ದೇಶವನ್ನು 'ಅಶಿಕ್ಷಿತ' ನಾಯಕರು ಆಳುತ್ತಿದ್ದಾರೆ ಎಂದ ಕಾಜೋಲ್‌: ನೀವು, ನಿಮ್ಮ ಪತಿ ಓದಿರೋದೇನು ಎಂದು ನೆಟ್ಟಿಗರ ಟ್ರೋಲ್‌

Published : Jul 09, 2023, 11:05 AM IST
ದೇಶವನ್ನು 'ಅಶಿಕ್ಷಿತ' ನಾಯಕರು ಆಳುತ್ತಿದ್ದಾರೆ ಎಂದ ಕಾಜೋಲ್‌: ನೀವು, ನಿಮ್ಮ ಪತಿ ಓದಿರೋದೇನು ಎಂದು ನೆಟ್ಟಿಗರ ಟ್ರೋಲ್‌

ಸಾರಾಂಶ

ಬದಲಾವಣೆ, ವಿಶೇಷವಾಗಿ ಭಾರತದಂತಹ ದೇಶದಲ್ಲಿ ನಿಧಾನವಾಗಿದೆ. ಇದು ತುಂಬಾ ನಿಧಾನವಾಗಿದೆ. ಏಕೆಂದರೆ ನಾವು ನಮ್ಮ ಸಂಪ್ರದಾಯಗಳಲ್ಲಿ ಮುಳುಗಿದ್ದೇವೆ ಮತ್ತು ನಮ್ಮ ಆಲೋಚನಾ ಪ್ರಕ್ರಿಯೆಗಳಲ್ಲಿ ಮುಳುಗಿದ್ದೇವೆ ಹಾಗೂ ಇದು ಶಿಕ್ಷಣದೊಂದಿಗೆ ಸಂಬಂಧಿಸಿದೆ ಎಂದು ನಟಿ ಕಾಜೋಲ್‌ ಹೇಳಿದ್ದಾರೆ. 

ಮುಂಬೈ (ಜುಲೈ 9, 2023): ಬಾಲಿವುಡ್ ನಟಿ ಕಾಜೋಲ್‌ ಹೆಸರಾಂತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ವೆಬ್‌ಸೀರಿಸ್‌ ಒಂದರಲ್ಲೂ ಕಾಜೋಲ್‌ ದೇವಗನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಕೋರ್ಟ್‌ ದೃಶ್ಯಗಳನ್ನು ಹೊಂದಿರುವ  'ದಿ ಟ್ರಯಲ್: ಪ್ಯಾರ್‌ ಕಾನೂನು ಧೋಖಾ’ ಎಂಬ ವೆಬ್‌ಸೀರಿಸ್‌ಗೂ ಮುನ್ನ ಸಂದರ್ಶನವೊಂದರಲ್ಲಿ ನಟಿ ಕಾಜೋಲ್‌ ನೀಡಿರುವ ಹೇಳಿಕೆಯೊಂಂದು ಟ್ರೋಲ್‌ ಆಗುತ್ತಿದೆ. ನೆಟ್ಟಿಗರು ಮಾತ್ರವಲ್ಲದೆ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಸಹ ಅವರ ಟ್ವೀಟ್‌ ವಿರುದ್ಧ ಟೀಕೆ ಮಾಡಿದೆ. ಕ್ವಿಂಟ್‌ ವೆಬ್‌ಸೈಟ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಕಾಜೋಲ್, "ನಿಮ್ಮಲ್ಲಿ ಶೈಕ್ಷಣಿಕ ವ್ಯವಸ್ಥೆಯ ಹಿನ್ನೆಲೆ ಇಲ್ಲದ ರಾಜಕೀಯ ನಾಯಕರಿದ್ದಾರೆ" ಎಂದು ಹೇಳಿದ್ದರು. ಈ ಟ್ವೀಟ್‌ಗೆ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಜುಲೈ 14 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿರುವ ಈ ನೂತನ ವೆಬ್‌ಸೀರಿಸ್‌ ಬಗ್ಗೆ ಮಾಡಿದ ಸಂದರ್ಶನವೊಂದರಲ್ಲಿ ನಟಿ ಕಾಜೋಲ್‌ ದೇವಗನ್‌ ನೀಡಿದ ಹೇಳಿಕೆಗಳು ಟ್ರೋಲ್‌ ಆಗಿವೆ. ಈ ಸಂದರ್ಶನದಲ್ಲಿ, ಕಾಜೋಲ್ ದೇಶದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾ, “ಬದಲಾವಣೆ, ವಿಶೇಷವಾಗಿ ಭಾರತದಂತಹ ದೇಶದಲ್ಲಿ ನಿಧಾನವಾಗಿದೆ. ಇದು ತುಂಬಾ ನಿಧಾನವಾಗಿದೆ. ಏಕೆಂದರೆ ನಾವು ನಮ್ಮ ಸಂಪ್ರದಾಯಗಳಲ್ಲಿ ಮುಳುಗಿದ್ದೇವೆ ಮತ್ತು ನಮ್ಮ ಆಲೋಚನಾ ಪ್ರಕ್ರಿಯೆಗಳಲ್ಲಿ ಮುಳುಗಿದ್ದೇವೆ ಹಾಗೂ ಇದು ಶಿಕ್ಷಣದೊಂದಿಗೆ ಸಂಬಂಧಿಸಿದೆ’’ ಎಂದು ಹೇಳಿದ್ದರು.

ಇದನ್ನು ಓದಿ: ಟೈಟ್ ಬಟ್ಟೆ, ಹೈ ಹೀಲ್ಸ್ ಧರಿಸಿ ಓಡಾಡಲು ಕಷ್ಟಪಟ್ಟ ಕಾಜೋಲ್; 'ಈ ಶೋಕಿ ಬೇಕಿತ್ತಾ' ಎಂದು ಕಾಲೆಳೆದ ನೆಟ್ಟಿಗರು

ಹಾಗೂ, “ನಿಮ್ಮಲ್ಲಿ ಶೈಕ್ಷಣಿಕ ವ್ಯವಸ್ಥೆಯ ಹಿನ್ನೆಲೆ ಇಲ್ಲದ ರಾಜಕೀಯ ನಾಯಕರಿದ್ದಾರೆ. ನನ್ನನ್ನು ಕ್ಷಮಿಸಿ, ಆದರೆ ನಾನು ಈ ಬಗ್ಗೆ ಹೇಳುತ್ತೇನೆ. ನಾನು ನಾಯಕರಿಂದ ಆಳಲ್ಪಡುತ್ತಿದ್ದೇನೆ, ಅವರಲ್ಲಿ ಅನೇಕರು, ಅಂತಹ ದೃಷ್ಟಿಕೋನವನ್ನು ಹೊಂದಿಲ್ಲ. ಇಂತಹ ದೃಷ್ಟಿಕೋನವನ್ನು ಶಿಕ್ಷಣವು ನಿಮಗೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದು  ಕನಿಷ್ಠ ವಿಭಿನ್ನ ದೃಷ್ಟಿಕೋನವನ್ನು ನೋಡುವ ಅವಕಾಶವನ್ನು ನೀಡುತ್ತದೆ’’ ಎಂದೂ ಕಾಜೋಲ್‌ ಹೇಳಿದರು.

ಇನ್ನು, ನಟಿಯ ಈ ಹೇಳಿಕೆಗೆ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿಯವರಿಂದ ತೀಕ್ಷ್ಣವಾದ ಪ್ರತಿಕ್ರಿಯೆ ಪಡೆದಿದೆ. ಈ ಬಗ್ಗೆ ಟ್ವೀಟ್‌ ಮಾಡಿದ ಪ್ರಿಯಾಂಕಾ ಚತುರ್ವೇದಿ, “ಸೋ, ಕಾಜೋಲ್ ನಮ್ಮನ್ನು ಅಶಿಕ್ಷಿತ ಮತ್ತು ದೂರದೃಷ್ಟಿಯ ನಾಯಕರಿಂದ ಆಳುತ್ತಿದ್ದಾರೆ ಎಂದು ಹೇಳುತ್ತಾರೆ. ಆಕೆಯ ಅಭಿಪ್ರಾಯವು ಸತ್ಯವಾಗಿರಬೇಕಿಲ್ಲದ ಕಾರಣ ಯಾರೂ ಆಕ್ರೋಶ ವ್ಯಕ್ತಪಡಿಸುವುದಿಲ್ಲ ಮತ್ತು ಆಕೆ ಯಾರನ್ನೂ ಹೆಸರಿಸಿಲ್ಲ. ಆದರೆ ಎಲ್ಲಾ ಭಕ್ತರು ಆಕ್ರೋಶಗೊಂಡಿದ್ದಾರೆ" ಎಂದು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: ನೈಸಾ ಜೊತೆ ಕಾಜೋಲ್‌ ಫೋಟೋಶೂಟ್‌; ಅಮ್ಮ ಮಗಳ ಜೋಡಿಗೆ ಹಾಟ್ ಎಂದ ನೆಟ್ಟಿಗರು!

ಅಲ್ಲದೆ, "ದಯವಿಟ್ಟು ನಿಮ್ಮ ಸಂಪೂರ್ಣ ರಾಜಕೀಯ ವಿಜ್ಞಾನದ ಜ್ಞಾನವನ್ನು ಯೇಲ್ ಮಾಡಬೇಡಿ" ಎಂದೂ ಶಿವಸೇನೆ (ಯುಬಿಟಿ) ನಾಯಕಿ ಹೇಳಿದರು.

ಅನೇಕ ನೆಟ್ಟಿಗರು ಕಾಜೋಲ್‌ ಹೇಳಿಕೆ ಪ್ರಶ್ನೆ ಮಾಡಿದ್ದು, ನಟಿ ಹಾಗೂ ಆಕೆಯ ಪತಿ ಅಜಯ್‌ ದೇವಗನ್‌ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಕೆಲವರು ಪ್ರಶ್ನೆ ಮಾಡಿದ್ದಾರೆ. ನಟಿ ಕಾಜೋಲ್‌ ಕಾಲೇಜು ಮೆಟ್ಟಿಲನ್ನೇ ಹತ್ತಿಲ್ಲ. ಇನ್ನೊಂದೆಡೆ ಅಜಯ್‌ ದೇವಗನ್‌ ಕಾಲೇಜಿನಲ್ಲಿ ಡಿಗ್ರಿ ಪಡೆದುಕೊಂಡಿದ್ದಾರೆ.

ತನ್ನ ಹೇಳಿಕೆ ಹೆಚ್ಚು ವಿವಾದವಾಗ್ತಿದ್ದಂತೆ ಈ ಬಗ್ಗೆ ಕಾಜೋಲ್‌ ಸ್ಪಷ್ಟನೆ ನೀಡಿದ್ದು, ರಾಜಕೀಯ ನಾಯಕರ ಬಗ್ಗೆ ಮತ್ತು ಅವರಲ್ಲಿ ಕೆಲವರಲ್ಲಿ ಶೈಕ್ಷಣಿಕ ಹಿನ್ನೆಲೆಯ ಕೊರತೆಯ ಬಗ್ಗೆ ತನ್ನ ಹೇಳಿಕೆ ರಾಜಕೀಯ ನಾಯಕರನ್ನು ಕೀಳಾಗಿಸುವ ಉದ್ದೇಶ ಹೊಂದಿಲ್ಲ ಎಂದು ನಟಿ ಕಾಜೋಲ್ ಸ್ಪಷ್ಟಪಡಿಸಿದ್ದಾರೆ. 1995 ರ ದೊಡ್ಡ ಮಟ್ಟದ ಹಿಟ್ 'ಡಿಡಿಜೆಎಲ್' ಗೆ ಹೆಸರುವಾಸಿಯಾದ ನಟಿ, ಮುಂಬರುವ ವೆಬ್‌ಸೀರಿಸ್‌ ಸಂದರ್ಶನದ ವೇಳೆ  ಮಾಡಿದ ಕಾಮೆಂಟ್‌ಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ.

 

ಇದನ್ನೂ ಓದಿ: ಮಗಳು ನ್ಯಾಸಾಳ ಬೋಲ್ಡ್‌ನೆಸ್‌: ಅವಳು ಏನೇ ಮಾಡಿದರೂ ನಂಗೆ ಹೆಮ್ಮೆ ಎಂದ ಕಾಜೋಲ್! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?