
ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಅಟ್ಲಿ ನಿರ್ದೇಶನದ ಜವಾನ್ ಚಿತ್ರದ ಪೂರ್ವವೀಕ್ಷಣೆ (Preview) ನಾಳೆ ಅಂದರೆ ಜುಲೈ10 ರಂದು ಬಿಡುಗಡೆ ಮಾಡಲಾಗುವುದು. ಬೆಳಿಗ್ಗೆ 10.30 ಕ್ಕೆ ಇದರ ಬಿಡುಗಡೆ ನಡೆಯಲಿದೆ. ಈ ಕುರಿತ ಮಾಹಿತಿಯನ್ನು ಖುದ್ದು ಶಾರುಖ್ ಖಾನ್ (Shah Rukh Khan) ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಶುಭ ಸುದ್ದಿಯನ್ನು ಸ್ವತಃ ಕಿಂಗ್ ಖಾನ್ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, ಇದರಿಂದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಫ್ಯಾನ್ಸ್ ಸಂಭ್ರಮ ಮತ್ತೊಮ್ಮೆ ಮುಗಿಲುಮುಟ್ಟಿದೆ. 'ನಾನು ಪುಣ್ಯನೋ ಪಾಪನೋ? ನಾನು ಕೂಡ ನೀವೇ' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿರುವ ಶಾರುಖ್, ಜವಾನ್ 7ನೇ ಸೆಪ್ಟೆಂಬರ್ 2023 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದಿದ್ದಾರೆ. ಇದರಿಂದ ಚಿತ್ರವು ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುವುದು ಕನ್ಫರ್ಮ್ ಆಗಿದೆ.
ಅಂದಹಾಗೆ ಕಿಂಗ್ ಖಾನ್ ಅವರ ಬಹು ನಿರೀಕ್ಷಿತ ಈ ಚಿತ್ರಕ್ಕೆ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಜೊತೆ ನಟಿ ನಯನತಾರಾ (Nayanatara) ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜವಾನ್ ಚಿತ್ರವು 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುವುದು ತಿಳಿದುಬಂದಿದೆ.
'ಜವಾನ್' ಫಸ್ಟ್ ಲುಕ್ ಲೀಕ್? ನಯನತಾರಾ ಮಚ್ಚೆ ಮಾಯದ ಗುಟ್ಟು ರಟ್ಟಾಯ್ತು
ಫ್ಯಾನ್ಸ್ ಚಿತ್ರದ ನಿರೀಕ್ಷೆಯಲ್ಲಿ ಇರುವಾಗಲೇ ಚಿತ್ರದ ಫಸ್ಟ್ ಲುಕ್ ಎನ್ನಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಜವಾನ್ ಚಿತ್ರದ ಫಸ್ಟ್ ಲುಕ್ ಎಂದು ವೈರಲ್ ಆಗಿರೋ ಈ ಚಿತ್ರದಲ್ಲಿ ನಟಿ ನಯನತಾರಾ (Nayanthara) ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನಟಿ ಪಿಂಕ್ ಬಣ್ಣದ ಬ್ಲೇಝರ್ ಧರಿಸಿ, ಸಾಫ್ಟ್ ಕರ್ಲ್ ಮಾಡಿಕೊಂಡು ಬಾಸ್ ಲೇಡಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಜವಾನ್ ಸಿನಿಮಾದಿಂದ ನಟಿ ನಯನತಾರಾ ಅವರ ಫಸ್ಟ್ ಲುಕ್ ಎಂದೇ ಹೇಳುವ ಮೂಲಕ ಸಕತ್ ವೈರಲ್ ಆಗುತ್ತಿದೆ. ಆದರೆ ಅಸಲಿಗೆ ಅದು ಎಐ (ಕೃತಕ ಬುದ್ಧಿಮತ್ತೆ) ಜನರೇಟ್ ಮಾಡಿರುವಂತ ಸ್ಪೆಷಲ್ ಫೋಟೋ. ಇದರಲ್ಲಿ ನಯನತಾರಾ ಅವರನ್ನು ಅಮೆರಿಕನ್ ಫಿಲ್ಮ್ ಮೇಕರ್ ವೆಸ್ ಆಂಡರ್ಸನ್ ಸಿನಿಮಾದಲ್ಲಿ ಕಾಣಬಹುದು. ಅವರು ತಮ್ಮ ಸಿನಿಮಾಗಳಲ್ಲಿ ಬುಡಾಪೆಸ್ಟ್ ಹೋಟೆಲ್, ರಾಯಲ್ ಲುಕ್ಗಾಗಿಯೇ ಫೇಮಸ್. ನಯನತಾರಾ ಅವರ ಅಭಿಮಾನಿಗಳ ಪೇಜ್ ಒಂದರಿಂದ ಈ ಫೋಟೋ ಶೇರ್ ಮಾಡಿ ನಯನತಾರಾ ಅವರ ಜವಾನ್ ಫಸ್ಟ್ ಲುಕ್, ನಯನತಾರಾ ಜವಾನ್ ಟ್ರೈಲರ್ ಎಂದು ಬರೆದಿದ್ದಾರೆ ಅಷ್ಟೇ.
ಸಿನಿಮಾದ ಮ್ಯೂಸಿಕ್ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಇದಕ್ಕೆ ಕಾರಣ ಚಿತ್ರದ ಮ್ಯೂಸಿಕ್. ಜವಾನ್ (Jawan) ಸಿನಿಮಾದ ಮ್ಯೂಸಿಕ್ ರೈಟ್ಸ್ನ್ನು ಟಿ ಸಿರೀಸ್ ಕಂಪೆನಿ ಭರ್ಜರಿ ಹಣಕೊಟ್ಟು ಪಡೆದುಕೊಂಡಿದೆ. ಟಿ ಸಿರೀಸ್ ಸುಮಾರು 36 ಕೋಟಿ ಬೆಲೆ ಕೊಟ್ಟು ಈ ಹಕ್ಕನ್ನು ಸ್ವಂತವಾಗಿಸಿದೆ. ಅಂದಹಾಗೆ ದಕ್ಷಿಣದ ನಟಿ ನಯನತಾರಾ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಅತಿಥಿ ಪಾತ್ರವೂ ಕಾಣಿಸಿಕೊಳ್ಳಲಿದೆ. ದೀಪಿಕಾ ಕಳೆದ ವರ್ಷ ಆಗಸ್ಟ್‌ನಲ್ಲಿ ಚೆನ್ನೈನಲ್ಲಿ ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ರಾಜಸ್ಥಾನ ಮತ್ತು ಔರಂಗಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಪಠಾಣ್ ಭರ್ಜರಿ ಗೆಲುವಿನ ಬೆನ್ನಲ್ಲೇ ಸಹಜವಾಗಿ ಜವಾನ್ ಮೇಲೆ ನಿರೀಕ್ಷೆ ಹೆಚ್ಚಿದೆ. ಕಾಲಿವುಡ್ ನಿರ್ದೇಶಕ ಅಟ್ಲಿ ಕುಮಾರ್ (Atlee Kumar) ಜೊತೆಗಿನ ‘ಜವಾನ್’ ಚಿತ್ರಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ತಮಿಳಿನಲ್ಲಿ ಅಟ್ಲಿ ಕುಮಾರ್ (Atly Kumar) ಅವರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈಗ ಅವರು ಶಾರುಖ್ ಖಾನ್ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಹೈಪ್ ಹೆಚ್ಚಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ.
ರಿಲೀಸ್‌ಗೂ ಮುನ್ನ 36 ಕೋಟಿ ಗಳಿಸಿದ ಶಾರುಖ್ ಖಾನ್ ನಟನೆಯ ಜವಾನ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.