ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ತಮ್ಮ ಬಾಲ್ಯದ ಘಟನೆಗಳನ್ನು ಬಹಿರಂಗಗೊಳಿಸಿದ್ದಾರೆ. ಶಾಲಾ ತಪ್ಪಿಸಿಕೊಳ್ಳಲು ಬಿಗ್ ಬಿ ಬಿ ಮಾಡುತ್ತಿದ್ದ ತಂತ್ರವೇನು ಗೊತ್ತಾ?
KBC 16 ಬಾಲಿವುಡ್‌ನ ಖ್ಯಾತ ನಟರಲ್ಲಿ ಅಮಿತಾಬ್ ಬಚ್ಚನ್ ಒಬ್ಬರು. ಅವರ ನಟನಾ ಕೌಶಲ್ಯ, ಬುದ್ಧಿವಂತಿಕೆ, ಅದ್ಭುತ ವ್ಯಕ್ತಿತ್ವ ಮತ್ತು ಎಲ್ಲರೊಂದಿಗೆ ಬೆರೆಯುವಿಕೆ ಅಪರಿಮಿತ ವಿಶ್ವಾಸ ಎಂತವರನ್ನು ಬೆರಗುಗೊಳಿಸುವಂತದ್ದು. ಸುಮಾರು ಮೂರು ದಶಕಗಳಿಗೂ ಹೆಚ್ಚು ಸಿನಿಮಾ ಕ್ಷೇತ್ರದಲ್ಲಿ ನಟನೆ ವೃತ್ತಿಜೀವನ ಮಾಡಿಕೊಂಡು ಉತ್ತುಂಗಕ್ಕೆ ಏರಿದವರು ಅಮಿತಾಬ್ ಬಚ್ಚನ್. 81 ರ ಇಳಿ ವಯಸ್ಸಿನ ಅಮಿತಾಬ್ ಈಗಲೂ ಯುವ ಪೀಳಿಗೆಯ ನಟರೊಂದಿಗೆ ಪೈಪೋಟಿ ನೀಡುವಂತೆ ನಟಿಸಬಲ್ಲರು. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ತೆರೆಕಂಡ, ಭಾರೀ ಸದ್ದು ಮಾಡಿದ್ದ 'ಕಲ್ಕಿ 2898 AD' ನಟನೆಯೇ ನಿದರ್ಶನ.
ಪ್ರಸ್ತುತ ದೇಶಾದ್ಯಂತ ಮನೆಮಾತಾಗಿರುವ 'ಕೌನ್ ಬನೇಗಾ ಕರೋಡ್‌ಪತಿ'ಯ 16ನೇ ಸೀಸನ್ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಗೊಮ್ಮೆ ಈಗೊಮ್ಮೆ ತಮ್ಮ ಜೀವನದ ಬಗ್ಗೆ ಹೇಳಿ ವೀಕ್ಷಕರಲ್ಲಿ ಅಚ್ಚರಿ ಹುಟ್ಟಿಸುತ್ತಾ ಬಂದಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ಬಾಲ್ಯದ ದಿನಗಳಲ್ಲಿನ ಘಟನೆಗಳ ಬಗ್ಗೆ ರಿವೀಲ್ ಮಾಡಿದ್ದಾರೆ.
KBC 16: ಮದುವೆಯಾಗದ ಮಹಿಳೆಯರು ಸಂಸಾರಕ್ಕೆ ಭಾರ ಎಂದ ಸ್ಪರ್ಧಿಗೆ ಅಮಿತಾಭ್ ಬಚ್ಚನ್ ಕ್ಲಾಸ್!
ಶಾಲೆ ತಪ್ಪಿಸಿಕೊಳ್ಳಲು ಕಂಕುಳಲ್ಲಿ ಈರುಳ್ಳಿ ಇಟ್ಟುಕೊಳ್ಳುತ್ತಿದ್ದ ಬಿಗ್‌ಬಿ!
KBC 16 ರ ಇತ್ತೀಚಿನ ಸಂಚಿಕೆಯಲ್ಲಿ ಸ್ಪರ್ಧಿ ಶೋಭಿಕಾ ಶ್ರೀ ತಮ್ಮ ವೃತ್ತಿ ಜೀವನದ ಬಗ್ಗೆ, ವೈಯಕ್ತಿ, ವೃತ್ತಿಪರ ಕ್ಷೇತ್ರಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೋಭಿಕಾ ಅವರು ಆರೋಗ್ಯ ಮತ್ತು ವೈದ್ಯಕೀಯ ಸೇವಾಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ಬದ್ಧತೆಗಾಗಿ ಪತಿಯಿಂದ ದೂರ ಉಳಿಯಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಅವರ ಮಾತುಗಳಿಗೆ ದನಿಗೂಡಿಸಿದ ಅಮಿತಾಬ್ ಬಚ್ಚನ್ ಕೆಲಸದಿಂದ ಬಿಡುವು ಮಾಡಿಕೊಳ್ಳಲು ಕೆಲವು ತಂತ್ರಗಳನ್ನು ಬಳಸಬಹುದು ಎಂದು ಹೇಳುತ್ತಾ ತಾವು ಶಾಲೆ ತಪ್ಪಿಸಿಕೊಳ್ಳಲು ಹೇಗೆ ತಂತ್ರ ಹೆಣೆಯುತ್ತಿದ್ದರು ಎಂದು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಧ್ಯಾನ್-ರಮ್ಯಾ 'ಅಮೃತಧಾರೆ'ಯಲ್ಲಿ ನಟಿಸಲು ಬಿಗ್ ಅಮಿತಾಭ್ ಬಚ್ಚನ್ ಹಾಕಿದ್ದ ಕಂಡೀಷನ್ ಏನಿತ್ತು?
ಬಿಗ್ ಬಿ ಹೇಳುತ್ತಾರೆ, "ನಾನು ಶಾಲೆಯಲ್ಲಿದ್ದಾಗ ನನ್ನ ಆರೋಗ್ಯದ ಬಗ್ಗೆ ಸುಳ್ಳು ಹೇಳುತ್ತಿದ್ದೆ. ಶಾಲೆಗೆ ಹೋಗಲು ಇಷ್ಟವಿಲ್ಲದೆ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಜನರನ್ನು ನಂಬುವಂತೆ ಮಾಡುತ್ತಿದ್ದೆ, ನಾನು ಶಾಲೆಯಿಂದ ತಪ್ಪಿಸಿಕೊಳ್ಳಲು ಒಂದು ಉಪಾಯ ಮಾಡಿದ್ದೆ. ಆ ದಿನಗಳಲ್ಲಿ ಈರುಳ್ಳಿಯನ್ನು ಕಂಕುಳಲ್ಲಿ ಇಟ್ಟುಕೊಂಡರೆ ಜ್ವರ ಬರುತ್ತದೆ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ಶಾಲೆ ತಪ್ಪಿಸಿಕೊಳ್ಳಲು ಪ್ರತಿಬಾರಿ ಕಂಕುಳಲ್ಲಿ ಈರುಳ್ಳಿ ಇಟ್ಟುಕೊಂಡು ಜ್ವರ ಬಂದವರಂತೆ ಮನೆಯವರನ್ನ ಮೋಸಗೊಳಿಸುತ್ತಿದ್ದೆ ಎಂದು ಬಾಲ್ಯದ ಘಟನೆ ನೆನಪಿಸಿಕೊಂಡರು, ಮುಂದುವರಿದು ಮೊದಲ ಬಾರಿಗೆ ಬಿಎಸ್ಸಿಯಲ್ಲಿ ಫೇಲ್ ಆದವರು ಬಳಿಕ ಮತ್ತೆ ಪರೀಕ್ಷೆ ಬರೆದು ಶೇ.42ರಷ್ಟು ಮಾರ್ಕ್ಸ್ ಪಡೆದು ಪಾಸ್ ಆದ ಬಗ್ಗೆ ತಿಳಿಸಿದ್ದಾರೆ.