ಛೀ.. ಛೀ... ಲಿಫ್ಟ್​ನಲ್ಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದ ಆಲಿಯಾ-ರಣವೀರ್​ ಸಿಂಗ್:​ ವಿಡಿಯೋ ವೈರಲ್

Published : Apr 18, 2025, 05:14 PM ISTUpdated : Apr 18, 2025, 08:06 PM IST
ಛೀ.. ಛೀ... ಲಿಫ್ಟ್​ನಲ್ಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದ ಆಲಿಯಾ-ರಣವೀರ್​ ಸಿಂಗ್:​ ವಿಡಿಯೋ ವೈರಲ್

ಸಾರಾಂಶ

ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ನಡುವಿನ ಲಿಫ್ಟ್‌ನಲ್ಲಿನ ರೊಮ್ಯಾಂಟಿಕ್ ದೃಶ್ಯ ವೈರಲ್ ಆಗಿದೆ. "ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಚಿತ್ರದ ಈ ದೃಶ್ಯ, ಇವರಿಬ್ಬರ ಹಿಂದಿನ ಡೇಟಿಂಗ್‌ ವದಂತಿಗಳನ್ನು ಮತ್ತೆ ಹುಟ್ಟುಹಾಕಿದೆ. ಚಿತ್ರದಲ್ಲಿನ ಬಿಸಿ ದೃಶ್ಯಗಳಿಂದಾಗಿ ಎರಡು ಹಾಡುಗಳನ್ನು ಸೆನ್ಸಾರ್ ಮಂಡಳಿ ಕತ್ತರಿಸಿದೆ. ಇವರ ರೊಮ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಅವಳ ಗಂಡನ ಜೊತೆ ಇವಳು, ಇವನ ಹೆಂಡ್ತಿ ಜೊತೆ ಅವನು... ಇದು ಸಿನಿಮಾ ಮಂದಿಗೆ ಹೊಸತೇನಲ್ಲ. ನಿಜ ಜೀವನದಲ್ಲಿಯೂ ಇಂಥ ಘಟನೆಗಳು ಸಾಕಷ್ಟು ನಡೆಯುತ್ತಿದ್ದರೂ, ಸಿನಿಮಾಗಳ ಮಟ್ಟಿಗೆ ಹೇಳುವುದಾದರೆ ಆ ಸಂಬಂಧ, ಈ ಸಂಬಂಧ ಎನ್ನುವುದು ಇಲ್ಲವೇ ಇಲ್ಲ. ಇಲ್ಲಿ ಅಕ್ರಮ ಸಂಬಂಧಗಳೇ ಜಾಸ್ತಿ, ಮದುವೆಗೂ ಮುನ್ನವೇ ಹಲವರ ಜೊತೆ ಡೇಟಿಂಗು, ದೇಶ-ವಿದೇಶ ಸುತ್ತಾಟ, ಜಾಲಿ ಲೈಫ್​, ಲಿವ್​ ಇನ್​ ಬಳಿಕ ಇನ್ನೊಬ್ಬರ ಜೊತೆ  ಮದ್ವೆ... ಇವೆಲ್ಲವೂ ಮಾಮೂಲೇ ಎನ್ನುವುದು ಹೊಸ ವಿಷಯವೇನಲ್ಲ ಬಿಡಿ. ಈಗ ವೈರಲ್​ ಆಗಿರೋ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ.

ಇದು ನಟಿ ರಣಬೀರ್​ ಕಪೂರ್​ ಪತ್ನಿ ಆಲಿಯಾ ಭಟ್​ ಹಾಗೂ ದೀಪಿಕಾ ಪಡುಕೋಣೆ ಪತಿ ರಣವೀರ್​ ಸಿಂಗ್ ಅವರ ರೊಮಾನ್ಸ್​ದ್ದು. ಲಿಫ್ಟ್​ನಲ್ಲಿ ತಡೆದುಕೊಳ್ಳಲಾಗದೇ ಇಬ್ಬರೂ ರೊಮಾನ್ಸ್​ ಮಾಡಿರುವ ದೃಶ್ಯ ಇದಾಗಿದೆ. ಹಾಗೆಂದು ಇವರೇನು ಎಲ್ಲರ ಕೈಯಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬೀಳುವಷ್ಟು ಮೂರ್ಖರಲ್ಲ ಬಿಡಿ. ಇದು ಅವರ ಚಿತ್ರದ ದೃಶ್ಯವಾಗಿದೆ. ಅದೀಗ ಬೇರೆಯದ್ದೇ ರೀತಿಯಲ್ಲಿ ವೈರಲ್ ಆಗ್ತಿದೆ. ನೆಟ್ಟಿಗರು ಇನ್ನು ಕೇಳಬೇಕೆ? ಇಬ್ಬರ ಇತಿಹಾಸವನ್ನೆಲ್ಲಾ ಜಾಲಾಡುತ್ತಿದ್ದಾರೆ. ಅಷ್ಟಕ್ಕೂ ಈ ಜೋಡಿ ನಟಿಸಿದ್ದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಇವರಿಬ್ಬರ ಕೆಮೆಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದರು. ಅಲ್ಲಿ ಅವರ ಜೋಡಿ, ಅವರಿಬ್ಬರ ರೊಮಾನ್ಸ್​ ನೋಡಿ ಅಬ್ಬಬ್ಬಾ ಎಂದವರೇ ಹೆಚ್ಚು. ಇದಕ್ಕೂ  ಮುನ್ನ ಇವರಿಬ್ಬರೂ ‘ಗಲ್ಲಿ ಬಾಯ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಆದರೆ ಈ ವೈರಲ್ ವಿಡಿಯೋದಲ್ಲಿ ಇಬ್ಬರೂ ಈ ಪರಿ ರೊಮಾನ್ಸ್​ ಮಾಡ್ತಿರೋದು ನೋಡಿ ಹುಬ್ಬೇರಿಸುತ್ತಿದ್ದಾರೆ ನೆಟ್ಟಿಗರು. 

ರಕ್ಷಿತ್​ ಶೆಟ್ಟಿ ಜೊತೆಗಿನ ಆ ವಿಷ್ಯ ಮಾತ್ರ ಕನ್ನಡದಲ್ಲಿ ಕೇಳ್ಬಾರ್ದಂತೆ! ಅಲೆಲೆ... ರಶ್ಮಿಕಾ...

ಅಷ್ಟಕ್ಕೂ,  ರಣವೀರ್‌ ಸಿಂಗ್‌ ಹಾಗೂ ಆಲಿಯಾ ಭಟ್‌  ಹಲವು ಸಮಯ ಕಾಲ ಡೇಟಿಂಗ್‌ ಮಾಡಿದ್ದರು. ಕಾಫಿ ವಿತ್​ ಕರಣ್​ ಹೇಳಿಕೇಳಿ ಇಂಥ ವಿಷಯಗಳಿಗೇ ಸಕತ್​ ಫೇಮಸ್​. ಕರಣ್​ ನೇರವಾಗಿ ಇಬ್ಬರಿಗೂ ಮೊದಲ ರಾತ್ರಿಯ ಬಗ್ಗೆ ಪ್ರಶ್ನೆ ಕೇಳಿದ್ದರು. ಇಬ್ಬರೂ ಒಟ್ಟಿಗೇ ಬಂದಿದ್ದ ಸಮಯದಲ್ಲಿ ಈ ವಿಷಯ ಕೇಳಿದಾಗ, ರಣವೀರ್​ ಸಿಂಗ್​ ಒಗಟಾಗಿ ಉತ್ತರಿಸಿದ್ದರು. ಸೆ* ವಿಷಯದ ಬಗ್ಗೆ ಕೇಳಿದಾಗ ರಣವೀರ್​, ನಾವು ಸುಹಾಗ್‌ ರಾತ್‌ನಲ್ಲಿ ಸೆ* ಮಾಡಿದ್ವಿ. ನನ್ನ ವ್ಯಾನಿಟಿ ವ್ಯಾನ್‌ (ಕ್ಯಾರವಾನ್)ನಲ್ಲಿ ಕ್ವಿಕೀ ಸೆಕ್ಸ್‌ ಕೂಡ ಮಾಡಿದ್ದೆವು. ಬೇರೆ ಬೇರೆ ಥರದ ಸೆ*ಗೆ ಬೇರೆ ಬೇರೆ ಥರದ ಪ್ಲೇಲಿಸ್ಟ್‌ ಕೂಡ ನನ್ನ ಬಳಿ ಇದೆ" ಎಂದಿದ್ದರು. ಮೊದಲ ರಾತ್ರಿ ದೀಪಿಕಾ ಜೊತೆ ಆದ್ರೆ,   ವ್ಯಾನಿಟಿ ವ್ಯಾನ್‌ನಲ್ಲಿ ಯಾರ ಜೊತೆ ಎನ್ನುವುದನ್ನು ಒಗಟಾಗಿ ಹೇಳಿದ್ದರು. ಆಗ ಅದು ಆಲಿಯಾ ಭಟ್​ ಎಂದೇ ವೈರಲ್​ ಆಗಿತ್ತು. 

ಇನ್ನು ರಾಕಿ ಔರ್​ ರಾಣಿ ಚಿತ್ರದ ಕುರಿತು ಹೇಳುವುದಾದರೆ, ಇದರಲ್ಲಿ ಈ ಜೋಡಿ ಸಕತ್​ ರೊಮಾನ್ಸ್​ ಮಾಡಿದೆ. ಅದು ಎಷ್ಟರಮಟ್ಟಿಗೆ ಎಂದರೆ, ಎರಡು ಹಾಡುಗಳನ್ನು ಸೆನ್ಸಾರ್​ ಮಂಡಳಿ ಕಿತ್ತುಹಾಕಿತ್ತು.  ಇವುಗಳಲ್ಲಿ  ಮೈ ಚಳಿ ಬಿಟ್ಟು ಆಲಿಯಾ ನಟಿಸಿದ್ದರು.  ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ರೊಮ್ಯಾಂಟಿಕ್​ ಹಾಡುಗಳ ವಿಡಿಯೋ ವೈರಲ್​ ಆಗಿದ್ದವು. ಒಂದು ರಾಜ್ ಕಪೂರ್ ಅವರ 1973 ರ ರೊಮ್ಯಾಂಟಿಕ್ ಚಿತ್ರ ಬಾಬಿಯ ಹಮ್ ತುಮ್ ಏಕ್ ಕಮ್ರೆ ಮೇ ಬಂದ್​ ಹೋ ಹಾಡು.  ಮೂಲ ಹಾಡಿನಲ್ಲಿ ಡಿಂಪಲ್ ಕಪಾಡಿಯಾ ಜೊತೆಗೆ ಆಲಿಯಾ ಅವರ ಮಾವ ರಿಷಿ ಕಪೂರ್ ಕಾಣಿಸಿಕೊಂಡಿದ್ದಾರೆ ಮತ್ತು ಇದನ್ನು ಆಲಿಯಾ ಅವರ ಪತಿ ರಣಬೀರ್ ಕಪೂರ್ ಅವರ ಅಜ್ಜ ರಾಜ್ ಕಪೂರ್ ನಿರ್ದೇಶಿಸಿರುವುದು ಕುತೂಹಲಕಾರಿಯಾಗಿದೆ.  ಇನ್ನೊಂದು ಹಾಡು 1972 ರ ರೊಮ್ಯಾಂಟಿಕ್ ಕಾಮಿಡಿ ಮೇರೆ ಜೀವನ ಸಾಥಿಯ ಆವೋ ನಾ, ಗಲೇ ಲಗಾವೋ ನಾ ಚಿತ್ರದ್ದು. ಇದರಲ್ಲಿ ಧರ್ಮೇಂದ್ರ ಮತ್ತು ಶಬಾನಾ ಅವರು ಸ್ಪಾ ಸೆಷನ್  ಆನಂದಿಸುತ್ತಿರುವಾಗ ಒಬ್ಬರನ್ನೊಬ್ಬರು ನೋಡುತ್ತಾ ನಗುತ್ತಿರುತ್ತಾರೆ. ಈ ಸಂದಭರ್ದಲ್ಲಿ  ರಣವೀರ್ ಮತ್ತು ಆಲಿಯಾ ಕಾರಿಡಾರ್‌ನಲ್ಲಿ ಮತ್ತು ಮೆಟ್ಟಿಲುಗಳ ಮೇಲೆ ರೊಮ್ಯಾನ್ಸ್​ನಲ್ಲಿ ತೊಡಗಿರುವುದು  ಕಂಡುಬರುತ್ತದೆ.  

10 ವರ್ಷದ ಹೋರಾಟದ ಬಳಿಕ ವಿವಾಹ: ಖುಷಿಯಿಂದ ಮೊದಲ ರಾತ್ರಿ ವಿಡಿಯೋ ಹರಿಬಿಟ್ಟ ಫುಡ್​ ವ್ಲಾಗರ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?