ನೈಟ್​ ಕ್ಲಬ್​ನಲ್ಲಿ ಶಾಹಿದ್​ ಕಪೂರ್​- ಕರೀನಾ : ಎಂಎಂಎಸ್ ಲೀಕ್ ಆಗಿದ್ದಕ್ಕೆ ನಟ ಹೇಳಿದ್ದಿಷ್ಟು!

By Suvarna News  |  First Published Jul 9, 2023, 1:22 PM IST

2004ರಲ್ಲಿ ನಡೆದ ಶಾಹಿದ್​ ಕಪೂರ್​ ಮತ್ತು ಕರೀನಾ ಕಪೂರ್​ ಕಿಸ್ಸಿಂಗ್​ ವಿಷಯದ ಬಗ್ಗೆ ಈಗ ನಟ ಬಾಯ್ಬಿಟ್ಟಿದ್ದಾರೆ. ಅವರು ಹೇಳಿದ್ದೇನು? 
 


ಶಾಹಿದ್ ಕಪೂರ್​ ಮತ್ತು ಕರೀನಾ ಕಪೂರ್ (Kareena Kapoor) ಸಂಬಂಧದ ಬಗ್ಗೆ ಬಾಲಿವುಡ್‌ನಲ್ಲಿ ಎಲ್ಲರಿಗೂ ತಿಳಿದಿದೆ. ಇದೇನೂ ಹೊಸ ವಿಷಯವಲ್ಲ. ಇವರಿಬ್ಬರೂ  ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿ ಬೇರೆ ಬೇರೆಯಾದರು. ಕರೀನಾ ಕಪೂರ್​ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರೆ, ಶಾಹಿದ್ ಮೀರಾ ರಜಪೂತ್ ಅವರೊಂದಿಗೆ ಹಸೆಮಣೆ ಏರಿದರು.  ಅಕ್ಟೋಬರ್ 2012 ರಲ್ಲಿ  ಸೈಫ್ ಅಲಿ ಖಾನ್ ಅವರನ್ನು ಮದುವೆಯಾದ ಕರೀನಾ ಅವರಿಗೆ  2016 ರಲ್ಲಿ  ತೈಮೂರ್ ಅಲಿ ಖಾನ್ ಮತ್ತು 2021 ರಲ್ಲಿ ಜಹಾಂಗೀರ್ ಅಲಿ ಖಾನ್ ಹುಟ್ಟಿದರು. ಶಾಹಿದ್ ಕಪೂರ್​ ಮಾರ್ಚ್ 2015ರಲ್ಲಿ ಮೀರಾ ರಜಪೂತ್ ಅವರನ್ನು ಮದುವೆಯಾಗಿ,  2016 ರಲ್ಲಿ ಮಗಳು ಮಿಶಾ ಕಪೂರ್ ಮತ್ತು 2018 ರಲ್ಲಿ ಮಗ ಜೈನ್ ಕಪೂರ್ ಅಪ್ಪ ಆಗಿದ್ದಾರೆ. ಆದರೆ ಶಾಹಿದ್​ ಮತ್ತು ಕರೀನಾ ಅವರ  ಪ್ರೇಮಕಥೆಯು ತುಂಬಾ ಆಸಕ್ತಿದಾಯಕವಾಗಿತ್ತು. ಅದರ ವಿಷಯವೊಂದು ಈಗ ಮತ್ತೆ ಚರ್ಚೆಗೆ ಬಂದಿದೆ. ಇದು ಅವರ ಕಿಸ್ಸಿಂಗ್​ ವಿಷಯ!

ಹೌದು. ಈ ಜೋಡಿ ಕಿಸ್​ ಕೊಡುತ್ತಿರುವ ಫೋಟೋ ಒಂದು ಆ ಸಂದರ್ಭದಲ್ಲಿಯೇ ಸಕತ್​ ವೈರಲ್​ ಆಗಿತ್ತು. ಈಗ ಬಹಳ ವರ್ಷಗಳ ನಂತರ, ಆ ಘಟನೆಯ ಬಗ್ಗೆ ಶಾಹಿದ್ ಮಾತನಾಡಿದ್ದು,  ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಸಲಿಗೆ ಇದು ನಡೆದದ್ದು 2004 ರಲ್ಲಿ. ಶಾಹಿದ್ ಕಪೂರ್ (Shahid Kapoor) ಮತ್ತು ಅವರ ಆಗಿನ ಗೆಳತಿ ಕರೀನಾ ಕಪೂರ್ ಮುಂಬೈನ ನೈಟ್‌ಕ್ಲಬ್‌ನಲ್ಲಿ ಸುದೀರ್ಘ ಕಿಸ್ಸಿಂಗ್​ನಲ್ಲಿ ತೊಡಗಿದ್ದರು. ಈ ಲಿಪ್​ಲಾಕ್​ ಫೋಟೋ  ಮರುದಿನ  ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಇದು ಸಕತ್​ ಹಾಟ್​ ವಿಷಯವಾಗಿ ಮಾರ್ಪಟ್ಟಿತು. ಆಗ ಸಾಮಾಜಿಕ ಮಾಧ್ಯಮ ಈಗಿನಷ್ಟು ಚುರುಕಾಗಿ ಇರದಿದ್ದರೂ ಈ ಸುದ್ದಿ ಮಾತ್ರ ಕಾಳ್ಗಿಚ್ಚಿನಂತೆಯೇ ಶರವೇಗದಲ್ಲಿ ಹರಡಿತು.

Tap to resize

Latest Videos

'ಜವಾನ್​' ಫಸ್ಟ್​ ಲುಕ್​ ಲೀಕ್​? ನಯನತಾರಾ ಮಚ್ಚೆ ಮಾಯದ ಗುಟ್ಟು ರಟ್ಟಾಯ್ತು

 ಈಗ 20 ವರ್ಷಗಳ ನಂತರ, ಶಾಹಿದ್ ಕಪೂರ್ ಅಂತಿಮವಾಗಿ ಅದರ ಬಗ್ಗೆ ಮೌನ ಮುರಿದಿದ್ದಾರೆ. ಈ ಘಟನೆಯು ತಮ್ಮ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಅವರು ಕೇವಲ 24 ವರ್ಷ ವಯಸ್ಸಿನವರಾಗಿದ್ದರು. ಆ ಸಮಯದಲ್ಲಿ ಈ ಘಟನೆಯಿಂದ ತಮ್ಮ ಮೇಲೆ ಸಿಕ್ಕಾಪಟ್ಟೆ ಪರಿಣಾಮ ಬೀರಿತ್ತು ಎಂದಿದ್ದಾರೆ. ನನ್ನ  ಖಾಸಗಿತನವನ್ನು ಆಕ್ರಮಿಸಲಾಗಿತ್ತು. ಆದರೆ ಅದರಿಂದ ರಕ್ಷಿಸಲು ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.  ಮಾಧ್ಯಮದ ಸಂವಾದದಲ್ಲಿ ಶಾಹಿದ್ ಕಪೂರ್ ಅವರು ಆ ಸಮಯದಲ್ಲಿ ಈ ಫೋಟೋದಿಂದಾಗಿ ನನ್ನ ಸರ್ವನಾಶ ಆಗುವವರೆಗೆ ಪರಿಸ್ಥಿತಿ ಬಂದಿತ್ತು  ಎಂದು ಹೇಳಿದರು. ಅವರು ಹೇಳಿದರು.

'ಆ ಸಮಯದಲ್ಲಿ ನಾನು ಹಾಳಾಗಿ ಹೋದೆ. ನಾನು ಕೇವಲ 24 ವರ್ಷದ ಯುವನಕಾಗಿದ್ದೆ.  ನನ್ನ ಗೌಪ್ಯತೆಯನ್ನು ಆಕ್ರಮಿಸಲಾಗಿತ್ತು. ನಾನು ಅಸಹಾಯಕ ಸ್ಥಿತಿಯಲ್ಲಿ ಇದ್ದೆ. ಇದರಿಂದ ಮುಂದೆ ಏನಾಗುವುದೋ ಎನ್ನುವ ಭಯದಲ್ಲಿ ಇದ್ದೆ. ನನ್ನ ಜಿವನದಲ್ಲಿ ಏನಾಯಿತು, ಏನಾಗುತ್ತಿದೆ ಎಂದು ತಿಳಿಯಲಿಲ್ಲ.  ಇದು ತುಂಬಾ ತಪ್ಪು ರೀತಿಯಲ್ಲಿ ನನ್ನ ಮೇಲೆ  ಪರಿಣಾಮ ಬೀರಿತು. ವಿಶೇಷವಾಗಿ ಆ ವಯಸ್ಸಿನಲ್ಲಿ, ನಾವಿಬ್ಬರೂ ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಹಂತದಲ್ಲಿದ್ದಾಗ ಈ ಘಟನೆ ನಡೆದಿತ್ತು ಎಂದಿದ್ದಾರೆ. ಆದರೆ ಕ್ಯಾಮೆರಾದಲ್ಲಿ (Camera) ತೆಗೆದಿದ್ದ ಈ ಬ್ಲರ್​ ಫೋಟೋಗಳನ್ನು ಪತ್ರಿಕೆಗೆ ಇಬ್ಬರು ಹುಡುಗರು ತಂದುಕೊಟ್ಟಿದ್ದರು. 500 ರೂಪಾಯಿ ಪಡೆದು ಈ ಫೋಟೋ ನೀಡಲಾಗಿತ್ತು. ಫೋಟೋ ಪ್ರಕಟಗೊಂಡ ಬಳಿಕ ಪತ್ರಿಕೆ ಮೇಲೆ ಕೇಸ್​ ಕೂಡ ಹಾಕಲಾಗಿತ್ತು ಎಂದು ಅವರು ಹೇಳಿದರು.

18ನೇ ಮದುವೆಗೆ ರೆಡಿಯಾದ ಖ್ಯಾತ ನಟ ನಕುಲ್! ಏನಿದು ಸುದ್ದಿ?
 

click me!