ದ್ಯ ಖ್ಯಾತ ದಕ್ಷಿಣ ಭಾರತೀಯ ನಟ ಜಯಂ ರವಿ ಡಿವೋರ್ಸಿಂದೇ ಸುದ್ದಿ. ಆದರೆ ಜಯಂ ರವಿ ತಂದೆ ಮುಸ್ಲಿಂ ಆಗಿದ್ದರು, ತಾಯಿ ಹಿಂದೂ ಆಗಿದ್ದರು. ಇವರಿಬ್ಬರ ದಾಂಪತ್ಯ ಬೊಂಬಾಟ್ ಆಗಿತ್ತು.
ಸದ್ಯ ಖ್ಯಾತ ದಕ್ಷಿಣ ಭಾರತೀಯ ನಟ ಜಯಂ ರವಿ ಹಾಗೂ ಪತ್ನಿ ಆರತಿ ವಿಚ್ಛೇದನ ಪಡೆದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಜಯಂ ರವಿ ಹಾಗೂ ಆರತಿ ವಿಚ್ಛೇದನದ ಸುದ್ದಿ ಓಡಾಡುತ್ತಲೇ ಇತ್ತು. ಜಯಂ ರವಿ ಹಾಗೂ ಆರತಿ ಸಂಬಂಧದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ವದಂತಿ ಹರಿದಾಡುತ್ತಲೇ ಇತ್ತು. ಸ್ವತ: ಜಯಂ ರವಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ವಿಚ್ಛೇನದ ನೀಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ ಬಳಿಕ ಇದು ಅಧಿಕೃತವಾಗಿದೆ. 'ಜಯಂ' ಸಿನಿಮಾದ ಮೂಲಕ ರವಿ ಕಾಲಿವುಡ್‌ನಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಆ ಬಳಿಕ ಕಾಲಿವುಡ್‌ನಲ್ಲಿ ಸ್ಟಾರ್ ನಟನಾಗಿ ಬೆಳೆದಿದ್ದಾರೆ. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮನಗೆದ್ದಿದ್ದರು. ಇತ್ತೀಚೆಗೆ ಮಣಿರತ್ನಂ ನಿರ್ದೇಶಿಸಿದ ಐಶ್ವರ್ಯಾ ರೈ, ಚಿಯಾನ್ ವಿಕ್ರಂ ನಟನೆಯ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ಪ್ರಮುಖ ಟೈಟಲ್ ಪಾತ್ರದಲ್ಲೇ ನಟಿಸಿ ಮತ್ತೆ ಹೆಸರು ಮಾಡಿದ್ದರು.
ಸದ್ಯಕ್ಕೀಗ ಜಯಂ ರವಿ ಮತ್ತೆ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದಾರೆ. ವೈಯಕ್ತಿಕ ಜೀವನ ಮತ್ತೆ ಹಾದಿಗೆ ಬರುತ್ತಿದ್ದಂತೆ, ಇನ್ನೊಂದು ಕಡೆ ವೈಯಕ್ತಿಕ ಜೀವನ ಹಳಿ ತಪ್ಪಿದೆ. ಜಯಂ ರವಿ ಹಾಗೂ ಆರತಿ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ದರ್ಶನ್ ಜೈಲಿನಲ್ಲಿ, ವಿಜಯಲಕ್ಷ್ಮೀ ದುಬಾರಿ ಉಡುಪಿನಲ್ಲಿ ಮಿಂಚಿಂಗು!
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿರೋ ವಿಚಾರ ಅಂದರೆ ಜಯಂ ರವಿ ಅವರ ತಂದೆ ತಾಯಿ ಅಂತರ್‌ಧರ್ಮೀಯರು ಎಂಬುದು. ಹೌದು, ಜಯಂ ರವಿ ಅವರ ತಂದೆ ಮುಸ್ಲಿಂ ಧರ್ಮದವರು. ತಾಯಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಇವರಿಬ್ಬರ ವಿವಾಹವಾಗುತ್ತಿದ್ದಂತೆ ರವಿ ಅವರ ತಂದೆ ತನ್ನ ಧರ್ಮವನ್ನು ಬದಲಿಸಿಕೊಂಡರು. ಹಿಂದೂವಾಗಿ ಪರಿವರ್ತನೆಯಾದರು. ಅಷ್ಟೇ ಅಲ್ಲ ತನ್ನ ಹೆಸರನ್ನು ಮೋಹನ್ ಎಂದು ಬದಲಿಸಿಕೊಂಡರು.
ಅಂತರ್ ಜಾತೀಯ, ಅಂತರ್ ಧರ್ಮೀಯ ವಿವಾಹಗಳಲ್ಲಿ ಒಂದು ಸಮಯದ ನಂತರ ಸಂಸ್ಕೃತಿ, ಬೆಳೆದ ಪರಿಸರ ಎಲ್ಲದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡುತ್ತದೆ. ಇದು ವಿಚ್ಛೇದನವರೆಗೂ ಹೋಗುವುದಿದೆ. ಆದರೆ ಪ್ರೀತಿ ಎಂಬ ಬಂದ ಈ ಸಮಸ್ಯೆಗಳ ಆಚೆಯೂ ಸಂಬಂಧವನ್ನು ಗಟ್ಟಿ ಮಾಡೋದಿದೆ. ಹಾಗೇ ಜಯಂ ರವಿ ಅವರ ತಂದೆ ತಾಯಿ ಬಹಳ ಚೆನ್ನಾಗಿ ದಾಂಪತ್ಯ ಬದುಕು ನಡೆಸುತ್ತಿದ್ದಾರೆ.
ಆದರ್ಶ ದಂಪತಿಯಾಗಿದ್ದ ಜಯಂ ರವಿ-ಆರತಿ ವಿಚ್ಛೇದನಕ್ಕೆ ಕಾರಣವೇನು?
ಆದರೆ ಒಂದೇ ಧರ್ಮದಲ್ಲಿ ಮದುವೆಯಾದ ರವಿ ಮತ್ತು ಆರತಿ ಇದೀಗ ಸಪರೇಟ್ ಆಗ್ತಿದ್ದಾರೆ. ಇವರ ನಡುವಿನ ಸಮಸ್ಯೆ ಏನು ಎಂಬುದು ಗೊತ್ತಾಗಿಲ್ಲ. ಈ ನಡುವೆ ಇವರ ವಿಚ್ಛೇದನದ ಸುದ್ದಿ ಹೊರಬೀಳುತ್ತಿದ್ದಂತೆ ವಿವಾದಾತ್ಮಕ ಗಾಯಕಿ ಸುಚಿತ್ರಾ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ' ಜಯಂ ರವಿಗೆ ನನ್ನ ಬೆಂಬಲ. ಆರತಿ ಕೂಡ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಆರತಿ ತುಂಬಾ ಫ್ಯಾನ್ಸಿ ಹುಡುಗಿ. ಆಕೆಯನ್ನು ಖುಷಿಯಾಗಿ ಇಡುವುದಕ್ಕೆ ಜಯಂ ರವಿ ಹಗಲು-ರಾತ್ರಿ ಎನ್ನದೆ ದುಡಿಯಬೇಕು. ಮನೆಗೆ ಹೋದಾಗ ಆರತಿ ಯಾವ ಮನಸ್ಥಿತಿಯಲ್ಲಿರುತ್ತಾರೋ ಹೇಳುವುದಕ್ಕೆ ಅಸಾಧ್ಯ' ಎಂದೆಲ್ಲ ಮಾತು ಹರಿಯಬಿಟ್ಟಿದ್ದಾರೆ.
ಆರತಿ ಹಾಗೂ ಜಯಂ ರವಿ ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಅವರ ಮುಖವನ್ನು ನೋಡಿಕೊಂಡು ಇಬ್ಬರೂ ದಾಂಪತ್ಯವನ್ನ ಇಷ್ಟು ದಿನ ಉಳಿಸಿಕೊಂಡಿದ್ದಾರೆ ಎಂದು ಸುಚಿ ಲೀಕ್ಸ್ ಖ್ಯಾತಿಯ ಗಾಯಕಿ ಸುಚಿತ್ರಾ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇತ್ತ ಸುಚಿತ್ರಾ ಪ್ರತಿಕ್ರಿಯೆ ನೀಡುತ್ತಿದ್ದಂತೆ, ಈ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮುಂದುವರಿದಿದೆ.