
ಶಾರುಖ್ ಖಾನ್ ಅವರನ್ನು ಬಾಲಿವುಡ್ನ ಜಂಟಲ್ಮ್ಯಾನ್ ಎಂದೇ ಕರೆಯಲಾಗುತ್ತದೆ. ಇದಕ್ಕೆ ಕಾರಣವೂ ಇದೆ. ಚಿತ್ರ ನಟರು ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಂಡು, ಹಲವು ಮಕ್ಕಳ ಅಪ್ಪ ಆಗಿದ್ದರೆ, ಶಾರುಖ್ ಮಾತ್ರ ಗೌರಿ ಖಾನ್ ಅವರನ್ನು ಮದುವೆಯಾಗಿ ಏಕಪತ್ನಿವೃತಸ್ಥ ಆಗಿದ್ದಾರೆ ಎನ್ನುವುದು. ಶಾರುಖ್ ಖಾನ್ ಅವರನ್ನು ಇದೇ ಕಾರಣಕ್ಕೆ ಕಿಂಗ್ ಖಾನ್ ಎಂದೂ ಕರೆಯಲಾಗುತ್ತದೆ. ಬಹುತೇಕ ನಟರಂತೆ ಹಿಂದೂ ಯುವತಿಯನ್ನೇ ಮದುವೆಯಾಗಿ ಅವರ ಸರ್ನೇಮ್ ಖಾನ್ ಎಂದೇ ಇಟ್ಟು ಮಕ್ಕಳ ಹೆಸರನ್ನೂ ಖಾನ್ ಎಂದೇ ಮಾಡಿದ್ದರೂ ಶಾರುಖ್ ಉಳಿದ ನಟರಿಗಿಂತ ಭಿನ್ನವಾಗಿರಲು ಕಾರಣ, ಅವರು ಪತ್ನಿಯ ಜೊತೆ ಹಿಂದೂ ಧರ್ಮವನ್ನೂ ಪಾಲನೆ ಮಾಡುತ್ತಿದ್ದಾರೆ ಎನ್ನುವ ವಿಷಯಕ್ಕೆ.
ಅದೇನೇ ಇರಲಿ, ಬಾಲಿವುಡ್ ಜಂಟಲ್ಮೆನ್ ಎನಿಸಿರುವ ಶಾರುಖ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಅದನ್ನು ನೋಡಿದ ಫ್ಯಾನ್ಸ್ ಬೆಚ್ಚಿ ಬಿದ್ದಿದ್ದಾರೆ. ಮಾತ್ರವಲ್ಲದೇ ಅಲ್ಲಿಯೇ ಇದ್ದ ಅವರ ಪತ್ನಿ ಗೌರಿ ಖಾನ್ ಕೂಡ ಮುಖ ನೋಡಲು ಆಗುತ್ತಿಲ್ಲ. ಅಷ್ಟಕ್ಕೂ ಶಾರುಖ್ ಮಾಡಿದ್ದೇನೆಂದರೆ, ವೇದಿಕೆಯ ಮೇಲೆ ಡಾನ್ಸ್ ಹೆಸರಿನಲ್ಲಿ ನಟಿ ಪ್ರಿಯಾಂಕಾ ಚೋಪ್ರಾರ ಮೇಲಿನ ಕೋಟ್ ಬಿಚ್ಚಿ ತುಟಿಗೆ ಕಿಸ್ ಕೊಟ್ಟಿದ್ದಾರೆ. ಹೀಗೆ ಮಾಡುತ್ತಿದ್ದಂತೆಯೇ, ಗೌರಿ ಖಾನ್ ಅವರತ್ತ ಕ್ಯಾಮೆರಾ ಕಣ್ಣು ಹೋಗಿದೆ. ಚಿತ್ರಗಳಲ್ಲಿ ರೊಮಾನ್ಸ್ ಸೀನ್ ಬಂದಾಗ ಶಾರುಖ್ ಖಾನ್ ಒಂದು ಹಂತ ಮುಂದಕ್ಕೆ ಹೋಗುವುದು ಗೊತ್ತೇ ಇದೆ. ಆದರೆ ಇವೆಲ್ಲವನ್ನೂ ನೋಡಿದ್ದರೂ, ಗೌರಿ ಖಾನ್ ಅವರಿಗೆ ಪತಿಯ ಈ ವರ್ತನೆ ತುಂಬಾ ಮುಜುಗರ ತಂದ ಹಾಗೆ ಕಾಣಿಸುತ್ತಿರುವುದು ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಚೆನ್ನಾಗಿಯೇ ಇದ್ದ ನಿವೇದಿತಾಗೆ ಇದ್ದಕ್ಕಿದ್ದಂಗೆ ಇದೇನಾಯ್ತು? ವಿಡಿಯೋ ನೋಡಿ ಚಿಂತೆಗೀಡಾದ ಫ್ಯಾನ್ಸ್!
ಇದಕ್ಕೆ ಕಾರಣವೂ ಇದೆ. ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಒಂದು ಕಾಲದ ಸಂಬಂಧ ಬಾಲಿವುಡ್ನಲ್ಲಿ ಬಹು ಚರ್ಚಿತವಾದದ್ದು. ಪ್ರಿಯಾಂಕಾ ಚೋಪ್ರಾ ಯಾವಾಗಲೂ ಶಾರುಖ್ ಬಗ್ಗೆ ನಿಕಟತೆ ಇಟ್ಟುಕೊಂಡಿದ್ದರು. ಶಾರುಖ್ ಯಾವಾಗಲೂ ಪ್ರಿಯಾಂಕರನ್ನು ತನ್ನ ಹೃದಯಕ್ಕೆ ಹತ್ತಿರವಾಗಿ ಎಂದೇ ಪರಿಗಣಿಸುವುದು ಇದೆ. 2011ರ ಸುಮಾರಿಗೆ ಇವರಿಬ್ಬರ ಸಂಬಂಧದ ಬಗ್ಗೆ ಪತ್ರಿಕೆಗಳಲ್ಲಿಯೂ ಸಾಕಷ್ಟು ಸುದ್ದಿಯಾಯ್ತು. ಅಷ್ಟಕ್ಕೂ ಡಾನ್ ಸರಣಿಯ ಶೂಟಿಂಗ್ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ಬಹಳ ಆತ್ಮೀಯರಾದರು. ನೈಟ್‌ಕ್ಲಬ್‌ಗಳು, ಪಾರ್ಟಿಗಳು ಮತ್ತು ಈವೆಂಟ್‌ಗಳಲ್ಲಿ ಹ್ಯಾಂಗ್‌ಔಟ್ ಮಾಡುತ್ತಿದ್ದರು. ಇಬ್ಬರೂ ಡೇಟಿಂಗ್ನಲ್ಲಿ ಇದ್ದರು. ಇವರಿಬ್ಬರೂ ಉತ್ತಮ ಸ್ನೇಹಿತರೆಂದು ಸುತ್ತುತ್ತಿದ್ದಾಗ ಶಾರುಖ್ ಮತ್ತು ಪತ್ನಿ ಗೌರಿ ಖಾನ್ ಗೆ ವಿಚಾರ ಗೊತ್ತಾಯ್ತು. 2013 ರಲ್ಲಿ ಪ್ರಿಯಾಂಕ ಮತ್ತು ಶಾರುಖ್ ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆಂದೇ ಸುದ್ದಿಯಾಯ್ತು. ಹೀಗಾಗಿ ಶಾರುಖ್ ಖಾನ್ ಗೆ ಪತ್ನಿ ಗೌರಿ ವಾರ್ನ್ ಮಾಡಿ ಇನ್ನೆಂದೂ ಆಕೆಯೊಂದಿಗೆ ನಟಿಸಬಾರದು ಎಂದು ಷರತ್ತು ವಿಧಿಸಿದರು. ಇದಾದ ನಂತರ ಪ್ರಿಯಾಂಕ ಮತ್ತು ಶಾರುಖ್ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಮತ್ತೆಂದೂ ಜೊತೆಯಾಗಿ ನಟಿಸಿಲ್ಲ. ಆದರೆ ಈ ವಿಡಿಯೋದಲ್ಲಿ ಮಾತ್ರ ಸಿಕ್ಕಿದ್ದೇ ಛಾನ್ಸ್ ಎನ್ನುವಂತೆ ಶಾರುಖ್ ನಡೆದುಕೊಂಡಿದ್ದಾರೆ.
ಈ ಕುರಿತು, ಖುದ್ದು ಶಾರುಖ್, ಚಾಟ್ಷೋನಲ್ಲಿ ವಿವರಿಸಿದ್ದರು. ಆಕೆ ನನ್ನ ಸ್ನೇಹಿತೆ. ಅವಳು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬಳು, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದಾಳೆ ಮತ್ತು ಯಾವಾಗಲೂ ಇರುತ್ತಾಳೆ ಎಂದಿದ್ದರು. ಆದರೆ ಇಷ್ಟೆಲ್ಲ ಹೇಳುವಾಗ ಪ್ರಿಯಾಂಕಾ ಚೋಪ್ರಾ ಹೆಸರು ಉಲ್ಲೇಖಿಸಿರಲಿಲ್ಲ. ಆದರೆ, ಪ್ರಿಯಾಂಕಾ ಅವರ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಿಯಾಂಕಾ ಚೋಪ್ರಾರನ್ನು ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭೇಟಿಯಾದುದನ್ನು ನೆನಪಿಸಿಕೊಂಡಿದ್ದರು. ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ದಿನವನ್ನು ನೆನಪಿಸಿಕೊಂಡಿದ್ದರು. ಅವಳು ಮಿಸ್ ಇಂಡಿಯಾ ಅಥವಾ ವಿಶ್ವ ಸುಂದರಿ ಕಿರೀಟವನ್ನು ಗೆದ್ದಾಗ ಪುಟ್ಟ ಹುಡುಗಿ, ನನಗೆ ನೆನಪಿಲ್ಲ. ನಾವು ಉತ್ತಮ ಸ್ನೇಹಿತರಾಗಿ ಪರದೆಯ ಮೇಲೆ ಕೆಲವು ಉತ್ತಮ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ನಾನು ಇನ್ನು ಯೋಚಿಸುವುದು ಅತ್ಯಂತ ದುರದೃಷ್ಟಕರ ಮತ್ತು ದುಃಖಕರವಾಗಿದೆ. ನಿಮಗೆ ಗೊತ್ತಾ, ಸ್ನೇಹವನ್ನು ಅಪವಿತ್ರಗೊಳಿಸಲಾಗುತ್ತದೆ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.