ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ, ಅನುರಾಗ್ ಕಶ್ಯಪ್ ಹೇಳಿಕೆಯಿಂದ ಪ್ರತಿಭಟನೆ ಶುರು

Published : Apr 18, 2025, 04:29 PM ISTUpdated : Apr 18, 2025, 04:33 PM IST
ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ, ಅನುರಾಗ್ ಕಶ್ಯಪ್  ಹೇಳಿಕೆಯಿಂದ ಪ್ರತಿಭಟನೆ ಶುರು

ಸಾರಾಂಶ

ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ. ಇದು ಬಾಲಿವುಡ್‌ನಿಂದ ಓಡಿ ಹೋದ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ನೀಡಿದ ಪ್ರತಿಕ್ರಿಯೆ. ಈ ಪ್ರತಿಕ್ರಿಯೆ ಭಾರಿ ವಿವಾದ ಸೃಷ್ಟಿಯಾಗಿದೆ. ಪ್ರತಿಭಟನೆ ಜೋರಾಗಿದೆ. ಫುಲೆ ಸಿನಿಮಾದಿಂದ ಆರಂಭಗೊಂಡ ವಿವಾದಕ್ಕೆ ಅನುರಾಗ್ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಮುಂಬೈ(ಏ.18) ಬಾಲಿವುಡ್‌ನಲ್ಲಿ ಮಿಂಚಿದ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಬಾಲಿವುಡ್ ಬಿಟ್ಟು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ನೀಡುತ್ತಿರುವ ಹೇಳಿಕೆ ಅನುರಾಗ್ ಕಶ್ಯಪ್‌ನನ್ನು ದಕ್ಷಿಣ ಭಾರತದಿಂದಲೂ  ಕಾಲ್ಕೀಳುವಂತೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದೀಗ ಅನುರಾಗ್ ಕಶ್ಯಪ್ ನೀಡಿದ ಪ್ರತಿಕ್ರಿಯೆಯಿಂದ ದೇಶದ ಬ್ರಾಹ್ಮಣ ಸಮುದಾಯ ಕೆರಳಿ ಕೆಂಡವಾಗಿದೆ. ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ? ಎಂದು ಅನುರಾಗ್ ಕಶ್ಯಪ್ ಪ್ರಶ್ನಿಸಿದ್ದಾರೆ. ಈ ಪ್ರತಿಕ್ರಿಯೆ ಬೆಂಕಿಯ ಜ್ವಾಲೆಯಾಗಿ ಎಲ್ಲೆಡೆ ಪಸರಿಸಿದೆ. ವಿವಾದ ಜೋರಾಗಿದೆ. ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದೆ. 

ಫುಲೆ ಸಿನಿಮಾದಿಂದ ವಿವಾದ ಆರಂಭ
ಸಾವಿತ್ರಿ ಭಾಯಿ ಫುಲೆ ಜೀವನಾಧಾರಿತ ಸಿನಿಮಾದಿಂದ ಅನುಗಾರ್ ಕಶ್ಯಪ್ ವಿವಾದ ಶುರು ಮಾಡಿದ್ದಾರೆ. ಈ ವಿವಾದ ತೀವ್ರಗೊಳ್ಳುತ್ತಿದ್ದಂತೆ ಅನುರಾಗ್ ಕಶ್ಯಪ್ ಇಡೀ ಬ್ರಾಹ್ಮಣ ಸಮುದಾಯದ ಮೇಲೆ ವಿಷ ಕಾರಿದ್ದಾರೆ. ಹಲವು ಬಾರಿ ತಮ್ಮ ವಿವಾದಾತ್ಮಕ ಮಾತುಗಳಿಂದಲೇ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಅನುರಾಗ್ ಕಶ್ಯಪ್ ಇದೀಗ ಬ್ರಾಹ್ಮಣ ಸಮುದಾಯ ಎದುರು ಹಾಕಿಕೊಂಡಿದೆ.

ಕೆಜಿಎಫ್‌ ರೀತಿ ಕನ್ನಡದಲ್ಲಿ ಅನೇಕ ಸಿನಿಮಾ ಮಾಡಿದರೂ ಸಕ್ಸಸ್ ಸಿಗಲಿಲ್ಲ; ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್!

ಸಾವಿತ್ರಿ ಭಾಯಿ ಫುಲೆ ಜೀವಾಧಾರಿತ ಸಿನಿಮಾವನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮಸ್ ಸರ್ಟಿಫಿಕೇಶನ್‌ಗೆ(CBFC) ಕಳುಹಿಸಲಾಗಿತ್ತು. CBFC ಬೋರ್ಡ್ ಈ ಫುಲೆ ಸಿನಿಮಾಗೆ ಯು ಸರ್ಟಿಫಿಕೇಟ್ ನೀಡಿದೆ. ಆದರೆ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ. ಪ್ರಮುಖವಾಗಿ ಈ ಸಿನಿಮಾದಲ್ಲಿ ಬರುವ ಜಾತಿ ಆಧಾರಿತ ಹೆಸರುಗಳು, 3000 ವರ್ಷಗಳ ಗುಲಾಮಿ ಸೇರಿದಂತೆ ಕೆಲ ಡೈಲಾಗ್‌ಗಳಿಗೂ ಕತ್ತರಿ ಹಾಕಲು ಸೂಚಸಿತ್ತು. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಈ ಸಿನಿಮಾಗೆ ಬ್ರಾಹ್ಣನ ಸಮುದಾಯ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಈ ಕಾರಣದಿಂದ ಎಪ್ರಿಲ್ 11ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಏಪ್ರಿಲ್ 25ಕ್ಕೆ ಮುಂದೂಡಲಾಗಿದೆ. 

ಇರಲಾರದೆ ಇರುವೆ ಬಿಟ್ಟುಕೊಂಡ್ರಾ ಅನುರಾಗ್ ಕಶ್ಯಪ್
ಅನಂತ್ ಮಹಾದೇವನ್ ನಿರ್ದೇಶನದ ಈ ಫುಲೆ ಸಿನಿಮಾ ವಿಳಂಬ, CBFC ಬೋರ್ಡ್ ನಿರ್ದೇಶನ, ಜಾತಿವಾದ ಕುರಿತು ಅನುರಾಗ್ ಕಶ್ಯಪ್ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು. ನನ್ನ ಮೊದಲ ನಾಟಕ ಜ್ಯೋತಿಭಾ ಹಾಗೂ ಸಾವಿತ್ರಿ ಭಾಯಿ ಫುಲೆ ಆಗಿತ್ತು. ದೇಶದಲ್ಲಿ ಜಾತಿವಾದ ಇಲ್ಲದೆ ಇದ್ದಿದ್ದರೆ, ಇವರು ಯಾಕೆ ಹೋರಾಡುತ್ತಿದ್ದರು. ಈಗ ಈ ಬ್ರಾಹ್ಮಣರಿಗೆ ನಾಚಿಕೆಯಾಗುತ್ತಿದೆಯೇ ಅಥವಾ ನಾಚಿಕೆಯಿಂದ ಸಾಯುತ್ತಿದ್ದಾರೋ ಅಥವಾ ನಾವು ನೋಡಲಾಗದ ಬೇರೆ ಬ್ರಾಹ್ಮಣ ಭಾರತದಲ್ಲಿ ವಾಸಿಸುತ್ತಿದ್ದಾರೋ, ಯಾರಾದರೂ ದಯವಿಟ್ಟು ವಿವರಿಸಿ - ನಿಜವಾದ ಮೂರ್ಖ ಯಾರು? ಎಂದು ಪೋಸ್ಟ್ ಮಾಡಿದ್ದರು. ಇದು ವಿವಾದದ ಕಿಡಿ ಮತ್ತಷ್ಟು ಹೆಚ್ಚಿಸಿತ್ತು.

ಅನುರಾಗ್ ಕಶ್ಯಪ್ ಈ ಪೋಸ್ಟ್ ಬ್ರಾಹ್ಮಣ ಸಮುದಾಯವನ್ನು ಮತ್ತಷ್ಟು ಕೆರಳಿಸಿದೆ. ಹೀಗಾಗಿ ಹಲವರು ತಿರುಗೇಟು ನೀಡಿದ್ದಾರೆ. ಅನುರಾಗ್ ಕಶ್ಯಪ್ ಜನ್ಮ ಜಾಲಾಡಿದ್ದಾರೆ. ಖಾರಶಬ್ದಗಳ ಮೂಲಕ ಅನರಾಗ್ ಕಶ್ಯಪ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಅನುರಾಗ್ ಕಶ್ಯಪ್ ಬಂದಿರುವ ಕಮೆಂಟ್‌ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಪ್ರತಿಕ್ರಿಯೆ ನೀಡುವಾಗ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಾದರು ಸಮಸ್ಯೆ ಇದೆಯಾ ಎಂದು ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿದ್ದಾರೆ. ಇದು ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ.

 

 

ಇದೀಗ ಮಹಾರಾಷ್ಟ್ರದಲ್ಲಿ ವಿವಾದ ಹೆಚ್ಚಾಗಿದೆ. ಫುಲೆ ಸಿನಿಮಾ ಬಿಡುಗಡೆ ವಿಳಂಭದ ಚಿಂತೆಯಲ್ಲಿದ್ದ ನಿರ್ದೇಶಕ ಅನಂತ್ ಮಹಾದೇವನ್‌ಗೆ ಇದೀಗ ಸಿನಿಮಾ ಎಪ್ರಿಲ್ 25ಕ್ಕೂ ಬಿಡುಗಡೆಯಾಗುವದು ಅನುಮಾನ ಎಂಬಂತಾಗಿದೆ. ಕಾರಣ   CBFC ನಿರ್ದೇಶನದ ಪ್ರಕಾರ ದೃಶ್ಯ ಹಾಗೂ ಡೈಲಾಗ್‌ಗೆ ಕತ್ತರಿ ಹಾಕಿ ಬಿಡುಗಡೆ ಮಾಡಲು ಅನಂತ್ ಮಹಾದೇವನ್ ಮುಂದಾಗಿದ್ದರು. ಇದರ ನಡುವೆ ಅನುರಾಗ್ ಕಶ್ಯಪ್ ಬ್ರಾಹ್ಮಣ ಸಮುದಾಯವನ್ನೇ ಕೆರಳಿಸಿದ್ದಾರೆ. ಇದರಿಂದ  ವಿವಾಾದ ಮತ್ತಷ್ಟು ಜೋರಾಗಿದೆ. ಬ್ರಾಹ್ಮಣ ಸಮುದಾಯ ಪ್ರತಿಭಟನೆ ಆರಂಭಿಸಿದೆ.ಅನುರಾಗ್ ಕಶ್ಯಪ್‌ ವಿರುದ್ದ ಮಾತ್ರವಲ್ಲ, ಸಮುದಾಯಕ್ಕೆ ಅಪಮಾನ ಮಾಡಿದ ಫುಲೆ ನಿರ್ದೇಕರ ವಿರುದ್ಧವೂ ಪ್ರತಿಭಟನೆ  ಆರಂಭಗೊಂಡಿದೆ. ಫುಲೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೋರಾಟ ಆರಂಭಿಸಿದೆ.

ಈ ಸ್ಟಾರ್ ಡೈರೆಕ್ಟರ್ '8'ರ ಹಿಂದೆ ಬಿದ್ದಿದ್ಯಾಕೆ..? ಇವ್ರು 'ಡಕಾಯಿತ್' ಆಗಿದ್ರು ಗೊತ್ತಿದ್ಯಾ..?!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌