಲಕ ಎಡಿಟ್ ಮಾಡಿ ಮುಹೂರ್ತದ ಫೋಟೋದಲ್ಲಿ ಸೇರಿಸಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ವಿಜಯ್ ಸ್ಟ್ರಿಪ್ಟ್ ಹಿಡಿದುಕೊಂಡಿದ್ದಾರೆ. ಹಿಂಭಾಗದಲ್ಲಿ ಸಮಂತಾ ಅವರನ್ನು ಎಡಿಟ್ ಮಾಡಿ ಸೇರಿಸಲಾಗಿದೆ. ಇದು ಮುಹೂರ್ತದ ನಿಜವಾದ ಫೋಟೋ ಎಂದು ಹೇಳಿದ್ದಾರೆ. ವಿಜಯ್ ದೋವರಕೊಂಡ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಸಮಂತಾ ನಿಜವಾದ ಫೋಟೋ ಶೇರ್ ಮಾಡಿ ಎಂದು ಕೇಳಿದ್ದಾರೆ.
ಅಂದಹಾಗೆ ವಿಜಯ್ ದೇವರಕೊಂಡ ಮತ್ತು ಸಮಂತಾ ಎರಡನೇ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಮೊದಲು ಮಹಾನಟಿ ಸಿನಿಮಾದಲ್ಲಿ ಒಟ್ಟಿಗೆ ಕಣಿಸಿಕೊಂಡಿದ್ದರು. 2018ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೆ ಒಂದಾಗುವ ಮೂಲಕ ಸಮಂತಾ ಮತ್ತು ವಿಜಯ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾ. ಅಂದಹಾಗೆ ಈ ಸಿನಿಮಾ ಕಾಶ್ಮೀರ ಬ್ಯಾಕ್ ಡ್ರಾಪ್ ನಲ್ಲಿ ನಡೆಯಲಿದೆಯಂತೆ. ಅಂದಹಾಗೆ ಈ ಸಿನಿಮಾಗೆ ಶಿವ ನಿರ್ವಾನ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ಶಿವ ಮಜಿಲಿ ಸಿನಿಮಾದಲ್ಲಿ ಸಮಂತಾ ಜೊತೆ ಕಲೆಸ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಒಂದಾಗಿದ್ದಾರೆ.
ಯಾವುದೇ ಕಾರಣಕ್ಕೂ ಟ್ಯಾಟೂ ಹಾಕಿಸಿಕೊಳ್ಳಬೇಡಿ; ಯುವಕರಿಗೆ ಸಮಂತಾ ಸಲಹೆ
ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರು ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಕಾಶ್ಮೀರದಲ್ಲಿ ಪ್ರಾರಂಭ ಮಾಡಲಿದ್ದಾರೆ. ಏಪ್ರಿಲ್ 23ರಿಂದನೆ ಪ್ರಾರಂಭವಾಗಲಿದೆಯಂತೆ. ನಂತರ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ. ಅಂದಹಾಗೆ ಸಮಂತಾ ಸದ್ಯ ವಿದೇಶದಲ್ಲಿದ್ದಾರೆ. ರಜೆಯ ಮೂಡ್ ನಲ್ಲಿರುವ ಸಮಂತಾ ದುಬೈನಲ್ಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಇಂದು ನಡೆದ ಮುಹೂರ್ತ ಸಮಾರಂಭಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.
ವಿಜಯ್ದೇವರಕೊಂಡ ಸದ್ಯ ಪುರಿ ಜಗನ್ನಾಥ್ ನಿರ್ದೇಶನದ ಜನ ಗಣ ಮನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಲೈಗರ್ ನಲ್ಲಿ ನಟಿಸಿರುವ ವಿಜಯ್ ದೇವರಕೊಂಡ ಮೊದಲ ಸಿನಿಮಾ ಬಿಡುಗಡೆಗೂ ಮೊದಲೇ ಪುರಿ ಜಗನ್ನಾಥ್ ಜೊತೆ ಮತ್ತೆ ಎರಡನೇ ಬಾರಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಮೊದಲ ಬಾರಿಗೆ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಫಿಟ್ನೆಸ್ ಫ್ರೀಕ್ ಸಮಂತಾ ವರ್ಕೌಟ್ ಗೆ ಫ್ಯಾನ್ಸ್ ಫಿದಾ; ವಿಡಿಯೋ ವೈರಲ್
ಇನ್ನು ನಟಿ ಸಮಂತಾ ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಮತ್ತು ಪುಷ್ಪ ಸಿನಿಮಾದ ಸಕ್ಸಸ್ ಸಮಂತಾ ಅವರಿಗೆ ಅವಕಾಶಗಳು ಮತ್ತಷ್ಟು ಹೆಚ್ಚಾಗಿದೆ. ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಬಾಲಿವುಡ್ ಕಡೆಯೂ ಮುಖ ಮಾಡಿದ್ದಾರೆ. ಸದ್ಯ ಯಶೋದಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಹುಭಾಷೆಯಲ್ಲಿ ತಯಾರಾಗುತ್ತಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಜಾಸ್ತಿ ಇರಲಿದೆಯಂತೆ. ಸ್ಟಂಟ್ ನಿರ್ದೇಶನ ಮಾಡಲು ಹಾಲಿವುಡ್ ನಿಂದ ಸ್ಟಂಟ್ ಮಾಸ್ಟರ್ ಸಮಂತಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ರಾಜ್ ಮತ್ತು ಡಿಕೆ ನಿರ್ದೇಶನದ ಹೊಸ ವೆಬ್ ಸೀರಿಸ್ ನಲ್ಲಿ ಸಮಂತಾ ನಟಿಸುತ್ತಿದ್ದು, ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.