ಶಾರುಖ್​ ದರ್ಶನಕ್ಕಾಗಿ ಐದು ವಾರದಿಂದ ಮನೆಮುಂದೆ 'ತಪಸ್ಸು' ಮಾಡ್ತಾ ಇದ್ದಾನೀತ! ನಟ ಪ್ರತ್ಯಕ್ಷ ಆಗ್ತಾನಾ?

Published : Sep 08, 2024, 12:57 PM IST
ಶಾರುಖ್​ ದರ್ಶನಕ್ಕಾಗಿ ಐದು ವಾರದಿಂದ ಮನೆಮುಂದೆ 'ತಪಸ್ಸು' ಮಾಡ್ತಾ ಇದ್ದಾನೀತ! ನಟ ಪ್ರತ್ಯಕ್ಷ ಆಗ್ತಾನಾ?

ಸಾರಾಂಶ

ಅಭಿಮಾನವೋ, ಅತಿರೇಕವೊ? ಶಾರುಖ್​ ದರ್ಶನಕ್ಕಾಗಿ ಐದು ವಾರದಿಂದ ಮನೆಮುಂದೆ 'ತಪಸ್ಸು' ಮಾಡ್ತಾ ಇದ್ದಾನೀತ! ನಟ ಪ್ರತ್ಯಕ್ಷ ಆಗ್ತಾನಾ? ನೆಟ್ಟಿಗರು ಹೇಳ್ತಿರೋದೇನು?   

ಚಿತ್ರ ತಾರೆಯರ ಮೇಲಿನ ಅಭಿಮಾನ ಎಂದರೆ ಸುಮ್ಮನೇ ಅಲ್ಲ. ಚಿತ್ರ ನಟರನ್ನು ಕಣ್ಣಿಗೆ ಕಾಣುವ ದೇವರು ಎಂದು ಎಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಅವರನ್ನು ನೋಡಲು ಪ್ರಾಣವನ್ನೂ ಪಣಕ್ಕಿಡುವವರೂ ಇದ್ದಾರೆ. ಅವರ ದರ್ಶನ ಭಾಗ್ಯವೊಂದೇ ತಮ್ಮ ಏಳೇಳು ಜನ್ಮದ ಪುಣ್ಯ ಎಂದುಕೊಳ್ಳುವ ಅತಿರೇಕದ ಅಭಿಮಾನಿಗಳಿಗೂ ಕೊರತೆಯೇನಿಲ್ಲ. ಇದೇ ಕಾರಣಕ್ಕೆ, ಚಿತ್ರತಾರೆಯರನ್ನೇ, ತಮ್ಮ ನೆಚ್ಚಿನ ನಟರನ್ನೇ ಅನುಸರಿಸಿ ರಕ್ತಪಾತ ಹರಿಸುತ್ತಿರುವವರೂ ಇದ್ದಾರೆ, ಲಾಂಗು- ಮಚ್ಚು ಬೀಸುತ್ತಾ ಅಪರಾಧ ಮಾಡುವವರೂ ಇದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರೂ ಇದ್ದಾರೆ, ಮದ್ಯ ವ್ಯಸನ- ಸ್ಟೈಲ್​ ಸ್ಟೈಲಾಗಿ ಸ್ಮೋಕಿಂಗ್ ಮಾಡುವವರೂ ಇದ್ದಾರೆ, ಗುಟಕಾದಂಥ ಕೆಟ್ಟ ವ್ಯಸನಗಳಿಗೆ ದಾಸರಾಗುವವರೂ ಇದ್ದಾರೆ. ಅಪರಾಧ ಪ್ರಪಂಚದ ಒಳಹೊಕ್ಕವರು ಸಿಕ್ಕಿಬಿದ್ದಾಗ ಪೊಲೀಸರು ಕೇಳಿದಾಗ ಬಹುತೇಕ ಮಂದಿ ಹೇಳುವುದು ಇದನ್ನೇ. ಆ ಚಿತ್ರ ನೋಡಿ ಪ್ರೇರೇಪಿತನಾದೆ ಎನ್ನುವುದೇ. ಅದಕ್ಕೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುವ ಸಲುವಾಗಿ ರಕ್ತಪಾತ ಹರಿಸುವ ಚಿತ್ರಗಳು ಇಂದು ಯಥೇಚ್ಛವಾಗಿ ಬರುತ್ತಿವೆ. ಇದು ಅಭಿಮಾನದ ಅತಿರೇಕಕ್ಕೆ ಇರುವ ಸಾಕ್ಷಿ. ಎಷ್ಟೆಂದರೂ ಯುವ ಸಮುದಾಯ ಒಳ್ಳೆಯದ್ದಕ್ಕಿಂತ ಕೆಟ್ಟದ್ದನ್ನೇ ಸ್ವೀಕರಿಸುವುದು ಹೆಚ್ಚಲ್ಲವೆ? 

ಇದೇ ರೀತಿ ಹಿಂದೊಮ್ಮೆ ಯುವಕನೊಬ್ಬ ಗುಟ್ಕಾ ತಿನ್ನುತ್ತಾ ಸಿಕ್ಕಿಬಿದ್ದಾಗ, ಶಾರುಖ್​ ಖಾನ್​ ತಿಂದ್ರೆ ಏನೂ ಆಗಲ್ಲಾ, ನಾನು ತಿಂದ್ರೆ ಸಾಯ್ತೀನಾ ಕೇಳಿದ್ದ. ಇಂಥ ಅತಿರೇಕದ ಅಭಿಮಾನಿಗಳಲ್ಲಿ ಪೈಕಿ ಜಾರ್ಖಂಡ್‌ನ ಮೊಹಮ್ಮದ್ ಅನ್ಸಾರಿ ಕೂಡ ಒಬ್ಬಾತ. ಈತ ಸುಮಾರು 36 ದಿನಗಳಿಂದ ಶಾರುಖ್​ ಖಾನ್​ ದರ್ಶನಕ್ಕಾಗಿ ಅವರ ಮನೆ ಮನ್ನತ್​ ಎದುರು ಕಾಯುತ್ತಿದ್ದಾನೆ! ನಾನು ಒಮ್ಮೆ ಶಾರುಖ್​ ಖಾನ್​ರನ್ನು ಭೇಟಿಯಾಗಲೇ ಬೇಕು ಎಂದು ಹಠ ಹಿಡಿದು ಕೂತಿದ್ದಾನೆ. ಇದರ ವಿಡಿಯೋ ವೈರಲ್​ ಆಗಿದೆ. ತಾನು ಜಾರ್ಖಂಡ್‌ನ ಮೊಹಮ್ಮದ್ ಅನ್ಸಾರಿ ಎಂದು ಹೇಳಿಕೊಂಡಿರೋ ಈತ ಕೈಯಲ್ಲಿ ಫಲಕ ಹಿಡಿದಿದ್ದಾನೆ. ಅದರಲ್ಲಿ ಎಷ್ಟನೇ ದಿನ ಎಂಬುದನ್ನು ನೋಡಬಹುದಾಗಿದೆ. 35 ದಿನ ಎಂದು ಬರೆದುಕೊಂಡಿದ್ದಾನೆ. ನಿನ್ನೆ ಈ ವಿಡಿಯೋ ವೈರಲ್​ ಆಗಿದ್ದು, ಈತನ ಅಭಿಮಾನಕ್ಕೆ ಪರ-ವಿರೋಧ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ. 

ಹೊಟ್ಟೆ ಬಿಟ್ಟ ಬಿಕಿನಿಯಲ್ಲಿ ನೋಡಿದಾಗ್ಲೂ ಫೇಕ್​ ಅಂದ್ರು! ಸೀರೆಯಲ್ಲಿ ನೋಡಿದಾಗ ಅವಳಿ-ಜವಳಿ ಅಂತಿದ್ದಾರಲ್ಲಪ್ಪಾ...

 ಪತ್ರಕರ್ತನೊಬ್ಬ ಈತನನ್ನು ಮಾತನಾಡಿದ್ದಾರೆ. ಏಕೆ ನಟನನ್ನು ನೋಡಬೇಕು, ಇಷ್ಟು ದಿನವಾದ್ರೂ ಯಾಕೆ ಇನ್ನೂ ನಿಂತಿರುವಿರಿ ಎಂದು ಪ್ರಶ್ನಿಸಿದಾಗ, ಈ ಅಭಿಮಾನಿ,  ಶಾರುಖ್‌ ಖಾನ್​  ನನ್ನ ಅತ್ಯಂತ ಪ್ರೀತಿಯ ಹೀರೊ.  ನಾನು ಅವರ ದೊಡ್ಡ ಅಭಿಮಾನಿ. ನಾನೊಬ್ಬನೇ ಇಲ್ಲಿದ್ದೇನೆ. ಅವರ ದರ್ಶನಕ್ಕಾಗಿ ಬಂದಿದ್ದೇನೆ.  ಅವರನ್ನು ಭೇಟಿಯಾಗಲೇ ಬೇಕು ಎಂದು ಇಷ್ಟು ದೂರ ಬಂದಿದ್ದು, ಭೇಟಿಯಾಗದೇ ಮನೆಗೆ ವಾಪಸ್​ ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾನೆ! 

ಈ ಹಿಂದೆ ಕೂಡ ಅಭಿಮಾನಿಯೊಬ್ಬ ಅದ್ಹೇಕೋ ಪ್ರಾಣ ಪಣಕ್ಕಿಟ್ಟು ಶಾರುಖ್​ ಅವರ  ಮನೆಯೊಳಕ್ಕೆ ಹೋಗಿ ಅಡಗಿಕೊಂಡಿದ್ದೂ ಇದೆ. ನಟರ ಮೇಲಿನ ಅಂಧಾಭಿಮಾನ ಯಾವ ಮಟ್ಟಿಗೆ ಅಭಿಮಾನಿಗಳಿಗೆ ಅಮಲು ತರಿಸುತ್ತದೆ ಎನ್ನುವುದಕ್ಕೆ ಇದೂ ಕೂಡ ಒಂದು ಸಾಕ್ಷಿಯಾಗಿದೆ. ಮೊಹಮ್ಮದ್ ಅನ್ಸಾರಿ ಹುಚ್ಚಾಟಕ್ಕೆ ಸೋಷಿಯಲ್​  ಮೀಡಿಯಾದಲ್ಲಿ ಹಲವರು ಬೈದು ಕಮೆಂಟ್​ ಮಾಡಿದ್ದರೆ, ಮತ್ತೆ ಕೆಲವರು ಈತನನ್ನು ಸಮರ್ಥಿಸಿಕೊಂಡು ತಮ್ಮ ಅಭಿಮಾನವನ್ನು ಮೆರೆಯುತ್ತಿದ್ದಾರೆ.  ಇನ್ನು ಶಾರುಖ್​ ಖಾನ್​ ಸಿನಿಮಾ ವಿಷಯಕ್ಕೆ ಬರುವುದಾದರೆ, ಇವರ ನಟನೆಯ  ‘ದಿ ಕಿಂಗ್’ ಚಿತ್ರ ಬಿಡುಗಡೆಯಾಗಬೇಕಿದೆ. ಈ ಚಿತ್ರದ ವಿಶೇಷ ಎಂದರೆ  ಶಾರುಖ್‌ ಖಾನ್​ ಪುತ್ರಿ ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ.  ಅಭಿಷೇಕ್ ಬಚ್ಚನ್ ಕೂಡ ಚಿತ್ರದಲ್ಲಿದ್ದಾರೆ. ಈ ಚಿತ್ರವು ದಿ ಕಿಂಗ್ 1994 ರ ಫ್ರೆಂಚ್ ಚಲನಚಿತ್ರ ಲಿಯಾನ್: ದಿ ಪ್ರೊಫೆಷನಲ್ ನ ರಿಮೇಕ್ ಆಗಿದ್ದು, ಇದನ್ನು ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ. 
 

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಧಿಕಾ ಕುಮಾರಸ್ವಾಮಿ? ಜಾತಕದ ಬಗ್ಗೆ ನಟಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?