ಅಮ್ಮನಾದ ಪ್ಲಾಸ್ಟಿಕ್​ ನೀಲಿ ರಾಣಿ ಶೆರ್ಲಿನ್ ಚೋಪ್ರಾ: ನೆಟ್ಟಿಗರಿಂದ ಭಾರಿ ಆಕ್ರೋಶ!

Published : Apr 18, 2025, 06:24 PM ISTUpdated : Apr 18, 2025, 08:17 PM IST
ಅಮ್ಮನಾದ ಪ್ಲಾಸ್ಟಿಕ್​ ನೀಲಿ ರಾಣಿ ಶೆರ್ಲಿನ್ ಚೋಪ್ರಾ: ನೆಟ್ಟಿಗರಿಂದ ಭಾರಿ ಆಕ್ರೋಶ!

ಸಾರಾಂಶ

ಪ್ರಚಾರಪ್ರಿಯೆ ಶೆರ್ಲಿನ್ ಚೋಪ್ರಾ, ಪ್ಲಾಸ್ಟಿಕ್ ಸರ್ಜರಿಗಳ ಮೂಲಕವೂ ಸುದ್ದಿಯಲ್ಲಿರುತ್ತಾರೆ. ನೀಲಿ ಚಿತ್ರ ವಿವಾದ, ದೇಹಪ್ರದರ್ಶನ, ಆಘಾತಕಾರಿ ಹೇಳಿಕೆಗಳಿಂದಲೂ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ದತ್ತು ಮಗುವಿನೊಂದಿಗೆ ಕಾಣಿಸಿಕೊಂಡು, ಮತ್ತೆ ಟೀಕೆಗೊಳಗಾಗಿದ್ದಾರೆ. ಮಗುವಿನ ಭವಿಷ್ಯದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಯ್‌ಫ್ರೆಂಡ್‌ ಮದುವೆ ವಿಚಾರದಲ್ಲೂ ನಾಟಕೀಯವಾಗಿ ವರ್ತಿಸಿ ಟ್ರೋಲ್‌ ಆಗಿದ್ದರು.

ಬಾಲಿವುಡ್​ ನಟಿ ಶೆರ್ಲಿನ್​ ಚೋಪ್ರಾ, ಪ್ಲಾಸ್ಟಿಕ್‌ ರಾಣಿ ಎಂದೇ ಫೇಮಸ್‌. ದೇಹದ ಬಹುತೇಕ ಭಾಗಗಳಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್​ ನಟಿಯಂತೆ ಈಕೆ ಕೂಡ  ತೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್​ ಸರ್ಜರಿಯಿಂದಾಗಿ  ಮಾತ್ರ ಈಕೆಯ ಅಂಗಾಂಗಗಳು ವಿಪರೀತ ಎನ್ನುವಷ್ಟರ ಮಟ್ಟಿಗೆ ಕಾಣಿಸುವುದನ್ನು ನೋಡಬಹುದು.  ಸದಾ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.

 ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ನೀಲಿ ಚಿತ್ರದ ವಿವಾದದ ಸಂದರ್ಭದಲ್ಲಿ ಶೆರ್ಲಿನ್​ ಹೆಸರೂ ಕೇಳಿಬಂದಿತ್ತು.  ಆ ಸಂದರ್ಭದಲ್ಲಿ ನಟಿ, ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ, ‘ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದ್ದರು. ಈ ಮೂಲಕ ಈಗ ನೀಲಿ ಚಿತ್ರದಲ್ಲಿ ತಾವು ಕಾಣಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.  ಕೆಲ ತಿಂಗಳ ಹಿಂದೆ, ಶೆರ್ಲಿನ್​,  ದೇಹ ಪ್ರದರ್ಶನ ಮಾಡುವ ಬಟ್ಟೆ ತೊಟ್ಟು, ಮೂರ್ತಿಯಂತೆ ಕುಳಿತಿದ್ದೇನೆ. ನನ್ನ ಕೈಕಾಲು ಒತ್ತಲು ಯಾರಾದರೂ ಸಿಗುತ್ತಾರೋ ಎಂದು ನೋಡುತ್ತಿದ್ದೇನೆ ಎಂದು ಬಿಟ್ಟಿ ಆಫರ್​ ನೀಡಿದ್ದರು. ಇದೇ ವೇಳೆ ಹಾಕಿಕೊಂಡಿರುವ ಬಟ್ಟೆಯನ್ನು ಕಳಚುವಂತೆ ಮಾಡಿ, ನನ್ನದು ಸೆನ್ಸೆಟಿವ್​ ಸ್ಕಿನ್​ ನೋಡಿ, ಅದಕ್ಕೆ ಅಲರ್ಜಿ ಆಗುತ್ತಿದೆ ಎಂದು ಹೇಳಿದ್ದರು.  

ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದಾಗ ಆಗಿದ್ದೇನು? ಪಡಬಾರದ ಪಾಡಿನ ಬಗ್ಗೆ ಶೆರ್ಲಿನ್​ ಚೋಪ್ರಾ ಶಾಕಿಂಗ್​ ವಿಷ್ಯ ರಿವೀಲ್​

ಈ ರೀತಿಯಾಗಿ ಪ್ರಚಾರದಲ್ಲಿರೊ ನಟಿ ಇದೀಗ ಮಗುವೊಂದಕ್ಕೆ ತಾಯಿಯಾಗಿದ್ದಾರೆ. ಹಾಗೆಂದು ಅವರು ಈ ಮಗುವನ್ನು ಹೆತ್ತಿಲ್ಲ. ಬದಲಿಗೆ ಹೆಣ್ಣುಮಗುವೊಂದನ್ನು ದತ್ತು ಪಡೆದಿರುವುದಾಗಿ ಹೇಳಿದ್ದಾರೆ. ಹೈಹೀಲ್ಸ್​ ಧರಿಸಿ ಮತ್ತದೇ ಮಾಮೂಲಿ ವೇಷದಲ್ಲಿ ಮಗುವನ್ನು ಹಿಡಿದುಕೊಂಡು ಬಂದಿದ್ದಾರೆ. ಅವರಿಗೆ ಸರಿಯಾಗಿ ಮಗು ಹಿಡಿದುಕೊಳ್ಳುವುದಕ್ಕೂ ಆಗುತ್ತಿಲ್ಲ. ಆ ಮಗು ಕೂಡ ಆಕೆಯ ದೇಹದ ಮೇಲೆ ಇರುವುದನ್ನು ನೋಡಿದರೆ ಅಯ್ಯೋ ಪಾಪ ಎನ್ನಿಸುವಂತಿದೆ. ಫೋಟೊಗೆ ಪೋಸ್​ ಕೊಡುವುದಕ್ಕಾಗಿ ಮಗುವನ್ನು ಕರೆದುಕೊಂಡು ಬರುವಂತಿದೆ ಈ ವಿಡಿಯೋ. ಈಕೆಯ ಅವತಾರಕ್ಕೆ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ಮಗುವಿನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಜನರಿಗೆ ಏನು ಮಾಡಿದರೂ ದತ್ತು ಪಡೆಯುವುದು ಎಷ್ಟೊಂದು ಕಷ್ಟ ಇರುವಾಗ ಇಂಥವರಿಗೆ ಹೇಗೆ ಸುಲಭದಲ್ಲಿ ಕೊಡುತ್ತಾರೆ, ಒಂದು ಮಗುವಿನ ಜೀವನ ಹಾಳು ಮಾಡುತ್ತಾರೆ ಎಂದೆಲ್ಲಾ ಬೈಯುತ್ತಿದ್ದಾರೆ. ಈಕೆ ಯಾವ ಆಂಗಲ್​ನಲ್ಲಿ ಮಗುವನ್ನು ಸಾಕುವ ರೀತಿಯಲ್ಲಿ ಕಾಣಿಸುತ್ತಾಳೆ ಎಂದೆಲ್ಲಾ ಹೇಳುತ್ತಿದ್ದಾರೆ. ಇದು ಬಿಟ್ಟಿ ಪ್ರಚಾರಕ್ಕಾಗಿ ಮಾಡ್ತಿರೋ ಗಿಮಿಕ್​ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. 


ಅಷ್ಟಕ್ಕೂ ಶೆರ್ಲಿನ್​, ಕೆಲ ತಿಂಗಳುಗಳಿಂದ, ಶೆರ್ಲಿನ್​ ಸದ್ಯ ಮದುವೆ ವಿಷಯದಲ್ಲಿ ಸಕತ್​ ಸದ್ದು ಮಾಡಿದ್ದರು.  ತಮ್ಮ ಬಾಯ್​ಫ್ರೆಂಡ್​ ಅಸ್ಗರ್​ ಅಲಿ ಜೊತೆ ಕಾಣಿಸಿಕೊಂಡಿದದ್ದರು. ಅವರಿಗೆ ಮದುವೆಯ ವಿಷಯವನ್ನು ಕೇಳಲಾಗಿತ್ತು. ನೀವು ಇವರನ್ನು ಮದ್ವೆಯಾಗುತ್ತಿದ್ದೀರಾ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಅವರು ಇವರು ನನ್ನ ಬಾಯ್​ಫ್ರೆಂಡ್​ಗಿಂತಲೂ ಹೆಚ್ಚಿನವರು ಎಂದರು. ಆಗ ಮದುವೆಯ ವಿಷಯದ ಬಗ್ಗೆ ಏನೂ ಮಾತನಾಡಲಿಲ್ಲ. ಕೊನೆಗೆ ಮತ್ತೊಮ್ಮೆ ನಿಮಗೆ ಮದುವೆಯಲ್ಲಿ ನಂಬಿಕೆ ಇದ್ಯಾ ಕೇಳಿದಾಗ ಹೌದು ಎಂದರು. ಇವರನ್ನೇ ಮದುವೆಯಾಗೋದು ಹೌದಾ ಕೇಳಿದಾಗ ನಟಿ, ನನಗೆ ನಾಚಿಕೆಯಾಗತ್ತಪ್ಪಾ ಎಂದು ಅತ್ತ ಕಡೆ ಮುಖ ಮಾಡಿಕೊಂಡಿದ್ದರು. ಇದಕ್ಕೆ ಇನ್ನಿಲ್ಲದಂತೆ ಟೀಕೆಗಳ ಸುರಿಮಳೆಯಾಗಿತ್ತು.  ನಿಮ್ಮ ಈ ನಾಚಿಕೆ ಎನ್ನುವ ಮಾತು ಕೇಳಿ ನಾಚಿಕೆ ಎನ್ನುವ ಶಬ್ದಕ್ಕೇ ನಾಚಿಕೆ ಆಗ್ತಿದೆ ಎಂದು ಕಮೆಂಟಿಗರು ಹೇಳಿದ್ದರು.

ಬಟ್ಟೆ ಕಳಚಿ ಬಿಟ್ಟಿ ಆಫರ್​ ಕೊಟ್ಟ ಶೆರ್ಲಿನ್​ ಹೊಸ ವೇಷಕ್ಕೆ ಶಾಕ್​! ಮತಾಂತರವಾದ್ರಾ ಕೇಳ್ತಿದ್ದಾರೆ ಫ್ಯಾನ್ಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?